ವಿದ್ಯಾರ್ಥಿಗಳಿಗೆ ಇಲ್ಲಿದೆ 5 ಬೆಸ್ಟ್ ಲ್ಯಾಪ್ ಟಾಪ್ ಗಳು; ಉತ್ತಮ ಬ್ಯಾಟರಿ ಬ್ಯಾಕಪ್ ನೊಂದಿಗೆ..

Best Laptops For Students: ಈ ದಿನ ಜೀವನಶೈಲಿಯಲ್ಲಿ ಪ್ರತಿಯೊಬ್ಬರಿಗೂ ಕೂಡ ಲ್ಯಾಪ್ಟಾಪ್ ಅನ್ನೋದು ತುಂಬಾ ಮುಖ್ಯವಾಗಿದೆ, ಹೆಚ್ಚುವರಿ ಕಲಿಕೆಯನ್ನು ಮುಂದುವರಿಸಲು ವಿದ್ಯಾರ್ಥಿಗಳಿಗಂತು ಲ್ಯಾಪ್ಟಾಪ್ ಬಹಳ ಮುಖ್ಯ ಅಂತಾನೆ ಹೇಳಬಹುದು. ಮಾರುಕಟ್ಟೆಯಲ್ಲಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಹಾಯವಾಗುವ ಐದು ತರಹದ ಲ್ಯಾಪ್ಟಾಪ್ಗಳನ್ನು ತರಲಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಒಂದೊಂದು ಬಗೆಗಿನ ಲ್ಯಾಪ್ಟಾಪ್ ಬಗ್ಗೆ ತಿಳಿಯೋಣ.

WhatsApp Group Join Now
Telegram Group Join Now

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

1. RedmiBook Pro: ಈ ಲ್ಯಾಪ್ಟಾಪ್ ವಿದ್ಯಾರ್ಥಿಗಳಿಗೆ ಅತ್ಯಂತ ಸುಲಭವಾಗಿ ಉಪಯೋಗಿಸಲು ಉತ್ತಮವಾಗಿದೆ ಇದು 15.6 ಇಂಚಿನ ಪೂರ್ಣ ಎಚ್ ಡಿ ಸ್ಕ್ರೀನ್ನೊಂದಿಗೆ ನಿರ್ಮಿತವಾಗಿದೆ. ಮತ್ತು 8 ಜಿಬಿ RAM ಹಾಗೂ 512 ಜಿಬಿ ಎಸ್ ಎಸ್ ಡಿ(SSD) ಅನ್ನು ಹೊಂದಿದೆ. ಇದು 46WH ಬ್ಯಾಟರಿ ಪ್ಯಾಕ್ ಮತ್ತು 65W ಚಾರ್ಜಿಂಗ್ ಕೆಪ್ಯಾಸಿಟಿಯನ್ನು ಹೊಂದಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 10 ತಾಸುವರೆಗೂ ನಡೆಯುತ್ತದೆ. windows 11 ನೊಂದಿನಿಗೆ ತಯಾರಾಗಿರುವ ಈ ಲ್ಯಾಪ್ಟಾಪ್ ವಿದ್ಯಾರ್ಥಿಗಳಿಗಂತೂ ಬಹಳ ಅನುಕೂಲವಾಗಿದೆ ಅಂತಾನೆ ಹೇಳಬಹುದು.

Image Credit: Original Source

2. Acer Extensa 15: ಈ ಲ್ಯಾಪ್‌ಟಾಪ್ ನಿಮ್ಮ ಕೆಲಸ ಮತ್ತು ಅಧ್ಯಯನಗಳಿಗೆ ಉತ್ತಮವಾಗಿದೆ. 15.6 ಇಂಚು ಎಚ್‌ಡಿ screen ಹೊಂದಿದ್ದು, 45W ಬ್ಯಾಟರಿ ಪ್ಯಾಕ್ ಮತ್ತು 8 ಗಂಟೆಗಳ ಬ್ಯಾಟರಿ ಬ್ಯಾಕಅಪ್ ಅನ್ನು ಹೊಂದಿದೆ. ಕಡಿಮೆ ಬೆಲೆಯಲ್ಲಿ ಹೆಚ್ಚು ವೈಶಿಷ್ಟ್ಯದೊಂದಿಗೆ ಲಭ್ಯವಿರುವ ಈ ಲ್ಯಾಪ್ಟಾಪ್, ವಿದ್ಯಾರ್ಥಿಗಳಿಗೆ ಒಳ್ಳೆಯ ಲ್ಯಾಪ್‌ಟಾಪ್ ಆಗಬಹುದು.

Image Credit: Original Source

3.Lenovo Ideapad 3

ಈ Lenovo ಲ್ಯಾಪ್‌ಟಾಪ್‌ನೊಂದಿಗೆ AMD Ryzen 5500U ಪ್ರೊಸೆಸರ್ ಹೊಂದಿದೆ ಮತ್ತು 15.6 ಇಂಚಿನ ಪೂರ್ಣ HD screen ಹೊಂದಿದೆ . ಈ ಲ್ಯಾಪ್‌ಟಾಪ್ ವಿದ್ಯಾರ್ಥಿಗಳಿಗೆ ಕೋಡಿಂಗ್ ಮಾಡಲು ಸುಲಭವಾಗಿದೆ ಮತ್ತು 7 ಗಂಟೆಗಳ ಬ್ಯಾಟರಿ ಬ್ಯಾಕಪ್ ಸೌಲಭ್ಯದೊಂದಿಗೆ ಬಹಳ ಚೆನ್ನಾಗಿದೆ. ಇದು ನಿಮ್ಮ ಆವಶ್ಯಕತೆಗೆ ಅನುಗುಣವಾದ ಲ್ಯಾಪ್ಟಾಪ್ ಆಗಿದೆ.

Image Credit: Original Source

4.Honor MagicBook X14: honour ಮ್ಯಾಜಿಕ್ ಬುಕ್ X14 ಲ್ಯಾಪ್‌ಟಾಪ್ ವಿದ್ಯಾರ್ಥಿಗಳಿಗೆ ಒಳ್ಳೆಯ ಆಯ್ಕೆಯಾಗಿದೆ ಅಂತಾನೆ ಹೇಳಬಹುದು. ಇದು 14 ಇಂಚು ಪೂರ್ಣ HD ಡಿಸ್ಪ್ಲೇ ಮತ್ತು 56Wh ಬ್ಯಾಟರಿ ಪ್ಯಾಕ್ ಹೊಂದಿದೆ, ಮತ್ತು 65Wh ಚಾರ್ಜರ್ ಸಹ ಬರುತ್ತದೆ. ಚಾರ್ಜ್ ಮಾಡಿದ ನಂತರ 9 ಗಂಟೆಗಳವರೆಗೆ ಬ್ಯಾಕಪ್ ನೀಡುತ್ತದೆ. ಇದರಲ್ಲಿ ಬ್ಯಾಕ್‌ಲಿಟ್ ಕೀಬೋರ್ಡ್ ಮತ್ತು Intel Core i5 11th ಜನೆರೇಷನ್ ಪ್ರೊಸೆಸರ್ ಹೊಂದಿದೆ. ಮತ್ತು ಅನ್ಲಾಕ್ ಮಾಡಲು ಫಿಂಗರ್ ಪ್ರಿಂಟ್ ಸೆನ್ಸಾರ್ ಇದೆ.

Image Credit: Original Source

5.Infinix INBook X2 Plus: ಇನ್ಫಿನಿಕ್ಸ್ ಇನ್ಬುಕ್ ಎಕ್ಸ್ 2 ಪ್ಲಸ್ ಲ್ಯಾಪ್ಟಾಪ್ ನಿಮಗೆ ಒಳ್ಳೆಯ ಲ್ಯಾಪ್ಟಾಪ್ ಆಗಿದೆ. ಇದು 15.6 ಇಂಚಿನ ಎಫ್‌ಹೆಚ್‌ಡಿ(FHD) ಡಿಸ್ಪ್ಲೇ, ಬ್ರೈಟ್‌ನಿಸ್ 300 ನಿಟ್‌ಸ್(nits) ಸ್ಕ್ರೀನ್ ಹೊಂದಿದೆ. ಅದು 50 ಡಬ್ಲ್ಯೂಹೆಚ್ (WH)ಬ್ಯಾಟರಿ ಮತ್ತು 65 ಡಬ್ಲ್ಯೂ(W) ಚಾರ್ಜರ್ ಅನ್ನು ಹೊಂದಿದೆ. ಇದು 10 ಗಂಟೆಗಳ ಬ್ಯಾಕಪ್ ಕೆಪ್ಯಾಸಿಟಿಯನ್ನು ಹೊಂದಿದೆ. ಇನ್ಫಿನಿಕ್ಸ್ ಇನ್ಬುಕ್ ಎಕ್ಸ್ 2 ಪ್ಲಸ್ ಲ್ಯಾಪ್ಟಾಪ್ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಅದರಲ್ಲಿ ಇಂಟೆಲ್ ನ I5, 11th Gen ಪ್ರೊಸೆಸರ್ ಹೊಂದಿದೆ ಮತ್ತು ಎಫ್‌ಎಚ್‌ಡಿ(FHD) ವೆಬ್‌ಕ್ಯಾಮ್ ಸೇರಿದ್ದು ಇದರ ವಿಶೇಷತೆಯಾಗಿದೆ.

Image Credit: Original Source

 

ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಬಾರದೇ ಇರುವವರಿಗೆ ಗುಡ್ ನ್ಯೂಸ್; ಈ ಖಾತೆಗೆ 2000 ಹಣ ಜಮಾ!

ಇದನ್ನೂ ಓದಿ: ನನ್ನ ಗಂಡನನ್ನ ವಿಲನ್ ಮಾಡ್ತಿದ್ದಾರೆ! ವಿನಯ್ ಒಳ್ಳೆತನ ಹೈಲೆಟ್ ಆಗ್ತಾಯಿಲ್ಲ; ವಾಹಿನಿಯವರ ಮೇಲೆ ನೇರವಾಗಿ ಆರೋಪ ಮಾಡಿದ್ರ ವಿನಯ್ ಪತ್ನಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram