Suraj accident: ಡಾ. ರಾಜ್ಕುಮಾರ್ ಅವರ ಕುಟುಂಬಕ್ಕೆ ಆಘಾತ ತರುವಂತಹ ಘಟನೆ ಮೊನ್ನೆ ನಡೆದಿತ್ತು, ಹೌದು ಪಾರ್ವತಮ್ಮ ರಾಜ್ಕುಮಾರ್ ಅವರ ತಮ್ಮನ ಪುತ್ರ ಸೂರಜ್ ಅವ್ರಿಗೆ ಗಂಭೀರ ಅಪಘಾತವಾಗಿ ಕಾಲು ತೆಗೆದಿರುವಂತ ಸುದ್ದಿ ಬಂದಿತ್ತು. ಊಟಿಗೆ ತೆರಳುತ್ತಿದ್ದ ಸೂರಜ್ ಗೆ ನಂಜನಗೂಡಿನ ಬಳಿ ಲಾರಿ ಡಿಕ್ಕಿ ಆಗಿತ್ತು. ಕಳೆದ ಶನಿವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸೂರಜ್ ಗಂಭೀರವಾಗಿ ಗಾಯಗೊಂಡಿದ್ದರು, ಅಲ್ಲದೇ ಅವರ ಕಾಲಿಗೆ ತೀವ್ರವಾಗಿ ಪೆಟ್ಟಾಗಿತ್ತು, ಪರಿಣಾಮವಾಗಿ ಕಾಲು ಕತ್ತರಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಹೌದು ಗಾಂಧಿನಗರಕ್ಕೆ ಎಂಟ್ರಿ ನೀಡಬೇಕು ಎಂದು ಸೂರಜ್ ಅವರು ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಭಗವಾನ್ ಶ್ರೀಕೃಷ್ಣ ಪರಮಾತ್ಮ ಸೇರಿದಂತೆ ಒಂದೆರಡು ಸಿನಿಮಾಗಳನ್ನು ಅನೌನ್ಸ್ ಮಾಡಿದ್ದರು, ಆದ್ರೆ ಅಷ್ಟರಲ್ಲಾಗಲೇ ಅವರಿಗೆ ಅಘಾತವಾಗಿ ಕಾಲು ತೆಗೆಯಲಾಗಿತ್ತು, ಆದ್ರೆ ಇದೀಗ ಸೂರಜ್ ಅವ್ರಿಗೆ ಚಿಕಿತ್ಸೆ ನೀಡುತ್ತಿರುವ ಡಾಕ್ಟರ್ ಸೂರಜ್ ಅವ್ರ ಅರೋಗ್ಯ ಸ್ಥಿತಿಯ ಬಗ್ಗೆ ಮಾತಾನಾಡಿದ್ದು, ಸೂರಜ್ ಅವ್ರಿಗೆ ಅವ್ರ ಕಾಲು ತೆಗೆದಿರುವ ವಿಷಯವನ್ನ 4ದಿನಗಳ ಬಳಿಕವಷ್ಟೇ ತಿಳಿಸಲಾಗಿದ್ಯಂತೆ ಅಲ್ಲಿಯವರೆಗೂ ಸೂರಜ್ ಅವ್ರಿಗೆ ತಮ್ಮ ಕಾಲು ತೆಗೆದಿರುವ ವಿಚಾರವೇ ಗೊತ್ತಿರಲಿಲ್ವಂತೆ.
ಇದನ್ನೂ ಓದಿ: ಇಬ್ಬರು ಹೆಣ್ಣುಮಕ್ಕಳ ಮದುವೆಗೆ ಓಡಾಡಿ ತಯಾರಿ ಮಾಡಿದ್ದ ಅಪ್ಪ ಆದರೆ ಮದುವೆ ಒಂದು ದಿನ ಮುಂಚೆ ಅಪಘಾತದಲ್ಲಿ ಸಾವು!
ಕಾಲು ಕತ್ತರಿಸಿದರ ಬಗ್ಗೆ ಡಾಕ್ಟರ್ ಅದರ ಬಗ್ಗೆ ಹೇಳಿದ್ದಿಷ್ಟು!
ಹೌದು ನಿರ್ಮಾಪಕ ಎಸ್. ಎ ಶ್ರೀನಿವಾಸ್ ಪುತ್ರ ಹಾಗೂ ನಟ ಧ್ರುವನ್ ಅಲಿಯಾಸ್ ಸೂರಜ್ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಇನ್ನು ಬಲಗಾಲಿಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಕಾಲು ಕತ್ತರಿಸುವುದು ವೈದ್ಯರಿಗೆ ಅನಿವಾರ್ಯವಾಗಿತ್ತು. ಹೀಗಾಗಿ ಮೊಣಕಾಲಿನ ಕೆಲಭಾಗದಿಂದ ಅವ್ರ ಕಾಲನ್ನ ಕತ್ತರಿಸಿ ತೆಗೆಯಲಾಗಿದ್ದು, ಚಿಕಿತ್ಸೆ ಮುಂದುವರೆಸಿದ್ದಾರೆ. ಇನ್ನು ಸೂರಜ್ ಅವ್ರಿಗೆ ನೀಡುತ್ತಿರುವ ಚಿಕಿತ್ಸೆ ಹಾಗೂ ಅವ್ರ ಆರೋಗ್ಯದ ಕುರಿತು ಮೊದಲ ಬಾರಿಗೆ ಮಣಿಪಾಲ್ ಆಸ್ಪತ್ರೆಯ ವೈದ್ಯ ಅಜಯ್ ಹೆಗಡೆ ಮಾತನಾಡಿದ್ದಾರೆ. ಮೊದಲಿಗೆ ಸೂರಜ್ ಅವರನ್ನು ಆಸ್ಪತ್ರೆಗೆ ಸೇರಿಸಿದಾಗ ಬಲಗಾಲಿನಲ್ಲಿ ತೀವ್ರ ರಕ್ತಸ್ರಾವ ಆಗಿತ್ತು. ಬಲ ಮೊಣಕಾಲಿಗೆ ಸಾಕಷ್ಟು ಏಟು ಬಿದ್ದಿರುವುದರಿಂದ ಕತ್ತರಿಸಿ ತೆಗೆಯುವುದು ಅನಿವಾರ್ಯವಾಗಿತ್ತು. ಅಲ್ಲದೇ ಅವ್ರಿಗೆ ಅಪಘಾತವಾದ ದಿನ ಅವರನ್ನು ವೆಂಟಿಲೇಟರ್ ನಲ್ಲೇ ಇಟ್ಟು ಚಿಕಿತ್ಸೆ ನೀಡಲಾಯಿತು. ಇನ್ನು ಕಾಲಿನಲ್ಲಿ 6 ಇಂಚಿನಷ್ಟು ಜಾಗದಲ್ಲಿ ಮೂಳೆ ಹಾಗೂ ನರಗಳೇ ಇರಲಿಲ್ಲ. ಜಜ್ಜಿ ಹೋಗಿದ್ದವು. ಹೀಗಾಗಿ ಕಾಲಿನ ಭಾಗ ಕತ್ತರಿಸಿ ತೆಗೆದಿದ್ದನ್ನು ನಾಲ್ಕು ದಿನಗಳ ಬಳಿಕ ಅವರಿಗೆ ಹೇಳಲಾಯಿತು ಅಂತ ಡಾ. ಅಜಯ್ ಹೆಗಡೆ ತಿಳಿಸಿದ್ದಾರೆ.
ಇನ್ನು ನಟ ಸೂರಜ್ ತಮ್ಮ ಬುಲೆಟ್ ನಲ್ಲಿ ಊಟಿಗೆ ಪ್ರವಾಸಕ್ಕೆ ಹೋಗುತ್ತಿದ್ದರು. ಆಗ ಮಾರ್ಗಮಧ್ಯೆ ಟ್ರ್ಯಾಕ್ಟರ್ ಅನ್ನು ಹಿಂದಿಕ್ಕಿ ಹೋಗುತ್ತಿದ್ದಾಗ ಮುಂದಿನಿಂದ ಬಂದ ಟಿಪ್ಪರ್ ಸೂರಜ್ ಮೇಲೆ ಹರಿದಿದೆ ಅಂತ ಹೇಳಾಲಾಗಿತ್ತು. ಚಾಮರಾಜನಗರ ಬೇಗೂರು ಸಮೀಪದ ಹಿರಿಕಾಟಿ ಗೇಟ್ ಬಳಿ ಈ ಘಟನೆ ನಡೆದಿದ್ದು, ಸೂರಜ್ ತೀವ್ರವಾಗಿ ಗಾಯಗೊಂಡಿದ್ದರು, ಹೀಗಾಗಿ ಒಟ್ಟು ನಾಲ್ಕರಿಂದ ಐದು ತಾಸುಗಳ ಕಾಲ ಸೂರಜ್ ಕಾಲಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಇನ್ನೂ ಕೆಲವು ತಿಂಗಳ ಕಾಲ ಚಿಕಿತ್ಸೆಯ ಅಗತ್ಯವಿದೆ. ಪ್ರಸ್ತುತ ಹಿಮೋಗ್ಲೋಬಿಕ್ ಕೊರತೆಯಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ. ಇದರ ಜೊತೆಗೆ ಕೈಗೆ ಸಣ್ಣಪುಟ್ಟ ಗಾಯವಾಗಿದ್ದು ಅದು ಅಷ್ಟು ಗಂಭೀರವೇನಲ್ಲ ಆದ್ರೂ ಅವ್ರಿಗೆ ಇನ್ನು ಸ್ವಲ್ಪ ದಿನದವರೆಗೂ ಚಿಕಿತ್ಸೆಯ ಅಗತ್ಯವಿದೆ ಅಂದ ಹೇಳಿರೋ ವೈದ್ಯರು ಚಿಕಿತ್ಸೆಯನ್ನ ಮುಂದುವರೆಸಿದ್ದಾರೆ. ಸದ್ಯ ಸೂರಜ್ ಚಿಕಿತ್ಸೆಗೆ ಹಾಗೂ ವಾಸ್ತವಂಶಕ್ಕೆ ಹೊಂದುಕೊಂಡು ಹೋಗ್ತಿದ್ದಾರೆ ಎಲ್ಲವನ್ನ ಬಹಳ ಸಮಾಧಾನವಾಗಿಯೇ ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಸದ್ಯಕ್ಕೆ ಯಾವುದೇ ಸಮಸ್ಯೆಗಳಿಲ್ಲ ಅಂತ ಸ್ಪಷ್ಟ ಪಡಿಸಿದ್ದಾರೆ.
ಇದನ್ನೂ ಓದಿ: ಬ್ರಹ್ಮಚಾರಿ ಸನ್ಯಾಸಿ ಮನೆಯಲ್ಲಿ ಸಿಕ್ತು ಲಕ್ಷ ಲಕ್ಷ, ಸಾವನ್ನಪ್ಪಿದ ಸನ್ಯಾಸಿ ಬಳಿ ಅಷ್ಟು ದುಡ್ಡು ಬಂದಿದ್ದು ಹೇಗೆ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram