Srujan Lokesh: ಕಲರ್ಸ್ ಕನ್ನಡ ವಾಹಿನಿಯಲ್ಲಿ ಲೋಕೇಶ್ ಪ್ರೋಡಕ್ಷನ್ನಲ್ಲಿ ಮೂಡಿಬರುತ್ತಿದ್ದ ಮಜಾ ಟಾಕೀಸ್ ಕಾರ್ಯಕ್ರಮ ಆಗ ಎಲ್ಲರ ಮನೆಮಾತಾಗಿಬಿಟ್ಟಿತ್ತು. ಹೌದು ಸೃಜನ್ ಲೋಕೇಶ್ ನಡೆಸಿಕೊಡುತ್ತಿದ್ದ ಈ ಒಂದು ಜನಪ್ರಿಯ ಕನ್ನಡ ಶೋನಲ್ಲಿ ಹಾಸ್ಯ ನಟ ಕುರಿ ಪ್ರತಾಪ್ ಮತ್ತು ಕಾದಂಬರಿ ಧಾರಾವಾಹಿಯ ಚೆಲುವೆ ಶ್ವೇತ ಚೆಂಗಪ್ಪ ಅವರದು ಮುಖ್ಯ ಪಾತ್ರದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆ ಎಲ್ಲರನ್ನು ನಗೆ ಗಡಲಿನಲ್ಲಿ ತೇಲಿಸಲು ಬರುತ್ತಿದ್ರು. ಮನೆ ಮಂದಿ ಒಟ್ಟಿಗೆ ಕೂತು ಮಜಾ ಟಾಕೀಸ್ ನೋಡಲು ರೆಡಿ ಆಗಿ ಬಿಡುತ್ತಿದ್ರು. ಇದರ ಜೊತೆಗೆ ಮಜಾ ಟಾಕೀಸ್ನ ಮೂಲಕ ಎಲ್ಲರ ಮನಸ್ಸಿಗೆ ಬಹಳ ಹತ್ತಿರವಾಗಿರುವಂತಹ ನಿರೂಪಕ ಸೃಜನ್ ಲೋಕೇಶ್. ತಮ್ಮ ಸಮಯ ಪ್ರಜ್ಞೆಯಿಂದ ತಮ್ಮ ಅದ್ಭುತವಾದ ನಿರೂಪಣೆ, ಹಾವಭಾವದೊಂದಿಗೆ ಹಾಗೂ ಚಾತುರ್ಯ ದೊಂದಿಗೆ ಇಡೀ ಬೆಳ್ಳಿತೆರೆಯ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿರುವ ಸೃಜನ್ ಲೋಕೇಶ್ ಅವ್ರಿಗೆ ತಮ್ಮದೇ ಆದಂತಹ ಅಭಿಮಾನಿಗಳ ಬಳಗ ಸೃಷ್ಟಿಯಾಗಲು ಶುರುವಾಯ್ತು. ಆದರೆ ಕಾರಣಾನಂತರಗಳಿಂದಾಗಿ ಶೋ ಆಗಿಯೇ ನಿಂತು ಹೊಯ್ತು. ಇದೀಗ ಶೋ ಮುಗಿಸಲು ಕಾರಣ ಏನು ಅನ್ನೋದ್ರ ಬಗ್ಗೆ ಫ್ಯಾಮಿಲಿ ಗ್ಯಾಂಗ್ ಟೆಂಟ್ ನಲ್ಲಿ ಸೃಜನ್ ಮನ ಬಿಚ್ಚಿ ಮಾತನಾಡಿದ್ದಾರೆ.
ಟಾಕಿಂಗ್ ಸ್ಟಾರ್ ಸೃಜ ಇರುವ ಕಡೆ ಮಜಕ್ಕೆ ಕೊರತೆಯಿರಲ್ಲ. ಹೌದು ಇದೀಗ ಮತ್ತೆ ಕಾಮಿಡಿ ಕಚಗುಳಿ ಇಡಲು ಸೃಜ ಕಲರ್ಸ್ ಕನ್ನಡ ಫ್ಯಾಮಿಲಿ ಗ್ಯಾಂಗ್ ಜೊತೆ ಬರುತ್ತಿದ್ದಾರೆ. ಸದ್ಯ ಶೂಟಿಂಗ್ ನಲ್ಲಿ ಬ್ಯುಸಿ ಇರುವ ಸೃಜ ಇದೀಗ ಮಜಾ ಟಾಕೀಸ್ ಶೋ ಬಗ್ಗೆ ಮಾತನಾಡಿದ್ದಾರೆ. ಹೌದು ನಾನು ಈ ಶೋ ಆರಂಭಿಸಿದ್ದು ಕೇವಲ 32 ಎಪಿಸೋಡ್ಗಳಿಗೆ, ಕೊನೆಯಲ್ಲಿ 600 ಎಪಿಸೋಡ್ಗಳು ಆಯ್ತು ಅಲ್ಲಿವರೆಗೂ ಏನೂ ಪ್ಲ್ಯಾನ್ ಮಾಡಿರಲಿಲ್ಲ. 6ವರ್ಷಗಳ ಕಾಲ ಮಜಾ ಟಾಕೀಸ್ ಮಾಡಿಕೊಂಡು ಇರುವಾಗ ಬೇರೆ ರೀತಿ ಶೋಗಳ ಪ್ಲ್ಯಾನಿಂಗ್ ಬರಲಿಲ್ಲ ಏಕೆಂದರೆ ಜನರು ಅದನ್ನೇ ಹೆಚ್ಚಿಗೆ ಇಷ್ಟ ಪಡಲು ಆರಂಭಿಸಿದ್ದರು. ಹೀಗಾಗಿ ಸ್ವಲ್ಪ ಬ್ರೇಕ್ ತೆಗೆದುಕೊಂಡು ಮತ್ತೆ ಆರಂಭ ಮಾಡಿದೆ ಆನಂತರ ಕೊರೋನಾ ಬಂತು ಮತ್ತೊಮ್ಮೆ ಬ್ರೇಕ್ ಆಯ್ತು. ಆಗ ಶೂಟಿಂಗ್ ಮಾಡೋದು ಅಷ್ಟು ಸುಲಭ ಇರಲಿಲ್ಲ.. ಕೊರೋನ ಆಗ ಹೊಸದು ಏನು ಹೇಗೆ ಅಂತ ಗೊತ್ತಿರಲಿಲ್ಲ. ಪೊಲೀಸರು ಅನುಮತಿ ಕೊಡ್ತಿರಲಿಲ್ಲ, ಹೀಗಾಗಿ ಶೋ ಕೈ ಬಿಟ್ವಿ. ನಂತರ ರಾಜಾ ರಾಣಿ ಹೊಸ ರೀತಿಯ ರಿಯಾಲಿಟಿ ಶೋ ಶುರುವಾಯ್ತು. ಹೊಸಬ್ಬರು ಆಗಮಿಸಿದರು ಅದಾದ ಮೇಲೆ ನನ್ನಮ್ಮ ಸೂಪರ್ ಸ್ಟಾರ್ ಮತ್ತು ಗಿಚ್ಚಿ ಗಿಲಿಗಿಲಿ ನಡಿತು. ಇಷ್ಟು ಜವಾಬ್ದಾರಿಗಳನನ್ನು ಮುಗಿಸಿದ ಮೇಲೆ ನಾಲ್ಕು ತಿಂಗಳು ಬ್ರೇಕ್ ತೆಗೆದುಕೊಂಡು ಈಗ ಫ್ಯಾಮಿಲಿ ಗ್ಯಾಂಗ್ಸ್ಟರ್ ಶುರು ಮಾಡುತ್ತಿರುವುದು ಇದೊಂದು ಬ್ಯುಟಿಫುಲ್ ಚಾಲೆಂಜ್’ ಎಂದು ಸೃಜನ್ ಲೋಕೇಶ್(Srujan Lokesh) ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್! ಸ್ನೇಹ-ಕಂಠಿ ಮದುವೆ ಮಾಡಿಸಿದ ಬಂಗಾರಮ್ಮ
500-600 ಸಿನಿಮಾಗಳಿಗೆ ಫ್ರೀ ಪ್ರಮೋಷನ್ ಮಾಡಿದ್ದ ಶೋ
ಇನ್ನು ಮಜಾ ಟಾಕೀಸ್ನ ಮತ್ತೆ ಆರಂಭಿಸುತ್ತೀನಿ 200% ಆರಂಭಿಸುತ್ತೀನಿ ಬಿಡುವಂತ ಶೋ ಅದಲ್ಲ. ನಾನಾ ಕಾರಣಗಳಿಂದ ಶೋನ ಅಲ್ಲಿಗೆ ನಿಲ್ಲಿಸಬೇಕಿತ್ತು ಕೋವಿಡ್ ಕೂಡ ದೊಡ್ಡ ಕಾರಣವಾಗಿತ್ತು. ಅದಲ್ಲದೆ ಸಿನಿಮಾ ಕೆಲಸಗಳು ನಡೆಯುತ್ತಿರಲಿಲ್ಲ ಸಿನಿಮಾ ರಿಲೀಸ್ ಆಗುತ್ತಿರಲಿಲ್ಲ ಸರ್ಕಾರ ಕೂಡ ಹೊಸ ನಿಯಮಗಳನ್ನು ತರುತ್ತಿತ್ತು. ಒಳಗೆ ಚಿತ್ರೀಕರಣ ಮಾಡುವಂತೆ ಇರಲಿಲ್ಲ. ಲಿಮಿಟೆಡ್ ವ್ಯಕ್ತಿಗಳ ಜೊತೆ ಸದಾ ಮಾಸ್ಕ್ ಹಾಕಿಕೊಂಡು ಕೆಲಸ ಮಾಡುವುದು ಕಷ್ಟ. ಅಲ್ಲದೇ ಹೊರಗಡೆ ಬರುವುದಕ್ಕೆ ಕಲಾವಿದರು ಹೆದರಿಕೊಳ್ಳುತ್ತಿದ್ದರು. ಕೋವಿಡ್ ಅಂದ್ರೆ ಏನು ಅಂತಾನೇ ನಮಗೆ ಗೊತ್ತಿರಲಿಲ್ಲ,ಇಡೀ ದೇಶವೇ ಭಯ ಪಡುವಂತ ಪರಿಸ್ಥಿತಿಗೆ ತಂದಿತ್ತು.
ಇನ್ನು ಕೊರೋನಾ ದಾಟಿ ಮುಂದೆ ಬಂದಿದ್ದೀವಿ ತುಂಬಾ ಸಿನಿಮಾ ರಿಲೀಸ್ ಆಗುತ್ತಿದೆ. ನಮ್ಮ ಚಿತ್ರರಂಗ ನೆಮ್ಮದಿಯಾಗಿದೆ. ಮುಖ್ಯವಾಗಿ ಸಿನಿಮಾ ಇಂಡಸ್ಟ್ರಿಗೆ ಪ್ರಚಾರ ಮಾಡಲು ನಮ್ಮ ಶೋ ಸಹಾಯ ಮಾಡುತ್ತಿತ್ತು ಅಂದ್ರೆ ಖುಷಿ ವಿಚಾರ ಅಂತಲೇ ಹೇಳಬಹುದು. ಸುಮಾರು 450 ರಿಂದ 600 ಸಿನಿಮಾ ತಂಡಗಳಿಂದ ಒಂದು ರೂಪಾಯಿಯೂ ಪಡೆಯದೆ ಪ್ರಚಾರ ಮಾಡಿದ್ದೀವಿ. ಸಾಮಾನ್ಯವಾಗಿ ಪ್ರಚಾರಕ್ಕೆ ತುಂಬಾ ಹಣ ಖರ್ಚು ಆಗುತ್ತದೆ ಆದರೆ ಮಜಾ ಟಾಕೀಸ್ ಮೂಲಕ ಸಹಾಯ ಆಗಿದೆ, ಪ್ರಚಾರ ಸಿಕ್ಕಿದೆ ಅಂದ್ರೆ ಅದಕ್ಕಿಂತ ಹೆಮ್ಮೆ ಏನು ಬೇಕು ಹೇಳಿ ಅಂತ ಸೃಜ ಹೆಮ್ಮೆ ಪಟ್ರು. ಅಲ್ಲದೇ ಫ್ಯಾಮಿಲಿ ಗ್ಯಾಂಗ್ ನಂತರ ಮಜಾ ಟಾಕೀಸ್ ಮತ್ತೆ ಆರಂಭಿಸುವ ಸುಳಿವು ಸಹ ಕೊಟ್ಟಿದ್ದು, ಆದ್ರೆ ಯಾವಾಗ ಹೇಗೆ ಅನ್ನೋದನ್ನ ಬಿಟ್ಟುಕೊಟ್ಟಿಲ್ಲ.
ಇದನ್ನೂ ಓದಿ: CCTV ಯಲ್ಲಿ ಬಯಲಾಯ್ತು ಆಸಲಿ ಸತ್ಯ! ಕುಡಿದು ರೀಲ್ಸ್ ಸ್ಟಾರ್ ನಿಖಿಲ್ ಮಾಡಿದ ಅವಾಂತರ ನೋಡಿ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram