ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಯಾವಾಗ ಅಂತ ಎಲ್ಲಾ ವಿದ್ಯಾರ್ಥಿಗಳು ಕಾಯುತ್ತಿದ್ದು, ಕೆಲವೊಂದಿಷ್ಟು ಸುಳ್ಳು ಸುದ್ದಿಗಳು ಸಹ ಕೇಳಿಬರುತ್ತಿರುತ್ತವೆ. ಹೌದು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿರುವ ಎಲ್ಲ ವಿದ್ಯಾರ್ಥಿಗಳು ಹಾಗು ಪೋಷಕರು ಬಹಳ ಕುತೂಹಲದಿಂದ ಫಲಿತಾಂಶಕ್ಕಾಗಿ ಕಾಯುತ್ತಿದ್ದು, ಪದವಿ ಪೂರ್ವ ಶಿಕ್ಷಣ ಇಲಾಖೆ ಈ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಅದ್ರಲ್ಲೂ ಏಪ್ರಿಲ್ 3ನೆ ವಾರದಲ್ಲಿ ರಿಸಲ್ಟ್ ಬರುತ್ತೆ ಅನ್ಕೊಂಡಿದ್ರು, ಹಾಗಾದ್ರೆ ಈ ವಾರ ರಿಸಲ್ಟ್ ಬರೋದು ಪಕ್ಕನಾ ಅಂತ ಕೇಳೋರಿಗೆ ಮತ್ತೊಂದು ಗುಡ್ ನ್ಯೂಸ್ ಇದೆ, ಅದೇನು ಅಂತ ಸಂಪೂರ್ಣವಾಗಿ ತಿಳಿಸಿಕೊಡ್ತೀನಿ ಬನ್ನಿ.
ಹೌದು ಮಾರ್ಚ್ 9 2023 ರಿಂದ ಮಾರ್ಚ್ 29 ನೇ ತಾರೀಖಿನ ತನಕ ಕರ್ನಾಟಕ ರಾಜ್ಯ ದಲ್ಲಿ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆಗಳನ್ನ ಎದುರಿಸಿದ್ರು. ಇನ್ನು ಪರೀಕ್ಷೆಯ ನಂತರ ಫಲಿತಾಂಶ ಯಾವಾಗ ಅನ್ನೋ ಕುತೂಹಲ ಇದ್ದೆ ಇರುತ್ತೆ. ಹೌದು ಇನ್ನು ವಿದ್ಯಾರ್ಥಿಗಳಿಗೆ ಫಲಿತಾಂಶದ ಕುರಿತು ಹಲವಾರು ರೀತಿಯಾದಂತಹ ಮಾಹಿತಿಗಳು ಬರುತ್ತಿದ್ದು, ಫಲಿತಾಂಶ ಬೇಗನೆ ಬಿಡುಗಡೆ ಆಗುತ್ತೆ ಅಂತ ಅಂದ್ರೆ ಏಪ್ರಿಲ್ 3ನೇ ವಾರದಲ್ಲಿ ಫಲಿತಾಂಶ ಬರುತ್ತೆ ಅಂತ ಹೇಳಲಾಗಿತ್ತು. ಆದ್ರೆ ಈ ವಾರವು ಫಲಿತಾಂಶ ಬರೋದು ಡೌಟ್ ಅಂತೇ.. ಹಾಗಾದ್ರೆ ಫಲಿತಾಂಶ ಬರೋದು ಯಾವಾಗ, ಶಿಕ್ಷಣ ಇಲಾಖೆ ಯಿಂದ ಬಂದಿರುವ ಗುಡ್ ನ್ಯೂಸ್ ಏನು ಎಲ್ಲ ಸಂಪೂರ್ಣ ಮಾಹಿತಿ ಯನ್ನ ತಿಳಿಸಿಕುಡುತ್ತೇನೆ ಬನ್ನಿ.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಮೌಲ್ಯ ಮಾಪನ ಕೆಲ್ಸವು ಏಪ್ರಿಲ್ 5 ರಿಂದ ಶುರುವಾಗಿತ್ತು. ಇದೀಗ ಬಹುತೇಕವಾಗಿ ಮೌಲ್ಯಮಾಪನ ಕಾರ್ಯವು ಪೂರ್ಣಗೊಂಡಿದ್ದು, ವಿದ್ಯಾರ್ಥಿಗಳ ಫಲಿತಾಂಶ ವನ್ನ ಪ್ರಕಟ ಮಾಡುವುದಕ್ಕೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಆನ್ಲೈನ್ ಗೆ ಅಂಕಪಟ್ಟಿ ಯನ್ನ ಹಾಕುವ ಕೆಲಸ ಕೂಡ ನಡೀತ್ತಿದೆ ಅಂತ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಡೆಯಿಂದ ಬಂದಿರುವಂತಹ ಮೂಲಗಳು ತಿಳಿಸಿವೆ ಆದ್ರೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶಕ್ಕೆ ದಿನಾಂಕ ವನ್ನ ಇನ್ನು ಕೂಡ ಫಿಕ್ಸ್ ಮಾಡಿಲ್ಲ. ಫಲಿತಾಂಶ ಪ್ರಕಟವಾಗುವ 2-3 ದಿನಗಳ ಮುಂಚೆಯೇ ಅಧಿಕೃತವಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಮಾಹಿತಿಯನ್ನ ಕೊಡಲಿದ್ದಾರೆ.
7.27ಲಕ್ಷ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆ ಎದುರಿಸಿದ್ದು, 37 ವಿಷಯಗಳಿಗೆ ನಡಿದಿರುವ ಪರೀಕ್ಷೆ ಗಳಲ್ಲಿ 45ಲಕ್ಷ ಉತ್ತರ ಪತ್ರಿಕೆಗಳನ್ನ, 25ಸಾವಿರ ಉಪನ್ಯಾಸಕರು ಮೌಲ್ಯಮಾಪನ ಮಾಡಿದ್ದಾರೆ. ಇನ್ನುಳಿದಂತೆ ಅಂಕಪಟ್ಟಿ ಡೇಟಾ ವನ್ನ ಆನ್ಲೈನ್ ಗೆ ಹಾಕುವ ಕೆಲಸ ನಡೆಯುತ್ತಿದ್ದೂ, ಈ ಮಧ್ಯೆ ಕರ್ನಾಟಕ ದಲ್ಲಿ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗಧಿಯಾಗಿರೋದಿಂದ ಕೂಡ ಫಲಿತಾಂಶ ಪ್ರಕಟಿಸೋದು ವಿಳಂಬವಾಗುತಿದ್ದೆ ಅಂತ ಹೇಳಾಲಾಗಿದೆ. ಆದರೆ ಏಪ್ರಿಲ್ ಕೊನೆಯ ವಾರದೊಳಗೆ ಫಲಿತಾಂಶ ಪ್ರಕಟ ಮಾಡಲಾಗುತ್ತದೆ ಅಂತ ಬಲ್ಲ ಮೂಲಗಳು ಹೇಳ್ತಿವೆಯೇ ಹೊರತು ಅಧಿಕೃತ ಮಾಹಿತಿ ಎಲ್ಲಿಯೂ ಕೂಡ ಲಭ್ಯವಾಗಿಲ್ಲ. ಶಿಕ್ಷಣ ಇಲಾಖೆ ಅಥವ ಶಿಕ್ಷಣ ಸಚಿವರಿಂದ ಅಧಿಕೃತವಾಗಿ ಎಲ್ಲಿಯೂ ಮಾಹಿತಿ ಪ್ರಕಟವಾಗಿಲ್ಲ. ಹೀಗಾಗಿ ಫಲಿತಾಂಶದ ಕುರಿತಾದ ಸುದ್ದಿಗಳು ಕೇವಲ ಕಾಲ್ಪನಿಕ ಅಷ್ಟೇ.
ಇದನ್ನೂ ಓದಿ: ಉಪೇಂದ್ರ ಅವರ ಹೊಸ ಮನೆಯ ಗೃಹಪ್ರವೇಶ ಸಂಭ್ರಮ..
ಈ ಬಾರಿ ಪರೀಕ್ಷೆಯಲ್ಲಿ ಪಾಸ್ ಆಗಿರುವವರ ಸಂಖ್ಯೆ ಹೆಚ್ಚಾಗಿದೇಗೆ?
ಇನ್ನು ಪಿಯುಸಿ ವಿದ್ಯಾರ್ಥಿ ಗಳಿಗೆ ಗುಡ್ ನ್ಯೂಸ್ ಇದೆ ಅದೇನಪ್ಪ ಅಂದ್ರೆ ಈ ಬಾರಿಯ ಫಲಿತಾಂಶದಲ್ಲಿ 25% ರಷ್ಟು ಫಲಿತಾಂಶ ಹೆಚ್ಚಾಗಿದ್ಯಂತೆ. ಅಂದ್ರೆ 25%ರಷ್ಟು ವಿದ್ಯಾರ್ಥಿಗಳು ಕಳೆದ ವರ್ಷಕ್ಕಿಂತ ಈ ವರ್ಷದ ಹೆಚ್ಚಾಗಿ ಪಾಸ್ ಆಗಿದ್ದಾರೆ. ಹೌದು ಉತ್ತಿರ್ಣರಾಗಿರುವ್ವರ ಪ್ರಮಾಣ ಈ ಬಾರಿ ಹೆಚ್ಚಾಗಿದ್ಯಂತೆ.. ಅಂದ್ರೆ ಪಾಸಿಂಗ್ ರೇಟ್ 85%-90% ಇದೆ ಅಂತ ಹೇಳಲಾಗಿದ್ದು. ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಫೇಲ್ ಆಗಿದ್ದಾರೆ ಅನ್ನುವಂತಹ ಮಾಹಿತಿ ಲಭ್ಯವಾಗಿದೆ. ಹೌದು ಗ್ರೇಸ್ ಮಾರ್ಕ್ಸ್ ಕೊಟ್ಟಿರೋದ್ರಿಂದ ಈ ಬಾರಿ ಪಾಸ್ ಆಗಿರುವವರ ಪ್ರಮಾಣ ಹೆಚ್ಚಾಗಿದೆ ಅಂತಲೂ ಹೇಳಾಲಾಗ್ತಿದೆ. ಕೊರೋನ ಹೊಡೆತದಿಂದಾಗಿ ಈ ಬಾರಿಯು ಕೂಡ ವಿದ್ಯಾರ್ಥಿಗಳಿಗೆ ತೊಂದರೆ ಆಗ ಬಾರದು ತರಗತಿಗಳು ನಡೆದಿರುವುದು ಕಡಿಮೆ ಅಂತ ಹೇಳಿ ಈ ಬಾರಿಯು ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ನೀಡಲು ತೀರ್ಮಾನಿಸಿದ್ದೇವೆ ಅಂತ ಶಿಕ್ಷಣ ಇಲಾಖೆ ತಿಳಿಸಿತ್ತು. ಹೀಗಾಗಿ ಗ್ರೇಸ್ ಮಾರ್ಕ್ಸ್ ಕಾರಣದಿಂದಲೂ ಹೆಚ್ಚಿನ ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ.
ಒಟ್ಟಿನಲ್ಲಿ ಈ ಒಂದು ಪಾಸಿಂಗ್ ರೇಟ್ ಜಾಸ್ತಿ ಇದೆ ಅನ್ನುವಂತಹ ಸುದ್ದಿ ಯನ್ನ ಹೊರತು ಪಡಿಸಿದರೆ ಫಲಿತಾಂಶದ ಕುರಿತಾಗಿ ಇನ್ನು ಕೂಡ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಹೀಗಾಗಿ ಶಿಕ್ಷಣ ಸಚಿವಾ ಬಿ. ಸಿ. ನಾಗೇಶ್ ಅವ್ರು ಅಧಿಕೃತವಾಗಿ ಸಾಮಾಜಿಕ ಜಾಲತಾಣ ಅಥವಾ ಮಧ್ಯಮಗಳ ಮೂಲಕ ತಿಳಿಸುವವರೆಗೂ ಈ ಕುರಿತಂತೆ ಬರುವ ಎಲ್ಲ ಸುದ್ದಿಗಳು ಕೂಡ ಕೇವಲ ಕಾಲ್ಪನಿಕ.. ಹೀಗಾಗಿ ಶಿಕ್ಷಣ ಸಚಿವರ ಅಧಿಕೃತ ಮಾಹಿತಿ ಪ್ರಕಟವಾಗುವವರೆಗೂ ಕಾಯಲೇಬೇಕು. ಇನ್ನು ಸಚಿವರು ಕೂಡ ಫಲಿತಾಂಶ ಪ್ರಕಟಿವಾಗುವ ಮೊದ್ಲೇ ಅಧಿಕೃತವಾಗಿ ಮಾಹಿತಿಯನ್ನ ತಿಳಿಸಲಿದ್ದಾರೆ. ಆಗಾಗ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಅವ್ರ ಟ್ವಿಟರ್ ಖಾತೆಯನ್ನ ಪರಿಶೀಲಿಸುತ್ತಿರಿ.
ಇದನ್ನೂ ಓದಿ: ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19 ರ ವಿನ್ನರ್ ಮತ್ತು ರನ್ನರ್ ಗೆ ಸಿಕ್ಕ ಬಹುಮಾನ ಹಾಗೂ ಹಣ ಎಷ್ಟು ಗೊತ್ತಾ?