Tirupati: ದೇಶದ ಅತ್ಯಂತ ಶ್ರೀಮಂತ ದೇವಾಲಯ ಮತ್ತು ಹೆಚ್ಚು ಭಕ್ತ ಸಮೂಹವನ್ನು ಹೊಂದಿರುವ ದೇವಸ್ಥಾನವೆನ್ನುವ ಹೆಗ್ಗಳಿಕೆಗೆ ಪಾತ್ರವಾದ ತಿರುಪತಿ ಅಂದ ತಕ್ಷಣ 7 ಬೆಟ್ಟಗಳ ಒಡೆಯ ತಿಮ್ಮಪ್ಪನೇ ನಮ್ಮ ಕಣ್ಣ ಮುಂದೆ ಬರುತ್ತಾನೆ. ಹೌದು ಎಣಿಕೆಗೂ ಮೀರಿದ ಭಕ್ತರು ಭೇಟಿ ನೀಡುವ ಏಕೈಕ ದೇವಾಲಯ ಇದಾಗಿದೆ. ಅದ್ಭುತ ದೈವಿಕ ಶಕ್ತಿಯನ್ನು ಹೊಂದಿರುವ ತಿಮ್ಮಪ್ಪನ ನೆಲೆಗೆ ಪ್ರತಿದಿನ ಏಣಿಕೆಗೂ ಮೀರಿ ಜನ ಬಂದು ದರ್ಶನ ಪಡೆದುಕೊಂಡು ಹೋಗುತ್ತಾರೆ. ಹೀಗಾಗಿ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಿರುಮಲ ತಿರುಪತಿ ದೇವಸ್ಥಾನ ಅಂದ್ರೆ ಟಿ ಟಿ ಡಿ ಸುಮಾರು ಮೂರು ವರ್ಷಗಳ ನಂತರ ಕೋವಿಡ್ ನಿರ್ಬಂಧಗಳನ್ನು ಸಡಿಲಗೊಳಿಸಿದ ನಂತರ ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ದರ್ಶನಕ್ಕಾಗಿ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಪ್ರಕಟಿಸಿದೆ. ಈ ಬದಲಾವಣೆಗಳು ಜೂನ್ 30 ರವರೆಗೆ ಜಾರಿಯಲ್ಲಿರುತ್ತವೆ ಎಂದು ಟಿಟಿಡಿ ಅಧ್ಯಕ್ಷ ಶ್ರೀ ವೈವಿ ಸುಬ್ಬಾ ರೆಡ್ಡಿ ತಿಳಿಸಿದ್ದಾರೆ. ಹಾಗಾದ್ರೆ ಏನಿದು ಬದಲಾವಣೆ ಯಾರಿಗೆಲ್ಲ ಅನ್ವಯವಾಗುತ್ತೆ ನೋಡೋಣ ಬನ್ನಿ.
ಇದನ್ನೂ ಓದಿ: ಕೋಟಿ ಕೋಟಿ ಆಸ್ತಿ ಕೊನೆ ಗಳಿಗೆಯಲ್ಲಿ ಜೊತೆಗ್ಯಾರು ಇಲ್ಲ! ಹೆಂಡತಿಯರು ಜೊತೆಗಿಲ್ಲ ಮಕ್ಕಳಿಲ್ಲ ಆಸ್ತಿ ಯಾರಿಗೆ?
ತಿರುಪತಿಗೆ ಹೋಗುವ ಭಕ್ತಾಧಿಗಳಿಗೆ ಹೊಸ ರೂಲ್ಸ್
ಹೌದು ಅಂಧಪ್ರದೇಶದಲ್ಲಿರುವ ತಿರುಪತಿ(Tirupati) ತಿಮ್ಮಪ್ಪ ದೇಶದಲ್ಲೆಲ್ಲ ತುಂಬಾ ಫೇಮಸ್. ಹೀಗಾಗಿ ದೇಶದ ಮೂಲೆ ಮೂಲೆಯಿಂದಲೂ ತಿಮ್ಮಪ್ಪನ ದರ್ಶನಕ್ಕೆ ಪ್ರತಿನಿತ್ಯ ಲಕ್ಷಾಂತರ ಜನ ಬರುತ್ತಲೇ ಇರುತ್ತಾರೆ. ಅದ್ರಲ್ಲೂ ಕೋವಿಡ್ ನಿಯಮಗಳು ಸಡಿಲವಾಗುತ್ತಿದ್ದಂತೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದೂ. ಇದರಿಂದ ದರ್ಶನಕ್ಕೆ ಕಾಯುವ ಸಮಯ 40 ಗಂಟೆ ಮುಟ್ಟಿದೆ. ಹೀಗಾಗಿ ತಿರುಪತಿ ಬಾಲಾಜಿ ದೇವಸ್ಥಾನ ಹೊಸ ನಿಯಮಗಳನ್ನು ಪ್ರಕಟಿಸಿದೆ. ಹೌದು ಬೇಸಿಗೆಯ ವಿಪರೀತ ದಟ್ಟಣೆಯಿಂದಾಗಿ ಟೋಕನ್ ರಹಿತ ಭಕ್ತರ ದರ್ಶನಕ್ಕೆ ಸುಮಾರು 30-40 ಗಂಟೆಗಳ ಸಮಯ ತೆಗೆದುಕೊಳ್ಳುತ್ತಿದೆ ಎಂದು ಟಿಟಿಡಿ ಹೇಳಿದೆ. ಅಲ್ಲದೆ ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಬೇಸಿಗೆ ವಿಪರೀತದ ಕಾರಣ ಜೂನ್ 30 ರವರೆಗೆ ದರ್ಶನಕ್ಕೆ ಬದಲಾವಣೆಗಳನ್ನು ಪರಿಚಯಿಸಲಾಗಿದೆ ಎಂದು ಟಿಟಿಡಿ ಅಧ್ಯಕ್ಷ ಶ್ರೀ ವೈವಿ ಸುಬ್ಬಾ ರೆಡ್ಡಿ ತಿಳಿಸಿದ್ದಾರೆ. ಬದಲಾವಣೆಗಳು ವಿವಿಐಪಿ ಬ್ರೇಕ್ ದರ್ಶನ ಮತ್ತು ಆರ್ಜಿತಾ ಸೇವೆಗಳಿಗೆ ಸಂಬಂಧಿಸಿವೆ. ವಾರಾಂತ್ಯದಲ್ಲಿ ಸುಪ್ರಭಾತ ಸೇವೆಯಲ್ಲಿನ ವಿವೇಚನಾ ಕೋಟಾವನ್ನು ಟಿಟಿಡಿ ಹಿಂಪಡೆದಿದೆ ಮತ್ತು ತಿರುಪ್ಪವಾದ ಸೇವೆಯನ್ನು ಗುರುವಾರದಂದು ಏಕಂತಂನಲ್ಲಿ ನಡೆಸಲಾಗುವುದು.
ಅದರಂತೆ, ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ಸುಪ್ರಭಾತ ಸೇವೆಯಲ್ಲಿನ ವಿವೇಚನಾ ಕೋಟಾವನ್ನು ಟಿಟಿಡಿ ಹಿಂತೆಗೆದುಕೊಂಡಿದೆ, ಇದು ಸಾಮಾನ್ಯ ಭಕ್ತರಿಗೆ 20 ನಿಮಿಷಗಳನ್ನು ಉಳಿಸುತ್ತದೆ. ಅದೇ ರೀತಿ, ಗುರುವಾರದಂದು ಏಕಾಂತಂನಲ್ಲಿ ತಿರುಪ್ಪವಾಡ ಸೇವೆ ಮಾಡಲು ಟಿಟಿಡಿ ನಿರ್ಧರಿಸಿದೆ, ಇದರಿಂದಾಗಿ 30 ನಿಮಿಷಗಳ ಉಳಿತಾಯವಾಗುತ್ತದೆ.ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ವಿಐಪಿ ಶಿಫಾರಸು ಪತ್ರಗಳನ್ನು ಸ್ವೀಕರಿಸದಿರಲು ನಿರ್ಧರಿಸಲಾಗಿದೆ ಆದರೆ ಸ್ವಯಂ-ವಿಐಪಿಗಳಿಗೆ ಮಾತ್ರ ವಿರಾಮ ದರ್ಶನವನ್ನು ಅನುಮತಿಸಲಾಗಿದೆ, ಇದು ಈ ದಿನಗಳಲ್ಲಿ ಪ್ರತಿ ದಿನ 3 ಗಂಟೆಗಳ ದರ್ಶನ ಸಮಯವನ್ನು ಉಳಿಸುತ್ತದೆ” ಎಂದು ಟಿಟಿಡಿ ತಿಳಿಸಿದೆ.
ಟಿಟಿಡಿ ಹೇಳಿದ್ದೇನು?
ಹೌದು ಸಾಮಾನ್ಯ ಭಕ್ತರು ದೀರ್ಘ ಸಮಯದವರೆಗೆ ಕಾಯುವುದನ್ನ ಅವ್ರು ಹೆಚ್ಚು ಕಾಲ ಸರತಿ ಸಾಲುಗಳಲ್ಲಿ ನಿಂತು ಕಾಯುವುದು ತಪ್ಪಿಸುವ ಮೂಲಕ ಸಮಯವನ್ನು ಉಳಿಸಿ ಜೊತೆಗೆ ಆರಾಮದಾಯಕ ಮತ್ತು ತ್ವರಿತ ಶ್ರೀವಾರಿ ದರ್ಶನವನ್ನು ಒದಗಿಸುವ ದೃಷ್ಟಿಯಿಂದ ಈ ನಿರ್ಧಾರಗಳನ್ನು ಜಾರಿಗೊಳಿಸಲಾಗುವುದು” ಎಂದು ಟಿಟಿಡಿ ಹೇಳಿದೆ. ಇನ್ನು ಎಲ್ಲಾ ಭಕ್ತಾದಿಗಳು ಮತ್ತು ವಿಐಪಿಗಳು ಈ ನಿಯಮಗಳಿಗೆ ಸಹಕರಿಸಬೇಕು ಮತ್ತು ಎಲ್ಲಾ ಭಕ್ತಾದಿಗಳಿಗೆ ಆರಾಮದಾಯಕ ಶ್ರೀವರ ದರ್ಶನಕ್ಕೆ ಅವಕಾಶ ನೀಡಬೇಕೆಂದು ಟಿಟಿಡಿ ಮನವಿ ಮಾಡಿದೆ. ಒಟ್ಟಿನಲ್ಲಿ ತಿರುಮಲದಲ್ಲಿ ಪ್ರಸ್ತುತ ಮೂರು ಪೂಜೆಗಳನ್ನು ನಡೆಸಲಾಗುತ್ತದೆ, ಸಾರ್ವಜನಿಕರಿಗೆ ತೆರೆದಿರುವ ತೋಮಲ ಸೇವೆಯೊಂದಿಗೆ ಬೆಳಿಗ್ಗೆ ಒಂದು, ಮದ್ಯಾಹ್ನದಲ್ಲಿ ಮತ್ತೊಂದು ಸಂಕ್ಷೇಪಿತ ಪೂಜೆ ನಡೆಸಲಾಗುತ್ತಿದೆ. ಇನ್ನು ದಿನದ ಕೊನೆಯಲ್ಲಿ ಅಂದರೆ ರಾತ್ರಿಯಲ್ಲಿ ನಡೆಯುವ ಪೂಜೆಯು ಕಟ್ಟುನಿಟ್ಟಾಗಿ ಖಾಸಗಿಯಾಗಿದೆ.ಯಾಕಂದ್ರೆ ಇದರಲ್ಲಿ ದೇವಾಲಯದ ಅರ್ಚಕರು, ಪರಿಚಾರಕರು ಮತ್ತು ಆಚಾರ್ಯ ಪುರುಷರು ಮಾತ್ರ ಭಾಗವಹಿಸುತ್ತಾರೆ ಹೀಗಾಗಿ ಈ ಪೂಜೆಯಲ್ಲಿ ಸಾಮಾನ್ಯ ಭಕ್ತರು ಮತ್ತಿರರು ಪಾಲ್ಗೊಳಲು ಅವಕಾಶ ನೀಡುವುದಿಲ್ಲ.
ಒಟ್ಟಿನಲ್ಲಿ ಈಗ ತೆಗೆದುಕೊಂಡಿರುವ ಈ ಹೊಸ ರೂಲ್ಸ್ ಕೇವಲ ಜೂನ್ 30ರವರೆಗೆ ಮಾತ್ರ ಜಾರಿಯಲ್ಲಿರುತ್ತವೆ ಅನ್ನೋದು ಗಮನರ್ಹ. ನಂತರ ಈ ನಿಮಯಗಳಲ್ಲಿ ಬದಲಾವನಣೆಗಳು ಆದರೂ ಆಗಬಹುದು ಇಲ್ಲದಿದ್ದರು ಇಲ್ಲ. ಹೀಗಾಗಿ ತಿರುಪತಿಗೆ(Tirupati) ತೆರಳುವ ಭಕ್ತರು ಆಗಾಗ ಇದೆಲ್ಲವನ್ನ ಒಮ್ಮೆ ಪರಿಶೀಲಿಸಿಕೊಂಡು ತಿಮ್ಮಪ್ಪನ ಸನ್ನಿಧಿ ಭೇಟಿ ಕೊಟ್ಟರೆ ಆರಾಮದಾಯಕ ದರ್ಶನವನ್ನ ಪಡೆಯಬಹುದು ಇಲ್ಲವೇ ವಿನಾಕಾರಣ ಗೊಂದೊಳಕ್ಕಾಗಿ ಶ್ರಮ ಪಡುವಂತ್ತಾದಿತ್ತು ಎಚ್ಚರ.
ಇದನ್ನೂ ಓದಿ: ಜೂನ್ 1ರಿಂದ ರೇಷನ್ ಕಾರ್ಡ್ ಇದ್ದವರಿಗೆ 10 ಕೆಜಿ ಅಕ್ಕಿ. ಹೊಸ ಲಿಸ್ಟ್ ಬಿಡುಗಡೆ, ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇರಬೇಕು!
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram