ಯಾವ ಕ್ಷಣದಲ್ಲಿ ಏನಾಗುತ್ತೆ ಯಾವಕ್ಷಣಕ್ಕೆ ಯಾರು ಹೇಗೆ ಬದಲಾಗಿ ಹೋಗ್ತಾರೆ ಅದರಿಂದ ಮತ್ತೇನ್ನೆಲ್ಲ ಆಗಬಹುದು ಅನ್ನೋದನ್ನ ಊಹೆ ಮಾಡಿಕೊಳ್ಳುದು ಕಷ್ಟ ಸ್ನೇಹಿತರೆ. ಹೌದು ಸಾಲಾ ಸೋಲಾ ಮಾಡಿ ಮದುವೆಯ ಸಿದ್ಧತೆ ಮಾಡಿ ನೆಂಟರಿಷ್ಟರು, ಬಂಧು ಬಳಗ ಎಲ್ಲಾ ಸೇರಿ ರಾತ್ರಿಯಿಂದ ಆರತಕ್ಷತೆ, ಮದುವೆಯ ವಿವಿಧ ಶಾಸ್ತ್ರಗಳು ಸರಗಾವಾಗಿ ನಡೆದಿದ್ದು ಭಾನುವಾರ ಬೆಳಗ್ಗೆ ಮದುವೆಯ ಮಂಟಪದಲ್ಲಿ ವರ ವಧುವಿಗೆ ಮಾಂಗಲ್ಯ ಧಾರಣೆ ಮಾಡುವ ವೇಳೆ ನನಗೆ ಈ ಮದುವೆಯೇ ಬೇಡ ಎಂದು ವಧು ಮದುವೆ ಮಂಟಪದಿಂದ ಹೊರ ನಡೆದಿದ್ದಾರೆ. ಹೌದು
ತಾಳಿ ಕಟ್ಟೋ ವೇಳೆ ಹಸೆಮಣೆಯಿಂದ ವಧು ಎದ್ದು ಹೊರನಡೆದ ಹಿನ್ನೆಲೆ ಮದುವೆ ಅರ್ಧಕ್ಕೆ ಮುರಿದು ಬಿದ್ದಿದೆ.
ಇನ್ನು ತಾಳಿ ಕಟ್ಟುವ ವೇಳೆ ಮದುವೆ ಬೇಡ ಎಂದು ವಧು ಹಸೆಮಣೆಯಿಂದ ಎದ್ದು ಹೋಗಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕೋಳಾಲ ಗ್ರಾಮದಲ್ಲಿ ನಡೆದಿದೆ. ಅಲ್ದೇ ಬೇರೊಬ್ಬನನ್ನು ಪ್ರೀತಿಸುತ್ತಿದ್ದೇನೆ ಅಂತ ವಧು ಹಸೆಮಣೆಯಿಂದ ಎದ್ದು ಬಂದಿದ್ದು, ಮಂಟಪದಲ್ಲಿ ಗದ್ದಲ ಉಂಟಾಗಿದೆ. ಹೌದು ರಿಸೆಪ್ಷನ್ ವೇಳೆ ವಧು ನಗುತ್ತಲೇ ಇದ್ದಳು, ಆದ್ರೆ ಈಕೆಯ ಈ ದಿಢೀರ್ ನಿರ್ಧಾರ ಎರಡೂ ಕುಟುಂಬದವರ ನಡುವಿನ ಗದ್ದಲಕ್ಕೆ ಕಾರಣವಾಗಿದೆ. ಇನ್ನು ಕೊಳಾಲ ಗ್ರಾಮದ ಕೆ.ಸಿ.ಎನ್. ಕನ್ವೆನ್ಷನ್ ಹಾಲ್ನಲ್ಲಿ ಮದುವೆ ನಡೆಯುತ್ತಿತ್ತು. ವೆಂಕಟೇಶ್ ಎಂಬುವವರ ಜೊತೆ ಮದುವೆ ನಡೆಯುತ್ತಿತ್ತು. ಆದ್ರೆ ಬೆಳಗ್ಗೆ ಮುಹೂರ್ತಕ್ಕೆ ಬರುತ್ತಿದ್ದಂತೆ ಮದುವೆ ಬೇಡ ಎಂದ ಯುವತಿ ಹಠ ಹಿಡಿದಿದ್ದಾಳೆ.
ಇದನ್ನೂ ಓದಿ: ವಾರದ ಮೊದಲ ದಿನ ತರಕಾರಿಗಳ ಬೆಲೆ ಎಷ್ಟಾಗಿದೆ ನೋಡಿ? ಪಾತಳಕ್ಕೆ ಇಳಿದ ಟಮೊಟೊ ದರ
ಮದುವೆ ಮನೆಯಲ್ಲಿ ವಧುವಿನ ರಂಪಾಟ
ದೊಡ್ಡಬಳ್ಳಾಪುರದ ತಾಲೂಕಿನ ಮೂಡ್ಲಕಾಳೇನಹಳ್ಳಿಯ ಸಿದ್ದಮ್ಮ ಮತ್ತು ಗೋವಿಂದರಾಜು ಪುತ್ರ ವೆಂಕಟೇಶ್ ಅವರ ವಿವಾಹ ಸಮಾರಂಭವು ನೆಲಮಂಗಲ ತಾಲೂಕಿನ ದೊಡ್ಡಬೆಲೆ ಗ್ರಾಮದ ಅಂಜನಮ್ಮ ನರಸಿಂಹಮೂರ್ತಿ ಪುತ್ರಿ ದಿವ್ಯಾ ನಡುವೆ ಮದುವೆ ನಡೆಯಬೇಕಿತ್ತು. ಇನ್ನು ರಾತ್ರಿ ರಿಸೆಪ್ಷನ್ ನಲ್ಲಿ ಹುಡುಗ ವೆಂಕಟೇಶ್ ನೊಂದಿಗೆ ದಿವ್ಯ ನಗುನಗುತ್ತಲೇ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಆದ್ರೆ ಭಾನುವಾರ ಬೆಳಗ್ಗೆ ಮುಹೂರ್ತಕ್ಕೆ ಬರುತ್ತಿದ್ದಂತೆ ಮದುವೆ ಬೇಡ ಎಂದ ದಿವ್ಯಾ ಹೇಳಿದ್ದಾರೆ. ಹುಡುಗಿ ಉಲ್ಟಾ ಹೊಡೆಯುತ್ತಿದ್ದಂತೆ ಕಲ್ಯಾಣ ಮಂಟಪದಲ್ಲಿ ಗದ್ದಲ ಉಂಟಾಗಿದೆ.
ಎರಡು ಕಡೆಯವರಿಂದ ಮಾತಿನ ಚಕಮಕಿ ನಡೆದಿದ್ದು, ಕೋಳಾಲ ಪೊಲೀಸ್ ರು ಮಧ್ಯಪ್ರವೇಶ ಮಾಡಿದ್ದಾರೆ. ಇನ್ನು ಹುಡುಗನ ಕಡೆಯವರಿಂದ ಆಕ್ರೋಶ ವ್ಯಕ್ತವಾಗಿದೆ. ಕಾರಣ ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ಹೀಗಾಗಿ ಮದುವೆ ಬೇಡ ಎಂದು ವಧು ಮದುವೆ ಕ್ಯಾನ್ಸಲ್ ಮಾಡಿದ್ದಾರೆ. ಹೀಗಾಗಿ ಹುಡುಗಿ ಬೇರೆಯವರನ್ನು ಪ್ರೀತಿ ಮಾಡುತ್ತಿದ್ದಾಳೆ ಎಂದು ಗೊತ್ತಿದ್ದರೂ ಪೋಷಕರು ಈ ಮದುವೆ ನಿಶ್ಚಯ ಮಾಡಿ ನಮಗೆ ಅವಮಾನ ಮಾಡಿ ಮೋಸ ಮಾಡಿದ್ದಾರೆ ಅಂತ ವರನ ಕಡೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊನೆಗೆ ಪ್ರೀತಿಸಿದ ಹುಡುಗನ ಜೊತೆ ಹೋದ ಯುವತಿ
ಇನ್ನು ವಧು ತನ್ನ ಮಾವನ ಮಗನನ್ನು ಪ್ರೀತಿಸುತ್ತಿದ್ದ ಹಿನ್ನೆಲೆಯಲ್ಲಿ ಆಕೆ ಮದುವೆಗೆ ನಿರಾಕರಿಸಿದ್ದಾರೆ ಅಂತ ಹೇಳಲಾಗ್ತಿದೆ.
ಹೀಗಾಗಿ ವಧುವಿನ ಪ್ರಿಯಕರ ಪೊಲೀಸ್ ಠಾಣೆಗೆ ಹೋಗಿದ್ದ. ನಿನ್ನೆ ರಾತ್ರಿಯಿಂದಲೇ ಕಲ್ಯಾಣ ಮಂಟಪದಲ್ಲಿ ಕಾಣಿಸಿಕೊಂಡಿದ್ದ. ಹೀಗಾಗಿ ಪ್ರಿಯಕರನನ್ನ ಕಂಡು ವದು ಮದುವೆಗೆ ನಿರಾಕರಿಸಿ ತಾಳಿ ಕಟ್ಟಿಸಿಕೊಳ್ಳುವ ಮದುವೆ ಬೇಡ ಅಂದಿದ್ದಾಳೆ. ವಧುವಿನ ನಿರ್ಧಾರವನ್ನು ಕೇಳಿ ವರನ ಕಡೆಯವರು ದಂಗಾಗಿ ಹೋಗಿದ್ದಾರೆ. ನಂತರ ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಗಿದೆ. ಇನ್ನು ಕೋಳಾಲ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅವರ ಸಮ್ಮುಖದಲ್ಲಿ ರಾಜೀ ಸಂಧಾನ ನಡೆದಿದೆ.
ಹೌದು ಪೊಲೀಸರ ಸಮ್ಮುಖದಲ್ಲಿ ಎರಡು ಕುಟುಂಬಗಳ ಸಂಧಾನ ನಡೆಯಿತು. ಮದುವೆಯ ಖರ್ಚು ಭರಿಸುವುದಾಗಿ ವಧುವಿನ ಕುಟುಂಬಸ್ಥರು ಒಪ್ಪಿಕೊಂಡರು. ಅಲ್ದೇ ಮದುವೆ ಖರ್ಚಿಗೆಂದು ಒಂದು ಲಕ್ಷ ರೂಪಾಯಿ ಪಡೆದ ವರನ ಕಡೆಯವರು, ಮದುವೆಗೆ ನೀಡಿದ ಚಿನ್ನಾಭರಣ ವಾಪಸ್ ಪಡೆದಿದ್ದಾರೆ. ಇನ್ನು ಮದುವೆ ಮುರಿದು ಬಿದ್ದ ನಂತರ ತಮ್ಮ ತಮ್ಮ ಮನೆಗಳತ್ತ ಮದುವೆಗೆಂದು ಬಂದವರು ಹೊರಟು ಹೋಗಿದ್ದಾರೆ. ಈ ಎಲ್ಲ ಗೊಂದಲ ಮುಗಿದ ನಂತರ ಪೋಷಕರು, ದಿವ್ಯಾ ಇಷ್ಟಪಟ್ಟ ಯುವಕನ ಜೊತೆಗೆ ಆಕೆಯನ್ನು ಕಳುಹಿಸಿಕೊಟ್ಟಿದ್ದಾರೆ.
ಇದನ್ನೂ ಓದಿ: ಅಭಿಮಾನಿರ ಆಸೆ ಈಡೇರಿಸಿದ ದರ್ಶನ್, ಮನೆಗೆ ಕರೆಸಿ ಸನ್ಮಾನ ಮಾಡಿದ ಡಿಬಾಸ್
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram