ಮೊದಲ ದಿನ ಶಾಲೆಗೆ ಹೊರಟ ರಾಯನ್ ರಾಜ್ ಸರ್ಜಾ, ಮಗನ ಬಗ್ಗೆ, ಭವಿಷ್ಯದ ಬಗ್ಗೆ ಮೇಘನಾ ರಾಜ್ ಹೇಳಿದ್ದೇನು ಗೊತ್ತಾ?

Raayan Raj sarja: ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾಗಿ 3ವರ್ಷವಾಗುತ್ತಾ ಬಂದ್ರು ಕೂಡ ಅದನ್ನು ಈಗಲೂ ಯಾರಿಗೂ ನಂಬಲು ಅಸಾಧ್ಯವಾಗಿದೆ. ಹೌದು ಬಹಳ ಚಿಕ್ಕ ವಯಸ್ಸಿನಲ್ಲಿ ಅಸು ನೀಗಿದ ಚಿರಂಜೀವಿಯನ್ನು ಈಗ ಅವರ ಮಗ ರಾಯನ್ ರಾಜ್ ಸರ್ಜಾರಲ್ಲಿ ಎಲ್ಲರು ಕಾಣಲಾಗುತ್ತಿದ್ದಾರೆ. ಪತಿ ಚಿರಂಜೀವಿಯನ್ನು ಕಳೆದುಕೊಂಡ ಬಳಿಕ ಮೇಘನಾ ಬಾಳಿಗೆ ಬೆಳಕಾಗಿ ಬಂದಿದ್ದು ಪುತ್ರ ರಾಯನ್ ರಾಜ್ ಸರ್ಜಾ. ಬಹಳ ಆಘಾತ ಹಾಗೂ ನೋವಿನ ನಂತರ ಮಗನ ಮುಖ ನೋಡಿಕೊಂಡು ಮಗನಿಗಾಗಿಯೇ ಮೇಘನಾ ಮತ್ತೆ ಮರುಜನ್ಮದಂತೆ ತಮ್ಮ ಜೀವನವನ್ನ ಆರಂಭಿಸಿದ್ದಾರೆ. ಪತಿ ಚಿರಂಜೀವಿ ಅವ್ರನ್ನ ಕಳೆದುಕೊಂಡ ದುಃಖ ಅವ್ರ ಮನೆಯವರಿಗೆ ಮಾತ್ರವಲ್ಲ ಇಡೀ ಕರ್ನಾಟಕದ ಚಿರಂಜೀವಿ ಅವ್ರ ಅಭಿಮಾನಿಗಳನ್ನ ಈಗಲೂ ಕಾಡ್ತಿದೆ. ಹೀಗಾಗಿ ಚಿರು ಪುತ್ರನನ್ನೇ ಮತ್ತೆ ಚಿರಂಜೀವಿ ಮರುಜನ್ಮ ಅಂತ ಎಲ್ಲರು ನಂಬುತ್ತಿದ್ದು ಇದಕ್ಕಾಗಿಯೇ ಮೇಘನಾ ಪುತ್ರನ ಜೊತೆ ಇರುವ ಸುಂದರ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಅಗೆಯೇ ಕೆಲವೊಂದು ಅಪಡೇಟ್ಸ್ ಗಳನ್ನ ನೀಡುತ್ತಾ ಇರುತ್ತಾರೆ. ಹೌದು ಮೇಘನಾ ಅವ್ರು ಫೋಟೋ ವಿಡಿಯೋಗಳನ್ನ ಶೇರ್ ಮಾಡಲು ಶುರು ಮಾಡಿದ ಮೇಲೆ ತಾಯಿಯ ಹಾಗೆ ಮಗ ರಾಯನ್ ಕೂಡ ಸಮಾಜಿಕ ಜಾಲತಾಣದಲ್ಲಿ ಸ್ಟಾರ್ ಆಗಿದ್ದಾನೆ. ರಾಯನ್ ಫೋಟೋಗಳನ್ನು ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಮೆಚ್ಚುಗೆಯ ಕಾಮೆಂಟ್ ಹರಿದುಬರುತ್ತಿರುತ್ತದೆ. ಈಗಲೂ ಸಹ ರಾಯನ್ ಕಡೆಯಿಂದ ಮೇಘನಾ ಒಂದು ಗುಡ್ ನ್ಯೂಸ್ ಅನ್ನ ಹಂಚಿಕೊಂಡಿದ್ದಾರೆ.

WhatsApp Group Join Now
Telegram Group Join Now

ಇದನ್ನೂ ಓದಿ: ಛಾಯಾಸಿಂಗ್ ಕನ್ನಡ ಸಿನಿರಂಗದಿಂದ ದೂರ ಉಳಿಯಲು ನಿರ್ದೇಶಕರೊಬ್ಬರು ಹಿಯಾಳಿಸಿದ್ದೆ ಕಾರಣವಂತೆ! ಇವರ ಪತಿ ಕೂಡ ಸ್ಟಾರ್ ನಟ..

ನಿಮ್ಮೆಲ್ಲರ ಆಶಿರ್ವಾದ ರಾಯನ್ ಮೇಲಿರಲಿ ಎಂದ ಮೇಘನಾ

ಹೌದು ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಅವರ ಪುತ್ರ ರಾಯನ್ ರಾಜ್ ಸರ್ಜಾ(Raayan Raj sarja) ಸ್ಕೂಲ್ ಸೇರಿಕೊಂಡಿದ್ದಾರೆ. ಮೊದಲ ದಿನ ರಾಯನ್ ಶಾಲೆಗೆ ಹೋಗಿದ್ದು, ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಇರಲಿ ಅಂತ ಮೇಘನಾ ರಾಜ್ ಪೋಸ್ಟ್ ಹಾಕಿಕೊಂಡಿದ್ದಾರೆ. ಇನ್ನು ಮೇಘನಾ ರಾಜ್ ಅವರು ಪತಿ ಚಿರಂಜೀವಿ ಸರ್ಜಾ ನಿಧನದ ನಂತರ ಮಗ ರಾಯನ್ ಲಾಲನೆ, ಪಾಲನೆಯಲ್ಲಿ ತುಂಬಾ ಬ್ಯುಸಿ ಹಾಗೂ ಅಷ್ಟೇ ಆಕ್ಟಿವ್ ಆಗಿ ಇರ್ತಾರೆ. ಅಲ್ಲದೇ ನನಗೆ ಬದುಕುವ ಭರವಸೆಯೇ ನನ್ನ ಮಗ ಎಂದು ಎಷ್ಟೋ ಸಲ ಹೇಳಿಕೊಂಡಿದ್ದರು. ಇದೀಗ ನೋಡು ನೋಡುತ್ತಿದ್ದಂತೆಯೇ ರಾಯನ್ ಸ್ಕೂಲ್ ಗೆ ಹೋಗುವಷ್ಟು ದೊಡ್ಡವನಾಗಿದ್ದಾನೆ. ಹೀಗಾಗಿ ಮಗನನ್ನು ಮೊದಲ ದಿನ ಶಾಲೆಗೆ ಕಳಿಸಿದ ನಟಿ ಮೇಘನಾ ಖುಷಿಯಾಗಿದ್ದಾರೆ. ಅದಕ್ಕೆ ಇನ್‍ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ. ಹೌದು ಇಂದು ವಿಶೇಷ ದಿನವಾಗಿದೆ. ರಾಯನ್ ಶಾಲೆಯ ಮೊದಲ ದಿನ ನಾನು ಅನುಭವಿಸಿದ ಭಾವನೆಗಳನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಶಿಕ್ಷಣ, ಜ್ಞಾನ ಮತ್ತು ಮುಖ್ಯವಾಗಿ ಜೀವನ ಪಾಠಗಳ ಕಡೆಗೆ ಅವನ ಮೊದಲ ಹೆಜ್ಜೆ. ನಮ್ಮ ಪುಟ್ಟ ಮಗುವಿಗೆ ನಿಮ್ಮೆಲ್ಲರ ಶುಭಾಶಯಗಳು ಮತ್ತು ಆಶೀರ್ವಾದ ಬೇಕು ಅಂತ ಬರೆದುಕೊಂಡಿದ್ದಾರೆ. ನಟಿ ಮೇಘನಾ ರಾಜ್ ಅವರು ಫೋಟೋಗಳನ್ನ ಶೇರ್ ಮಾಡಿದ ತಕ್ಷಣವೇ ಸಾವಿರಾರು ಲೈಕ್ಸ್ ಬಂದಿವೆ. ಅಲ್ಲದೇ ಒಳ್ಳೆಯದಾಗಲಿ ಕಂದ. ನಿನ್ನ ಕನಸು ನನಸಾಗಲಿ. ನಿನ್ನ ಭವಿಷ್ಯಕ್ಕೆ ಒಳ್ಳೆಯದಾಗಲಿ ಎಂದು ಅಭಿಮಾನಿಗಳು ವಿಶ್ ಮಾಡ್ತಿದ್ದಾರೆ.

 

View this post on Instagram

 

A post shared by Meghana Raj Sarja (@megsraj)

ಇನ್ನು ಮೇಘನಾ ಅವ್ರು ಮಗನನ್ನ ಶಾಲೆಗೆ ಸೇರಿಸುವ ಸಿದ್ಧತೆ ಮಾಡಿಕೊಂಡಿದ್ದರಿಂದಲೇ ಇತ್ತಿಚೇಗೆ ಗೆಳೆಯರ ಜೊತೆ ಊಟಿ ಟ್ರಿಪ್ ಹೋಗಿದ್ದರು. ಹೌದು ಮಗ ಶಾಲೆಗೆ ಹೋಗುವ ಮುನ್ನ ಒಂದು ಜಾಲಿ ಪ್ರವಾಸ ಮಾಡಿಕೊಂಡು ಮಗನನ್ನ ಖುಷಿ ಪಡಿಸಿ ತಾವು ಕೂಡ ರಿಲ್ಯಾಕ್ಸ್ ಆಗಿದ್ರು. ಅಲ್ಲದೇ ಹಲವೆಡೆ ಸುತ್ತಿ ಖುಷಿ ಪಟ್ಟಿದ್ದಾರೆ. ಇನ್ನು ಕೆಲ ದಿನಗಳ ಹಿಂದೆ ಮೇಘನಾ ರಾಜ್ ರಾಯನ್ ಜೊತೆಗಿನ ಜಿಮ್ ಫೋಟೋಗಳನ್ನು ಶೇರ್ ಮಾಡಿದ್ದರು. ಆಗ ಅಮ್ಮ ಮಗ ಇಬ್ಬರು ಕೂಡ ಫುಲ್ ವರ್ಕೌಟ್ ಮಾಡ್ತಿದಿದ್ದನ್ನ ನೋಡಿ ಅವ್ರ ಅಭಿಮಾನಿಗಳು, ಇಬ್ಬರದ್ದು ಸೂಪರ್ ವರ್ಕೌಟ್ ಅಂತ ಕಮೆಂಟ್ಸ್ ಮಾಡಿದ್ರು. ಒಟ್ಟಿನಲ್ಲಿ ನಟಿ ಮೇಘನಾ ರಾಜ್ ಅವರು ಸ್ಟ್ರಾಂಗ್ ಆಗಿ ತಮ್ಮ ಜೀವನ ಲೀಡ್ ಮಾಡ್ತಾ ಇದ್ದು ಮಗನಿಗೆ ಅಪ್ಪ ಅಮ್ಮ ಇಬ್ಬರು ತಾವೇ ಆಗಿದ್ದು ಮಗನ ಭವಿಷ್ಯವೇ ತಮ್ಮ ಜೀವನ ಅಂತ ನಂಬಿ ಬದುಕುತ್ತಿದ್ದು ಕಿರುತೆರೆ ಹಿರಿತೆರೆ ಹಾಗೂ ಮನೆ ಮತ್ತು ಮಗ ಎಲ್ಲವನ್ನ ಸಮರ್ಥ ಆಗಿ ನಿಭಾಯಿಸುತ್ತಿರುವ ಮೇಘನಾ ಸದ್ಯ ತತ್ಸಮ ತದ್ಭವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಏನೇ ಆಗ್ಲಿ ರಾಯನ್ ರಾಜ್ ಸರ್ಜಾನಿಗೆ(Raayan Raj sarja) ಒಳ್ಳೆಯದಾಗ್ಲಿ ಅಂತ ಶುಭಾಶಯಗಳು ಆರೈಸೋಣ. 

ಇದನ್ನೂ ಓದಿ: ನಟ ರಾಜೇಶ್ ನಟರಂಗ ಹೆಂಡತಿ ಮತ್ತು ಮಗಳು ಯಾರು ಹೇಗಿದ್ದಾರೆ? ಮಗಳು ಕೂಡ ಫೇಮಸ್ ನಟಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram