ಕರ್ನಾಟಕ ರಾಜ್ಯಾದ್ಯಂತ ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. ಹೌದು 2022-23ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು ತನ್ನ ಅಧಿಕೃತ ವೆಬ್‌ಸೈಟ್ www.karresults.nic.in ನಲ್ಲಿ ಬಿಡುಗಡೆ ಮಾಡಿದೆ. ಈಗಾಗಿ ಹಲವಾರು ವಿದ್ಯಾರ್ಥಿಗಳಿಗೆ ಫಲಿತಾಂಶ ನೋಡಿ ಬೇಜಾರಿನ ಜೊತೆ ಭಯ ಕೂಡ ಶುರುವಾಗಿರುತ್ತೆ. ಯಾಕಂದ್ರೆ ಎಲ್ಲರಿಗೂ ಒಂದೇ ರೀತಿಯ ಫಲಿತಾಂಶ ಅನ್ನೋದು ಬಂದಿರಲ್ಲ. ಅತಿಹೆಚ್ಚು ಅಂಕ ಪಡೆದು ಖುಷಿ ಪಡೋರು ಒಂದು ಕಡೆ ಆದ್ರೆ ಅಯ್ಯೋ ನಂಗೆ ಕಡಿಮೆ ಮಾರ್ಕ್ಸ್ ಬಂದಿದ್ಯಲ್ಲ ಅನ್ನೋರು ಇನ್ನೊಂದು ಕಡೆ. ಸದ್ಯ ಪಾಸ್ ಆದ್ನಲ್ಲ ಸಾಕು ಬಿಡು ಅಂತ ಕೆಲವರು ಅಂದುಕೊಂಡ್ರೆ ದೇವ್ರೇ ಫೇಲ್ ಆಗೋದೇ ಏನಪ್ಪಾ ಮಾಡ್ಲಿ ಅಂತ ಯೋಚನೆ ಮಾಡಿ ಜೀವನ ಹಾಳು ಮಾಡಿಕೊಳ್ಳೋರು ಇದ್ದಾರೆ. ಆಗಾಗಿ ಅತರಹದ ದುಡುಕು ನಿರ್ಧಾಗಳನ್ನ ಬದಿಗೊತ್ತಿ, ಮುಂದೆ ಹೋಗಲು ಏನ್ ಮಾಡ್ಬೇಕು ಅಂತ ಆಲೋಚನೆ ಮಾಡೋದು ತುಂಬಾ ಒಳ್ಳೆಯದಲ್ವಾ.. ನಿಮಗೂ ಕೂಡ ಕಡಿಮೆ ಮಾರ್ಕ್ಸ್ ಬಂದಿದ್ಯಾ? ಅಥವಾ ಫೇಲ್ ಆಗಿದೀರಾ? ಭಯ ಪಡ್ಬೇಡಿ ಆಗೇ ಚಿಂತೆ ಬಿಟ್ಟು ಒಮ್ಮೆ ನಾವು ಹೇಳೋದನ್ನ ಟ್ರೈ ಮಾಡಿ ನೋಡಿ. ಲಕ್ ಇದ್ರೆ ಒಳ್ಳೇದಾದ್ರೂ ಆಶ್ಚರ್ಯ ಪಡೆಬೇಕಿಲ್ಲ.
ಇಂದು ಪ್ರಕಟವಾಗಿರೋ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನವನ್ನ ಪಡೆದುಕೊಂದ್ರೆ, ಉಡುಪಿ ಜಿಲ್ಲೆಗೆ ಎರಡನೇ ಸ್ಥಾನ, ಕೊಡಗು ಜಿಲ್ಲೆಗೆ ಮೂರನೇ ಸ್ಥಾನ, ಹಾಗೂ ಉತ್ತರ ಕನ್ನಡ ಜಿಲ್ಲೆಗೆ ನಾಲ್ಕನೇ ಸ್ಥಾನ, ಇನ್ನು ಯಾದಗಿರಿಗೆ ಕೊನೆ ಸ್ಥಾನ ಸಿಕ್ಕಿದೆ. ಇನ್ನು ಈ ಬಾರಿಯ ಫಲಿತಾಂಶದ ವಿಶೇಷ ಎಂಬಂತೆ ವಾಣಿಜ್ಯ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಮಂಗಳೂರು ವಿದ್ಯಾರ್ಥಿನಿ ಅನನ್ಯಾ 600ಕ್ಕೆ 600 ಅಂಕಗಳನ್ನ ಪಡೆಯೋದ್ರಾ ಜೊತೆಗೆ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.
74.67% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅಂದ್ರೆ ಒಟ್ಟು 5,24,209 ವಿದ್ಯಾರ್ಥಿಗಳು ಪಾಸಾಗಿದ್ದಾರೆ ಅಂತ ಶಿಕ್ಷಣ ಇಲಾಖೆ ತಿಳಿಸಿದೆ. ಸುಮಾರು 2ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನುತ್ತಿರ್ಣರಾಗಿದ್ದಾರೆ. ಅದರಲ್ಲಿ 24ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಎಲ್ಲ ವಿಷಯಗಳಿಗೂ ಗೈರಾಗಿದ್ದಾರೆ ಅಂತ ಹೇಳಾಲಾಗಿದೆ. ಸರಿ ಫಲಿತಾಂಶ ಬಂತು ಆದ್ರೆ ನಾನು ಅಂದುಕೊಂಡಷ್ಟು ಮಾರ್ಕ್ಸ್ ಬಂದಿಲ್ಲ ಏನ್ ಮಾಡೋದು? ಅಥವಾ ಫೇಲ್ ಆಗಿದಿನಲ್ಲ ಏನ್ ಮಾಡೋದು ಅನ್ನೋರು ಚಿಂತೆ ಬಿಡಿ. ಎಲ್ಲದಕ್ಕೂ ದುಡುಕು ನಿರ್ಧಾರಗಳೆ ಒಳ್ಳೇದಲ್ಲ ಅಲ್ವಾ..
ಇದನ್ನೂ ಓದಿ: ಕ್ರಾಂತಿ ಸಿನಿಮಾ ಪ್ರಚಾರ ಮಾಡಿ ಕೆಲಸ ಕಳೆದುಕೊಂಡಿದ್ದ ದರ್ಶನ್ ಅಭಿಮಾನಿ! ಇದೀಗ ವಿದೇಶದಲ್ಲಿ ಕಾಟೇರ ಪ್ರಚಾರ
ಕಡಿಮೆ ಮಾರ್ಕ್ಸ್ ಅಥವಾ ಫೇಲ್ ಆಗಿದ್ರೆ ಈ ರೀತಿ ಮಾಡಿ
ಬಹಳ ದಿನಗಳಿಂದ ಕಾಯುತ್ತಿದ್ದಂತಹ ಫಲಿತಾಂಶ ಇಂದು ಪ್ರಕಟವಾಗಿ ಆಯ್ತು .ಆದರೆ ನಾನು ಎಕ್ಸಾಮ್ ತುಂಬಾ ಚೆನ್ನಾಗಿ ಬರ್ದಿದ್ದೆ ನಂಗೆ ತುಂಬಾ ಕಡಿಮೆ ಮಾರ್ಕ್ಸ್ ಕೊಟ್ಟಿದ್ದಾರೆ ಅನ್ನೋ ವಿದ್ಯಾರ್ಥಿಗಳು ಹಾಗೂ ಇಲ್ಲ ನಾನು ಫೇಲ್ ಆಗ್ತಿರ್ಲಿಲ್ಲ ಪಾಸ್ ಆಗೋ ತರ ಎಕ್ಸಾಮ್ ಬರೆದಿದ್ದೆ ಅನ್ನೋರು, ಪಾಸ್ ಆಗೋಕೆ ಕೆಲವೇ ಕೆಲವು ಕಡಿಮೆ ಅಂಕ ತಗೊಂಡಿರೋರಿಗೆ ಒಂದು ಒಳ್ಳೆ ಅವಕಾಶ ಅಂತಾನೆ ಹೇಳಬಹುದು. ಹೌದು ನಿಮ್ಮೆಲ್ಲರಿಗೂ ರಿ-ವ್ಯಾಲ್ಯೂವೇಷನ್ ಪ್ರಕ್ರಿಯೆ ಬಗ್ಗೆ ಗೊತ್ತೇ ಇರುತ್ತೆ ಅಲ್ವಾ. ಹಾಗಂದ್ರೆ ಏನು ಅಂತ ನೋಡೋದಾದ್ರೆ, ಈಗಾಗ್ಲೇ ನಾನು ಮೊದ್ಲೇ ಹೇಳಿದ ಹಾಗೆ ನಾನು ಪರೀಕ್ಷೆ ಚೆನ್ನಾಗಿ ಬರೆದಿದ್ದೆ ಆದ್ರೆ ಸರಿಯಾಗಿ ಮಾರ್ಕ್ಸ್ ಕೊಟ್ಟಿಲ್ಲ ಅಂತ ಪಕ್ಕ ನಂಬಿಕೆ ಇರುವಂತಹ ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ಅವಕಾಶ. ಯಾಕಂದ್ರೆ ನಿಮ್ಮ ಉತ್ತರ ಪತ್ರಿಕೆಯನ್ನ ಮತ್ತೆ ವ್ಯಾಲ್ಯೂವೇಷನ್ ಮಾಡಿಸಲು ಸಾಧ್ಯವಾಗುವಂತಹ ಒಂದು ವಿಧಾನ. ಇದನ್ನ ಯಾವ ವಿದ್ಯಾರ್ಥಿ ಬೇಕಿದ್ರೂ ಮಾಡಿಸಬಹುದು, ಫೇಲ್ ಆಗಿರೋ ವಿಧಾರ್ಥಿ ಇರಬಹುದು, ಇಲ್ಲ ನಂಗೆ ಇನ್ನು ಮಾರ್ಕ್ಸ್ ಬರಬೇಕು ಅನ್ನೋರು, ಪರೀಕ್ಷೆ ಬರೆದ ಯಾವ ವಿದ್ಯಾರ್ಥಿ ಬೇಕಿದ್ರೂ ಇದನ್ನ ಮಾಡಿಸಬಹುದು.
ಇದರ ಜೊತೆಗೆ ಮತ್ತೊಂದು ಆಪ್ಷನ್ ನಿಮಗಿದೆ ಅದೇ ರಿ ಕೌಂಟಿಂಗ್ ಅಂತ. ಹೌದು ಕೆಲವೊಂದು ಬಾರಿ ವ್ಯಾಲ್ಯೂವೇಷನ್ ಸರಿಯಾಗಿ ನಡೆದಿದ್ರು ಅಂಕ ಗಳನ್ನ ಕೌಂಟ್ ಮಾಡುವಾಗ ಸಣ್ಣ ಪುಟ್ಟ ದೋಷಗಳಾಗಿರುತ್ತೆ ಅಂತಹ ಸಂದರ್ಭದಲ್ಲೂ ಕೂಡ ನೀವು ಮತ್ತೆ ಕೌಂಟಿಂಗ್ ನ್ನ ಮಾಡ್ಸೋಕೆ ನೀವು ಅರ್ಹರಿರುತ್ತೀರಾ. ಬಹುಶ ಇತರಹದ ತಪ್ಪು ಗಳು ಆಗೋದು ಬಹಳಷ್ಟು ವಿರಳದಲ್ಲಿ ಅತೀ ವಿರಳ ಆದರೂ ಕೆಲವೊಮ್ಮೆ ಏನು ಮಾಡಲು ಸಾಧ್ಯವಾಗೋದಿಲ್ಲ ತಪ್ಪು ಆಗುತ್ತೆ ಅಂತಹ ಸಂದರ್ಭದಲ್ಲಿ ನೀವು ಮರು ಎಣಿಕೆ ಕೆಲಸ ವನ್ನ ಮಾಡಿಸಬಹುದು. ಆದರೆ ಇಲ್ಲಿ ಗಮನಿಸಬೇಕಾದ ಒಂದು ಅಂಶ ಏನಪ್ಪಾ ಅಂದ್ರೆ ನೀವು ರಿಕೌಂಟಿಂಗ್ ಕೇಳಿದ್ರೆ ಅದನ್ನ ಮಾತ್ರ ಮಾಡ್ತಾರೆ ಅದರ ಹೊರತು ಮತ್ತೆ ನಿಮ್ ಪೇಪರ್ ನ್ನ ಚೆಕ್ ಮಾಡಿ ವ್ಯಾಲ್ಯೂವೇಷನ್ ಮಾಡಲ್ಲ ಇದು ನೆನಪಿರಲಿ.
ರಿವೆಲ್ಯೂವೇಷನ್ ಪ್ರಕ್ರಿಯೆ
ಮತ್ತೊಂದು ಗಮನಿಸಬೇಕಾದ ವಿಷಯ ಏನಪ್ಪಾ ಅಂದ್ರೆ ನಾನು ಡೈರೆಕ್ಟ್ ಆಗಿ ರಿವೆಲ್ಯೂವೇಷನ್ ಅಪ್ಲಿಕೇಶನ್ ಹಾಕ್ತಿನಿ ಅಥವಾ ಕೌಟಿಂಗ್ ಮಾಡ್ಸ್ತೀನಿ ಅಂತ ನೀವು ಅನ್ಕೊಂಡ್ರೆ ಖಂಡಿತಾ ಆಗಲ್ಲ.. ಇದೆರೆಡು ಪ್ರಕ್ರಿಯೆ ಮಾಡಬೇಕು ಅಂದ್ರೆ ಮೊದಲು ನೀವು ನಿಮ್ಮ ಉತ್ತರ ಪತ್ರಿಕೆಯ ಸ್ಕಾರ್ಡ್ ಕಾಪಿಯನ್ನ ನೀವು ತೆಗೆದುಕೊಳ್ಳಬೇಕು. ಅಂದ್ರೆ ನೀವು ಉತ್ತರ ಬರೆದಿರುವ ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿಯನ್ನು ತೆಗೆದುಕೊಂಡ ನಂತರವಷ್ಟೇ ನೀವು ಮುಂದುವರೆಯಲು ಸಾಧ್ಯ. ಸ್ಕಾರ್ಡ್ ಕಾಪಿ ತೆಗೆದುಕೊಂಡ ಬಳಿಕ ನೀವು ರಿ ಕೌಂಟಿಂಗ್ ಮಾಡ್ಸ್ತೀರಾ ಅಥವಾ ರಿ ವೇಲ್ಯೂವೇಷನ್ ಮಾಡ್ಸ್ತೀರಾ ಅಂತ ನಿರ್ಧಾರ ಮಾಡಿ ನೀವು ಅಪ್ಲಿಕೇಶನ್ ಹಾಕ ಬಹುದು. ಇದಾದ ನಂತರ ಮತ್ತೊಂದು ಗುಡ್ ನ್ಯೂಸ್ ಏನ್ ಗೊತ್ತಾ ಮೊದಲೆಲ್ಲ 5ಅಂಕಗಳಿಗಿಂತ ಹೆಚ್ಚಿಗೆ ಬಂದ್ರೆ ಮಾತ್ರ ರಿ ಕೌಂಟಿಂಗ್ ಅಥವ ರಿವಲ್ಯೂಯೇಷನ್ ಅನ್ನ ಪರಿಗಣನೆಗೆ ತೆಗೆದುಕೊಳ್ಳುತ್ತಿದ್ರು ಆದ್ರೆ ಈಗ ಕೇವಲ ಒಂದು ಅಂಕ ಬಂದ್ರು ಕೂಡ ಅದನ್ನ ಕೌಂಟ್ ಗೆ ತೆಗೆದುಕೊಳ್ಳಲಾಗುತ್ತೆ ಅಂತ ಖುದ್ದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವ್ರೆ ತಿಳಿಸಿದ್ದಾರೆ. ಇನ್ನು ಈ ಎರಡು ವಿಧಾನಗಳ ನಂತರ ನಿಮಗೆ ಇಷ್ಟು ಅಂಕಗಳು ಬರುತ್ತೋ ಅದು ನಿಮ್ಮ ಫೈನಲ್ ಮಾರ್ಕ್ಸ್ ಆಗಿರುತ್ತೆ ಸ್ನೇಹಿತರೆ.
ಇದನ್ನೂ ಓದಿ: SSLC ರಿಸಲ್ಟ್ ಯಾವಾಗ? ಯಾವ ವಿಧ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ ಸೀಗುತ್ತೆ?