ದ್ವಿತೀಯ ಪಿಯುಸಿ ಪರೀಕ್ಷೆಯ ನಡೆಯುತ್ತಿದೆ. ಮಾರ್ಚ್ 1 ರಿಂದ 18 ರ ವರೆಗೆ ನಡೆದ ಪರೀಕ್ಷೆಗಳ ಮಾದರಿ ಉತ್ತರ ಪತ್ರಿಕೆಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಬಿಡುಗಡೆ ಮಾಡಿದೆ. ಮಾರ್ಚ್ 21ನೇ ತಾರೀಖಿನ ಒಳಗಾಗಿ ವಿದ್ಯಾರ್ಥಿಗಳು ಯಾವುದೇ ಆಕ್ಷೇಪಣೆ ಇದ್ದಲ್ಲಿ ಆನ್ಲೈನ್ ಮೂಲಕ ದೂರು ನೀಡಲು ಅವಕಾಶ ನೀಡಲಾಗಿದೆ.
ಯಾವ ಪ್ರಶ್ನೆಗಳಿಗೆ ದೂರು ಸಲ್ಲಿಸಬಹುದು:-
ವಿದ್ಯಾರ್ಥಿಗಳು ಮತ್ತು ಪಾಲಕರು ಬಿಡುಗಡೆ ಆಗಿರುವ ಕೀ ಉತ್ತರಗಳನ್ನು ಪರಿಶೀಲಿಸಿ ಯಾವುದೇ ಪ್ರಶ್ನೆ ಪತ್ರಿಕೆಯಲ್ಲಿ ಪಠ್ಯ ಕ್ರಮದ ಹೊರತಾಗಿ ಪ್ರಶ್ನೆಗಳು ಇದ್ದರೆ, ಅಪೂರ್ಣ ಪ್ರಶ್ನೆ ಇದ್ದರೆ., ಪ್ರಶ್ನೆ ತಪ್ಪಿದ್ದರೆ, ಇಂಗ್ಲಿಷ್ ಮತ್ತು ಕನ್ನಡ ಆವೃತ್ತಿಯಲ್ಲಿ ಬೇರೆ ಬೇರೆ ಅರ್ಥ ಬರುವ ಪ್ರಶ್ನೆಗಳು ಕಂಡುಬಂದರೆ, ಹಾಗೂ ಬಹು ಆಯ್ಕೆ ಪ್ರಶ್ನೆಯಲ್ಲಿ ಒಂದಕ್ಕಿಂತ ಹೆಚ್ಚಿನ ಪ್ರಶ್ನೆಗಳು ಒಂದೇ ರೀತಿ ಉತ್ತರ ಬರುವಂತೆ ಇದ್ದರೆ ಹಾಗೂ ತೀರಾ ಗೊಂದಲ ಉಂಟು ಮಾಡುವ ಪ್ರಶ್ನೆಗಳು ಇದ್ದರೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ.
ಆಕ್ಷೇಪಣೆ ಸಲ್ಲಿಸಲು ನೀಡಿರುವ ಅವಧಿ:- ವಿದ್ಯಾರ್ಥಿಗಳು ಮತ್ತು ಪಾಲಕರು ಆಕ್ಷೇಪಣೆ ಸಲ್ಲಿಸಲು ಮಾರ್ಚ್ 19 ರಿಂದ ಮಾರ್ಚ್ 21 ನೇ ತಾರೀಖಿನ ಸಂಜೆ 5 ಗಂಟೆಯ ವರೆಗೆ ಸಮಯ ನಿಗದಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಈಗಾಗಲೇ ಕೀ ಉತ್ತರಗಳು ಬಿಡುಗಡೆ ಆಗಿರುವ ವಿಷಯಗಳು ಹೀಗಿವೆ :- ಕನ್ನಡ – 01, ಇಂಗ್ಲಿಷ್ – 02, ಅರೇಬಿಕ್ -11, ಕನ್ನಡ ಅಪ್ಟ್ – 16 , ಇತಿಹಾಸ -21, ಅರ್ಥಶಾಸ್ತ್ರ -22 ,ಲಾಜಿಕ್ -23, ಭೌಗೋಳಿಕತೆ -24, ಸಂಗೀತ ಹಿಂದೂಸ್ತಾನಿ -26, busi studies -27, ರಾಜಕೀಯ ಕ್ಷೇತ್ರ -29, accountancy -30 , statistics -31, ಮನೋವಿಜ್ಞಾನ -32, ಭೌತಶಾಸ್ತ್ರ -33, ರಸಾಯನ ಶಾಸ್ತ್ರ -34, ಗಣಿತ -35, ಜೀವಶಾಸ್ತ್ರ -36, ಭೂ ವಿಜ್ಞಾನ -37, ಶಿಕ್ಷಣ -52, IT -61, ಚಿಲ್ಲರೆ -62, ಆಟೋಮೊಬೈಲ್ -63, ಸೌಂದರ್ಯ ಮತ್ತು ಕ್ಷೇಮ -65, ಗೃಹ ವಿಜ್ಞಾನ -67, ಬೇಸಿಕ್ ಗಣಿತ -75.
ಕೀ ಉತ್ತರಗಳುನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ ವೆಬ್ಸೈಟ್ ಗೆ ತೆರಳಿ ನಿಮಗೆ ವಿಷಯಗಳ ಲಿಸ್ಟ್ ಸಿಗುತ್ತದೆ. ನಿಮಗೆ ಯಾವ ವಿಷಯದ ಕೀ ಉತ್ತರ ನೀಡಬೇಕು ಎಂದು ಇದೆಯೋ ಆ ವಿಷಯದ ಮೇಲೆ ಕ್ಲಿಕ್ ಮಾಡಿ ನಂತರ pdf download ಮಾಡಿ ಕೀ ಉತ್ತರ ಪತ್ರಿಕೆ ವೀಕ್ಷಣೆ ಮಾಡಬಹುದು.
ಆಕ್ಷೇಪಣೆ ಸಲ್ಲಿಸುವುದು ಹೇಗೆ ?
ವಿಧ್ಯಾರ್ಥಿಗಳಿಗೆ ಅಥವಾ ಪಾಲಕರು ಕೀ ಉತ್ತರವನ್ನು ನೋಡಿ ಯಾವುದೇ ಆಕ್ಷೇಪಣೆ ಸಲ್ಲಿಸಬೇಕು ಎಂದಿದ್ದರೆ https://kseab.karnataka.gov.in/ ವೆಬ್ಸೈಟ್ ಗೆ ಭೇಟಿ ನೀಡಿ ಮುಖಪುಟದಲ್ಲಿ ಕಾಣುವ ಇತ್ತೀಚಿನ ಸುದ್ದಿಗಳು ಬಟನ್ ಕ್ಲಿಕ್ ಮಾಡಿ ನಂತರ ” ಮಾರ್ಚ್ 2024ರ ದ್ವಿತೀಯ ಪಿ ಯು ಸಿ ಪರೀಕ್ಷೆ-1ರ 26 ವಿಷಯಗಳ ಮಾದರಿ ಉತ್ತರಗಳಿಗೆ ಆಕ್ಷೇಪಣೆಗಳನ್ನು ಆಹ್ವಾನಿಸುವ ಬಗ್ಗೆ” ಎಂಬ ಆಯ್ಕೆ ಸಿಗುತ್ತದೆ. ಅದನ್ನು ಕ್ಲಿಕ್ ಮಾಡಿ ನಂತರ ಪಿಯುಸಿ ರಿಜಿಸ್ಟರ್ ನಂಬರ್ ನಮೂದಿಸಬೇಕು. ಅದಾದ ನಂತರ ನೀವು ಸೂಚನೆಗಳನ್ನು ಪಾಲಿಸಿ ಆಕ್ಷೇಪಣೆ ಪತ್ರ ಸಲ್ಲಿಸಿ.
ಇದನ್ನೂ ಓದಿ: JIO ದ ದೈನಂದಿನ 3 GB ಪ್ಲಾನ್ ನೊಂದಿಗೆ ಸುಲಭವಾಗಿ IPL 2024 ಅನ್ನು ವೀಕ್ಷಣೆ ಮಾಡಿ!
ಇದನ್ನೂ ಓದಿ: ಯುಪಿಐ ಪಿನ್ ಮರೆತು ಹೋದರೆ ಚಿಂತೆ ಬೇಡ! ಬದಲಾಯಿಸಲು ಇಲ್ಲಿದೆ ಸುಲಭ ವಿಧಾನಗಳು