ರಾಜ್ಯ ರಾಜಕಾರಣದಲ್ಲಿ ಇದೀಗ ಬದಲಾವಣೆಯ ಪರ್ವ ಆರಂಭವಾಗಿದೆ. ಜನ ಬದಲಾವಣೆ ಬಯಸಿ ಇದೀಗ ಅಧಿಕಾರದ ಚುಕ್ಕಾಣಿಯನ್ನ ಕಾಂಗ್ರೆಸ್ ಗೆ ನೀಡಿದ್ದಾರೆ. ಅದ್ರಂತೆ ದೇಶದ ರಾಜಕೀಯ ಭವಿಷ್ಯದಲ್ಲೂ ಕೂಡ ಸಾಕಷ್ಟು ಬದಲಾವಣೆಯಗಾಲಿದೆ. ಜನ ಇದೀಗ ದೇಶದ ರಾಜಕಾರಣದಲ್ಲೂ ಕೂಡ ಅಧಿಕಾರ ಹಸ್ತಾಂತರ ಪರ್ವ ಆರಂಭವಾಗಿಲಿದೆ ಅನ್ನೋ ಮಾತುಗಳು ಶುರುವಾಗಿದೆ. ಹೌದು ಮುಂದಿನ ಬಾರಿ ದೇಶದ ಚುಕ್ಕಾಣಿ ಮಹಿಳೆಯ ಕೈಗೆ ಹೋಗಲಿದೆ. ಮಹಿಳೆ ದೇಶವನ್ನು ಆಳ್ತಾಳೆ. ಮಾರ್ಚ್ ತಿಂಗಳ ಬಳಿಕ ಇದು ಶತಃಸಿದ್ಧ ಎಂದು ಕಾಲಜ್ಞಾನಿ ಡಾ ಯಶವಂತ ಗುರೂಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಈ ಮೂಲಕ ಹಾಲಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲ್ಲ, ಶಿವರಾತ್ರಿ ಬಳಿಕ ರಾಷ್ಟ್ರ ರಾಜಕಾರಣದಲ್ಲಿ ಭಾರೀ ಬದಲಾವಣೆ ಸಂಭವಿಸಲಿದೆ ಎಂದು ಗುರೂಜಿ ಕಾಲಜ್ಞಾನ ನುಡಿದಿದ್ದಾರೆ. ಹೌದು ತುಮಕೂರಿನ ನೊಣವಿನಕೆರೆಯ ಕಾಲಜ್ಞಾನಿ ಡಾ ಯಶವಂತ ಗುರೂಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಮುಂದಿನ ಭಾರಿ ದೇಶಕ್ಕೆ ಮಹಿಳಾ ಪ್ರಧಾನಿ ಬರಲಿದ್ದಾರೆ ಎಂದು ಭವಿಷ್ಯ ನುಡಿದಿದ್ದು, ಮಾರ್ಚ್ ಬಳಿಕ ಚುನಾವಣೆ ನಡೆದರೆ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲ್ಲ ಎಂದು ಕಾಲಜ್ಞಾನ ನುಡಿದಿದ್ದಾರೆ. ಅದಲ್ಲದೇ ಮಹಾಶಿವರಾತ್ರಿ ಬಳಿಕ ರಾಷ್ಟ್ರ ರಾಜಕಾರಣದಲ್ಲಿ ಭಾರೀ ಬದಲಾವಣೆ ಆಗಲಿದೆ ಎಂದು ಮುನ್ಸೂಚನೆ ನೀಡಿದ್ದಾರೆ.
ಹೌದು ತುಮಕೂರಿನ ನೊಣವಿನಕೆರೆಯಲ್ಲಿ ಭವಿಷ್ಯ ನುಡಿದಿರುವ ಯಶವಂತ ಗುರೂಜಿ, ಇಂದಿರಾ ಗಾಂಧಿ ಬಳಿಕ ರಾಷ್ಟ್ರ ರಾಜಕಾರಣದ ಚುಕ್ಕಾಣಿಯನ್ನು ಈ ಬಾರಿ ಮಹಿಳೆ ಹಿಡಿಯಲಿದ್ದಾಳೆ. ಮಹಾಶಿವರಾತ್ರಿ ಹಬ್ಬದ ಬಳಿಕ ಶಕ್ತಿ ಸ್ವರೂಪವಾದ ಮಹಿಳೆ ದೇಶವನ್ನು ಆಳ್ತಾಳೆ ಎಂದು ಕಾಲಜ್ಞಾನದ ಭವಿಷ್ಯವಾಣಿ ಭವಿಷ್ಯವನ್ನು ಹೇಳುತ್ತಿದೆ. 35 ವರ್ಷಗಳ ಹಿಂದೆ ದೇಶವನ್ನು ಮಹಿಳೆ ಆಳಿದ್ದಳು ಎಂದು ಹೇಳಿದ್ದಾರೆ. ಇನ್ನು, ಮಹಾಶಿವರಾತ್ರಿ ಬಳಿಕ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಕಾಲಜ್ಞಾನ ಭವಿಷ್ಯದ ಪ್ರಕಾರ ಒಂದು ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಿಲ್ಲ. ಅತಂತ್ರ ಪರಿಸ್ಥಿತಿ ಆಗುತ್ತದೆ. ಮಿತ್ರಪಕ್ಷಗಳ ಸಹಾಯದಿಂದ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ. ಪ್ರಧಾನಿ ಯೋಗವಿರುವ ಸ್ತ್ರೀ ಯಾರೆಂದು ಮಕರ ಸಂಕ್ರಾಂತಿಯಂದು ಹೇಳಲಾಗುತ್ತದೆ. ನೋಡಿದಾಗ ಓರ್ವ ಸ್ತ್ರೀ ದೇಶ ಆಳುತ್ತಾಳೆ ಎಂದಿದ್ದಾರೆ. ಯಾರು ಮುಂದಿನ ಪ್ರಧಾನಿ ಆಗಲಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಸಂಕ್ರಾಂತಿಯ ಕಾಲಜ್ಞಾನದವರೆಗೂ ಕಾಯಲೇಬೇಕು ಎಂದು ಅಚ್ಚರಿಯ ಭವಿಷ್ಯವನ್ನು ನುಡಿದಿದ್ದಾರೆ.
ಮತ್ತೆ ಬಿಜೆಪಿ ಅಧಿಕಾರಕ್ಕೆ ಬರೋದು ಅಸಾಧ್ಯ!ಕಾರಣ ಏನ್ ಗೊತ್ತ??
ಇನ್ನು, ಈ ಹಿಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ, ಸಿದ್ದರಾಮಯ್ಯ ಸಿಎಂ ಆಗ್ತಾರೆ ಅಂತ ಗುರೂಜಿ ಹೇಳಿದ್ರು. ಅದರಂತೆಯೇ ಅಯ್ತು. ಹೌದು ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇಲ್ಲದ ಸಂದರ್ಭದಲ್ಲಿಯೇ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುತ್ತೆ. 135 ಸ್ಥಾನಗಳಿಂದ ಒಂದೇ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಯಶವಂತ್ ಗುರೂಜಿ ಹೇಳಿದ್ದರು. ಆ ಭವಿಷ್ಯ ನಿಜವಾಗಿದೆ. ಅದರ ಜೊತೆ ಮುಖ್ಯಮಂತ್ರಿ ಆಯ್ಕೆ ಗೊಂದಲದ ವೇಳೆ ಸಿದ್ದರಾಮಯ್ಯ ಅವರೇ ಮತ್ತೆ ಮುಖ್ಯಮಂತ್ರಿ ಆಗ್ತಾರೆ ಎಂದು ಭವಿಷ್ಯ ನುಡಿದಿದ್ದರು. ಆ ಭವಿಷ್ಯವಾಣಿ ಕೂಡ ನಿಜವಾಗಿದೆ. ಈಗ ಮಹಾಶಿವರಾತ್ರಿಯ ನಂತರ ಓರ್ವ ಮಹಿಳೆ ದೇಶವನ್ನು ಆಳುತ್ತಾಳೆ ಎಂದು ಯಶವಂತ ಗುರೂಜಿ ಭವಿಷ್ಯ ನುಡಿದಿದ್ದಾರೆ.
ಸದ್ಯ ಈಗ ಶಿವರಾತ್ರಿ ಒಳಗಡೆ ಚುನಾವಣೆ ನಡೆದರೆ ಮೋದಿಗೆ ಪ್ರಧಾನಿ ಪಟ್ಟ ಸಿಗುತ್ತೆ ಅಂತ ಹೇಳಿದ್ದು, ಆದ್ರೆ ಮಹಾಶಿವರಾತ್ರಿ ಹಬ್ಬದ ಒಳಗೆ ಲೋಕಸಭೆ ಚುನಾವಣೆ ನಡೆದರೆ ನರೇಂದ್ರ ಮೋದಿಗೆ ಪ್ರಧಾನಿ ಆಗುವ ಅವಕಾಶವಿದೆ. ಮಾರ್ಚ್ ನಂತರ ಚುನಾವಣೆ ನಡೆದರೆ ಬೇರೆ ಪಕ್ಷ ಅಧಿಕಾರಕ್ಕೆ ಬರುತ್ತದೆ. ಓರ್ವ ಮಹಿಳೆಗೆ ಪ್ರಧಾನಿ ಆಗುವ ಯೋಗವಿದೆ. ಇಂತಹದ್ದೇ ಪಕ್ಷ ಅಧಿಕಾರದ ಗದ್ದುಗೆ ಏರುತ್ತದೆ. ಇಂತಹ ಮಹಿಳೆಯೇ ದೇಶವನ್ನು ಆಳುತ್ತಾರೆ ಎಂದು ಮಕರ ಸಂಕ್ರಮಣ ಪರ್ವ ಕಾಲದಲ್ಲಿ ಹೇಳಲಾಗುತ್ತದೆ. ಆ ಮಹಿಳೆ ಯಾವುದೇ ಪಕ್ಷದವರು ಆಗಿರಬಹುದು. ದೇಶವನ್ನು ಆ ಮಹಿಳೆ ಆಳುವುದು ಶತಃಸಿದ್ಧ ಎಂದು ಯಶವಂತ್ ಗುರೂಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ: ಗೃಹ ಲಕ್ಷ್ಮಿ ಯೋಜನೆಗೆ ಹಣ ನೀಡಲು ದಿನಾಂಕ ನಿಗಧಿ; ಈ ತಿಂಗಳೇ ನಿಮ್ಮ ಅಕೌಂಟ್ ಗೆ ಬರುತ್ತೆ 2ಸಾವಿರ
ಇದನ್ನೂ ಓದಿ: ಇಂದಿನ ತರಕಾರಿಗಳ ಬೆಲೆ ಎಷ್ಟಿದೆ ಗೊತ್ತಾ? ಮತ್ತಷ್ಟು ಇಳಿಕೆ ಕಂಡ ಟೊಮೋಟೊ ದರ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram