ನಿಮ್ಮೆಲ್ಲರಿಗೂ ಗೊತ್ತಿರುವಂತೆ ಸ್ನೇಹಿತೆಯರ ಜೊತೆ ಬ್ಯಾಂಕಾಕ್ಗೆ ಪ್ರವಾಸಕ್ಕೆ ತೆರಳಿದ್ದ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಆಗಸ್ಟ್ 6ರಂದು ನಿಧನ ಹೊಂದಿದ್ದರು. ಬ್ಯಾಂಕಾಕ್ನಲ್ಲಿ ಮರಣೋತ್ತರ ಪರೀಕ್ಷೆಗಳು ಸೇರಿದಂತೆ ಇತರೆ ಎಲ್ಲ ಕಾನೂನು ನಿಯಮಗಳನ್ನು ಮುಗಿಸಿ ಮೃತದೇಹವನ್ನು ಕಾರ್ಗೊ ಮೂಲಕ ಬೆಂಗಳೂರಿಗೆ ಕಳೆದ ತಡರಾತ್ರಿ ಕರೆತರಲಾಯಿತು. ಇಂದು ಅಂತ್ಯ ಸಂಸ್ಕಾರ ಕೂಡ ಮುಗಿದಿದೆ. ಹೌದು ವಿಜಯ್ ರಾಘವೇಂದ್ರ ಅವರಿಗೆ ಪತ್ನಿಯ ಮೇಲೆ ಅಪಾರ ಪ್ರೀತಿ, ಗೌರವವಿದ್ದು ಪತಿ-ಪತ್ನಿ ಅನ್ಯೋನ್ಯವಾಗಿ 15 ವರ್ಷಗಳಿಂದ ಜೀವನ ಸಾಗಿಸುತ್ತಿದ್ದರು. ಆದ್ರೆ ಹಠಾತ್ ಪತ್ನಿಯ ನಿಧನ ಅವರಿಗೆ ಬರಸಿಡಿಲಿನಂತೆ ಎದುರಾಗಿದ್ದು ಅವರ ದುಃಖ ಹೇಳತೀರದಾಗಿದೆ. ಅಂತಿಮ ದರ್ಶನಕ್ಕೆ ಬಂದವರು ವಿಜಯ ರಾಘವೇಂದ್ರ ಅವರನ್ನು ಸಂತೈಸುವ ಕೆಲಸ ಮಾಡಿದ್ದಾರೆ. ಆದ್ರೂ ಕೂಡ ಇದು ವಿಜಯ್ ರಾಘವೇಂದ್ರ ಅವ್ರಿಗೆ ಅರಗಿಸಿಕೊಳ್ಳಲಾಗದ ನೋವು ಅಂತಲೇ ಹೇಳಬಹುದು ಯಾಕಂದ್ರೆ ಸ್ಪಂದನ ಅಂದ್ರೆ ರಾಘುಗೆ ಪ್ರಾಣ. ಮಡದಿ ತನ್ನನ್ನ ಬಿಟ್ಟೋಗೋದನ್ನ ಅರಗಿಸಿಕೊಳ್ಳಲಾಗದೆ ಬಿಕ್ಕಿ ಬಿಕ್ಕಿ ಮಗುವಿನಂತೆ ಅತ್ತು ಅತ್ತು ಸುಸ್ತಾಗಿ ಹೋಗಿದ್ರು. ಇಂತ ಅಗಾಧ ಪ್ರಮಾಣದ ಪ್ರೀತಿಗೂ ಒಂದು ಕಾರಣ ಇದೆ.
ವಿಜಯ್ ರಾಘವೇಂದ್ರ ಹೇಗೆ ಪತ್ನಿಯನ್ನ ದೇವತೆಯಂತೆ ನೋಡಿಕೊಳ್ಳುತ್ತಿದ್ರೋ ಅದರಂತೆ ಪತ್ನಿ ಸ್ಪಂದನ ಕೂಡ ವಿಜಯ್ ರಾಘವೇಂದ್ರ ಅವ್ರನ್ನ ಮಗುವಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ರು, ಒಂದು ದಿನಕ್ಕೂ ಗಂಡನನ್ನ ಬಿಟ್ಟುಕೊಟ್ಟಿಲ್ಲ ಪತಿ ಸೋತು ನಿಂತಾಗಲೆಲ್ಲ ಪತಿಯ ಬೆಂಬಲಕ್ಕೆ ನಿಂತಿದ್ರು. ಎಷ್ಟೇ ದೊಡ್ಡ ಕಷ್ಟ ಬಂದ್ರು ಕೂಡ ಪತಿಯ ಬೆಂಗವಲಾಗಿ ನಿಲ್ಲುತ್ತಿದ್ರು. ಅದ್ರಲ್ಲೂ ಕೂಡು ಕುಟುಂಬದ ಹಿರಿ ಸೊಸೆಗಿರಬೇಕಿದ್ದ ಎಲ್ಲಾ ಅರ್ಹತೆಗಳು ಸ್ಪಂದನ ಅವ್ರಿಗಿತ್ತು, ಮನೆಯನ್ನ ಅಷ್ಟೇ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಬಂದಿದ್ರು. ಮನೆ ಮಾರುವ ಪರಿಸ್ಥಿತಿ ಬಂದಾಗಲು ಧೃತಿ ಗೆಡೆದ ಬಹಳ ಅದ್ಭುತವಾಗಿ ಎಲ್ಲವನ್ನು ನಿಭಾಯಿಸಿದ್ರು.
ಸ್ಪಂದನಾ ಹಾಗೂ ವಿಜಯ್ ರಾಘವೇಂದ್ರ ಅವರದ್ದು ಲವ್ ಕಮ್ ಆರೆಂಜ್ಡ್ ಮ್ಯಾರೇಜ್. ಮಂಗಳೂರಿನ ಹುಡುಗಿಯನ್ನು ಮದುವೆ ಮಾಡಿಕೊಳ್ಳಬೇಕೆಂದುಕೊಂಡಿದ್ದ ವಿಜಯ್, 2004ರಲ್ಲಿ ಬೆಂಗಳೂರಿನ ಮಲ್ಲೇಶ್ವರಂ ಕಾಫಿ ಡೇಯೊಂದರಲ್ಲಿ ಸ್ಪಂದನಾ ಅರನ್ನು ನೋಡಿದ್ದರು. ಈ ವೇಳೆ ಸಂಗೀತದ ವಿಚಾರವಾಗಿ ಇವರಿಬ್ಬರ ನಡುವೆ ಕ್ಲ್ಯಾಶ್ ಆಗಿತ್ತು. ನಂತರ 2007ರಲ್ಲಿ ಶೇಷಾದ್ರಿಪುರಂ ಕಾಫಿ ಡೇಯಲ್ಲಿ 2ನೇ ಬಾರಿ ಭೇಟಿಯಾಗಿ ವಿಜಯ್ ರಾಘವೇಂದ್ರ, ಸ್ಪಂದನಾ ಅವರನ್ನು ಭೇಟಿಯಾಗಿದ್ದರು. ಈ ವೇಳೆ ನನ್ನನ್ನು ಮದುವೆಯಾಗ್ತಿಯಾ ಅಂತ ಕೇಳಿದ್ದರಂತೆ. ಸ್ಪಂದನಾ ಕೂಡ ವಿಜಯ್ ಅವರ ಪ್ರೀತಿಯನ್ನು ಒಪ್ಪಿಕೊಂಡಿದ್ದರು.
ನಂತರ ತಂದೆ-ತಾಯಿಯ ಬಳಿ ಪ್ರೀತಿ ವಿಚಾರ ಹೇಳಿದ್ದರಂತೆ. ಬಳಿಕ ಕುಟುಂಬಸ್ಥರ ಒಪ್ಪಿಗೆ ಮೇರೆಗೆ 2007ರ ಆಗಸ್ಟ್ 26ರಂದು ಸ್ಪಂದನಾ ಹಾಗೂ ವಿಜಯ್ ರಾಘವೇಂದ್ರ ಸಪ್ತಪದಿ ತುಳಿದಿದ್ದರು. 15ವರ್ಷಗಳ ಪರಿಪೂರ್ಣ ದಾಂಪತ್ಯ ಜೀವನ ಮೂರು ದಿನಗಳ ಹಿಂದೆ ಅಂತ್ಯವಾಗಿದೆ. ಸ್ಪಂದನ ಅವ್ರ ನಿಧನ ಇಡೀ ಕುಟುಂಬವನ್ನ ಶೋಕ ಸಾಗರದಲ್ಲಿ ಮುಳುಗಿಸಿಬಿಟ್ಟಿದೆ. ಯಾಕಂದ್ರೆ ಸ್ಪಂದನ ಮನೆಯನ್ನ ಅಷ್ಟು ಅದ್ಭುತವಾಗಿ ನಿಭಾಯಿಸಿಕೊಂಡು ಬರುತ್ತಿದ್ರು. ಎಂದಿಗೂ ಯಾರಿಗೂ ನೋವಾಗದಂತೆ ನಡೆದುಕೊಂಡಿದ್ದ ಸ್ಪಂದನ ಇದೀಗ ಅರಗಿಸಿಕೊಳ್ಳಲು ಸಾಧ್ಯವಾಗದಷ್ಟು ದುಃಖವನ್ನ ಕೊಟ್ಟು ಹೊರಟೆ ಹೋಗಿದ್ದಾರೆ.
ಕಷ್ಟದಲ್ಲಿದ್ದ ಪತಿಯರ ಬೆನ್ನಿಗೆ ನಿಂತಿದ್ದು ಸ್ಪಂದನ ಮತ್ತು ವಿದ್ಯಾ
ಆದ್ರೆ ಹೆಣ್ಣು ಮನಸ್ಸು ಮಾಡಿದ್ರೆ ಯಾವುದು ಕೂಡ ಅಸಾಧ್ಯವಲ್ಲ ಅನ್ನೋ ಮಾತಿದ್ಯಲ್ಲ ಅದು ಸ್ಪಂದನ ಅವ್ರ ಬಾಳಲ್ಲಿ ನಿಜವಾಗಿದೆ. ವಿಜಯ್ ರಾಘವೇಂದ್ರ ಅವ್ರೆ ಹೇಳಿಕೊಂಡಿರುವಂತೆ ಸ್ಪಂದನ ರಾಘು ಅವ್ರನ್ನ ಕಷ್ಟದಲ್ಲಿ ಕೈ ಬಿಟ್ಟಿಲ್ಲವಂತೆ. ಸಾಲು ಸಾಲು ಚಿತ್ರಗಳು ಶ್ರೀ ಮುರುಳಿ ಹಾಗೂ ವಿಜಯ್ ರಾಘವೇಂದ್ರ ಅವ್ರನ್ನ ಹುಡುಕಿಕೊಂಡು ಬಂದ್ರು ಕೂಡ ಹೇಳಿಕೊಳ್ಳುವಂತಹ ಸಕ್ಸಸ್ ಅನ್ನೋದು ಸಿಗೋದಿಲ್ಲ… ಒಂದು ಹಂತದಲ್ಲಿ ಮನೆ ಮಾರುವ ಕಷ್ಟಕ್ಕೂ ದೇವರು ಚಿನ್ನೇ ಗೌಡ್ರ ಕುಟುಂಬವನ್ನ ತಂದು ನಿಲ್ಲಿಸಿ ಬಿಡುತ್ತೆ ಆಗ ಮನೆಯಲ್ಲಿದ್ದ ಅತ್ತೆ ಸೊಸೆಯಂದಿರು ಪತಿಯರ ಬೆನ್ನಿಗೆ ನಿಂತಿದ್ರು. ಅದ್ರಲ್ಲೂ ಸ್ಪಂದನ ಅವ್ರ ಪಾತ್ರ ದೊಡ್ಡದು ಅಂತಲೇ ಹೇಳಬಹುದು. ಮನೆ ಮಾರಿ ಬಾಡಿಗೆ ಮನೆಗೆ ಹೋದ್ರು ಕೂಡ ಎಲ್ಲವನ್ನ ಬಹಳ ಖುಷಿಯಿಂದಲೇ ನಿಭಾಯಿಸಿಕೊಂಡು ಪತಿ ಮತ್ತು ಕುಟುಂಬದ ಜೊತೆಗೆ ನಿಂತು ಧೈರ್ಯ ತುಂಬಿದ ಜೀವ ಇವತ್ತು ಎಲ್ಲರನು ದುಃಖದಲ್ಲಿ ಮುಳುಗಿಸಿ ಬಾರದ ಲೋಕಕೆ ಹೋಗಿದೆ.
ಇದನ್ನೂ ಓದಿ: ಸ್ಪಂದನಾ ಮೃತದೇಹ ತರೋದಕ್ಕೆ ಯಾಕೆ ಇಷ್ಟು ಲೇಟಾಯ್ತು? ಇದಕ್ಕೆ ಇರೋ ರೂಲ್ಸ್ ಏನು? ಎಷ್ಟು ದುಡ್ಡು ಕೊಡಬೇಕು
ಇದನ್ನೂ ಓದಿ: ಸ್ಪಂದನಾ ಮೃತದೇಹ ಕಂಡು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಅಶ್ವಿನಿ ಪುನೀತ್ ರಾಜ್ ಕುಮಾರ್..
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram