ಆಧುನಿಕರಣಕ್ಕೆ ಮನುಷ್ಯ ಒಗ್ಗಿಕೊಂಡಂತೆ ಮನುಷ್ಯನ ಚರ ವಿಚಾರ ಜೀವನಶೈಲಿ ಎಲ್ಲವು ಕೂಡ ಬದಲಾಗ್ತಿದೆ. ಅದ್ರಲ್ಲೂ ಸ್ಮಾರ್ಟ್ ಫೋನ್ ಬಂದ ಮೇಲೆ ಜನರ ಜೀವನಶೈಲಿ ಸಾಕಷ್ಟು ಬದಲಾಗಿದೆ. ಹೌದು ಜನರ ವರ್ತನೆಯಲ್ಲಿ ಭಾರೀ ಬದಲಾವನೆಯಗ್ತಿದೆ. ಅದ್ರಲ್ಲಂತು ಜನನಿಬಿಡ ಸಾರ್ವಜನಕ ಸ್ಥಳದಲ್ಲಿ ಜನರು ಕೈಯಲ್ಲಿ ಮೊಬೈಲ್ ಹಿಡಿದು ಸ್ಮಾರ್ಟ್ಫೋನ್ ಪ್ರಪಂಚದಲ್ಲಿ ಮುಳುಗಿಹೋಗುವ ದೃಶ್ಯ ಕಾಣಸಿಗುವುದು ತೀರಾ ಸಾಮಾನ್ಯ ಸಂಗತಿಯಾಗಿ ಹೋಗಿದೆ. ಇನ್ನು ಟಿವಿ ಧಾರವಾಹಿಗೆ ಅಂಟಿಕೊಂಡಂತೆ ಜನರು ಸ್ಮಾರ್ಟ್ಫೋನ್ಗೆ ಅಡಿಕ್ಟ್ ಆಗುತ್ತಿರುವುದು ಬಹಳ ಸಾಮಾನ್ಯವಾಗಿದೆ. ಇನ್ನು ಮಕ್ಕಳ ವಿಚಾರದಲ್ಲಂತೂ ಇದು ಅಕ್ಷರಶ ನಿಜವಾಗಿದೆ. ಆಡಬೇಕು ಅನ್ನೋ ಮಕ್ಕಳನ್ನು ಆಡಲು ಬಿಡದೆ ಕೈಗೆ ಸ್ಮಾರ್ಟ್ಫೋನ್ ಕೊಟ್ಟು ಕೂರಿಸುವ ಪೋಷಕರೇ ಹೆಚ್ಚು.
ಆರಂಭದಲ್ಲಿ ಕೆಲಸದ ಒತ್ತಡದಲ್ಲಿ ಮಕ್ಕಳು ಸುಮ್ಮನಿರಲಿ ಊಟ ಮಾಡ್ಲಿ ಅಥವಾ ನಮ್ಮ ಮಕ್ಕಳ ಬಳಿಯೂ ಒಂದು ಫೋನ್ ಇರಲಿ ಅಂತ ಫೋನ್ ಗಳನ್ನ ಕೊಡುವಂತ ಪೋಷಕರೇ ದಯವಿಟ್ಟು ಅಂತಹ ತಪ್ಪುಗಳನ್ನ ಮಾಡಲೇಬೇಡಿ. ಮಕ್ಕಳ ಕೈಗೆ ಸ್ಮಾರ್ಟ್ಫೋನ್ ಕೊಡಬೇಡಿ. ಯಾಕಪ್ಪ ಈ ವಿಚಾರವನ್ನ ಹೇಳ್ತಿದ್ದೀನಿ ಅಂದ್ರೆ ಫೋನ್ ಕೊಟ್ಟಿಲ್ಲ ಅಂದಿದ್ದಕ್ಕೆ ಯುವತಿಯೊಬ್ಬಳು ಸಾಯೋದಕ್ಕೆ ರೆಡಿಯಾಗಿ ಕಟ್ಟಡ ಹತ್ತಿ ಕೂತಿರೋ ಒಂದು ಘಟನೆ ಈಗ ಬೆಳಕಿಗೆ ಬಂದಿದೆ. ಹೌದು ಈ ಮೊಬೈಲ್ ಬಳಕೆಗೆ ಸಂಬಂಧ ಪಟ್ಟಂತೆ ಮಕ್ಕಳಿಗೆ ಹೆಚ್ಚು ಮೊಬೈಲ್ ಕೊಡದಿರಿ ಅಂತ ಸಾಕಷ್ಟು ಜನ ಸಾಕಷ್ಟು ರೀತಿಯಲ್ಲಿ ಹೇಳಿದ್ರು ಅಲ್ಲದೇ ಭಾರತದಲ್ಲಿ ಅತಿ ಹೆಚ್ಚು ಸ್ಮಾರ್ಟ್ಫೋನ್ ಮಾರಾಟ ಮಾಡುವ ಶವೋಮಿ ಇಂಡಿಯಾದ ಸ್ವತಃ ಸಿಇಒ ಮನು ಕುಮಾರ್ ಜೈನ್ ಕೂಡ ಸಾಕಷ್ಟು ಸಾಲ ಜಾಗೃತಿ ಮೂಡಿಸುವ ಪೋಸ್ಟ್ ಗಳನ್ನ ಮಾಡಿದ್ರು. ಆದ್ರೂ ಕೂಡ ನಮ್ಮ ಜನ ಜಾಗೃತರಾಗ್ತಿಲ್ಲ.
ಹೌದು ಅಪ್ಪ ಜಾಸ್ತಿ ಮೊಬೈಲ್ ಬೇಡ ಅಂತ ಮಗಳಿಗೆ ಬೈದು ಮಗಳ ಬಳಿ ಇದ್ದ ಮೊಬೈಲ್ ನ ತೆಗೆದುಕೊಂಡಿದ್ದಾರೆ ಅಷ್ಟೇ. ಇಷ್ಟಕ್ಕೆ ಕೋಪಗೊಂಡ ಮಗಳು 3ಅಂತಸ್ತಿನ ಮಹಡಿ ಹತ್ತಿ ತುತ್ತ ತುದಿಯಲ್ಲಿ ಕುಳಿತು ಮೊಬೈಲ್ ಕೊಟ್ಟಿಲ್ಲ ಅಂದ್ರೆ ಇಲ್ಲಿಂದ ಕೆಳಗೆ ಹಾರಿ ಪ್ರಾಣ ಕಳೆದುಕೊಳ್ಳೋದಾಗಿ ಹೆದರಿಸಿದ್ದಾಳೆ. ಅಲ್ಲದೇ ಯಾರಾದ್ರು ಹತ್ತಿರ ಬಂದ್ರೆ ಜಿಗಿದುಬಿಡುತ್ತೇನೆ ಅಂತ ಎಲ್ಲರನ್ನು ಭಯಪಡಿಸಿ ಹತ್ತಿರ ಬರಲು ಬಿಡದೆ ಅಲ್ಲಿಯೇ ಕುಳಿತಿದ್ದಾಳೆ. ಎಲ್ಲರು ಎಷ್ಟೇ ಕಷ್ಟ ಪಟ್ರು ಯುವತಿ ಮಾತ್ರ ಪಟ್ಟು ಬಿಟ್ಟಿಲ್ಲ ರಸ್ತೆಯಲ್ಲಿ ಹೋಗಿ ಬರೋರೆಲ್ಲ ಎಷ್ಟೇಷ್ಟೋ ಹೇಳ್ತಾರೆ ಆದ್ರೆ ಯುವತಿ ಮಾತ್ರ ಹಠ ಬಿಡದೆ ಎಲ್ಲರನ್ನು ಎದುರಿಸುತ್ತ ಅಲ್ಲಿಯೇ ಕುಳಿತಿದ್ದಾಳೆ. ಕೊನೆಗೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಯವರು ಬಂದು ಪರಿಸ್ಥಿತಿಯನ್ನ ಹತೋಟಿಗೆ ತೆಗೆದುಕೊಂಡು ಯುವತಿಯನ್ನ ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ.
ಇದನ್ನೂ ಓದಿ: ಮಜಾ ಟಾಕೀಸ್ ನಿಲ್ಲಿಸಿದ್ದಕ್ಕೆ ನಿಜವಾದ ಕಾರಣ ಬಿಚ್ಚಿಟ್ಟ ಸೃಜನ್! ಆ ಒಂದು ಕಾರಣಕ್ಕೆ ಮಜಾ ಟಾಕೀಸ್ ಮರೆತರ ಸೃಜಾ?
1 ಘಂಟೆಯ ಕಾರ್ಯಚರಣೆಯಿಂದ ಯುವತಿ ರಕ್ಷಣೆ
ಹೌದು ಇಂತದೊಂದು ಘಟನೆ ತಮಿಳುನಾಡಿನ ಶಿವಗಂಗದ ಕಲೈಕುಡಿ ನಗರದ ಕಲೈ ಜ್ಞಾನ್ ಅನ್ನೋ ರೋಡಲ್ಲಿ ನಡೆದಿದೆ. 17ವರ್ಷದ ಕಾವ್ಯ ಅನ್ನೋ ಹುಡುಗಿ ಈ ರೀತಿಯ ಹುಚ್ಚಾಟವನ್ನ ಮಾಡಿದ್ದಾಳೆ. ಈಕೆಯ ಅಪ್ಪ ಆಟೋ ಡ್ರೈವರ್ ಬಹಳ ಕಷ್ಟದಿಂದಲೇ ಜೀವನ ನಡೆಸುತ್ತಿರುತ್ತಾರೆ. ಆದ್ರೂ ಈ ಮಧ್ಯೆ ಮಗಳ ಬಳಿಯೂ ಮೊಬೈಲ್ ಇರಲಿ ಅಂತ ಮೊಬೈಲ್ ಕೊಡಿಸಿದ್ದಾರೆ ಆದ್ರೆ ಮಗಳ ಅತಿಯಾದ ಮೊಬೈಲ್ ಬಳಕೆಯ ಗೀಳು ಅಪ್ಪನನ್ನ ಹೈರಾಣಾಗುವಂತೆ ಮಾಡಿದೆ. ಸಾಕಷ್ಟು ಬಾರಿ ಮಗಳಿಗೆ ಮೊಬೈಲ್ ಇಷ್ಟೊಂದು ಬಳಸಬೇಡಮ್ಮ ಒಳ್ಳೇದಲ್ಲ ಅಂತ ಬುದ್ದಿ ಹೇಳಿದ್ದಾರೆ ಆದ್ರೆ ಕಾವ್ಯ ಅಸ್ಟೊತ್ತಿಗಾಗ್ಲೇ ಮೊಬೈಲ್ ಹುಚ್ಚು ಹಿಡಿಸಿಕೊಂಡಿದ್ದು ಅಪ್ಪನ ಮಾತನ್ನ ಕೇಳಲು ರೆಡಿ ಇರೋದಿಲ್ಲ. ಕೊನೆಗೆ ಮೊಬೈಲ್ ಕಿತ್ತಿಟ್ಟುಕೊಳ್ಳೋದೇ ದಾರಿ ಅಂತ ಅಪ್ಪ ಮೊಬೈಲ್ ತೆಗೆದಿಟ್ಟುಕೊಂಡಿದ್ದಾರೆ. ಅಷ್ಟಕ್ಕೇ ಈ ಯುವತಿ ಕಟ್ಟಡ ಏರಿ ಕುಳಿತಿದ್ದಾಳೆ. ಹೇಗೋ ಸಾಕಷ್ಟು ಹರಸಾಹಸ ನಂತರ ಸ್ಥಳಕ್ಕೆ ಬಂದ ಮಹಿಳಾ ಪೊಲೀಸ್ ಅಧಿಕಾರಿ ಅನ್ನಲಿಕ್ಕಿ ಕಾವ್ಯ, ಹುಡುಗಿಯ ಮನವೊಲಿಸಿ ಮಾತನಾಡುತ್ತಾ ಹತ್ತಿರ ಹತ್ತಿರ ಹೋಗಿ ಆಕೆಯ ಕೈ ಹಿಡಿದು ಕೊನೆಯದಾಗಿ ಆಕೆಯನ್ನ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಹುಷಃ ಲೇಡಿ ಪೊಲೀಸ್ ಅಧಿಕಾರಿ ಅಲ್ಲಿ ಇರಲಿಲ್ಲ ಅಂದಿದ್ರೆ ಆ ಹುಡುಗಿ ಬದುಕುಳಿಯುತ್ತಿದ್ದಳೋ ಇಲ್ವೋ ಗೊತ್ತಿಲ್ಲ. ಆದ್ರೆ ಈಗಲೂ ಅಷ್ಟೇ ಪೋಷಕರೇ ಸ್ವಲ್ಪ ಎಚ್ಚರ ಅಂತ ಅಷ್ಟೇ ಹೇಳಲು ಸಾಧ್ಯ.
ಇದನ್ನೂ ಓದಿ: ಹಿರಿಯ ನಾಗರಿಕರಿಗೆ ಸಾರಿಗೆ ಸಚಿವ ರಿಂದ ಗುಡ್ ನ್ಯೂಸ್, ಹಿರಿಯನಾಗರಿಕರಿಗೆ ದೇವಸ್ಥಾನಗಳಲ್ಲಿ ಡೈರೆಕ್ಟ್ ಎಂಟ್ರಿ ..
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram