35 ವರ್ಷಗಳ ಬಳಿಕ ಹಳೆ ಪ್ರೇಮಿಗಳ ಭೇಟಿ! ಹರಟೆ, ಮಾತುಕತೆ, ಭಾವುಕತೆ ಜೊತೆಗೆ ಆಗಿದ್ದೇನು ಗೊತ್ತಾ?

ಪ್ರೀತಿ ಮಾಯೆ ಹುಷಾರು ಬಂಡಲ್ ಮಾರೋ ಬಜಾರು ಅಂತ ಹೇಳ್ತಾರೆ ಆದ್ರೆ ಕೆಲವೊಬ್ಬರ ಪ್ರೀತಿ ಬಹಳ ನಿಷ್ಕಲ್ಮಶ ಮತ್ತು ನಿರಂತರವಾಗಿರುತ್ತೆ ಅವ್ರು ಒಟ್ಟಿಗಿರಲಿ, ಇಲ್ಲದಿರಲಿ, ದೂರ ಹೋಗ್ಲಿ ಹೇಗೆ ಇದ್ರೂ ಸಹ ಕೆಲವರ ಪ್ರೀತಿ ಮಾತ್ರ ಕಡಿಮೆಯಾಗಲ್ಲ. ಅದ್ರಲ್ಲೂ ಇಂತಹ ಕಾಲಘಟ್ಟದಲ್ಲಿ ಇಂತಹ ಪ್ರೀತಿ ಸಿಗೋದು ಅದನ್ನ ಉಳಿಸಿಕೊಳ್ಳೋದು ಅಷ್ಟು ಸುಲಭಕ್ಕಲ್ಲಾ ಬಿಡಿ. ಇತ್ತೀಚಿನ ದಿನಗಳಲ್ಲಿ ನಿಜವಾದ ಪ್ರೇಮಿಗಳು ಕಾಣ ಸಿಗೋದೇ ಕಡಿಮೆ, ಕೆಲವರು ಶೋಕಿಗಾಗಿ, ಇನ್ನು ಕೆಲವರು ಕಾಲಹರಣಕ್ಕಾಗಿ ಪ್ರೀತಿ ಮಾಡಿ ಸಮಯ ಬಂದಾಗ ಟಾಟಾ ಬೈ ಬೈ ಹೇಳಿ ಹೋಗೋರೆ ಹೆಚ್ಚು, ಇಲ್ವೇ ಕ್ಷಣಿಕ ದೈಹಿಕ ಸುಖದ ಹಿಂದೆ ಬಿದ್ದು ಮನಸ್ಸಿನ ಪ್ರೀತಿಗೆ ಚೂರಿ ಹಾಕಿ ಹೊರಟು ಹೋಗೋರು ಇದ್ದಾರೆ. ಆದ್ರೆ ಇಂತವರ ಮಧ್ಯೆ ಬರೋಬ್ಬರಿ 35 ವರ್ಷ ಆಗಿದೆ ಈ ಪ್ರೇಮಿಗಳು ದೂರವಾಗಿ ಆದರೂ ಕೂಡ ಇನ್ನು ಮದುವೆಯಾಗಿಲ್ಲ.

WhatsApp Group Join Now
Telegram Group Join Now

ಇಬ್ಬರು ಕೂಡ ಒಬ್ಬರಿಗೊಬ್ಬರ ನೆನಪು ಮಾಡಿಕೊಂಡೆ ಒಂಟಿ ಜೀವನ ಸಾಗಿಸಿದ್ದಾರೆ. ಅದಾದ ನಂತರ ಆ ಹಳೆ ಪ್ರೇಮಿಗಳಿಗೆ ಆಚಾನಕ್ ಆಗಿ ಭೇಟಿ ಆಗಿ ಕೆಲ ಕಾಲ ಮಾತಾನಾಡಿದ್ದು ಆ ವಿಡಿಯೋ ಸಖತ್ ವೈರಲ್ ಆಗ್ತಿದೆ. ಹೌದು ಇಬ್ಬರು ಕೂಡ ಕುಶಲೋಪರಿ ವಿಚಾರಿಸಿಕೊಂಡು ಕೆಲ ಕಾಲ ಭಾವುಕರಾಗಿ, ಹಳೆಯ ನೆನಪುಗಳನ್ನ ಮೆಲಕು ಹಾಕುತ್ತಲೆ ಕಾಲ ಕಳೆದಿದ್ದರೆ. ಇದೀಗ ಇವರಿಬ್ಬರ ಸಂಭಾಷಣೆಯ ವಿಡಿಯೋ ಸಖತ್ ಟ್ರೆಂಡ್ ಆಗ್ತಿದ್ದು, ವಿಡಿಯೋ ನೋಡಿದವರು ವಾವ್ ಈಗಲೂ ಇಂತ ಪ್ರೇಮಿಗಳು ಇರ್ತಾರ ಗುರು ಅಂತಿದ್ದಾರೆ. ಹೌದು ಇಬ್ಬರು ದೂರವಾಗಿ 35ವರ್ಷವಾಗಿದ್ರು ಅದೇ ಮಾತು ಅದೇ ನಗು ಅದೇ ಪ್ರೀತಿ ಎಲ್ಲವು ಆಗೇ ಇದೆ ಆದರೆ ವಯಸ್ಸನ್ನ ಒಂದು ಬಿಟ್ಟು, ಆದ್ರೂ ಕೂಡ ದೇಹಕ್ಕೆ ವಯಸ್ಸಾಗಿರಬಹುದು ಆದ್ರೆ ಪ್ರೀತಿಗಲ್ಲ ಅನ್ನೋ ಥರ ಇಬ್ಬರು ಬಹಳಷ್ಟು ಹೊತ್ತು ಒಬ್ಬರಿಗೊಬ್ಬರು ವಿಷಯಗಳನ್ನ ವಿನಿಮಯ ಮಾಡಿಕೊಂಡು ಕಾಲ ಕಳೆದಿದ್ದಾರೆ.

ಹೌದು ಈಗ ಜಗತ್ತು ಹೇಗಿದೆ ಅಂದ್ರೆ ಪ್ರೀತಿಸಿದವರನ್ನ ಮದುವೆ ಆಗ್ತಾರೆ ಅಂತ ಹೇಳೋಕಾಗಲ್ಲ, ಎಷ್ಟೋ ಸಲ ಹಸೆಮಣೆ ವರೆಗೂ ಬಂದ ಮದುವೆ ತಾಳಿ ಕಟ್ಟುವ ಸಂದರ್ಭದಲ್ಲಿ ನಿಂತು ಹೋಗಬಹುದು, ಇಲ್ವೋ ಪ್ರೀತಿ ಮಾಡಿದವರು ಮೋಸ ಮಾಡಬಹುದು ಇಲ್ವೇ ಮೋಸ ಹೋಗಬಹುದು, ಅದು ಇಲ್ಲ ಅಂದ್ರೆ ಪೋಷಕರ ಬಲವಂತಕ್ಕೆ ಒಪ್ಪಿ ಪ್ರೀತಿಗೆ ಗುಡ್ ಬೈ ಹೇಳಿ ಮತ್ತೆ ಬೇರೆ ಮದುವೆ ಆಗೋರು ಇದ್ದಾರೆ, ಇದ್ಯಾವುದು ಬೇಡ ನನ್ನ ಪ್ರೀತಿ ನಂಗೆ ಸಿಗ್ಲೇ ಇಲ್ಲ ಪ್ರಾಣ ಕಳೆದುಕೊಂಡಿರೋರು ಸಾಕಷ್ಟು ಜನ ಇದ್ದಾರೆ. ಒಟ್ಟಿನಲ್ಲಿ ಎಲ್ಲ ವರ್ಗದ ಜನರನ್ನ ನಾವು ನೋಡಿದ್ದೇವೆ ಅವ್ರ ಬಗ್ಗೆ ಕೇಳಿದ್ದೆವೆ. ಆದ್ರೆ ಇವತ್ತು ನಾವು ನಿಮಗೆ ತಿಳಿಸ್ತೀರೋ ಈ ಜೋಡಿ ವಿಭಿನ್ನ.

ಇದನ್ನೂ ಓದಿ: ಎಲ್ಲರ ಎದುರು ಡಬಲ್ ಮರ್ಡರ್ ಮಾಡಿದ ಟಿಕ್ ಟಾಕ್ ಸ್ಟಾರ್! ಕಚೇರಿಯಲ್ಲೇ ಇಬ್ಬರ ಪ್ರಾಣ ತೆಗೆದ ವಿಚಿತ್ರ ಕೀಚಕ

35ವರ್ಷಗಳಾದ್ರು ಯಾರನ್ನು ಮದುವೆಯಾಗದ ಪ್ರೇಮಿಗಳು!

ಹೌದು ವೈರಲ್ ಆಗಿರೋ ಈ ವಿಡಿಯೋದಲ್ಲಿರೋ ಜೋಡಿ ಶಾಲಾ ದಿನಗಳಲ್ಲೇ ಒಬ್ಬರಿಗೊಬ್ಬರು ಮನಸಾರೆ ಪ್ರೀತಿ ಮಾಡ್ತಿರ್ತಾರೆ. ಆದ್ರೆ ಅದೇನಾಯ್ತೋ ಏನೋ ಗೊತ್ತಿಲ್ಲ ನಂತರದಲ್ಲಿ ಈ ಜೋಡಿ ದೂರವಾಗಿಬಿಡ್ತಾರೆ. ಆದ್ರೆ ಈ ಜೋಡಿ ದೂರವಾಗಲೂ ಕಾರಣ ಏನು ಅನ್ನೋದು ಮಾತ್ರ ಗೊತ್ತಿಲ್ಲ ಆದ್ರೆ ಇವರಿಬ್ಬರು ಬೇರೆ ಬೇರೆ ಆಗ್ತಾರೆ. ಅದಾದ ನಂತರ ಇಬ್ಬರು ಕೂಡ ಬೇರೊಬ್ಬರನ್ನ ಮದುವೆಯಾಗುವ ಅವಕಾಶಗಳು ಸಾಮಾನ್ಯವಾಗಿ ಇರುತ್ತೆ ಆದ್ರೆ ಈ ಜೋಡಿಗಳು ಆಗೇ ಮಾಡಿಲ್ಲ ಇಬ್ಬರು ಕೂಡ ಯಾರನ್ನು ಕೂಡ ಮದುವೆಯಾಗಿಲ್ಲ ಒಬ್ಬಂಟಿಯಾಗಿಯೇ 35ವರ್ಷಗಳನ್ನ ಕಳೆದಿದ್ದರೆ ಹೆಚ್ಚು ಕಡಿಮೆ ಇಬ್ಬರಿಗೂ 55-60 ವರ್ಷ ಇರಬಹುದು. ಆದರೂ ಕೂಡ ಇಬ್ಬರು ಬೇರೊಬ್ಬರ ಸಹಕಾರ ಅಥವಾ ಪ್ರೀತಿಯಲ್ಲಿ ಇಲ್ಲ.ಈಗಲೂ ಒಂಟಿಯಾಗಿಯೇ ಇದ್ದಾರೆ. ಆದ್ರೆ ಜೀವನದಲ್ಲಿ ಇವ್ರು ಸೋತಿಲ್ಲ ತಮ್ಮ ಗುರಿ ಏನಿತ್ತೋ ಅದನ್ನ ಸಾಧಿಸುವತ್ತ ಚಿತ್ತ ಇಟ್ಟುಕೊಂಡು ಇಬ್ಬರು ಕೂಡ ಉದ್ಯೋಗದಲ್ಲಿ ಬೆಳೆದಿದ್ದು, ಉನ್ನತ ಮಟ್ಟದಲ್ಲಿಯೇ ಇದ್ದಾರೆ. ಆದ್ರೆ ಸಂಸಾರಿಕ ಜೀವನದಿಂದ ಇಬ್ಬರು ಕೂಡ ದೂರ ಉಳಿದುಕೊಂಡಿರೋದು ತುಂಬಾ ವಿಶೇಷ ಅಂತ ಹೇಳಬಹುದು. ಹೀಗೆ ಒಂಟಿಯಾಗಿ ಜೀವನ ಸಾಗಿಸಿರೋ ಈ ಜೋಡಿ ಬರೋಬ್ಬರಿ 35ವರ್ಷಗಳ ನಂತರ ಭೇಟಿಯಾಗಿದ್ದಾರೆ. ನಿಜಕ್ಕೂ ಆ ಕ್ಷಣ ಹೇಗಿರುತ್ತೆ ಅಲ್ವಾ.

ಹೌದು 35 ವರ್ಷದ ನಂತರ ಇಬ್ರು ಭೇಟಿಯಾಗಿದ್ದಾರೆ. ಯಾವುದೊ ಉದ್ಯಾನವನದಲ್ಲಿ ಇಬ್ಬರು ಜೊತೆಗೆ ಕುಳಿತು ಮಾತನಾಡಲು ಶುರು ಮಾಡ್ತಾರೆ.. ಮೊದಲಿಗೆ ಉಭಯ ಕುಶಲೋಪರಿ ವಿಚಾರಿಸಿ ಮಾತು ಆರಂಭಿಸುತ್ತಾರೆ.. ಹೇಗಿದ್ದೀಯ, ಚೆನ್ನಾಗಿದ್ದೀನಿ ನೀನು ಹೇಗಿದ್ದೀಯ ಅಂತ ಶುರುವಾದ ಮಾತು ಶಾಲಾ ದಿನಗಳು ತಾವು ಪ್ರೀತಿಯಲ್ಲಿ ಬಿದ್ದಿದ್ದ ದಿನಗಳು ಎಲ್ಲವನ್ನ ಕೂಡ ನೆನಪಿಸಿಕೊಂಡು ಮಾತನಾಡುತ್ತಾ ಇಬ್ಬರು ಕೂಡ ಭಾವುಕರಾಗುತ್ತಾರೆ. ನಂತರ ಮಾತು ಮುಗಿಯಲ್ಲ ಮುಂದುವರೆಯುತ್ತೆ ಪ್ರೇಯಸಿಯೇ ಕೇಳ್ತಾರೆ ನಿಂಗೆ ಎಷ್ಟು ಜನ ಮಕ್ಕಳು ನಿಮ್ಮ ಫ್ಯಾಮಿಲಿ ಫೋಟೊ ತೋರಿಸು ಅಂತ ಜೇಬಲ್ಲಿರೋ ಮೊಬೈಲ್ ತೆಗೆದುಕೊಳ್ಳೋಕೆ ಪ್ರಯತ್ನ ಪಡ್ತಾರೆ ಆಗ ಪ್ರಿಯಕರ ಇಲ್ಲ ಅದು ನನ್ನ ವೈಯಕ್ತಿಕ ವಿಷಯ ಆಗೆಲ್ಲ ತೋರಿಸೋಕೆ ಆಗಲ್ಲ ನನ್ನ ಹೆಂಡತಿ ನನ್ನ ಹೃದಯದಲ್ಲಿ ಬಂಧಿ ಆಗಿದ್ದಾಳೆ ಆಗೆಲ್ಲ ತೋರ್ಸೋಕಾಗಲ್ಲ ಅಂದಾಗ ನಾನು ನಿನ್ನ ಗೆಳತಿ ಅಲ್ವಾ ತೋರ್ಸು ಅಂತ ಹೇಳ್ದಾಗಲೂ ಕೂಡ ಆ ವ್ಯಕ್ತಿ ಸುಮ್ಮನಾಗಿಬಿಡ್ತಾನೆ ನಮ್ಮ ಕಂಪನಿಯಲ್ಲಿ ಒಂದು 3-4 ಹುಡುಗರಿಗೆ ಕೆಲಸ ಕೊಟ್ಟಿದೀನಿ ಅವ್ರೆ ನನ್ನ ಮಕ್ಕಳು ಅಂದಾಗ ಪ್ರೇಯಸಿ ಹೇಳ್ತಾರೆ ನಾನು ಮದುವೆ ಆಗಿದೀನಿ ಅಂತ ನಿಂಗೆ ಅನ್ಸುತ್ತಾ ಅಂತ ಕೇಳ್ದಾಗ ನೀನು ಚೆನ್ನಾಗಿದ್ಯಾ, ಚೆನ್ನಾಗಿದ್ದೀನಿ ಅಂತ ಹೇಳಿದ್ಯಾ ನೀನು ಸುಖವಾಗಿರ್ತ್ಯ ಬಿಡು ಅಂತ ಹೇಳ್ತಾರೆ ಆಗ ಗೊತ್ತಾಗುತ್ತೆ ಇಬ್ಬರು ಕೂಡ ಇನ್ನು ಮದುವೆಯಾಗದೆ ಒಬ್ಬರ ನೆನಪಿನಲ್ಲಿ ಮತ್ತೊಬ್ಬರು ಜೀವನ ಕಳೆಯುತ್ತಿದ್ದಾರೆ ಅಂತ. ಒಟ್ಟಿನಲ್ಲಿ ಇವ್ರ ಪ್ರೀತಿ ದಿ ಗ್ರೇಟ್ ಅಲ್ವಾ??

 

ಇದನ್ನೂ ಓದಿ: ಹೊಸ ಉದ್ಯಮ ಶುರು ಮಾಡಿದ ನಟ ಉಪೇಂದ್ರ; ಫಾರ್ಮ್ ಹೌಸ್ ನ್ನ ಬಾಡಿಗೆಗೆ ನೀಡಲು ಮುಂದಾದ ನಟ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram