2023 ದೀಪಾವಳಿ ಲಕ್ಷ್ಮಿ ಪೂಜೆಗೆ ಅದೃಷ್ಟದ ಸಮಯ; ಪೂಜೆ ಮಾಡುವ ವಿಧಾನ..

ಪ್ರತಿ ವರ್ಷ ಬರುವ ದೀಪಾವಳಿಯಲ್ಲಿ ಸಹ ಎಲ್ಲರಿಗೂ ಕೂಡ ಲಕ್ಷ್ಮಿ ಪೂಜೆಯನ್ನ ಹೇಗೆ ಮಾಡಬೇಕು ಎನ್ನುವ ಗೊಂದಲ ಇರುತ್ತದೆ ಹೀಗೆ ಮಾಡಿದರೆ ಶುಭನಾ ಅಥವಾ ಇನ್ಯಾವ ರೀತಿ ಮಾಡಿದರೆ ಲಕ್ಷ್ಮಿ ಒಲಿಯುತ್ತಾಳೆ ಎನ್ನುವ ಗೊಂದಲ ಎಲ್ಲರಲ್ಲೂ ಇರುವಂತದ್ದು. ಹಾಗಾದರೆ ಪ್ರತಿ ವರ್ಷ ದೀಪಾವಳಿಯಲ್ಲಿ ಲಕ್ಷ್ಮಿ ಪೂಜೆಯನ್ನು ಹೇಗೆ ಮಾಡಬೇಕು ಯಾವ ಯಾವ ತಪ್ಪುಗಳನ್ನು ಮಾಡಬಾರದು ಎಂಬುದರ ಬಗ್ಗೆ ಪೂರ್ತಿ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.

WhatsApp Group Join Now
Telegram Group Join Now

ಅಮಾವಾಸ್ಯೆ ಭಾನುವಾರ ಮಧ್ಯಾಹ್ನ 1:45 ಕ್ಕೆ ಶುರುವಾಗಿ ಸೋಮವಾರ ಮಧ್ಯಾಹ್ನ 3 ಗಂಟೆವರೆಗೆ ಇರುತ್ತದೆ ಸೋಮವಾರ ಪೂಜೆ ಮಾಡುವವರು ಬೆಳಿಗ್ಗೆ ಪೂಜೆ ಮಾಡಬೇಕು ಮೂರು ಗಂಟೆಗೆ ಅಮಾವಾಸ್ಯೆ ಮುಕ್ತಾಯವಾಗುವುದರಿಂದ ಸೋಮವಾರ ಪೂಜೆ ಮಾಡುವವರಿಗೆ ಸಂಜೆ ಪೂಜೆಯ ಅವಕಾಶವಿರುವುದಿಲ್ಲ. ಅಂಗಡಿ ಪೂಜೆ ಮಾಡುವವರಿಗೆ ಕಚೇರಿಯಲ್ಲಿ ಪೂಜೆ ಮಾಡುವವರಿಗೆ ಅಥವಾ ಯಾವುದೇ ವ್ಯಾಪಾರದ ಸ್ಥಳದಲ್ಲಿ ಪೂಜೆ ಮಾಡುವವರಿಗೆ ಒಂದು ಒಳ್ಳೆಯ ಸಮಯದಲ್ಲಿ ಮಾಡಬೇಕು. ಭಾನುವಾರ ಪೂಜೆಯನ್ನು ಮಾಡುವವರು 8:15 ರಿಂದ 9:15ರ ಒಳಗಾಗಿ ಪೂಜೆ ಮಾಡಬಹುದು ಈ ಸಮಯದಲ್ಲಿ ಲಕ್ಷ್ಮಿ ಪೂಜೆಗೆ ಒಳ್ಳೆಯ ಸಮಯವಾಗಿರುತ್ತದೆ.

ಇನ್ನು ನಾವು ಸೋಮವಾರ ಪೂಜೆ ಮಾಡ್ತೀವಿ ಎನ್ನುವಂತವರಿಗೆ ಬೆಳಿಗ್ಗೆ 9:15 ರಿಂದ 10:15ರವರೆಗೆ ಲಕ್ಷ್ಮಿ ಪೂಜೆಗೆ ಒಳ್ಳೆಯ ಮುಹೂರ್ತವಿದೆ. ಈ ಸಮಯದಲ್ಲಿ ಮಾಡ್ತೀನಿ ಅನ್ನೋರು ಸೋಮವಾರ ಬೆಳಗ್ಗೆ ಮಾಡಿಕೊಳ್ಳಬಹುದು. ವಿಶೇಷವಾಗಿ ನೀವು ಏನು ಮಾಡಬೇಕು ಅಂದ್ರೆ ಕುಬೇರ ಯಂತ್ರವನ್ನು ಸ್ಥಾಪನೆ ಮಾಡಬೇಕು ಲಕ್ಷ್ಮಿ ಕುಬೇರನನ್ನು ಪೂಜಿಸಿದರೆ ಮಾತ್ರ ನಿಮಗೆ ಅದ್ಭುತವಾದ ಲಾಭ ಸಿಗುತ್ತದೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಲಕ್ಷ್ಮಿ ಪೂಜೆಯನ್ನು ಮಾಡುವ ವಿಧಾನ

ಭಾನುವಾರ ಗೋದೂಳಿ ಮುಹೂರ್ತದಲ್ಲಿ 6 ಗಂಟೆಗೆ ಕೈ ಕಾಲು ಮುಖವನ್ನು ತೊಳೆದು ಕುಬೇರ ಯಂತ್ರವನ್ನು ಸ್ಥಾಪಿಸಿಕೊಳ್ಳಬೇಕು ಪಕ್ಕದಲ್ಲಿ ಒಂದು ಲಕ್ಷ್ಮಿ ಮೂರ್ತಿಯನ್ನು ಇಟ್ಟುಕೊಳ್ಳಿ ಲಕ್ಷ್ಮಿ ಮೂರ್ತಿ ಬೆಳ್ಳಿಯಾದರೂ ಪರವಾಗಿಲ್ಲ ಅಥವಾ ಪಾದರಸದ ಲಕ್ಷ್ಮಿ ಮೂರ್ತಿ ಆದರೆ ಇನ್ನೂ ಒಳ್ಳೆಯದು ಒಂದು ಕೆಂಪು ಬಟ್ಟೆಯನ್ನು ಹಾಕಿ, ಅದರ ಮೇಲೆ ಕುಬೇರ ಯಂತ್ರ ಹಾಗೂ ಲಕ್ಷ್ಮಿ ಮೂರ್ತಿಯನ್ನು ಇಡಬೇಕು ಎದುರುಗಡೆ ಅಷ್ಟದಳ ಪದ್ಮದ ರಂಗೋಲಿಯನ್ನು ಹಾಕಿ ಸ್ವಲ್ಪ ಅರಿಶಿನ ಕುಂಕುಮವನ್ನು ಹಾಕಿ ಅದರ ಮೇಲೆ ಹೂವನ್ನು ಇಡಿ.

ನಂತರ ಕಲಶವನ್ನು ಸ್ಥಾಪಿಸಬೇಕು ಒಂದು ತಾಮ್ರದ ಚೊಂಬಿನಲ್ಲಿ ಮುಕ್ಕಾಲು ಭಾಗ ನೀರನ್ನು ತೆಗೆದುಕೊಂಡು ಅದರಲ್ಲಿ ಅರಿಶಿಣ ಕವಡೆಗಳು ಆರು ಹಾಗೆ ಕಮಲಾಕ್ಷಿ ಮಣಿಗಳು ಆರು ಮತ್ತು 6 ಗೋಡಂಬಿಗಳು ಹಾಗೂ ಒಂದು ರೂಪಾಯಿಯ ಆರು ಕಾಯಿನ್ ಗಳನ್ನು ಹಾಕಿ ಸ್ವಲ್ಪ ಅಕ್ಕಿ ಅರಿಶಿಣ ಕುಂಕುಮ ಲಾವಂಚ ಹಾಗೂ ಆರು ಲವಂಗಗಳನ್ನು ಹಾಕಿ ಮತ್ತು 6 ಗೋಮತಿ ಚಕ್ರವನ್ನು ಹಾಕಿ ಅದರ ಮೇಲೆ ಮಾವಿನ ಎಲೆಯನ್ನು ಇಟ್ಟು ತೆಂಗಿನಕಾಯಿಯನ್ನು ಇಡಬೇಕು. ಈ ರೀತಿ ಮಾಡಿ ಕಲಶವನ್ನ ಸ್ಥಾಪನೆ ಮಾಡಿಕೊಳ್ಳಿ.

ನಂತರ 8.30 ರಿಂದ 9:15 ರ ಒಳಗೆ ಪೂಜಾ ಸಮಯ ಈ ಸಮಯದಲ್ಲಿ ಪೂಜೆಯನ್ನು ಮಾಡುವುದರಿಂದ ಲಕ್ಷ್ಮಿ ಒಲಿಯುತ್ತಾಳೆ ಆದ್ದರಿಂದ ಈ ಸಮಯದಲ್ಲಿ ಲಕ್ಷ್ಮಿ ಪೂಜೆಯನ್ನು ಮಾಡಿಕೊಳ್ಳಿ. ಇದೇ ರೀತಿ ಸೋಮವಾರ ಬೆಳಿಗ್ಗೆ ಪೂಜೆ ಮಾಡುವವರು ಸಹ ಬೆಳಿಗ್ಗೆ 9:15 ರಿಂದ 10:15ರೊಳಗೆ ಇದೇ ರೀತಿಯಾಗಿ ಕಲಶವನ್ನು ಸ್ಥಾಪನೆ ಮಾಡಿಕೊಂಡು ಪೂಜೆಯನ್ನು ಮಾಡಿಕೊಳ್ಳಿ. ಒಂದು ಪ್ರಮುಖವಾದ ವಿಷಯ ಏನಪ್ಪಾ ಅಂತ ಅಂದ್ರೆ ಲಕ್ಷ್ಮಿ ಪೂಜೆ ಎಲ್ಲ ಮುಗಿದ ನಂತರ ಕನಕಧಾರ ಸ್ತೋತ್ರವನ್ನು ತಪ್ಪದೆ ಓದಿ. ಶಂಕರಾಚಾರ್ಯರು ಲಕ್ಷ್ಮಿಗೆಂದೇ ರಚಿಸಿದ ಈ ಸ್ತೋತ್ರ ಧನಪ್ರಾಪ್ತಿಯನ್ನು ಉಂಟುಮಾಡುತ್ತದೆ. ಈ ರೀತಿಯಾಗಿ ಲಕ್ಷ್ಮಿ ಪೂಜೆಯನ್ನು ಸರಳವಾಗಿ ಭಕ್ತಿ ಶ್ರದ್ಧೆಯಿಂದ ಮಾಡಿ. ಖಂಡಿತವಾಗಲೂ ಲಕ್ಷ್ಮಿ ನಮ್ಮೆಲ್ಲರಿಗೆ ಒಲಿಯುತ್ತಾಳೆ.

ಇದನ್ನೂ ಓದಿ: ದೀಪಾವಳಿಗೆ ಸಿಕ್ತು ಊಹಿಸಲಾರದ ಭರ್ಜರಿ ಗಿಫ್ಟ್; ಆಫೀಸ್ ಬಾಯ್ ಗು ಬಂಪರ್ ಕಾರ್ ಗಿಫ್ಟ್

ಇದನ್ನೂ ಓದಿ: ಈ ಏಳು ರಾಶಿಯವರಿಗೆ 2024 ಅದೃಷ್ಟದ ವರ್ಷ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram