Chitradurga: ಆತ ಅಪ್ಪಟ ಬ್ರಹ್ಮಚಾರಿ, ಒಂಟಿ ಸನ್ಯಾಸಿ, ಮನೆಯಲ್ಲಿ ಒಬ್ಬಂಟಿಯಾಗಿ ಯಾರನ್ನು ಮನೆಯೊಳಗೇ ಬಿಟ್ಟುಕೊಳ್ಳದೆ ಏಕಾಂಗಿ ಜೀವನ ನಡೆಸುತ್ತಿದ್ದ. ಒಂಟಿಯಾಗಿ ಬದುಕುತ್ತಿದ್ದ ಸನ್ಯಾಸಿಗೆ 70 ವರ್ಷ ವಯಸ್ಸು. ಇತ್ತೀಚಿಗೆ ಇವ್ರು ವಯೋಸಹಜವಾಗಿ ಮೃತಪಟ್ಟಿದ್ರು. ಇದರಲ್ಲಿ ಅಂತ ಅಚ್ಚರಿ ಏನಿಲ್ಲ ಆದ್ರೆ ಮೃತ ಈ ಸನ್ಯಾಸಿಯ ಮನೆಯಲ್ಲಿ ಲಕ್ಷ ಲಕ್ಷ ಕಂತೆ ಕಂತೆ ಹಣ ಸಿಕ್ಕಿದ್ದು, ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ಈ ಒಂದು ಘಟನೆ ನಡೆದಿದೆ. ಹೌದು ಬ್ರಹ್ಮಚಾರಿಯಾಗಿದ್ದ ಈ ಮೃತ ಗಂಗಾಧರಯ್ಯ, ಬೇರೆಯವರು ಮಾಡಿದ ಅಡುಗೆ ಸೇವಿಸುತ್ತಿರಲಿಲ್ಲ. ವಯಸ್ಸು 70 ಆಗಿದ್ದರೂ ಕೂಡ ತಾವೇ ಅಡುಗೆ ಮಾಡಿಕೊಳ್ಳುತ್ತಿದ್ದರು. ಸಾಲದಕ್ಕೆ ಯಾರನ್ನು ಕೂಡ ತನ್ನ ಮನೆ ಒಳಗೆ ಬಿಟ್ಟುಕೊಳ್ಳುತ್ತಿರಲಿಲ್ಲ. ಜೊತೆಗೆ ಚಪ್ಪಲಿ ಕೂಡ ಧರಿಸುತ್ತಿರಲಿಲ್ಲ ಅನ್ನೋದು ಮತ್ತೊಂದು ವಿಶೇಷ.
ಇನ್ನು ವಾರದ ಹಿಂದೆ ಮೃತಪಟ್ಟಿರುವ ಗಂಗಾಧರ ಶಾಸ್ತ್ರಿ ಒಂಟಿಯಾಗಿ ಬದುಕು ನಡೆಸುತ್ತಿದ್ದರು. ಶಾಸ್ತ್ರ ಹೇಳುವುದು, ಶುಭ ಕಾರ್ಯದ ಪೂಜೆ ಮಾಡಿಸೋದು ಈಗ ಹೇಗೋ ಜೀವನ ಸಾಗುಸುತ್ತಿದ್ದ ಗಂಗಾಧರ ಶಾಸ್ತ್ರಿಗೆ 16ಎಕರೆ ಜಮೀನಿದ್ದು 4ಎಕರೆ ತೆಂಗಿನ ತೋಟ, ಗದ್ದೆ ಹೊಂದಿದ್ದರು. ಹೇಗೋ ಪಾಲಿಗೆ ಬಂದದ್ದು ಪಂಚಾಮೃತ ಅಂತ ಭಾವಿಸಿ ಯಾರ ಸಹವಾಸಕ್ಕೂ ಹೋಗದೆ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಾ, ಎಲ್ಲರಿಂದಲೂ ಒಳ್ಳೆಯ ಮನುಷ್ಯ ಅನಿಸಿಕೊಂಡು ಇದ್ದಷ್ಟು ದಿನ ಬಹಳ ಸರಳವಾಗಿಯೇ ಬದುಕಿದ್ರು. ನೋಡಿದ ಯಾರಿಗೂ ಕೂಡ ಈತನ ಬಳಿ ಇಷ್ಟು ದುಡ್ಡಿತ್ತು ಅಂದ್ರೆ ನಂಬೋದಕ್ಕೆ ಅಸಾಧ್ಯ ಅನ್ನೋ ಥರ ಬದುಕಿದ್ದಂತಹ ವ್ಯಕ್ತ ಈಗ ಮೃತಪಟ್ಟಿದ್ದು, ಆತನ ಮನೆಯಲ್ಲಿ ಸಿಕ್ಕಿರೋ ಹಣದ ಬಗ್ಗೆ ಇದೀಗ ಬಿಸಿ ಬಿಸಿ ಚರ್ಚೆ ಶುರುವಾಗಿದೆ.
ಇದನ್ನೂ ಓದಿ: ಅಮ್ಮಮ್ಮ ಖ್ಯಾತಿಯ ಚಿತ್ಕಲ ಬಿರಾದಾರ್ ಮಗನ ಮದುವೆ ಸಂಭ್ರಮ; ಮತ್ತೆ ಒಟ್ಟಿಗೆ ಕಾಣಿಸಿಕೊಂಡ ಕನ್ನಡತಿ ಸೀರಿಯಲ್ ಕಲಾವಿದರು
ಸರಳವಾಗಿದ್ದ ವ್ಯಕ್ತಿಯ ಬಳಿ ಇಷ್ಟೊಂದು ದುಡ್ಡಿತ್ತ!?
ಇನ್ನು ಚಿತ್ರದುರ್ಗದ(Chitradurga) ಹೊಳಲ್ಕೆರೆ ಪಟ್ಟಣದ ಮದಕರಿ ಸರ್ಕಲ್ ಬಳಿಯ ಚಿಕ್ಕ ಮನೆಯೊಂದರಲ್ಲಿ ಒಂಟಿ ಜೀವನ ಸಾಗಿಸುತ್ತಿದ್ದ ಗಂಗಾಧರಯ್ಯ ಶಾಸ್ತ್ರಿ ಕಳೆದ ವಾರವಷ್ಟೇ ಮೃತಪಟ್ಟಿದ್ದರು. ಗಂಗಾಧರ ಶಾಸ್ತ್ರಿ ಮೃತಪಟ್ಟ ಹಿನ್ನೆಲೆ ಎರಡು ದಿನದ ಹಿಂದೆ ಮನೆಯಲ್ಲಿ ಏನಿರಬಹುದು ಅನ್ನೋ ಕುತೂಹಲದಲ್ಲಿ ಭಕ್ತರು ಶಾಸ್ತ್ರಿಗಳ ಮನೆ ಪರಿಶೀಲಿಸಿದ್ದಾರೆ. ಈ ವೇಳೆ ಮನೆಯಲ್ಲಿ ಲಕ್ಷಾಂತರ ಹಣವನ್ನು ಕೂಡಿಟ್ಟಿರುವುದು ಪತ್ತೆಯಾಗಿದೆ. 10 ರೂಪಾಯಿ, 20 ರೂಪಾಯಿ, 50 ರೂಪಾಯಿ, 100 ರೂಪಾಯಿ, 200ರೂಪಾಯಿ ಹಾಗೂ 500 ರೂಪಾಸಯಿ ಮುಖಬೆಲೆಯ ನೋಟುಗಳು ಸನ್ಯಾಸಿಯ ಮನೆಯಲ್ಲಿ ಸಿಕ್ಕಿದ್ದು, ಸುಮಾರು 46,000 ರೂ. ಮೌಲ್ಯದ ಒಂದು, ಎರಡು, ಐದು ರೂಪಾಯಿ ನಾಣ್ಯಗಳು ಸಿಕ್ಕಿವೆ.
ಇದರ ಜೊತೆಗೆ ಗಂಗಾಧರಯ್ಯ ಶಾಸ್ತ್ರಿ ಮನೆಯಲ್ಲಿ ತೆಂಗಿನಕಾಯಿ ರಾಶಿ ಕೆಳಗಡೆ ಹಾಗೂ ಅಟ್ಟದ ಮೇಲೆ ಹಣ ಪತ್ತೆಯಾಗಿದೆ. ಹೌದು ಕೃಷಿ ಹಾಗೂ ಮತ್ತಿತರೆ ಆದಾಯದಿಂದ ಬಂದ ಸುಮಾರು 30ಲಕ್ಷಕ್ಕೂ ಅಧಿಕ ಹಣವನ್ನ ಮನೆಯಲ್ಲಿ ವಿವಿಧ ಕಡೆ ಕೂಡಿಟ್ಟಿದ್ದರು. ಅಲ್ಲದೇ ಭಕ್ತರಿಂದ ಬಂದ ಕಾಣಿಕೆ ಹಣವೇ 46ಸಾವಿರ ರೂಪಾಯಿಯಷ್ಟಿದ್ದದ್ದು ವಿಶೇಷ ಯಾಕಂದ್ರೆ ಯಾರ ಬಳಿಯೂ ಇಷ್ಟೇ ಬೇಕು ಅಷ್ಟೆ ಬೇಕು ಅಂತ ಕೇಳ್ತೀರಲಿಲ್ಲವಂತೆ. ಕೊಟ್ಟಷ್ಟು ತೆಗೆದುಕೊಂಡು ಬರ್ತಿದ್ದರಂತೆ. ಹೀಗಾಗಿ ಈತನ ಬಳಿ ಇಷ್ಟು ಹಣ ಇತ್ತು ಅನ್ನೋದನ್ನ ಯಾರಿಗೂ ಕೂಡ ಅರಗಿಸಿಕೊಳ್ಳಲು ಆಗ್ತಾಯಿಲ್ಲ.
