8 ವರ್ಷಕ್ಕೆ ಪೊಲೀಸ್ ಇನ್ಸ್ಪೆಕ್ಟರ್ ಅದ ಪುಟ್ಟ ಬಾಲಕ; ಶಿವಮೊಗ್ಗದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ ಬಾಲಕ

ಏಕ್‌ ದಿನ್‌ ಕಾ ಸಿಎಂ ಚಿತ್ರವನ್ನ ಬಹುತೇಕರು ನೋಡಿರಬಹುದು. ಅದು ಬಾಲಿವುಡ್‌ ನಟ ಅನಿಲ್‌ ಕಪೂರ್‌ಗೆ ಒಲಿದು ಬಂದಿದ್ದ ಸದಾವಕಾಶ. ಸದ್ಯ ನಮ್ಮ ಕರ್ನಾಟಕದಲ್ಲಿನ ಬಾಲಕ ಸಹ ದೊಡ್ಡಪೇಟೆ ಠಾಣೆಯಲ್ಲಿ ಇನ್ಸ್‌ಪೆಕ್ಟರ್‌ ಆಗಿ ಒಂದು ದಿನ ಸಾಂಕೇತಿಕವಾಗಿ ಕಾರ್ಯ ನಿರ್ವಹಿಸಲು ಅವಕಾಶ ಪಡೆದದ್ದು ಕುತೂಹಲಕ್ಕೆ ಕಾರಣವಾಗಿತ್ತು. ಹೌದು ಶಿವಮೊಗ್ಗದಲ್ಲಿ 8 ವರ್ಷದ ಬಾಲಕನೊಬ್ಬ ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಿ ಕರ್ತವ್ಯ ನಿರ್ವಹಿಸಿದ್ದು ವಿಶೇಷವಾಗಿತ್ತು. ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅಜಾನ್‌ ಖಾನ್‌ ಎಂಬ ಯುವಕ ಶಿವಮೊಗ್ಗದ ದೊಡ್ಡಪೇಟೆ ಠಾಣೆಯಲ್ಲಿ ಒಂದು ದಿನದ ಪೊಲೀಸ್‌ ಇನ್ಸ್‌ಪೆಕ್ಟರ್‌ ಆದರು. ಈ ವೇಳೆ ಪೊಲೀಸ್ ಸಿಬ್ಬಂದಿಗಳಿಗೆ ಯೋಗಕ್ಷೇಮ ವಿಚಾರಿಸಿದ ಬಾಲಕ, ಕಳ್ಳ ಕಾಕರಿಗೆ ಆವಾಜ್ ಹಾಕಿ ಕಳ್ಳತನ ಬಿಟ್ಟು ಕೆಲಸ ಮಾಡಿ ಎಂದು ಅವಾಜ್ ಹಾಕಿದ್ದು ಮಾತ್ರ ಸಖತ್ ವಿಶೇಷವಾಗಿತ್ತು.

WhatsApp Group Join Now
Telegram Group Join Now

ಚಿತ್ರಗಳಲ್ಲಿ ತೋರಿಸಿದ್ದೆಲ್ಲ ನಿಜವಾಗಲ್ಲ ಅಂತಾರೇ ಆದ್ರೆ ನಮ್ಮ ಕರ್ನಾಟಕ ಪೋಲಿಸ್ ಇಲಾಖೆ ಆಗಾಗ ಇಂತಹ ಮಹಾನ್ ಕಾರ್ಯಗಳನ್ನ ಮಾಡ್ತಾ ಸಾರ್ವಜನಿಕರಿಂದ ಪ್ರಶಂಶೆ ಪಡೆದುಕೊಂಡಿದೆ. ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಆಸೆ ಕನಸು ಇದ್ದೆ ಇರುತ್ತೆ, ಆಗಂತ ಅದೆಲ್ಲವೂ ಈಡೇರುವವರೆಗೂ ನಾವಿಲ್ಲಿಯೇ ಇರೋದಕ್ಕೆ ಆಗೋದಿಲ್ಲ ವಿಧಿ ನಮ್ಮನ್ನ ಕರೆದಾಗ ನಾವು ಯಾವುದೇ ಸ್ಥಿತಿಯಲ್ಲಿದ್ರೂ ನಮ್ಮ ಆಸೆ ಕನಸುಗಳು ಈಡೇರಲಿ ಈಡೇರದೆ ಇರಲಿ ಯಮ ಕೊಟ್ಟ ಕರೆಗೆ ಕಿವಿಗೊಟ್ಟು ಹೋಗೋದಷ್ಟೇ ನಮ್ಮ ಕೆಲಸವಾಗಿ ಬಿಡುತ್ತೆ. ಈ ಮಧ್ಯೆ ಒಂದು ದಿನದ ಮಟ್ಟಿಗಾದ್ರೂ ನಮ್ಮ ಆಸೆ ಕನಸು ಈಡೇರುವ ಅವಕಾಶ ಸಿಕ್ರೆ ಎಷ್ಟು ಚೆಂದ ಅಲ್ವ? ಈಗ ಅಂತದ್ದೇ ಕಾರ್ಯವನ್ನ ಪುಟ್ಟ ಬಾಲಕನ ಸಲುವಾಗಿ ಇದೀಗ ಪೊಲೀಸ್ ಇಲಾಖೆ ಮಾಡಿದೆ.

ಈ ಪುಟ್ಟ ಪೋರ ನೋಡಲು ಮಾತ್ರ ಸಾಫ್ಟ್ ಆದ್ರೆ ಪೊಲೀಸರಿಗಿಂತ ಸಖತ್ ಖಡಕ್. ಇನ್ನು ಈ ಹುಡುಗನಿಗೆ ಈಗ ಎಂಟೂವರೆ ವರ್ಷ. ಬೆಳೆದು ದೊಡ್ಡವನಾದ ಮೇಲೆ ಸರ್ಕಲ್‌ ಇನ್ಸ್‌ಪೆಕ್ಟರ್‌ ಆಗಬೇಕೆಂಬ ಕನಸು ಕಂಡಿದ್ದ, ಆದರೆ, ಹುಟ್ಟಿದ ಮೂರು ತಿಂಗಳಿಂದ ಶುರುವಾದ ಹೃದಯ ಸಂಬಂಧಿ ಕಾಯಿಲೆಯಿಂದಾಗಿ ಬಾಲಕನ ಕನಸ್ಸು ಕನಸ್ಸಾಗಿಯೇ ಉಳಿಯುವಂತಿದೆ. ಹೀಗಾಗಿ ಬಾಲಕನ ಆಸೆಯಂತೆ ಸಮವಸ್ತ್ರ ಧರಿಸಿ ಇನ್ಸ್‌ಪೆಕ್ಟರ್‌ ಕುರ್ಚಿಯ ಮೇಲೆ ಕುಳಿತು ಅಧಿಕಾರ ಚಲಾಯಿಸಿದ ಕ್ಷಣಕ್ಕೆ ದೊಡ್ಡಪೇಟೆ ಠಾಣೆ ಸಾಕ್ಷಿಯಾಯಿತು. ಈ ಅವಕಾಶ ಪೊಲೀಸ್ ಇಲಾಖೆಯವರು ಮಾಡಿಕೊಟ್ಟಿದ್ದು, ಬಾಲಕನ ಖುಷಿಗೆ ಪಾರವೇ ಇರಲಿಲ್ಲ. ಇನ್ನು ಮಗನ ಗತ್ತು ನೋಡಿ ತಾಯಿ ಕೂಡ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ಚೆನ್ನಾಗಿಯೇ ಇದ್ದ ಶ್ರೀ ಮುರಳಿಗೆ ಈಗ ಏನಾಯ್ತು? ಸ್ಪಂದನಾ ಕಾರ್ಯಕ್ಕೆ ಕುಂಟುತ್ತ ಬಂದ ಶ್ರೀ ಮುರುಳಿ

ಬಾಲಕನ ಆಸೆ ಈಡೇರಿಸಿದ ಪೊಲೀಸರು? ಕಾರಣ ಏನ್ ಗೊತ್ತಾ?

ಹೌದು ಮೂಲತಃ ಶಿವಮೊಗ್ಗದವರೇ ಆದರೂ ಬಾಳೆಹೊನ್ನೂರಿನಲ್ಲಿ ನೆಲೆಸಿರುವ ತಾಬ್ರೇಜ್‌ ಖಾನ್‌ ಮತ್ತು ನಗ್ಮಾ ಖಾನ್‌ ಅವರ ಪುತ್ರ ಅಜಾನ್‌ ಖಾನ್‌ ಅವರಿಗೆ ದೊಡ್ಡಪೇಟೆ ಠಾಣೆಯಲ್ಲಿ ಏಕ್‌ ದಿನ್‌ ಕಾ ಇನ್ಸ್‌ಪೆಕ್ಟರ್‌ ಆಗುವ ಅವಕಾಶವನ್ನು ಪೊಲೀಸ್‌ ಇಲಾಖೆ ನೀಡಿತ್ತು. ಮಗನು ಖಾಕಿ ತೊಟ್ಟು ಗತ್ತಿನಲ್ಲಿ ನಡೆಯುತ್ತಿರುವುದನ್ನು ನೋಡಿದ ತಾಯಿ ಕಣ್ಣೀರು ಇಟ್ಟಿದ್ದರು. ಕುಟುಂಬದವರ ಕಣ್ಣಾಲಿ ತೇವಗೊಂಡಿದ್ದವು, ಆದ್ರೂ ಕೂಡ ಮಗನ ಆಸೆ ಈಡೇರಿತ್ತಲ್ಲ ಅಂತ ಬಹಳ ನೆಮ್ಮದಿಯ ಭಾವದಿಂದ ನಿಟ್ಟುಸಿರು ಬಿಟ್ಟಿದ್ರು. ಹೌದು ಈ ಬಾಲಕನಿಗೆ ಬಂದಿರುವ ಖಾಯಿಲೆ 10 ಲಕ್ಷ ಜನರಿಗೆ ಒಬ್ಬರಲ್ಲಿ ಕಂಡುಬರುತ್ತಂತೆ. ಇನ್ನು ಈ ಕಾಯಿಲೆಗೆ ಚಿಕಿತ್ಸೆಯೂ ಅಪರೂಪವೇ ಆಗಿದೆ. ಇನ್ನು ಅಜಾನ್‌ ಹಸುಳೆಯಾಗಿದ್ದಾಗಿಂದಲೇ ಚಿಕಿತ್ಸೆ ನೀಡಲಾಗುತ್ತಿದ್ದು, ಆಂಜಿಯೋಗ್ರಾಂ ಮಾಡಿ ಕಾರಣವನ್ನು ಪತ್ತೆ ಹಚ್ಚಲಾಗಿದೆ. ಹೀಗಾಗಿ ಈತ ಸಂಪೂರ್ಣ ಗುಣಮುಖನಾಗಬೇಕಾದರೆ ಹೃದಯ ಮತ್ತು ಶ್ವಾಸಕೋಶದ ಕಸಿಯಾಗಬೇಕು. ಅದಕ್ಕೆ ದಾನಿಗಳು ಬೇಕು. ಜತೆಗೆ ಲಕ್ಷಾಂತರ ಹಣವೂ ಖರ್ಚಾಗುತ್ತದೆ. ಹೀಗಾಗಿ ಈ ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದ್ದು, ಮಗನ ಆಸೆಯೇನಾದ್ರು ಈಡೇರಿಸೋಣ ಅಂತ ಒಂದು ದಿನದ ಮಟ್ಟಿಗೆ ಪೊಲೀಸ್ ಇಲಾಖೆ ಇನ್ಸ್ಪೆಕ್ಟರ್ ಆಗಿರುವಂತೆ ಮಾಡಲು ಪೊಲೀಸರಿಗೆ ಮನವಿ ಸಲ್ಲಿಸಿ ಅವಕಾಶ ಪಡೆದಿದ್ರು.

ಇನ್ನು ಈ ಒಂದು ವಿಶೇಷ ಘಟನೆಗೆ ಸಾಕ್ಷಿಯಾದ ಪೊಲೀಸ್ ಠಾಣೆಯ ಶಿವಮೊಗ್ಗ ಎಸ್‌ಪಿ ಜಿಕೆ ಮಿಥುನ್‌ ಕುಮಾರ್‌ ಮಾತನಾಡಿ ಒಂದು ದಿನ ಪೊಲೀಸ್‌ ಆಗಬೇಕು ಎಂದು ಬಾಲಕನಿಗೆ ಆಸೆ ಇತ್ತು. ಈ ಕುರಿತು ಅವರ ತಂದೆ ಮನವಿ ಮಾಡಿದ್ದರು. ಈ ಹಿನ್ನೆಲೆ ಡಿವೈಎಸ್‌ಪಿ ಅವರಿಗೆ ತಿಳಿಸಿ ದೊಡ್ಡಪೇಟೆ ಠಾಣೆ ಇನ್ಸ್‌ಪೆಕ್ಟರ್‌ ಮಾಡಲಾಗಿದೆ. ಮಾನವೀಯ ನೆಲೆಯಲ್ಲಿ ಬಾಲಕನನ್ನು ಇನ್ಸ್‌ಪೆಕ್ಟರ್‌ ಮಾಡಿದ್ದೇವೆ. ಬಾಲಕ ತುಂಬ ಖುಷಿ ಪಟ್ಟಿದ್ದಾನೆ ಎಂದಿದ್ದರೆ. ಇನ್ನು ಗತ್ತಿನಲ್ಲೇ ಬಂದ ಬಾಲಕ ಎಲ್ಲರಿಗೂ ಸರಿಯಾಗಿಯೇ ಅವಾಜ್ ಹಾಕಿದ್ದು ನಾಳೆಯಿಂದಲ್ಲ, ಇವತ್ತಿನಿಂದಲೇ ಕೆಲಸ ಮಾಡು ಎಂದಿದ್ದಾನೆ.

ಹೌದು ಈ ವೇಳೆ ಬಾಲಕ ಅಜಾನ್‌ ಕಳ್ಳತನ ಯಾಕೆ ಮಾಡಿದ್ರಿ ಎಂದು ವ್ಯಕ್ತಿಯೊಬ್ಬರಿಗೆ ಕೇಳುವ ಪ್ರಸಂಗ ಎಲ್ಲರ ಗಮನ ಸೆಳೆಯಿತು. ಕಳ್ಳತನ ಯಾಕೆ ಮಾಡಿದ್ರಿ, ಕೆಲಸ ಮಾಡ್ಬೇಕು ಅಂತ ಬಾಲಕ ಹೇಳಿದಾಗ, ಆ ವ್ಯಕ್ತಿ ನಾಳೆಯಿಂದ ಕೆಲಸ ಮಾಡ್ತೀನಿ ಅಂತ ಹೇಳಿದಾಗ ಅಜಾನ್‌ ನಾಳೆಯಿಂದಲ್ಲ, ಇವತ್ತಿನಿಂದಲೇ ಕೆಲಸ ಮಾಡಬೇಕು ಅಂತ ಹೇಳಿದ್ದು ಬಹಳ ವಿಶೇಷವಾಗಿತ್ತು. ಇನ್ನು ಬಾಲಕ ಒಂದು ದಿನದ ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಿದ್ದಾಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿಕೆ ಮಿಥುನ್‌ ಕುಮಾರ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿಲ್‌ ಕುಮಾರ್‌ ಭೂಮರಡ್ಡಿ, ಪೊಲೀಸ್‌ ಅಧಿಕಾರಿಗಳಾದ ಬಾಲರಾಜ್‌, ಡಿ ಟಿ ಪ್ರಭು, ಅಂಜನ್‌ ಕುಮಾರ್‌ ಇತರರು ಠಾಣೆಯಲ್ಲಿ ಹಾಜರಿದ್ದು ಬಾಲಕನಿಗೆ ಸಾಥ್ ಕೊಟ್ಟಿದ್ದು ಬಹಳ ಅದ್ಭುತವಾಗಿತ್ತು.

ಇದನ್ನೂ ಓದಿ: ಅಮೂಲ್ಯ ಮಕ್ಕಳನ್ನು ಮೊದಲ ಬಾರಿಗೆ ನೋಡಿ ದರ್ಶನ್ ಹೇಳಿದ್ದೇನು? ವಿಶೇಷ ಫೋಟೋಗಳನ್ನು ಹಂಚಿಕೊಂಡ ಅಮೂಲ್ಯ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram