Bhagirathi Murulya: ಕೂಲಿ ಮಾಡ್ತಿದ್ದ ಮಹಿಳೆ ಇಂದು ಬಿಜೆಪಿ ಶಾಸಕಿ.. ಓಡಾಡಲು ಕಾರಿಲ್ಲ, ಇರೋದಕ್ಕೆ ಐಷಾರಾಮಿ ಮನೆಯಿಲ್ಲ

Bhagirathi Murulya: ಕೇವಲ ಕೂಲಿ ಕೆಲಸ ಮಾಡ್ತಿದ್ದ ಒಬ್ಬ ಹೆಣ್ಣು ಮಗಳು ಅದರಲ್ಲೂ ಕೆಳ ಜಾತಿಯ ಒಬ್ಬ ಮಹಿಳೆ ಇಂದು ವಿಧಾನಸೌಧಕ್ಕೆ ಶಾಸಕಿಯಾಗಿ ಎಂಟ್ರಿಕೊಟ್ಟಿದ್ದಾರೆ. ಸುಳ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಇಂದು ಮಹಿಳಾ ಶಾಸಕಿಯಾಗಿ ನಿಲ್ಲೋದ್ರಾ ಹಿಂದಿನ ಅವ್ರ ಶ್ರಮ ಅವ್ರ ತ್ಯಾಗ ಕೇವಲ ಕೆಳ ಜಾತಿಯವರು ಅನ್ನೋದಕ್ಕೆ ಅವ್ರು ಅನುಭವಿಸಿದ ಅವಮಾನದ ಯಶೋಗಾದೆ ನಿಜಕ್ಕೂ ಇಂತಹ ಕೆಲ ಹೆಣ್ಣುಮಕ್ಕಳಿಗೆ ಸ್ಫೂರ್ತಿ ಆಗೋದ್ರಲ್ಲಿ ಸಂಶಯವೇ ಇಲ್ಲ ಅನ್ನಬಹುದು. ಹೌದು ಇವರ ಪಕ್ಷ ನಿಷ್ಠೆ, ರಾಷ್ಟ್ರೀಯ ವಿಚಾರಧಾರೆಯ ಸೆಳೆತ ಅವರನ್ನು ಎತ್ತರದ ಸ್ಥಾನಕ್ಕೆ ತಂದು ನಿಲ್ಲಿಸಿದೆ ಎಂದು ಮಾತ್ರ ಹೇಳಿದರೆ ಅಷ್ಟೇನೂ ಸಮಂಜಸ ಆಗದೇನೋ. ಯಾಕಂದ್ರೆ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ದಲಿತ ಸಮುದಾಯದಲ್ಲಿ ಆದಿದ್ರಾವಿಡ ಸಮುದಾಯ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಸಮುದಾಯವಾಗಿದ್ರು, ರಾಜಕೀಯ ಸ್ಥಾನಮಾನದ ವಿಚಾರದಲ್ಲಿ ಅಷ್ಟೇ ಹಿಂದೆ ಉಳಿದಿದೆ. ಸಮುದಾಯದವರ ಒಗ್ಗಟ್ಟಿನ ಕೊರತೆ ಜೊತೆಗೆ ಮೇಲ್ವರ್ಗದ ಜತೆ ಹೋರಾಡಿ ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೆರಲು ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳು ಪ್ರಮುಖ ಕಾರಣಗಳಾಗುತ್ತವೆ. ಇದೆಲ್ಲದರಲ್ಲೂ ಮುಂದೆ ಬಂದು ರಾಜಕೀಯ ಸ್ಥಾನಮಾನಕ್ಕೆ ಹೋರಾಡೋದು ಅಷ್ಟು ಸುಲಭವಲ್ಲ.

WhatsApp Group Join Now
Telegram Group Join Now

ಹೌದು ದಕ್ಷಿಣ ಕನ್ನಡ ಜಿಲ್ಲೆ ಅದರಲ್ಲೂ ಸುಳ್ಯ ಕ್ಷೇತ್ರ ಸುಮಾರು 4 ದಶಕಗಳ ಹಿಂದೆ ಕಾಂಗ್ರೆಸ್ ಆಡಳಿತವಿದ್ದ ಕಾಲ, ಆ ಸಮಯದಲ್ಲಿಯೇ ಭಾಗೀರಥಿ ಮುರುಳ್ಯ ಅವರ ತಂದೆ, ತಾಯಿ ಬಿಜೆಪಿಯಲ್ಲಿ ಸಕ್ರೀಯರಾಗಿದ್ದರು. ಬದುಕಿನ ಬಂಡಿ ಎಳೆಯಲು ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾಗ ಇವರು ಕೆಲಸ ಮಾಡುವ ಮನೆ ಯಜಮಾನ ದಿ.ಮುತ್ತಪ್ಪ ಗೌಡ ಗೋಳ್ತಿಲ ರಾಷ್ಟ್ರೀಯ ವಿಚಾರಧಾರೆಗಳನ್ನು ಬೆಳೆಸಿಕೊಂಡಿದ್ದರು. ಜತೆಗೆ ಬಿಜೆಪಿ ಪಕ್ಷದ ಪರವಾಗಿದ್ದರು. ಸುತ್ತಲಿನ ಎಲ್ಲಾ ವರ್ಗದ ಜನ ಮಾತ್ರವಲ್ಲ, ತಮ್ಮ ಆದಿ ದ್ರಾವಿಡ ಸಮುದಾಯದ ಎಲ್ಲರೂ ಕಾಂಗ್ರೆಸ್ ಪಕ್ಷದಲ್ಲಿ ಇದ್ದರೂ ಅದೊಂದು ಮನೆ ಮಾತ್ರ ರಾಷ್ಟ್ರೀಯತೆಯನ್ನು ಮನದಲ್ಲಿ ತುಂಬಿಕೊಂಡು ಒಂಟಿಯಾಗಿ ನಿಂತಿತ್ತು. ಆ ಸಮಯದಿಂದಲೇ ಭಾಗೀರಥಿ ಮುರುಳ್ಯ ಅವರ ಮನೆ ಬಿಜೆಪಿ ಮನೆಯಾಗಿ ಗುರುತಿಸಿಕೊಂಡಿತ್ತು.

ಅದೇ ಕಾರಣಕ್ಕೆ ಆ ಒಂದು ಮನೆಗೆ ಯಾವತ್ತೂ ಸೌಲಭ್ಯಗಳು ಸಿಕ್ಕಿರಲಿಲ್ಲ. ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿ ಆಡಳಿತದಲ್ಲಿದ್ದ ಕಾಲದಲ್ಲಿ ಬಿಜೆಪಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದ ಸಮಯದಲ್ಲಿಯೇ ಭಾಗೀರಥಿ ಅವರ ತಂದೆ ಗುರುವ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಾಣುತ್ತಾರೆ. ಆದರೆ ನಂತರ ಭಾಗೀರಥಿ ಅವರ ತಾಯಿ ಕೊರಗು ಅವರು ಮಹಿಳಾ ಮೀಸಲಾತಿ ಬಂದ ಸಮಯದಲ್ಲಿ ಸ್ಪರ್ಧಿಸಿ ಕೇವಲ 7 ಮತಗಳ ಅಂತರದಿಂದ ಸೋಲುನ್ನ ಅನುಭವಿಸುತ್ತಾರೆ. ಆದರೆ ಆಗಲು ಅವ್ರು ಮಕ್ಕಳಿಗೆ ನೀತಿ ಪಾಠವನ್ನೇ ಹೇಳಿದ್ರು, ಹೌದು ಯಾವತ್ತೂ ಯಾರಿಗೂ ಕೈ ಚಾಚಬೇಡ, ಯಾವತ್ತಿಗೂ ಬೇಡಿ ತಿನ್ನಬೇಡ,ದುಡಿದು ತಿನ್ನು ಸ್ವಾಭಿಮಾನಿಯಾಗಿ ಬದುಕು ಅಂದಿದ್ರು, ಅದರಂತೆ ತಾವೇ ಕಷ್ಟಪಟ್ಟು ಮನೆಯ ಮಾಡಿನ ಮೇಲೆ ಅಡಿಕೆಯ ಸೋಗೆ ಸಿಕ್ಕಿಸಿ, ಹಾಗೆ ಮುರುಕು ಸೋರುವ ಮನೆ ನಿರ್ಮಿಸಿ ಬದುಕು ಸವೆಸಿದ ಭಾಗೀರಥಿ ಮುರುಳ್ಯ ಇಂದು ಬಿಜೆಪಿ ಶಾಸಕಿ.

ಇದನ್ನೂ ಓದಿ: ತೆಲುಗು ನ್ಯೂಸ್ ಚಾನಲ್ ನಲ್ಲೂ ಡಾ.ಬ್ರೋ ಹವಾ, ಕನ್ನಡದ ಕಂಪು ಎಲ್ಲೆಲ್ಲೂ ಹರಡಿಸುತ್ತಿರುವ ಯೂಟ್ಯೂಬರ್

ಕೆಳ ಜಾತಿ ಅಂತ ಮೇಲ್ಜಾತಿಯವರ ಮನೆಗೆ ನೋ ಎಂಟ್ರಿ, ಆದ್ರೆ ಈಗ ವಿಧಾನ ಸೌಧಕ್ಕೆ ಎಂಟ್ರಿ

ತಂದೆ ತಾಯಿ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಬೆಳೆದ ಭಾಗೀರಥಿ ಕೂಲಿ ಮಾಡಿ ಹೇಗೋ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮುಗಿಸಿಕೊಂಡ್ರು ನಂತರ ಕೂಲಿ ನಾಳಿ ಮಾಡಿ ಬದುಕುಕಟ್ಟಿಕೊಂಡಿದ್ದರು ತಿಳಿದವರೊಬ್ಬರ ಸಲಹೆ ಮೇರೆಗೆ ಗೌರವ ಶಿಕ್ಷಕಿಯಾಗಿ, ಟೈಲರಿಂಗ್, ಹೈನುಗಾರಿಕೆ ಮಾಡಿಕೊಂಡು ಸ್ವಾಭಿಮಾನದ ಬದುಕು ರೂಪಿಸಿಕೊಂಡವರು. ಜತೆಗೆ, ರಾಷ್ಟ್ರೀಯ ಸೇವಿಕಾ ಸಮಿತಿಯ ಸಕ್ರೀಯ ಕಾರ್ಯಕರ್ತೆಯಾಗಿ ಮಹಿಳೆಯರನ್ನು ರಾಷ್ಟ್ರ ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡರು. ಬರಿಗಾಲಿನಲ್ಲಿ ನಡೆದುಕೊಂಡೇ ಪಕ್ಷದ ಚಟುವಟಿಕೆಯಲ್ಲಿ ಭಾಗವಹಿಸಿ ಪಕ್ಷದಲ್ಲಿ ಕೆಲಸ ಮಾಡಿದರು. ಈ ಕಾರ್ಯದ ಫಲವಾಗಿ ಸುಳ್ಯ ತಾ.ಪಂ.ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಪಡೆದುಕೊಂಡರು. ಬಳಿಕ ಜಿ.ಪಂ.ಚುನಾವಣೆಯಲ್ಲಿ ಜಾಲ್ಸೂರು ಕ್ಷೇತ್ರದ ಜಿ.ಪಂ.ಸದಸ್ಯೆಯಾಗಿ ಆಯ್ಕೆಯಾಗಿ ಕೆಲಸ ಮಾಡಿ, ಸುಳ್ಯ ತಾ.ಪಂ.ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಪಡೆದುಕೊಂಡರು. ಬಳಿಕ ಜಿ.ಪಂ.ಚುನಾವಣೆಯಲ್ಲಿ ಜಾಲ್ಸೂರು ಕ್ಷೇತ್ರದ ಜಿ.ಪಂ.ಸದಸ್ಯೆಯಾಗಿ ಆಯ್ಕೆಯಾಗಿ ಕೆಲಸ ಮಾಡಿದರು. ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಿಕೆಯ ಕಾರಣದಿಂದ ಭಾಗೀರಥಿ ಮುರುಳ್ಯ(Bhagirathi Murulya) ಅವಿವಾಹಿತರಾಗಿಯೇ ಈಗಲೂ ಉಳಿದುಕೊಂಡಿದ್ದಾರೆ. ಇದೆಲ್ಲವನ್ನ ಗುರುತಿಸಿದ್ದ ಬಿಜೆಪಿ ಹೈಕಮಾಂಡ್ ಹೊಸಬರಿಗೆ ಮಣೆ ಹಾಕಬೇಕು ಅಂದುಕೊಂಡು ಭಾಗೀರಥಿ ಅವ್ರಿಗೆ ಸುಳ್ಯ ಕ್ಷೇತ್ರದಿಂದ ಟಿಕೆಟ್ ಕೊಡ್ತು ಸ್ವತಃ ಇವ್ರಿಗೆ ಅದು ಅಚ್ಚರಿ ಆಗುವಂತೆ ಮಾಡಿತ್ತು.

ನಂತರ ಎಷ್ಟೋ ಜನ ಕೆಳ ಜಾತಿಯ ಹೆಂಗಸ್ಸು ಕಾಂಗ್ರೆಸ್ ವಿರುದ್ಧ ಗೆಲ್ಲೋಕಾಗುತ್ತಾ ಅಂತ ಆಡಿಕೊಂಡ್ರು ಯಾವುದಕ್ಕೂ ಭಾಗೀರಥಿ ಎದೆಗುಂದಲಿಲ್ಲ, ಪ್ರಚಾರಕ್ಕೆ ನಡೆದುಕೊಂಡೆ ಹೋದ್ರು, ಎಷ್ಟೋ ಜನ ಕೆಳ ಜಾತಿಯವಳು ಮನೆಯೊಳಗೇ ಬರಬೇಡ ಅಂದಿದ್ದು ಇದ್ಯಂತೆ ಆದರೂ ತುಂಬಾ ಸವಾಲುಗಳ ನಡುವೆ ಕಷ್ಟ ಪಟ್ಟು ಪಾಲಷ ಸಂಘಟಿಸಿ ಬರೋಬ್ಬರಿ 30ಸಾವಿರ ಮತಗಳ ಅಂತರದಿಂದ ಗೆದ್ದು ಶಾಸಕಿಯಗಿದ್ದಾರೆ. ಯಾವ ಜನರು ಮನೆಯೊಳಗೇ ಬರಬೇಡ ಅಂದ್ರು ಅವರಿಂದು ಭಾಗೀರಥಿ ಅವ್ರು ವಿಧಾನಸೌಧ ಪ್ರವೇಶ ಮಾಡೋದನ್ನ ಟಿವಿ ಪರದೆ ಮೇಲೆ ಕುಳಿತು ನೋಡುವಷ್ಟರ ಮಟ್ಟಿಗೆ ಭಾಗೀರಥಿ ಗೆದ್ದಿದ್ದಾರೆ.

ಇದನ್ನೂ ಓದಿ: ರಸ್ತೆ ಕಾಮಗಾರಿಗೆ ಮೊದಲ ಆದ್ಯತೆ, ಅಧಿಕಾರಿಗಳಿಗೆ ಫುಲ್ ಕ್ಲಾಸ್, “ಪ್ರದೀಪ್ ಈಶ್ವರ್” ಜನಮೆಚ್ಚಿದ ನಾಯಕ ಅಂತಿದ್ದಾರೆ ಜನ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram