Indian Railway: ಹೀಗಂತೂ ಮಕ್ಕಳ ಜೊತೆ ಟ್ರಾವೆಲ್ ಮಾಡೋದು ವನವಾಸ ಅನ್ನಿಸಿಬಿಡುತ್ತೆ. ಅದರಲ್ಲೂ ದೂರ ಪ್ರಯಾಣ ಅಂದಾಗ ಯಪ್ಪಾ ನಾನು ಬರಲ್ಲ, ನನ್ನ ಮಗ ಅಥವಾ ಮಗಳುನ ಕರ್ಕೊಂಡು ದೇವ್ರೇ ಸಾಧ್ಯನೇ ಇಲ್ಲ ಅಂದುಬಿಡುತ್ತಾರೆ ಪೋಷಕರು. ಆದರೆ ಪ್ರಯಾಣಿಕರ ಹಿತದೃಷ್ಟಿಯಿಂದ ಇದೀಗ ರೈಲ್ವೆ ಇಲಾಖೆಯಲ್ಲಿ ಹೊಸದಾದ ನಿಯಮವನ್ನ ಜಾರಿ ಮಾಡಲು ಹೊರಟ್ಟಿದ್ದು 5ವರ್ಷದೊಳಿಗಿನ ಪೋಷಕರಿಂಗಂತೂ ಬಂಪರ್ ಗುಡ್ ನ್ಯೂಸ್, ಅದರಲ್ಲೂ ಕ್ವಾಟ್ಲೆ ತೀಟ್ಲೆ ಮಾಡೋ ಮಕ್ಕಳಿರೋರಿಗಂತೂ ಗುಡ್ ನ್ಯೂಸ್ ಅಂತಲೇ ಹೇಳಬಹುದು. ಹಾಗಾದ್ರೆ ಏನಿದು ಭರ್ಜರಿ ಸುದ್ದಿ, ಏನಿದು ಹೊಸ ಪ್ರಯತ್ನ ನೋಡೋಣ ಬನ್ನಿ.
ಹೌದು ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರಿಗಾಗಿಯೇ ಕೈಗೊಂಡಿರುವ ಒಂದು ಅದ್ಬುತ ಯೋಜನೇ ಅಂತಲೇ ಹೇಳಬಹುದು. ಯಾಕಂದ್ರೆ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅದರಲ್ಲೂ ಚಿಕ್ಕ ಚಿಕ್ಕ ಮಕ್ಕಳಿರುವ ಪೋಷಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ವಲಯವು ಮತ್ತೊಂದು ಹೆಜ್ಜೆ ಇಟ್ಟು ನೂತನ ಪ್ರಯತ್ನಕ್ಕೆ ಕೈ ಹಾಕಿದೆ. ಇನ್ನು ಪ್ರತಿನಿತ್ಯ ಸಾವಿರಾರು ಮಂದಿ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ, ಜೊತೆಗೆ ದೂರದ ಸ್ಥಳಗಳಿಗೆ ಪ್ರಯಾಣ ಮಾಡುತ್ತಾರೆ. ದೂರದ ಊರುಗಳಿಗೆ ಮಕ್ಕಳೊಂದಿಗೆ ಪ್ರಯಾಣ ಮಾಡುವುದು ಸ್ವಲ್ಪ ಕಷ್ಟ ಅಂತಲೇ ಹೇಳಬಹುದು, ಯಾಕೆಂದರೆ ತಾಯಿ ಮಕ್ಕಳು ಸಿಂಗಲ್ ಬರ್ತ್ ನಲ್ಲಿ ಹೊಂದಿಕೊಂಡು ಪ್ರಯಾಣಿಸಬೇಕಾಗಿತ್ತು. ಆದರೆ ಈವಾಗ ಈ ಸಮಸ್ಯೆಗೆ ರೈಲ್ವೆ ಇಲಾಖೆ ಇಂದ ಉಪಾಯವನ್ನು ಹುಡುಕಿದ್ದಾರೆ. ಹೌದು ಇದೀಗ ರೈಲ್ವೆ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಶೀಘ್ರದಲ್ಲೇ ಎಲ್ಲಾ ರೈಲುಗಳಲ್ಲಿ ಬೇಬಿ ಬರ್ತ್ಗಳನ್ನು ಅಳವಡಿಲು ನಿರ್ಧರಿಸಿದೆ. ಮಕ್ಕಳೊಂದಿಗೆ ಪ್ರಯಾಣಿಸುವ ಮಹಿಳೆಯರಿಗೆ ರೈಲ್ವೆ ಇಲಾಖೆಯು ಸುಲಭ ಮಾರ್ಗವನ್ನು ಒದಗಿಸಿದೆ. ಮಕ್ಕಳಿಗಾಗಿ ಈ ವಿಶೇಷ ಬೇಬಿ ಬರ್ತ್ನ್ನ ರೈಲ್ವೆ ಇಲಾಖೆಯೂ ಜಾರಿ ಮಾಡಲು ಹೊರಟ್ಟಿದ್ದು, ತಾಯಂದಿರಿಗೆ ಸುಲಭ ಪ್ರಯಾಣಕ್ಕೆ ಅನುವು ಮಾಡಿಕೊಡಲಿದೆ.
ಇದನ್ನೂ ಓದಿ: ಭಾರತೀಯ ಅಂಚೆ ಇಲಾಖೆಯಿಂದ ಅರ್ಜಿ ಅಹ್ವಾನ- 12828 ಖಾಲಿಯಿರುವ ಹುದ್ದೆಗಳಿಗೆ ನಡೆಯಲಿದೆ ನೇಮಕಾತಿ
ರೈಲಿನಲ್ಲಿ ಬೇಬಿ ಬರ್ತ್(Baby Berth) ಅಂದ್ರೇನು? ಅದರ ವೈಶಿಷ್ಟತೆ ಏನ್ ಗೊತ್ತಾ?
ಇದಕ್ಕೂ ಮೊದಲೇ ಭಾರತೀಯ ರೈಲ್ವೆ(Indian Railway) ಇಲಾಖೆಯೂ ಮೊದಲನೆಯ ಬಾರಿಗೆ ಈ ಯೋಜನೆಯನ್ನು ಮೇ 2022ರಲ್ಲಿ ಲಕ್ನೋದಲ್ಲಿ ಪ್ರಾರಂಭ ಮಾಡಿತ್ತು. ಪ್ರಾರಂಭದಲ್ಲಿ ಒಳ್ಳೆಯ ಪ್ರತಿಕ್ರಿಯೆ ಬಂದಿದ್ರು ಕೂಡ ಕೆಲವೊಂದಷ್ಟು ಸಮಸ್ಯೆಗಳಿದ್ದುದ್ದರಿಂದ ಅವುಗಳನ್ನ ಸರಿಪಡಿಸಿಕೊಂಡು ಈಗ ಮತ್ತೊಂದು ಹೆಜ್ಜೆ ಇಡಲು ರೈಲ್ವೆ ಇಲಾಖೆ ಮುಂದಾಗಿದೆ. ಇನ್ನು ಲ್ಯಾಕ್ನೋದಲ್ಲಿ ಮೊದಲಿಗೆ 770 mm ಉದ್ದ, 255mm ಅಗಲ ಮತ್ತು 76.2 mm ಎತ್ತರವಿರುವ ಎರಡು ಬೇಬಿ ಬರ್ತ್ಗಳನ್ನು ಆರಂಭ ಮಾಡಲಾಯಿತು.ಲಕ್ನೋ ದ ರೈಲಿನಲ್ಲಿ ಕೋಚ್ಗಳ ಎರಡೂ ತುದಿಗಳಲ್ಲಿ ಎರಡನೇ ಕ್ಯಾಬಿನ್ಗಳ 12 ಮತ್ತು 60 ಮುಖ್ಯ ಬರ್ತ್ಗಳಿಗೆ ಈ ಬೇಬಿ ಬರ್ತ್ ಗಳನ್ನ ಅಳವಡಿಸಲಾಯಿತು. ಇನ್ನು ಮೊದಲನೆಯ ಟ್ರಯಲ್ ನಲ್ಲಿ ಜನರಿಂದ ಸಾಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿತ್ತು. ಹಾಗೆ ಕೆಲವಂದು ನ್ಯೂನ್ಯತೆ ಕೂಡ ಕಂಡುಬಂದಿದ್ದವು. ಈ ನ್ಯೂನ್ಯತೆ ಗೆ ಸಂಬಂಧಿಸಿದಂತೆ ಬದಲಾವಣೆಗಳನ್ನು ಈಗ ಮಾಡಲಾಗಿದೆ.
ಹಾಗಾಗಿ ಎರಡನೇ ಬಾರಿ ಟ್ರಯಲ್ ಮಾಡುಲು ರೈಲ್ವೆ ಇಲಾಖೆಯು ಸಿದ್ದವಾಗಿದೆ. ಹೌದು ಇವೊಂದು ಬೇಬಿ ಬರ್ತ್(baby berth) ಸಿಟ್ ನಿಂದ ಪ್ರಯಾಣಿಕರು ಮಕ್ಕಳೊಂದಿಗೆ ಪ್ರಯಾಣಿಸಲು ಅತ್ಯಂತ ಸುಲಭವಾಗಲಿದೆ, ಅಲ್ಲದೇ 5 ವರ್ಷದ ಮಕ್ಕಳಿರುವ ಪ್ರಯಾಣಿಕರು ಈ ಯೋಜನೆಯ ಲಾಭ ಪಡೆಯಲು ಸಾಧ್ಯವಾಗಲಿದ್ದು ,ಬೇಬಿ ಬರ್ತ್ ಹೆಚ್ಚು ಆರಾಮದಾಯಕ ಹಾಗೂ ಸುರಕ್ಷಿತವಾಗಿರಲಿದೆ. ಇನ್ನು ಸಣ್ಣ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಕಾರ್ಟೂನಿನ್ ಪರದೆಯನ್ನು ಕೂಡ ಅಳವಡಿಸಲಾಗಿದೆ. ಈಗ ಅಳವಡಿಸಲಾದ ಮಗುವಿನ ಆಸನವನ್ನ ಸುಲಭವಾಗಿ ಮಡಚಬಹುದು ಮತ್ತು ಸ್ಟಾಪರ್ನೊಂದಿಗೆ ಈ ಅಸನವು ಸುರಕ್ಷಿತವಾಗಿರಲಿದೆ.
ಒಟ್ಟಿನಲ್ಲಿ ದೇಶ ವೈಜ್ಞಾನಿಕ ಪಥದತ್ತ ಮುನ್ನುಗುತ್ತಿದ್ದೂ, ಎಲ್ಲವನ್ನು ಕೂಡ ಸುಲಭ ಮಾಡಿಕೊಳ್ಳುವ ಪ್ರಯತ್ನದಲ್ಲಿ ಸದಾ ಮುಂಚೂಣಿಯಲ್ಲಿರಲಿದೆ. ಹೀಗಾಗಿ ಸಿಕ್ಕಂತಹ ಅವಕಾಶಗಳನ್ನ ಬಳಸಿಕೊಳ್ಳುವುದು ಸಹ ನಮಗೆ ಸಿಗಲಿರುವಾಗ ಅವುಗಳನ್ನ ಸದ್ಭಳಕೆ ಮಾಡಿಕೊಂಡು ಆರಾಮಾದಾಯಕ ಪ್ರಯಾಣವನ್ನ ನಿಮ್ಮದಾಗಿಸಿಕೊಳ್ಳಿ. ಇನ್ನು ಮಕ್ಕಳಿಗಾಗಿ ಜಾರಿಗೊಳಿಸಲಾಗಿರುವ ಈ ವಿಶೇಷ ಬೇಬಿ ಬರ್ತ್ ಟಿಕೆಟ್ನ ಬೆಲೆಯ ಬಗ್ಗೆ ಇನ್ನು ಕೂಡ ರೈಲ್ವೆ ಮಂಡಳಿಯಿಂದ ಅಧಿಕೃತ ಮಾಹಿತಿ ಬಂದಿಲ್ಲ. ಒಟ್ಟಿನಲ್ಲಿ ಶೀಘ್ರದಲ್ಲೇ ಇದನ್ನ ನಿರ್ಧರಿಸುತ್ತದೆ ಅಂತ ಹೇಳಲಾಗಿದ್ದು, ನೆಮ್ಮದಿಯ ಪ್ರಯಾಣವನ್ನ ಮಾಡಲು ನೀವು ಬಯಸುತ್ತಿದ್ದರೆ ಶೀಘ್ರದಲ್ಲೇ ಅದು ಈಡೇರಲಿದೆ.
ಇದನ್ನೂ ಓದಿ: ದುಬಾರಿಯಾಗಳಿವೆ ಎಲೆಕ್ಟ್ರಿಕಲ್ ವೆಹಿಕಲ್! ಜೂನ್ ನಿಂದಲೇ ಕಡಿತಾವಾಗಲಿದೆ ಸಬ್ಸಿಡಿ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram