ಮಾರ್ಚ್ 25 ರಿಂದ ಬಾಕಿ ಉಳಿದಿರುವ 5,8,9, ನೇ ತರಗತಿಗಳ ಮೌಲ್ಯಾಂಕನ ಪರೀಕ್ಷೆಗಳು ನಡೆಯುತ್ತಿದೆ. ಈ ಎಲ್ಲಾ ಪರೀಕ್ಷೆಗಳ ಮೌಲ್ಯ ಮಾಪನವನ್ನು ಏಪ್ರಿಲ್ 2 ರ ಒಳಗೆ ಪೂರ್ಣಗೊಳಿಸಿ ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಸಮುದಾಯದತ್ತ ಶಾಲೆಯ ದಿನ ಫಲಿತಾಂಶ ಪ್ರಕಟಣೆ :- ಒಂದರಿಂದ ಒಂಬತ್ತನೇ ತರಗತಿಯ ಮಕ್ಕಳಿಗೆ ಸಮುದಾಯದತ್ತ ಶಾಲೆಯ ದಿನ ಫಲಿತಾಂಶ ಪ್ರಕಟಣೆ ಆಗುತ್ತದೆ. ಇದೇ ರೀತಿ 5,8,9, ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಣೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಎಲ್ಲಾ ಶಾಲೆಗಳಲ್ಲಿ ಏಪ್ರಿಲ್ ಹತ್ತರಂದು ಸಮುದಾಯದತ್ತ ಶಾಲೆ ನಡೆಯಲಿದೆ. ಅಂದು ಪಾಲಕರಿಗೆ ಮಕ್ಕಳ ಪ್ರಗತಿಯ ಬಗ್ಗೆ ಹಾಗೂ ಉತ್ತರ ಪತ್ರಿಕೆ ನೀಡಲಾಗುವುದು.
ವೆಬ್ಸೈಟ್ ನಲ್ಲಿ ಕೀ ಉತ್ತರ ನೀಡಲಾಗಿದೆ: ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ 5,8,9, ನೇ ತರಗತಿಗಳ ಮೌಲ್ಯಾಂಕನ ಪರೀಕ್ಷೆಗಳ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳು ಮತ್ತು ಪಾಲಕರು ಕೀ ಉತ್ತರಗಳನ್ನು ಪರಿಶೀಲಿಸಿ ವಿಷಯಕ್ಕೆ ಸಂಭಂಧಿಸಿದ ಉತ್ತರಗಳು ಅಥವಾ ಪ್ರಶ್ನೆಗಳು ಕಂಡುಬಂದರೆ ದೂರು ನೀಡಬಹುದು ಎಂದು ಶಿಕ್ಷಣ ಇಲಾಖೆಯು ತಿಳಿಸಿದೆ.
ಮೌಲ್ಯಾಂಕನ ಪರೀಕ್ಷೆಯ ತಡೆಯಾಜ್ಞೆ ನೀಡಿರುವ ಕಾರಣ ಏನು?
ಮೌಲ್ಯಾಂಕನ ಪರೀಕ್ಷೆಗಳ ವಿರುದ್ಧ ಕೆಲವು ಖಾಸಗಿ ಶಾಲೆಗಳು ದೂರು ನೀಡಿದ್ದ ಹಿನ್ನೆಲೆಯಲ್ಲಿ ಪರ ಮತ್ತು ವಿರೋಧಗಳ ವಾದವನ್ನು ಕೇಳಿದ ಕರ್ನಾಟಕ ಹೈಕೋರ್ಟ್ ಪರೀಕ್ಷೆ ನಡೆಸುವಂತೆ ಆದೇಶ ಹೊರಡಿಸಿತು. ಆದರೆ ಈ ಆದೇಶವನ್ನು ಪ್ರಶ್ನಿಸಿ ಖಾಸಗಿ ಶಾಲೆಗಳು ಮತ್ತೆ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿತು. ಈ ಮನವೀಯ ಮೇರೆಗೆ ಮೌಲ್ಯಾಂಕನ ಪರೀಕ್ಷೆಗಳಿಗೆ ತಡೆಯಾಜ್ಞೆ ನೀಡಿತ್ತು. ಸರ್ಕಾರ ಮತ್ತು ಖಾಸಗಿ ಅವರ ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್ ಪರೀಕ್ಷೆ ನಡೆಸಲು ಅನುಮತಿ ನೀಡಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ತಡೆಯಾಜ್ಞೆ ನೀಡುವ ಮೊದಲು ಎರಡು ಪರೀಕ್ಷೆ ನಡೆದಿತ್ತು: ಖಾಸಗಿ ಶಾಲೆಗಳು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವ ಮೊದಲು ಮಾರ್ಚ್ 12 ಮತ್ತು ಮಾರ್ಚ್ 13 ರಂದು ಪ್ರಥಮ ಮತ್ತು ದ್ವಿತೀಯ ಭಾಷೆಯ ಪರೀಕ್ಷೆ ನಡೆದಿತ್ತು. ನಂತರ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಪರೀಕ್ಷೆ ನಡೆಯಲಿಲ್ಲ. ನಂತರ ಸುಪ್ರೀಂ ಕೋರ್ಟ್ ಆದೇಶದ ಮೇಲೆ ಶಿಕ್ಷಣ ಇಲಾಖೆಯು ನೂತನ ವೇಳಾಪಟ್ಟಿ ಪ್ರಕಟಿಸಿತು.
ನೂತನ ವೇಳಾಪಟ್ಟಿಯ ಪ್ರಕಾರ ಪರೀಕ್ಷಾ ದಿನಾಂಕ :-
5 ನೇ ತರಗತಿಯ ಮಕ್ಕಳಿಗೆ ಮಾರ್ಚ್ 25 ಸೋಮವಾರದಂದು ಪರಿಸರ ಅಧ್ಯಯನ ವಿಷಯ ಹಾಗೂ ಮಾರ್ಚ್ 26 ಮಂಗಳವಾರದಂದು ಗಣಿತ ಪರೀಕ್ಷೆ ನಡೆದಿದೆ. 8 ನೇ ತರಗತಿಯ ಮಕ್ಕಳಿಗೆ ಮಾರ್ಚ್ 25 ಸೋಮವಾರದಂದು ತೃತೀಯ ಭಾಷೆ, ಮಾರ್ಚ್ 26-ಮಂಗಳವಾರ ಗಣಿತ ಹಾಗೂ
ಮಾರ್ಚ್ 27 ಬುಧವಾರದಂದು ವಿಜ್ಞಾನ ಪರೀಕ್ಷೆ ನಡೆದಿದೆ ಹಾಗೂ ಮಾರ್ಚ್ 28 ಗುರುವಾರದಂದು ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ. ಹಾಗೂ 9 ನೇ ತರಗತಿಯ ಮಕ್ಕಳಿಗೆ ಮಾರ್ಚ್ 25 ಸೋಮವಾರದಂದು ತೃತೀಯ ಭಾಷೆ, ಮಾರ್ಚ್ 26 ಮಂಗಳವಾರ ಗಣಿತ ಹಾಗೂ
ಮಾರ್ಚ್ 27 ಬುಧವಾರದಂದು ವಿಜ್ಞಾನ ಪರೀಕ್ಷೆ ನಡೆದಿದೆ ಹಾಗೂ ಮಾರ್ಚ್ 28 ಗುರುವಾರದಂದು ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ.
ಇದನ್ನೂ ಓದಿ: ಕೇವಲ ಒಂದೇ ಒಂದು ಷರತ್ತಿನೊಂದಿಗೆ ಮಹಿಳೆಯರಿಗೆ 5 ಲಕ್ಷ ರೂ. ಸಾಲ ಸೌಲಭ್ಯ, ಇದಕ್ಕೆ ನೀವೇನು ಗ್ಯಾರಂಟಿ ಕೊಡಬೇಕಾಗಿಲ್ಲ!
ಇದನ್ನೂ ಓದಿ: ಹೊಸ ರೇಷನ್ ಕಾರ್ಡ್ ಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ ರಾಜ್ಯ ಸರ್ಕಾರ; ಏನೆಲ್ಲಾ ದಾಖಲೆಗಳು ಬೇಕು?