ಗಂಗಾಧರಯ್ಯ ಶಾಸ್ತ್ರಿ ಅವರಿಗೆ 4 ಎಕರೆ ತೆಂಗಿನ ತೋಟ, ಗದ್ದೆ ಇತ್ತು, ಜೊತೆಗೆ ಶಾಸ್ತ್ರ ಹೇಳುತ್ತಿದ್ದ ಗಂಗಾಧರಯ್ಯ ಗೃಹಪ್ರವೇಶ ಸೇರಿ ಶುಭಕಾರ್ಯ ಮಾಡಿಸುತ್ತಿದ್ದರು. ಸರಳ ಜೀವನ ನಡೆಸುತ್ತಿದ್ದರು. ಇನ್ನು ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಗಂಗಾಧರಯ್ಯ ಅವ್ರನ್ನ ಆಸ್ಪತ್ರೆಗೆ ಹೋಗೋಣವೆಂದರೂ ಅವ್ರೆ ಒಪ್ಪಿರಲಿಲ್ಲವಂತೆ, ಕೊನೆಗೆ ದೇವಸ್ಥಾನಕ್ಕೆ ಹೋಗಿ ಅಲ್ಲಿಯೇ ಮೃತಾಪಟ್ಟಿದ್ದಾರಂತೆ. ಇನ್ನು ಗಂಗಾಧರಯ್ಯ ಅವರು ತೆಂಗಿನ ತೋಟದಿಂದ ಬಂದ ಆದಾಯ ಹಾಗೂ ಭಕ್ತರು ನೀಡಿದ ಕಾಣಿಕೆಯನ್ನು ಹಲವು ವರ್ಷಗಳಿಂದ ಮನೆಯಲ್ಲಿಯೇ ಸಂಗ್ರಹಿಸಿಟ್ಟಿದ್ದರು ಅಂತ ಹೇಳಲಾಗಿದೆ. ಅಲ್ಲದೇ ಅವರಿಗೆ ವಾರಸುದಾರರಿಲ್ಲದ ಕಾರಣ, ಮುಂದಿನ ಶುಕ್ರವಾರ ಭಕ್ತರು ಸಭೆ ಕರೆದಿದ್ದು, ಆಸ್ತಿಯ ದಾಖಲೆಗಳನ್ನು ಪರಿಶೀಲಿಸಲು ತೀರ್ಮಾನಿಸಿದ್ದಾರೆ. ಜೊತೆಗೆ ಗಂಗಾಧರಯ್ಯ ಅವರ ಜಮೀನಿನಲ್ಲಿ ಅವ್ರ ಗದ್ದುಗೆ ನಿರ್ಮಿಸಿ ಭಕ್ತರ ಪೂಜೆಗೆ ಅವಕಾಶ ಕಲ್ಪಿಸಲು ನಿರ್ಧರಿಸಿದ್ದು, ಉಳಿದ ಹಣವನ್ನು ಟ್ರಸ್ಟ್ ರಚಿಸಿ ಸಮಾಜಸೇವೆಗೆ ಬಳಸಲು ಭಕ್ತರು ಮುಂದಾಗಿದ್ದಾರೆ. ಇನ್ನು ಗಂಗಾಧರಯ್ಯ ಶಾಸ್ತ್ರಿಗಳ ಸಾವಿನ ಬಳಿಕ ಭಕ್ತರ ಸಮ್ಮುಖದಲ್ಲಿ ಮನೆಯಲ್ಲಿದ್ದ ಹಣವನ್ನು ಎಣಿಕೆ ಮಾಡಲಾಗಿದೆ. ಅಲ್ಲಿದ್ದ ಹಣವನ್ನು ಬ್ಯಾಂಕ್ನಲ್ಲಿ ಠೇವಣಿ ಇಡಲಾಗಿದೆ. ಇದಲ್ಲದೆ ಕೆಲವರಿಗೆ ಗಂಗಾಧರಯ್ಯ ಶಾಸ್ತ್ರಿಗಳು ಸಾಲವನ್ನು ಕೂಡ ನೀಡಿದ್ದರು ಎಂದು ತಿಳಿದುಬಂದಿದೆ. ಸದ್ಯ ಜುಲೈ 7ಕ್ಕೆ ಭಕ್ತರ ಸಭೆ ಕರೆದು ಸಮಿತಿ ರಚನೆಗೆ ಸ್ಥಳೀಯರ ನಿರ್ಧಾರ ಮಾಡಿದ್ದು.ಅಂದೇ ಎಲ್ಲ ಪ್ರಶ್ನೆಗೂ ಉತ್ತರ ಸಿಗಲಿದೆ.
ಇದನ್ನೂ ಓದಿ: ಇಬ್ಬರು ಹೆಣ್ಣುಮಕ್ಕಳ ಮದುವೆಗೆ ಓಡಾಡಿ ತಯಾರಿ ಮಾಡಿದ್ದ ಅಪ್ಪ ಆದರೆ ಮದುವೆ ಒಂದು ದಿನ ಮುಂಚೆ ಅಪಘಾತದಲ್ಲಿ ಸಾವು!
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram