ವಿದ್ಯಾರ್ಥಿ ಜೀವನದ ಪ್ರಮುಖ ಹಂತ ದ್ವಿತೀಯ ಪಿಯುಸಿ. ಮುಂದಿನ ಶೈಕ್ಷಣಿಕ ಜೀವನಕ್ಕೆ ಇದು ಪ್ರಮುಖ ಘಟ್ಟ. ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಗಿದಿವೆ ಇನ್ನೇನು ಫಲಿತಾಂಶ ಬರುವುದು ಒಂದೇ ಬಾಕಿ. ಹಾಗಾದರೆ ಪಿಯುಸಿ ಫಲಿತಾಂಶ ಯಾವಾಗ ಬರಲಿದೆ ಎಂಬ ಪೂರ್ಣ ಮಾಹಿತಿ ಇಲ್ಲಿದೆ.
ಫಲಿತಾಂಶ ಯಾವಾಗ ಪ್ರಕಟಣೆ ಆಗಲಿದೆ?: ಮಂಡಳಿಯ ಅಧಿಕಾರಿಗಳು ನೀಡಿದ ಮಾಹಿತಿ ಅನುಸಾರವಾಗಿ ಈಗಾಗಲೇ ಬಹುತೇಕ ಮೌಲ್ಯಮಾಪನ ನಡೆದಿದ್ದು ಅಂತಿಮ ಹಂತದ ಮೌಲ್ಯಮಾಪನ ನಡೆಯುತ್ತಾ ಇದೆ. ಇನ್ನೇನು ಒಂದು ವಾರದೊಳಗೆ ಎಲ್ಲ ಪತ್ರಿಕೆಯ ಮೌಲ್ಯಮಾಪನ ಪೂರ್ಣಗೊಂಡು ನಂತರದಲ್ಲಿ ಅಂಕಗಳನ್ನು ಕಂಪ್ಯೂಟರೀಕರಣಗೊಳಿಸುವ ಕಾರ್ಯವೂ ಪೂರ್ಣವಾಗಿದೆ. ಎಲ್ಲವೂ ಇಲಾಖೆ ಅಂದುಕೊಂಡಂತೆ ಆದರೆ ಏಪ್ರಿಲ್ 10 ಅಥವಾ ಆಸುಪಾಸಿನ ದಿನಂಕದಲ್ಲಿ ಫಲಿತಾಂಶವು ಪ್ರಕಟವಾಗುವ ಸಾಧ್ಯತೆ ಇದೆ. ಪಿಯುಸಿ ಮೌಲ್ಯ ಮಾಪನವು ಮಾರ್ಚ್ 25ರಿಂದಲೇ ಆರಂಭ ಆಗಿತ್ತು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಪರೀಕ್ಷಾರ್ಥಿಗಳ ಸಂಖ್ಯೆ :- ದ್ವಿತೀಯ ಪಿಯುಸಿ ಪರೀಕ್ಷೆಯ ಮಾರ್ಚ್ 1ರಿಂದ 22ರವರೆಗೆ ನಡೆದಿದೆ. ಒಟ್ಟು ರಾಜ್ಯದ 1120ಕ್ಕೂ ಹೆಚ್ಚು ಕೇಂದ್ರಗಳಲ್ಲಿ ದ್ವಿತೀಯ ಪಿಯು ಪರೀಕ್ಷೆಗಳನ್ನು ಇಲಾಖೆ ನಡೆಸಿದೆ. ರಾಜ್ಯಾದ್ಯಂತ ಸುಮಾರು 7 ಲಕ್ಷ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಈಗಾಗಲೇ ಉತ್ತರ ಪತ್ರಿಕೆಯ ಕೀ ಉತ್ತರ ಪ್ರಕಟಣೆ ಆಗಿದೆ:-
ದ್ವಿತೀಯ ಪಿಯುಸಿ ಪರೀಕ್ಷೆಯ ಉತ್ತರಗಳನ್ನು ನೋಡಲು https://dpue-exam.karnataka.gov.in/sovexam12024/frmSOV ವೆಬ್ಸೈಟ್ ಗೆ ಭೇಟಿ ನೀಡಿದರೆ ನಿಮಗೆ ವಿಷಯಗಳ ಲಿಸ್ಟ್ ಸಿಗುತ್ತದೆ. ನಂತರ ನೀವು ಯಾವ ವಿಷಯದ ಕೀ ಉತ್ತರ ನೋಡಬೇಕು ಎಂದು ಇದೆಯೋ ಆ ವಿಷಯದ ಮೇಲೆ ಕ್ಲಿಕ್ ಮಾಡಿ ನಂತರ pdf download ಮಾಡಿ ಕೀ ಉತ್ತರ ಪತ್ರಿಕೆ ವೀಕ್ಷಣೆ ಮಾಡಬಹುದು ಎಂದು ಇಲಾಖೆ ತಿಳಿಸಿದೆ. ಮಾರ್ಚ್ 21 ರ ಒಳಗೆ ಈ ವಿಷಯಗಳ ಕೀ ಉತ್ತರ ಪತ್ರಿಕೆ ನೋಡಿ ದೂರು ಸಲ್ಲಿಸಲು ಅವಕಾಶ ಇತ್ತು :-
ಕನ್ನಡ – 0೧ ಜೀವಶಾಸ್ತ್ರ -36, ಬೇಸಿಕ್ ಗಣಿತ -75 , ಇಂಗ್ಲಿಷ್ – 02, ಅರೇಬಿಕ್ -11,ಗೃಹ ವಿಜ್ಞಾನ -67,ಭೂ ವಿಜ್ಞಾನ -37, ಕನ್ನಡ ಅಪ್ಟ್ – 16 ,ಮನೋವಿಜ್ಞಾನ -32, ಇತಿಹಾಸ -21, ಅರ್ಥಶಾಸ್ತ್ರ -22 ,ಲಾಜಿಕ್ -23, ಭೌಗೋಳಿಕತೆ -24, ಸಂಗೀತ ಹಿಂದೂಸ್ತಾನಿ -26,ಭೌತಶಾಸ್ತ್ರ -33, business studies -27, ರಾಜಕೀಯ ಕ್ಷೇತ್ರ -29, accountancy -30 , statistics -31, ರಸಾಯನ ಶಾಸ್ತ್ರ -34, ಗಣಿತ -35, ಶಿಕ್ಷಣ -52, IT -61, ಚಿಲ್ಲರೆ -62, ಆಟೋಮೊಬೈಲ್ -63, ಸೌಂದರ್ಯ ಮತ್ತು ಕ್ಷೇಮ -65,
ನಿಖರವಾದ ದಿನಾಂಕಗಳು ಮತ್ತು ಫಲಿತಾಂಶ ನೋಡುವ ಬಗ್ಗೆ ಮುಂದಿನ ದಿನಗಳಲ್ಲಿ ಇಲಾಖೆ ತಿಳಿಸಲಾಗಿದೆ. ಜೊತೆಗೆ 5,8,9 ತರಗತಿಗಳಿಗೆ ನಡೆದ ಮೌಲ್ಯಾಂಕನ ಪರೀಕ್ಷೆಗಳ ಮೌಲ್ಯಮಾನವು ಕೊನೆಯ ಹಂತದಲ್ಲಿ ಇತ್ತು ಶಾಲೆಯಲ್ಲಿ ನಡೆಯುವ ಸಮುದಾಯದತ್ತ ಶಾಲೆಯ ದಿನದಂದು ಫಲಿತಾಂಶ ಪ್ರಕಟಣೆ ಆಗಲಿದೆ.
ಇದನ್ನೂ ಓದಿ: ರೈಲ್ವೇ ನಿಯಮದಲ್ಲಿ ದೊಡ್ಡ ಬದಲಾವಣೆ, ಪ್ರಯಾಣಿಸುವ ಮುನ್ನ ತಿಳಿದುಕೊಳ್ಳಬೇಕಾದ ಮುಖ್ಯ ಸಂಗತಿಗಳು!
ಇದನ್ನೂ ಓದಿ: ಶಿಕ್ಷಣ ಇಲಾಖೆಯಿಂದ ಗುಡ್ ನ್ಯೂಸ್, ಏಪ್ರಿಲ್ 11 ರಿಂದ ಪ್ರಾರಂಭವಾಗುವ ಬೇಸಿಗೆ ರಜೆ ಯಾವಾಗ ಕೊನೆಗೊಳ್ಳಲಿದೆ?