ರಾಜ್ಯ ಸರ್ಕಾರ ರಚನೆಯ ನಂತರ ಬಹಳಷ್ಟು ಮಹಿಳೆಯರು ತುಂಬಾ ಕಾತುರದಿಂದ ಕಾಯುತ್ತಿದ್ದ ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಜುಲೈ 19ರಿಂದ ಆರಂಭವಾಗಿದ್ದು, ಬೆಂಗಳೂರಿನಲ್ಲಿರುವ ಬೆಂಗಳೂರು ಒನ್ ಕಚೇರಿ, ಬಿಬಿಎಂಪಿ ಕಚೇರಿಗಳಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಇನ್ನುಳಿದ ಜಿಲ್ಲೆಗಳಲ್ಲಿ ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಸೇವಾ ಸಿಂಧು ಪೋರ್ಟಲ್ ಮೂಲಕವೂ ಅರ್ಜಿ ಸಲ್ಲಿಸಬಹುದು. ಆನ್ ಲೈನ್ ಸೇವೆಗಳಲ್ಲಿದ್ದ ಕಡೆಗಳಲ್ಲಿ ಸರ್ಕಾರದಿಂದ ನೇಮಿಸಲ್ಪಡುವ ಸ್ವಯಂ ಸೇವಕರೇ ಬಂದು ಅರ್ಜಿಗಳನ್ನು ಸ್ವೀಕರಿಸುತ್ತಾರೆ ಅಂತ ಮಹಿಳಾ ಮತ್ತು ಕುಟುಂಬ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದರು.
ಅಲ್ದೇ ಮನೆಯ ಯಜಮಾನಿಯ ಫೋನ್ ನಂಬರ್ ನಿಂದ ತಮ್ಮ ರೇಷನ್ ಕಾರ್ಡ್ ನಂಬರ್, ಆಧಾರ್ ಕಾರ್ಡ್ ನಂಬರ್ ಅನ್ನ ಮೆಸಜ್ ಮಾಡಿದ್ರೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ದಿನ ಸ್ಥಳ ಹಾಗೂ ಸಮಯವನ್ನ ನಿಗದಿ ಮಾಡುತ್ತಾರೆ ಆ ನಂತರ ಅರ್ಜಿಯನ್ನ ಸಲ್ಲಿಸಬಹುದು ಅಂತ ಹೇಳಲಾಗಿತ್ತು. ಆದ್ರೆ ಕೇವಲ 2ದಿನಗಳಲ್ಲಿ ಸರ್ವರ್ ಸಮಸ್ಯೆ ಸೇರಿದಂತೆ ಮೆಸೇಜ್ ಗಳು ಬರ್ತಿಲ್ಲ ಅಂತ ಸೇವಾ ಕೇಂದ್ರಗಳ ಮುಂದೆ ಜನ ಸಾಲುಗಟ್ಟಿ ನಿಂತಿದ್ರು. ಸದ್ಯ ಇದೀಗ ಮನೆಯೊಡತಿ ಗೃಹಲಕ್ಷ್ಮಿಯವರಿಗೆ ಮತ್ತೊಂದು ಗುಡ್ ನ್ಯೂಸ್ ಬಂದಿದ್ದು. ಗೃಹಜ್ಯೋತಿಯಂತೆ ಮನೆಯಲ್ಲಿಯೇ ಕುಳಿತು ಭಾಗ್ಯಲಕ್ಷ್ಮಿ ಯೋಜನೆಗೆ ಅರ್ಜಿಯನ್ನ ಸಲ್ಲಿಸಬಹುದು. ಹಾಗಾದ್ರೆ ಹೇಗೆ? ಏನು ಎಲ್ಲವನ್ನ ನೋಡೋಣ ಬನ್ನಿ
ಹೌದು ಕರ್ನಾಟಕದಲ್ಲಿ ಬಹಳಷ್ಟು ಸೌಂಡ್ ಮಾಡಿದ ಯೋಜನೆಗಳಲ್ಲಿ ಮನೆಯ ಯಜಮಾನಿ ಖಾತೆಗೆ ಪ್ರತಿ ತಿಂಗಳು 2ಸಾವಿರ ರೂಪಾಯಿ ಹಣವನ್ನ ಹಾಕುವ ಗೃಹಲಕ್ಷ್ಮೀ ಯೋಜನೆ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಸದ್ಯ ಈ ಯೋಜನೆಗೆ ಚಾಲನೆ ಸಿಕ್ಕಿದ್ದು ಅರ್ಜಿ ಪ್ರಕ್ರಿಯೆ ಆರಂಭಗೊಂಡಿದ್ದು, ಸಾಕಷ್ಟು ಸಮಸ್ಯೆಗಳ ಮಧ್ಯೆಯು ಅರ್ಜಿ ಪ್ರಕ್ರಿಯೆ ನಡಿಯುತ್ತಲಿದ್ದು ಸದ್ಯ ಇದೀಗ ಆಗಸ್ಟ್ 1ನೆ ತಾರೀಖಿನಿಂದ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಒಂದು ಹೆಜ್ಜೆ ಮುಂದಿಟ್ಟಿದ್ದು ಸೇವಾ ಪ್ರತಿನಿಧಿಗಳು ಅರ್ಜಿದಾರರ ಮನೆಗಳಿಗೆ ಬಂದು ಅರ್ಜಿಯನ್ನ ಸ್ವೀಕಾರ ಮಾಡುವ ಅಥವಾ ಸ್ಥಳದಲ್ಲಿಯೇ ಅರ್ಜಿ ಸಲ್ಲಿಕೆ ಮಾಡಲಿದ್ದಾರೆ ಅಂತ ಹೇಳಲಾಗ್ತಿದೆ.
ಇದನ್ನೂ ಓದಿ: ಸರ್ಜಾ ಫ್ಯಾಮಿಲಿ ಮತ್ತೆ ನಿಮಗೆ ಮನಸ್ತಾಪ ಇರೋದು ನಿಜಾನಾ? ಕುಟುಂಬದ ನಡುವಿನ ವಿಚಾರಗಳ ಬಗ್ಗೆ ಮೇಘನಾ ಹೇಳಿದ್ದೇನು?
ಮನೆ ಮನೆಗೆ ಬರುತ್ತಾರೆ “ಪ್ರಜಾ ಪ್ರತಿನಿಧಿಗಳು”
ಹೌದು ಗ್ರಾಮೀಣ ಭಾಗದಲ್ಲಿ ಯೋಜನೆಯ ಲಾಭ ಪಡೆದುಕೊಳ್ಳುವಲ್ಲಿ ಫಲಾನುಭವಿಗಳು ಸಾಕಷ್ಟು ತೊಂದರೆ ಅನುಭವಿಸಿದ್ದು, ಈ ಮಧ್ಯೆ ಯೋಜನೆಗೆ ಅರ್ಜಿ ಸಲ್ಲಿಸಲು ಮತ್ತಷ್ಟು ಸುಲಭ ಮಾಡಿಕೊಡುವ ಉದ್ದೇಶದಿಂದ ಇದೀಗ ಸೇವಾ ಪ್ರತಿನಿಧಿಗಳು ಮನೆ ಬಾಗಿಲಿಗೆ ಬರಲಿದ್ದಾರಂತೆ. ಅಲ್ಲಿಯೂ ಸೇವಾ ಕೇಂದ್ರಗಳಿಗೆ ಹೋಗಿ ಯಾವ ರೀತಿ ಅರ್ಜಿಯನ್ನ ಸಲ್ಲಿಸುತ್ತಿದ್ರೋ ಅದೇ ರೀತಿಯಲ್ಲಿ ಸೇವಾ ಪ್ರತಿನಿಧಿಗಳು ಬಂದು ಅರ್ಜಿಯನ್ನ ಸಲ್ಲಿಸಲಿದ್ದಾರಂತೆ. ಮಾಮೂಲಿಯಂತೆ ರೇಷನ್ ಕಾರ್ಡ್ ನಂಬರ್ ಹಾಗೂ ಆಧಾರ್ ಕಾರ್ಡ್ ನಂಬರ್ ಅನ್ನ ನೀಡಬೇಕು ನಂತರ EKYC ಆಗಿರುವ ನಂಬರ್ ಗೆ ಬರುವ ಒಟಿಪಿಯನ್ನ ಹೇಳಿ ಅರ್ಜಿಯನ್ನ ಸಲ್ಲಿಸಬಹುದು.
ಹೌದು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾದಾಗಿನಿಂದ ಕೂಡ ಸಾಕಷ್ಟು ಸಮಸ್ಯೆಗಳಾಗಿದ್ವು. ಅಲ್ದೇ ಮಹಿಳೆಯರಂತೂ ಸರ್ತಿ ಸಾಲಿನಲ್ಲಿ ನಿಂತು ಹೈರಾನ್ನಾಗಿ ಹೋಗಿದ್ರು. ಅಲ್ದೇ ವಯಸ್ಸಾದ ಅಜ್ಜಿಯರ ಪಾಡಂತೂ ಹೇಳತೀರದು. ಮುಂಜಾನೆ 3-4ಗಂಟೆಯಿಂದಲೂ ಸರತಿ ಸಾಲಿನಲ್ಲಿ ನಿಂತು ಕಡು ಕಡು ಸುಸ್ತಾಗಿ ಹೋಗುತ್ತಿದ್ರು. ಈ ಮಧ್ಯೆ ಸರ್ವರ್ ಸಮಸ್ಯೆಯಿಂದಾಗಿ ಬಂದ ಮಹಿಳೆಯರು ಸುಸ್ತಾಗಿ ಹೈರಾಣಗಿ ಹೋಗಿ ಸೇವಾ ಕೇಂದ್ರ ಮತ್ತು ಸರ್ಕಾರದವರಿಗೆ ಹಿಡಿಶಾಪ ಹಾಕಿ ಹೋಗ್ತಿದ್ರು. ಅಲ್ದೇ ಕೆಲವರಂತೂ ಈ ರೀತಿ ಹಣ ಹಾಕುವ ಬದಲು ಅಗತ್ಯ ವಸ್ತುಗಳು ಸೇರಿದಂತೆ ಸಿಲಿಂಡರ್ ಬೆಲೆ ಕಡಿಮೆ ಮಾಡಿದ್ರೆ ಸಾಕಾಗ್ತಿತ್ತು ಅಂತ ಕಿಡಿಕಾರಿದ್ದು ಇದೆ. ಅಲ್ದೇ ಗೃಹಜ್ಯೋತಿಯಂತೆ ಮನೆಯಿಂದಲೇ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ರೆ ಸರಿ ಇರ್ತಿತ್ತು ಅಂತ ಹೇಳಿದ್ದು ಇದೆ.
ಹೀಗಾಗಿ ವಯಸ್ಸಾದವರು ಗರ್ಭಿಣಿ ಬಾಣಂತಿ ಮತ್ತು ಖಾಯಿಲೆ ಇರುವಂತವರನ್ನ ಗಮನದಲ್ಲಿಟ್ಟುಕೊಂಡು ಸದ್ಯಕ್ಕೆ ಗ್ರಾಮೀಣ ಭಾಗದಲ್ಲಿ ಸೇವಾ ಕೇಂದ್ರದ ಸೇವಾ ಪ್ರತಿನಿಧಿಗಳೇ ಹೋಗಿ ಅರ್ಜಿ ಸಲ್ಲಿಕೆ ಮಾಡುವಂತೆ ಹೊಸ ರೂಲ್ಸ್ ಅನ್ನ ಸರ್ಕಾರ ಮಾಡಿದ್ದು, ಆಗಸ್ಟ್ 1ನೆ ತಾರೀಖುನಿಂದ ಈ ಪ್ರಕ್ರಿಯೆಯನ್ನ ಆರಂಭಿಸಲಿದ್ದು, ಯಾರು ಕೂಡ ಅರ್ಜಿ ಸಲ್ಲಿಸುವ ವಿಚಾರದಲ್ಲಿ ಗೊಂದಲ ಅಥವಾ ಆತುರ ಪಡುವ ಅವಶ್ಯಕತೆ ಇಲ್ಲ. ಎಲ್ಲ ಅರ್ಜಿಗಳು ಸಲ್ಲಿಕೆಯಾದ ನಂತರವೇ ಎಲ್ಲರ ಖಾತೆಗೆ ಹಣ ಹಾಕಲಾಗುತ್ತದೆ ಅಂತ ಸರ್ಕಾರ ಸ್ಪಷ್ಟ ಪಡಿಸಿದ್ದು, ಹಾಗಾಗಿ ಎಲ್ಲರು ಕೂಡ ಅರ್ಜಿ ಸಲ್ಲಿಸಬಹುದು ಯೋಚನೆ ಮಾಡುವ ಅವಶ್ಯಕತೆ ಇಲ್ವಾ ಅಂತ ಹೇಳಲಾಗ್ತಿದೆ.
ಇದನ್ನೂ ಓದಿ: ಒಳ್ಳೆ ಕೆಲಸಕ್ಕೆ ಹೋಗ್ತಿದ್ರೆ ಮರೆಯದೆ ಈ ಕೆಲಸ ಮಾಡಿ; ಇದನ್ನ ತಿಂದು ಮನೆಯಿಂದ ಹೊರಬಂದ್ರೆ ಅದೃಷ್ಟ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram