ಮಾಸಿಕ ರೈತರು ಸೇರಿದಂತೆ ಶ್ರಮ ಜೀವಿಗಳಿಗೆ ಸಿಗಲಿದೆ 3ಸಾವಿರ ಪಿಂಚಣಿ; 3ಸಾವಿರ ಪಡೆದುಕೊಳ್ಳೋದು ಹೇಗೆ ಯಾರು ಅರ್ಹರು? ಅರ್ಜಿ ಸಲ್ಲಿಕೆ ವಿಧಾನ!

ನಮ್ಮ ದೇಶದ ಅರ್ಧದಷ್ಟು ಆದಾಯವು ಅಸಂಘಟಿತ ವಲಯದಿಂದಲೇ ಬರುತ್ತಿದೆ. ಜೊತೆಗೆ ರೈತ ದೇಶದ ಬೆನ್ನೆಲುಬು. ರೈತರ ಜೊತೆಗೆ ದೈನಂದಿನ ಜೀವನದಲ್ಲಿ ಕಾಣುವ ಬೀದಿ ವ್ಯಾಪಾರಿಗಳು, ರಿಕ್ಷಾ ಓಡಿಸುವವರು, ಕಟ್ಟಡ ಕಾರ್ಮಿಕರು, ಮನೆಕೆಲಸದವರು, ಕೃಷಿ ಕಾರ್ಮಿಕರು, ಬೀದಿ ಕಾರ್ಮಿಕರು, ಹ್ಯಾಡ್‍ಲೂಮ್ ಕಾರ್ಮಿಕರು, ಚರ್ಮೋದ್ಯಮ, ಚಿಂದಿ ಆಯುವವರು ಸೇರಿದಂತೆ ಇತರೆ ವಿವಿಧ ವೃತ್ತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೋಟ್ಯಂತರ ಮಂದಿ ಅಸಂಘಟಿತ ಕಾರ್ಮಿಕರಿದ್ದಾರೆ. ಈ ಅಸಂಘಟಿತ ವಲಯದ ಕಾರ್ಮಿಕರಿಗೆ ಅವರ ವಯೋವೃದ್ಧ ವೇಳೆಯಲ್ಲಿ ರಕ್ಷಣೆ ಕಲ್ಪಿಸಲು ಪಿಂಚಣಿ ಸೌಲಭ್ಯವನ್ನು ವಿಸ್ತರಿಸಿ ಭಾರತ ಸರ್ಕಾರವು ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್-ಧನ್ ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದಿದೆ. ಅಲ್ದೇ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಕೇಂದ್ರ ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ಆರಂಭಿಸಿದೆ.

WhatsApp Group Join Now
Telegram Group Join Now

ಈಗಾಗಲೇ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ವಾರ್ಷಿಕ 6000 ರೂ. ನೀಡುತ್ತದೆ, ಅಂದರೆ, ವರ್ಷದಲ್ಲಿ 3 ಕಂತುಗಳಲ್ಲಿ ತಲಾ 2 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತಿದೆ. ಈ ಯೋಜನೆಯ ಜತೆಗೆ ರೈತರ ಆರ್ಥಿಕ ಸಹಾಯಕ್ಕಾಗಿ ಮತ್ತು ವೃದ್ಧಾಪ್ಯವನ್ನು ಸುರಕ್ಷಿತವಾಗಿರಿಸಲು ಸರ್ಕಾರವು ಪಿಎಂ ಕಿಸಾನ್ ಮಾಂದನ್ ಯೋಜನೆ’ಯನ್ನೂ ಆರಂಭಿಸಿದೆ. ರೈತರಿಗೂ ಕೂಡ ಪಿಂಚಣಿ ಸೌಲಭ್ಯ ನೀಡುವ ಮುಖ್ಯ ಉದ್ದೇಶದೊಂದಿಗೆ ಈ ಯೋಜನೆ ಆರಂಭಿಸಲಾಗಿದೆ. ಹಾಗಾದ್ರೆ ಈ ಯೋಜನೆಯ ಲಾಭ ಯಾರಿಗೆ ಸಿಗುತ್ತೆ, ಅರ್ಜಿ ಸಲ್ಲಿಸೋದು ಹೇಗೆ ಮತ್ತು ಎಲ್ಲಿ, ದಾಖಲೆಗಳು ಏನೇನ್ ಬೇಕು ಎಲ್ಲವನ್ನ ನೋಡ್ತಾ ಹೋಗೋಣ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram

ರೈತರನ್ನ ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶದಿಂದ ಹೊಸ ಪ್ಲಾನ್

ಹೌದು ಈ ಯೋಜನೆಯ ಲಾಭ ಪಡೆಯಲು ನೀವು 18 ವರ್ಷ ವಯಸ್ಸಿನಲ್ಲಿ ಈ ಯೋಜನೆಯನ್ನು ಆರಂಭಿಸಲು ಮಾಸಿಕ 55 ರೂ. ಠೇವಣಿ ಮಾಡಬೇಕು. ಅಂದರೆ, ದಿನಕ್ಕೆ ಸುಮಾರು 2 ರೂಪಾಯಿ ಉಳಿತಾಯ ಮಾಡಬೇಕು. ನಿಮಗೆ 60 ವರ್ಷ ತುಂಬಿದ ಬಳಿಕ ವಾರ್ಷಿಕ 36,000 ರೂಪಾಯಿ ಪಿಂಚಣಿ ಲಭ್ಯವಾಗುತ್ತದೆ. ಒಬ್ಬ ವ್ಯಕ್ತಿಯು 40 ನೇ ವಯಸ್ಸಿನಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದರೆ, ಅವನು ಮಾಸಿಕ 200 ರೂಪಾಯಿ ಠೇವಣಿ ಮಾಡಬೇಕು. 60 ವರ್ಷಗಳ ನಂತರ, ನೀವು ಪಿಂಚಣಿಗೆ ಅರ್ಹರಾಗುತ್ತೀರಿ. 60 ವರ್ಷಗಳ ನಂತರ, ನೀವು ಮಾಸಿಕ 3000 ರೂ. ಅಥವಾ ವಾರ್ಷಿಕ 36,000 ರೂ. ಪಿಂಚಣಿ ಪಡೆಯುತ್ತೀರಿ.

ಇನ್ನು ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ಈಗಾಗ್ಲೇ ಅರ್ಹ ರೈತರಿಗೆ 2000 ರೂ.ಗಳನ್ನ 3 ಕಂತುಗಳಲ್ಲಿ ಸರ್ಕಾರವು ಪ್ರತಿ ವರ್ಷ ರೂ 6000 ಆರ್ಥಿಕ ನೆರವು ನೀಡುತ್ತದೆ. ಈ ಮೊತ್ತವನ್ನು ನೇರವಾಗಿ ರೈತರ ಖಾತೆಗೆ ಬಿಡುಗಡೆ ಮಾಡಲಾಗುತ್ತದೆ. ಆದ್ರೆ ಖಾತೆದಾರರು ಪಿಂಚಣಿ ಯೋಜನೆ ಪಿಎಂ ಕಿಸಾನ್ ಮಾಂದನ್ ಯೋಜನೆಯಲ್ಲಿ ಭಾಗವಹಿಸಿದರೆ, ಅವರ ನೋಂದಣಿಯನ್ನು ಸುಲಭವಾಗಿ ಮಾಡಲಾಗುತ್ತದೆ. ಅಲ್ಲದೆ, ರೈತರು ಈ ಆಯ್ಕೆಯನ್ನು ಆರಿಸಿದರೆ, ಪಿಂಚಣಿ ಯೋಜನೆಯಲ್ಲಿ ಪ್ರತಿ ತಿಂಗಳು ಕಡಿತಗೊಳಿಸುವ ಕೊಡುಗೆಯನ್ನು ಈ 3 ಕಂತುಗಳಲ್ಲಿ ಪಡೆದ ಮೊತ್ತದಿಂದಲೇ ಕಡಿತಗೊಳಿಸಲಾಗುತ್ತದೆ. ಅಂದರೆ, ಇದಕ್ಕಾಗಿ ಪಿಎಂ ಕಿಸಾನ್ ಖಾತೆದಾರರು ಜೇಬಿನಿಂದ ಹಣ ಹೂಡಿಕೆ ಮಾಡಬೇಕಾಗಿಲ್ಲ, ನೀವು ಯೋಜನೆಗೆ ಈ ಮೊದಲು ಕಟ್ಟಿದ ಹಣದ ಜೊತೆ ಸರ್ಕಾರ ಸ್ವಲ್ಪ ಹಣ ಸೇರಿ ಮಾಸಿಕ ನಿಮಗೆ 3ಸಾವಿರ ಹಣವನ್ನ ಪಿಂಚಣಿ ರೂಪದಲ್ಲಿ ನೀಡುತ್ತೆ.

ಪಿಎಂ ಕಿಸಾನ್ ಮಾಂದನ್ ಯೋಜನೆಯಲ್ಲಿ 60 ವರ್ಷ ವಯಸ್ಸಿನ ನಂತರ ರೈತರಿಗೆ ಪಿಂಚಣಿ ಸೌಲಭ್ಯವಿದೆ. ಅಂದರೆ, ರೈತರ ವೃದ್ದಾಪ್ಯ ಕಾಪಾಡಲು ಸರ್ಕಾರ ಈ ಯೋಜನೆ ಆರಂಭಿಸಿದೆ. 18 ವರ್ಷದಿಂದ 40 ವರ್ಷದವರೆಗಿನ ಯಾವುದೇ ರೈತರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. 60 ವರ್ಷ ತುಂಬಿದ ನಂತರ ರೈತರು ಮಾಸಿಕ 3000 ರೂ.ವರೆಗೆ ಪಿಂಚಣಿ ಪಡೆಯುತ್ತಾರೆ. ಕುಟುಂಬ ಪಿಂಚಣಿ ಒದಗಿಸುವುದು
ಈ ಯೋಜನೆಯಡಿಯಲ್ಲಿ, ನೋಂದಾಯಿತ ರೈತರು 60 ವರ್ಷ ವಯಸ್ಸಿನ ನಂತರ ವಯಸ್ಸಿನ ಪ್ರಕಾರ ಮಾಸಿಕ ಹೂಡಿಕೆಯ ಮೇಲೆ ಕನಿಷ್ಠ 3000 ರೂ ಅಥವಾ ವರ್ಷಕ್ಕೆ ರೂ 36,000 ಪಿಂಚಣಿ ಪಡೆಯುತ್ತಾರೆ. ಇದಕ್ಕಾಗಿ ರೈತರು ಮಾಸಿಕ ₹55 ರಿಂದ 200 ರೂ.ವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಪಿಎಂ ಕಿಸಾನ್ ಮಾನ್‌ಧನ್‌ ನಲ್ಲಿ ಕುಟುಂಬ ಪಿಂಚಣಿ ಸೌಲಭ್ಯವೂ ಇದೆ. ಖಾತೆದಾರನ ಮರಣದ ನಂತರ, ಅವನ ಸಂಗಾತಿಯು ಶೇ.50ರಷ್ಟು ಪಿಂಚಣಿ ಪಡೆಯುತ್ತಾರೆ. ಕುಟುಂಬ ಪಿಂಚಣಿಯಲ್ಲಿ ಸಂಗಾತಿಯನ್ನು ಮಾತ್ರ ಸೇರಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಲು ಏನೆಲ್ಲಾ ದಾಖಲೆಗಳು ಬೇಕು?

ಇನ್ನು ರೈತರಿಗೆ ಖಚಿತ ಪಿಂಚಣಿ ಸಿಗಲಿದೆ ಪ್ರಧಾನಮಂತ್ರಿ ಕಿಸಾನ್ ಮಾಂದನ್ ಯೋಜನೆಯಡಿ ರೈತರಿಗೆ 60 ವರ್ಷಗಳ ನಂತರ ಪಿಂಚಣಿ ನೀಡಲಾಗುವುದು. ವಿಶೇಷವೆಂದರೆ ನೀವು ಪಿಎಂ ಕಿಸಾನ್‌ನಲ್ಲಿ ಖಾತೆದಾರರಾಗಿದ್ದರೆ, ನಿಮಗೆ ಯಾವುದೇ ದಾಖಲೆಗಳ ಅಗತ್ಯವಿರುವುದಿಲ್ಲ. ಪಿಎಂ ಕಿಸಾನ್ ಮನ್ಧನ್ ಯೋಜನೆಯಲ್ಲಿ ನಿಮ್ಮ ನೇರ ನೋಂದಣಿಯನ್ನು ಸಹ ಮಾಡಲಾಗುತ್ತದೆ. ಈ ಯೋಜನೆಯ ಅನೇಕ ಉತ್ತಮ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳಿವೆ. ಇನ್ನು ಮಾಂದನ್ ಯೋಜನೆಗೆ ಅಗತ್ಯವಿರುವ ದಾಖಲೆಗಳು ಏನಪ್ಪಾ ಅಂದ್ರೆ ಆಧಾರ್ ಕಾರ್ಡ್,
ಗುರುತಿನ ಚೀಟಿ, ವಯಸ್ಸಿನ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಕ್ಷೇತ್ರದ ಖಸ್ರಾ ಖತೌನಿ, ಬ್ಯಾಂಕ್ ಖಾತೆ ಪಾಸ್‌ಬುಕ್, ಮೊಬೈಲ್ ಸಂಖ್ಯೆ
ಮತ್ತು ಪಾಸ್‌ಪೋರ್ಟ್ ಗಾತ್ರದ ಫೋಟೋ ಇದೆಲ್ಲವನ್ನ ಇಟ್ಟುಕೊಂಡು ಆನ್ಲೈನ್ ಲೀ ಅರ್ಜಿ ಸಲ್ಲಿಸಬಹುದು ಅಥವಾ ಸಂಬಂಧ ಪಟ್ಟ ಇಲಾಖೆಯಲ್ಲಿ ವಿಚಾರಿಸಿ ಆಫ್ ಲೈನ್ ಲ್ಲೂ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ಹೊಸ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯಲ್ಲಿ ₹20,000 ಸಾವಿರ ರೂಪಾಯಿ ಇಳಿಕೆ.

ಇದನ್ನೂ ಓದಿ: ಸೇನೆ, ಪೊಲೀಸ್ ಸೇರಿದಂತೆ ಸಮವಸ್ತ್ರ ಸೇವೆಗಳ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