ಕೊಳಗೇರಿ ಅಭಿವೃದ್ಧಿ ಮಂಡಳಿಯು ಬಡವರಿಗೆ ನಿರ್ಮಿಸಿರುವ 36,000 ಉಚಿತ ಮನೆಗಳು ಮುಂದಿನ ತಿಂಗಳು ಸಿಗಲಿದೆ.

free houses

ಬಡವರ ಕಲ್ಯಾಣಕ್ಕೆ ಇರುವ ಯೋಜನೆಗಳಲ್ಲಿ ವಸತಿ ಯೋಜನೆ ಸಹಾ ಒಂದು. ನಿರಾಶ್ರಿತರಾದ ಬಡವರಿಗೆ ಉಚಿತವಾಗಿ ಮನೆ ನೀಡಲು ಸರ್ಕಾರ ಈ ಹಿಂದೆಯೇ ವಿವಿಧ ರಾಜ್ಯಗಳಲ್ಲೂ ಮನೆಕಟ್ಟಲು ನಿವೇಶವನ್ನು ಗುರುತಿಸಲಾಗಿತ್ತು. ಅದರಂತೆ ಈಗ ಕೊಳಗೇರಿ ಅಭಿವೃದ್ಧಿ ಮಂಡಳಿಯು ನಿರ್ಮಿಸಿದ 36,000 ಮನೆಗಳನ್ನು ಮುಂದಿನ ತಿಂಗಳಿಗೆ ಎಲ್ಲಾ ಫಲಾನುಭವಿಗೆ ಸಿಎಂ ಸಿದ್ಧರಾಮಯ್ಯ ಅವರು ಸ್ವಹಸ್ತದಿಂದ ಮನೆಗಳನ್ನು ನೀಡಲಿದ್ದಾರೆ ಎಂದು ಶಾಸಕ ಜಮೀರ್ ಅಹಮದ್ ಅವರು ತಿಳಿಸಿದರು.

WhatsApp Group Join Now
Telegram Group Join Now

1,80,00 ಮನೆಗಳಲ್ಲಿ ಈಗ 36,000 ಮನೆಗಳು ಪೂರ್ಣಗೊಂಡಿವೆ. ಫಲಾನುಭವಿಗೆ ಮನೆಗಳನ್ನು ನೀಡುವ ಮುಂಚೆ ಬೆಂಗಳೂರಿನಲ್ಲಿ ನಿರ್ಮಿಸಲಾಗುತ್ತಿರುವ ಮನೆಗಳನ್ನು ವಸತಿ ಸಚಿವ ಜಮೀರ್ ಅಹಮದ್ ಖಾನ್ ಬುಧವಾರ ಪರಿಶೀಲನೆ ನಡೆಸಿದರು. ಬೆಂಗಳೂರಿನ ಕೆ.ಆರ್ ಪುರದ ನಾಗೇನಹಳ್ಳಿಯಲ್ಲಿ ಕಾಮಗಾರಿ ನಡೆಯುತ್ತಿರುವ 800 ಮನೆಗಳನ್ನು ಮತ್ತು ಸರ್ವಜ್ಞ ನಗರ ಕ್ಷೇತ್ರದ ಚಟ್ಟಪ್ಪ ಗಾರ್ಡನ್‌ನಲ್ಲಿ ನಿರ್ಮಾಣ ಆಗುತ್ತುರ್ವ 209 ಮನೆಗಳನ್ನು ಪರಿಶೀಲನೆ ಮಾಡಿ ಸಚಿವರು ಫೆಬ್ರವರಿ 20 ರೊಳಗೆ ಎಲ್ಲ ಕಾಮಗಾರಿಯನ್ನು ಮುಗಿಸಿ ಕಾಂಪೌಂಡ್ ಗೋಡೆ ನಿರ್ಮಿಸಿ ಎಂದು ಸೂಚನೆ ನೀಡಿದರು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ರೈತರಿಗೆ ಶುಭಸುದ್ದಿ. ಸ್ಪ್ರಿಂಕ್ಲರ್ ಸೆಟ್ ಸೌಲಭ್ಯ ಎರಡು ಹೆಕ್ಟೇರ್ ಕೃಷಿ ಭೂಮಿಗೆ ವಿಸ್ತರಿಸಿದೆ ಸರ್ಕಾರ 

ಕೇವಲ ಒಂದು ಲಕ್ಷ ಕಟ್ಟಿದರೆ ಮನೆ ಸಿಗಲಿದೆ:-  

ವಸತಿ ಯೋಜನೆಯಲ್ಲಿ ಸ್ವಂತ ಮನೆ ಇರಬೇಕು ಎಂಬ ಕನಸು ಕಂಡ ಬಡ ಕುಟುಂಬಗಳಿಗೆ ಕೇವಲ ಒಂದು ಲಕ್ಷ ಕೊಟ್ಟರೆ ಉಳಿದ ಮೊತ್ತ ಸರ್ಕಾರವೇ ನೀಡಿ ಮೂಲ ಸೌಕರ್ಯಗಳು ಒಳಗೊಂಡ ಸುಜ್ಜತಿತ ಮನೆ ನೀಡುತ್ತದೆ.. ಈ ಹಿಂದೆ ಎರಡು ಲಕ್ಷ ಹಣವನ್ನು ನೀಡಿದರೆ ಮನೆ ಸಿಗುತ್ತಿತ್ತು. ಯೋಜನೆಯಲ್ಲಿ ಬದಲಾವಣೆ ತಂದು ಒಂದು ಲಕ್ಷ ನೀಡಿದರೆ ಮೂಲ ಸೌಕರ್ಯ ಇರುವ ಮನೆ ಸಿಗುತ್ತದೆ. ಇದು ಕೆಲವರಿಗೆ ಹಿಂದುಳಿದ ವರ್ಗದ ಕುಟುಂಬಕ್ಕೇ ಸಿಗುವ ಯೋಜನೆ ಆಗಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ

ಯಾರಿಗೆ ಸಿಗಲಿದೆ ವಸತಿ ಯೋಜನೆ?: ಸ್ವಂತ ಮನೆಯ ಇಲ್ಲದೆಯೇ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ವರ್ಗದ ಜನರಿಗೆ ವಸತಿ ಯೋಜನೆ ಸಿಗಲಿದೆ. ಸ್ವಂತ ಮನೆ ಇಲ್ಲ ಹಾಗೂ ಕುಟುಂಬದ ಆದಾಯ ಪ್ರಮಾಣ ಪತ್ರ ಹಾಗೂ ಜಾತಿ ಪ್ರಮಾಣ ಪತ್ರಗಳನ್ನು ಪರಿಶೀಲನೆ ಮಾಡಿ ಜನರಿಗೆ ಉಚಿತ ಮನೆ ಸಿಗುತ್ತದೆ. 

ಅರ್ಜಿ ಸಲ್ಲಿಸುವುದು ಹೇಗೆ?: ರಾಜೀವ್‌ಗಾಂಧಿ ವಸತಿ ನಿಗಮ ಮಂಡಳಿ ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅಥವಾ ನಿಮ್ಮ ಹತ್ತಿರದ ಗ್ರಾಮ್ ಒನ್ ಕೇಂದ್ರ ಅಥವಾ ಬೆಂಗಳೂರು ಒನ್, ಬಾಪೂಜಿ ಕೇಂದ್ರಕ್ಕೆ ಭೇಟಿ ನೀವು ಅರ್ಜಿ ಸಲ್ಲಿಸಬಹುದು. 

ಅರ್ಜಿ ಸಲ್ಲಿಸಬೇಕಾದರೆ ಸಲ್ಲಿಸಬೇಕಾದ ದಾಖಲೆಗಳು:-

  • ಅರ್ಜಿದಾರರ ಆಧಾರ್ ಕಾರ್ಡ್.
  • ವಾಸವಾಗಿರುವ ಸ್ಥಳದ ವಿಳಾಸ.
  • ವಯಸ್ಸಿನ ಮಾಹಿತಿ ಹೊಂದಿರುವ ಐಡಿ ಕಾರ್ಡ್
  • ವಾರ್ಷಿಕ ಆದಾಯ ಪ್ರಮಾಣಪತ್ರ.
  • ಪಾಸ್ಪೋರ್ಟ್ ಅಳತೆಯ ಭಾವಚಿತ್ರ.
  • ಮೊಬೈಲ್ ಸಂಖ್ಯೆ.

ಉಚಿತ ವಸತಿ ಯೋಜನೆಯ ಫಲಾನುಭವಿ ಆಗಲೂ ಇರುವ ನಿಯಮಗಳು:-

  1. ಕರ್ನಾಟಕ ರಾಜ್ಯದ ಖಾಯಂ ನಿವಾಸಿ ಆಗಿರಬೇಕು.
  2. ಕುಟುಂಬದ ವಾರ್ಷಿಕ ಆದಾಯವು 32,000ಕ್ಕಿಂತಲೂ ಕಡಿಮೆ ಇರಬೇಕು.
  3. ಕುಟುಂಬದ ಸದಸ್ಯರ ಹೆಸರಿನಲ್ಲಿ ಯಾವುದೇ ಕೃಷಿ ಭೂಮಿ ಅಥವಾ ಸೈಟ್ ಇರಬಾರದು
  4. ಮನೆಯ ಸದಸ್ಯರು ಸರ್ಕಾರಿ ನೌಕರಿ ಹೊಂದಿರಬಾರದು.
  5. ಬಾಡಿಗೆ ಮನೆಯ ಬಗ್ಗೆ ಹಾಗೂ ಬಾಡಿಗೆ ಕಟ್ಟುವ ಬಗ್ಗೆ ನಿಖರವಾದ ಮಾಹಿತಿ ಸಲ್ಲಿಸಬೇಕು.
  6. ಜಾತಿ ಪ್ರಮಾಣ ಪತ್ರ ಹೊಂದಿರಬೇಕು.

ಇದನ್ನೂ ಓದಿ: ಕೇಂದ್ರ ಬಜೆಟ್ ಬಂಗಾರ ಮತ್ತು ಬೆಳ್ಳಿಯ ಬೆಲೆಯ ಮೇಲೆ ನೇರ ಪರಿಣಾಮ ಬೀರಲಿದೆ. ಇಂದಿನ ಬೆಳ್ಳಿ ಮತ್ತು ಬಂಗಾರ ದರದ ಮಾಹಿತಿ