Actor Suraj: ಚಂದನವನದಲ್ಲಿ ಈಗಷ್ಟೇ ನೆಲೆಯೂರಲು ಹೊರಟ್ಟಿದ್ದ ಯುವ ನಟ ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡು ಚಿತ್ರರಂಗದಿಂದಲೇ ದೂರ ಉಳಿಯುವ ಸ್ಥಿತಿ ಎದುರಾಗಿದೆ. ಹೌದು ಇದು ಡಾ. ರಾಜ್ಕುಮಾರ್ ಅವರ ಕುಟುಂಬಕ್ಕೆ ಆಘಾತ ತರುವಂತಹ ಘಟನೆ ಅಂತಲೇ ಹೇಳಬಹುದು. ಹೌದು ಪಾರ್ವತಮ್ಮ ರಾಜ್ಕುಮಾರ್ ಅವರ ತಮ್ಮನ ಪುತ್ರ ಸೂರಜ್ ಅವರು ಗಂಭೀರ ರಸ್ತೆ ಅಪಘಾತಕ್ಕೆ ಒಳಗಾಗಿದ್ದಾರೆ. ಈವೊಂದು ಅಪಘಾತದಲ್ಲಿ ಸೂರಜ್ ಕಾಲನ್ನು ಕಳೆದುಕೊಂಡಿದ್ದಾರೆ ಅಂತ ಹೇಳಲಾಗ್ತಿದ್ದು, ಆದರೆ ಪ್ರಾಣಪಯದಿಂದ ಪಾರಾಗಿದ್ದಾರೆ ಅನ್ನುವಂತಹ ಮಾಹಿತಿ ಲಭ್ಯವಾಗ್ತಿದೆ. ಈಗಷ್ಟೇ ಚಿತ್ರರಂಗದಲ್ಲಿ ಚಿಕ್ಕ ಚಿಕ್ಕ ಹೆಜ್ಜೆಗಳನ್ನ ಇಡುತ್ತಿದ್ದ ನಟ ಸೂರಜ್ ಚಂದನವನದ ನಿರೀಕ್ಷೆಯ ನಟನಾಗಿದ್ರು ಆದ್ರೆ ಪೂರ್ಣವಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡು ಬೇರುರುವ ಮೊದಲೇ ಇದೀಗ ಕಾಲನ್ನ ಕಳೆದುಕೊಂಡು ಸುಮ್ಮನೆ ಕುರುವಂತ್ತಾಗಿಬಿಟ್ಟಿದೆ.
ಇದನ್ನೂ ಓದಿ: ಡೇ ಕೇರ್ ಸೆಂಟರ್ ಗಳಲ್ಲಿ ಮಕ್ಕಳನ್ನ ಬಿಡುವ ಮೊದಲು ಎಚ್ಚರ, ಸ್ವಲ್ಪ ಯಾಮಾರಿದ್ರು ಮಗುವಿನ ಜೀವಕ್ಕೆ ಆಪತ್ತು
ಪ್ರಾಣಪಾಯದಿಂದ ಪಾರಾದ್ರೂ ಕಾಲನ್ನೇ ಕಳೆದುಕೊಂಡ ನಟ
ಊಟಿಗೆ ತೆರಳುತ್ತಿದ್ದ ಅವರಿಗೆ ನಂಜನಗೂಡಿನ ಬಳಿ ಲಾರಿ ಡಿಕ್ಕಿ ಆಗಿದೆ. ಹೌದು ಬೈಕ್ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಅಪಘಾತವಾಗಿದ್ದು ಸೂರಜ್ ಅವ್ರ ಬಲ ಕಾಲಿನ ಮೇಲೆ ಟಿಪ್ಪರ್ ಹರಿದಿದೆ. ಪರಿಣಾಮ ಸೂರಜ್(Actor Suraj) ಬಲಗಾಲಿಗೆ ಗಂಭೀರ ಗಾಯ ಆಗಿದ್ದ ಕಾರಣ ವೈದ್ಯರು ಮಂಡಿವರೆಗೂ ಬಲಗಾಲನ್ನು ಕತ್ತರಿಸಿ ತೆಗೆದಿದ್ದಾರೆ. ಸದ್ಯ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೂರಜ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಶನಿವಾರ ಅಂದ್ರೆ ನಿನ್ನೆ ಸಂಜೆ ನಾಲ್ಕು ಗಂಟೆ ಸುಮಾರಿಗೆ ಅಪಘಾತ ಸಂಭವಿಸುದ್ದು, ಅಪಘಾತದಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ರು, ಪರಿಣಾಮವಾಗಿ ಕಾಲು ಕತ್ತರಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಸದ್ಯದಲ್ಲೇ ಗಾಂಧಿನಗರಕ್ಕೆ ಎಂಟ್ರಿ ನೀಡಬೇಕು ಎಂದು ಸೂರಜ್ ಅವರು ಸಕಲ ಸಿದ್ಧತೆ ಮಾಡಿಕೊಂಡಿದ್ದರು. ‘ಭಗವಾನ್ ಶ್ರೀಕೃಷ್ಣ ಪರಮಾತ್ಮ’ ಸೇರಿದಂತೆ ಒಂದೆರಡು ಸಿನಿಮಾಗಳನ್ನು ಅವರು ಅನೌನ್ಸ್ ಮಾಡಿದ್ದರು. ಅಷ್ಟರಲ್ಲಾಗಲೇ ಅವರಿಗೆ ಈ ದುಸ್ಥಿತಿ ಎದುರಾಗಿದ್ದು, ಕಾಲು ಕಳೆದುಕೊಂಡಿರುವ ಅವ್ರ ಸ್ಥಿತಿ ಮಾತ್ರ ಶೋಚನಿಯ.
ಸದ್ಯ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೂರಜ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೂರಜ್ ಅವ್ರನ್ನ ನೋಡಲು ಈಗಾಗಲೇ ನಟ ಶಿವರಾಜ್ ಕುಮಾರ್ ನಿರ್ಮಾಪಕ ಚಿನ್ನೆಗೌಡ ಅವರು ಮೈಸೂರಿಗೆ ಹೋಗಿದ್ದಾರೆ ಅಂತ ಹೇಳಲಾಗ್ತಿದ್ದು, ಸದ್ಯಕ್ಕೆ ಸೂರಜ್ ಅವ್ರ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಅಂತ ಹೇಳಲಾಗ್ತಿದ್ದು, ಕಾಲಿಗೆ ಮಾತ್ರ ಗಂಭೀರ ಗಾಯವಾಗಿದ್ದರಿಂದ ಕಾಲನ್ನ ಮಾತ್ರ ಮಂಡಿಯವರೆಗೆ ಕತ್ತರಿಸಿ ತೆಗೆದಿರುವ ವೈದ್ಯರು ಸದ್ಯಕ್ಕೆ ಸೂರಜ್ ಅವ್ರ ಪ್ರಾಣಕ್ಕೆ ಅಪಾಯ ಬಾರದಂತೆ ಗಮನಕೊಟ್ಟಿದ್ದು, ಹೆಚ್ಚಿನ ಚಿಕಿತ್ಸೆಯನ್ನ ನೋಡಲು ಮುಂದಾಗಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಏನಾಗುತ್ತೋ ಗೊತ್ತಿಲ್ಲ, ಸದ್ಯಕ್ಕಂತು ಸೂರಜ್ ಅವ್ರು ಸೇಫ್ ಆಗಿದ್ದಾರೆ ಅಂತ ಹೇಳಲಾಗ್ತಿದೆ.
ಇದನ್ನೂ ಓದಿ: ಟೈಟಾನಿಕ್ ದುರಂತದ ಬಗ್ಗೆ ತಿಳಿಯಲು ಹೋಗಿ ಅಂತ್ಯವಾದ್ರು..ಟೈಟಾನಿಕ್ ದುರಂತವನ್ನ ನೆನಪಿಸುತ್ತೆ ಸಬ್ ಮೇರಿನ್ ದುರಂತ
ಇದನ್ನೂ ಓದಿ: ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆ! ಎಷ್ಟಿದೆ ನೋಡಿ ಇಂದಿನ ಚಿನ್ನ, ಬೆಳ್ಳಿಯ ದರ.
ಇದನ್ನೂ ಓದಿ: ಅಣ್ಣನನ್ನ ಕಳೆದುಕೊಂಡ ಭಾವುಕ ಪತ್ರ ಬರೆದ ಶ್ವೇತಾ ಚಂಗಪ್ಪ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram