ರಾಜ್ಯ ಸರ್ಕಾರದ 5ಗ್ಯಾರಂಟಿಗಳಲ್ಲಿ ಬಹಳ ಸದ್ದು ಮಾಡಿದ ಯೋಜನೆ ಅಂದ್ರೆ ಅದು ಗೃಹಲಕ್ಷ್ಮೀ ಯೋಜನೆ. ಮನೆಯ ಯಜಮಾನಿ ಮಹಿಳೆ ಖಾತೆಗೆ ಪ್ರತಿ ತಿಂಗಳು 2ಸಾವಿರ ರೂಪಾಯಿ ಜಮಾ ಮಾಡುವ ಯೋಜನೆ ಬಹಳ ಸದ್ದು ಮಾಡಿತ್ತು. ಕೊನೆಗೂ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಸಿಕ್ಕಿದ್ದು ಮಹಿಳೆಯರಂತು ಫುಲ್ ಖುಷ್ ಆಗಿದ್ದಾರೆ. ಹೌದು ಮಹಿಳೆಯರಿಗೆ 2000 ರೂಪಾಯಿ ನೀಡುವ ಗೃಹಲಕ್ಷ್ಮಿ ಯೋಜನೆಗೆ ಮೈಸೂರಿನಲ್ಲಿ ಅಧಿಕೃತ ಚಾಲನೆ ಸಿಕ್ಕಿದೆ. ಇನ್ನು ಈಗಾಗಲೇ ಕೆಲವೊಂದಷ್ಟು ಮಹಿಳೆಯರ ಖಾತೆಗೆ 2000 ರೂಪಾಯಿ ಹಣ ಜಮಾ ಆಗಿದೆ. ಆದ್ರೆ ಇನ್ನು ಕೆಲವರ ಖಾತೆಗೆ ಜಮಾ ಪ್ರಕ್ರಿಯೆ ನಡೆಯುತ್ತಿದೆ. ಅಲ್ದೇ ಸೆಪ್ಟೆಂಬರ್ 5 ರೊಳಗೆ ಎಲ್ಲಾ ಯಜಮಾನಿಯರ ಖಾತೆಗೆ ಹಣ ಜಮಾ ಆಗಬಹುದು ಅಂತ ಸದ್ಯಕ್ಕೆ ಹೇಳಲಾಗುತ್ತಿದೆ.
ಇನ್ನೂ ನಮಗೆ ಹಣ ಬಂದಿಲ್ಲ ಅಂತ ಬೇಸರ ಮಾಡಿಕೊಂಡಿರುವವರು, 2000 ರೂಪಾಯಿ ಹಣ ಬರದೇ ಇರುವವರು ಆತಂಕ ಪಡುವ ಅಗತ್ಯವಿಲ್ಲ. ಯಾಕಂದ್ರೆ ಒಂದೇ ಬಾರಿಗೆ ಕೋಟ್ಯಾಂತರ ಮಹಿಳೆಯರಿಗೆ ಹಣ ಕಳುಹಿಸುತ್ತಿರುವುದರಿಂದ ಹಣ ಜಮಾ ಆಗಿರುವುದಿಲ್ಲ ಅಥವಾ ಇನ್ಯಾವುದೋ ತಾಂತ್ರಿಕ ತೊಂದರೆ ಕಾರಣ SMS ಬಂದಿರುವುದಿಲ್ಲ. ಅಲ್ದೇ ಕೆಲವೊಂದು ಮಾಹಿತಿ ಪ್ರಕಾರ ಈ ಯೋಜನೆಗೆ ನೋಂದಾಯಿಸಿಕೊಂಡಿದ್ದರೂ ಹಲವಾರು ಮಂದಿ ಈ ಯೋಜನೆಯಿಂದ ವಂಚಿತರಾಗುವ ಸಾಧ್ಯತೆ ಇದೆ. ಹಾಗಾದ್ರೆ ಹಣ ಬಂದಿಲ್ಲ ಏನ್ ಮಾಡ್ಬೇಕು? ಹಣ ಯಾಕೆ ಬಂದಿರಲ್ಲ, ಅಂತಹ ಸಂದರ್ಭದಲ್ಲಿ ಗೃಹಲಕ್ಷ್ಮಿಯರು ಏನ್ ಮಾಡ್ಬೇಕು ನೋಡೋಣ ಬನ್ನಿ.
ಇದನ್ನೂ ಓದಿ: ಅಪಹರಣವಾದ ಟಿಕ್ ಟಾಕ್ ಸ್ಟಾರ್ ಶವವಾಗಿ ಪತ್ತೆ; ಸ್ಮೈಲಿ ನವೀನ್ ನಾಲೆಯಲ್ಲಿ ಶವವಾಗಿ ಪತ್ತೆ!ಕೊಲೆಗೆ ಕಾರಣ ಏನ್ ಗೊತ್ತಾ?
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಪ್ರತಿ ತಿಂಗಳ ಹಣ ಬರಬೇಕು ಅಂದ್ರೆ ಏನ್ ಮಾಡಬೇಕು ಗೊತ್ತಾ?
ಹೌದು ಮೊನ್ನೆಯಷ್ಟೇ ಗೃಹಲಕ್ಷ್ಮೀ ಯೋಜನೆಗೆ ರಾಜ್ಯಾದ್ಯಂತ ಚಾಲನೇ ಸಿಕ್ಕಿದ್ದು, ಪ್ರತಿಯೊಂದು ಜಿಲ್ಲೆ, ತಾಲ್ಲೂಕು ಪಂಚಾಯ್ತಿ ವ್ಯಾಪ್ತಿಯಲ್ಲೂ ಕೂಡ ಈ ಒಂದು ಗೃಹಲಕ್ಷ್ಮಿ ಯೋಜನೆ ಚಾಲನೇ ಕಾರ್ಯಕ್ರಮ ಯಶಶ್ವಿಯಾಗಿದ್ದು, ಆದ್ರೆ ಕೆಲವೊಂದು ಮಹಿಳೆಯರಿಗೆ ಯೋಜನೆಯ ಲಾಭ ಸಿಗಿದ್ದು, ಇನ್ನು ಒಂದಷ್ಟು ಜನ ಮಹಿಳೆಯರು ಹಣ ನಮಗೆ ಬಂದಿಲ್ಲ ಅಂತ ಆತಂಕ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕೆಲವೊಂದು ತಪ್ಪುಗಳಿದಾಗಿ ಈ ರೀತಿಯಾಗಿದೆ ಅಂತ ಹೇಳಲಾಗುತ್ತಿದೆ. ಅದ್ರಲ್ಲೂ KYC ಅಪ್ಡೇಟ್ ಮಾಡಿಸದವರು, ಆಧಾರ್ ಕಾರ್ಡ್ ನ್ನು ಬ್ಯಾಂಕ್ ಖಾತೆಗೆ ಲಿಂಕ್ ಮತ್ತು NPCI ಮ್ಯಾಪಿಂಗ್ ಮಾಡಿಸದವರಿಗೆ ಹಣ ಬರುವುದಿಲ್ಲ ಅಂತ ಈ ಮೊದಲೇ ಹೇಳಲಾಗಿತ್ತು. ಹೀಗಾಗಿ ಈ ರೀತಿಯ ಸಮಸ್ಯೆಗಳಿದ್ದಗಿಯೂ ನಿಮಗೆ ಹಣ ಬರೋದಿಲ್ಲ.
ಇನ್ನು ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಮಾಹಿತಿಯಲ್ಲಿ ತಿದ್ದುಪಡಿ, ತೊಂದರೆ ಇದ್ದರೆ ಕೂಡ ಹಣ ಬರೋದಿಲ್ಲ ನಂತರ ಅದನ್ನ ಸರಿ ಮಾಡಿಸಿ ಆಧಾರ್ ಕಾರ್ಡ್ ಲಿಂಕ್, NPCI ಮ್ಯಾಪಿಂಗ್ ಮಾಡಿಸಿದರೆ ಅಂತವರಿಗೆ ಮುಂದಿನ ತಿಂಗಳಿನಿಂದ 2000 ರೂಪಾಯಿ ಹಣ ಪಡೆಯಬಹುದು. ಇನ್ನು ಇದರ ಜೊತೆಗೆ ಇದುವರೆಗೆ ಅರ್ಜಿ ಸಲ್ಲಿಸದವರು ಹಾಗೂ ತಾಂತ್ರಿಕ ತೊಂದರೆಯಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇರುವವರು ಎಲ್ಲವನ್ನು ಸರಿಮಾಡಿಕೊಂಡು ಅರ್ಜಿ ಸಲ್ಲಿಸಿದರೆ ಸೆಪ್ಟೆಂಬರ್ ನಿಂದ ಹಣ ಪಡೆಯಬಹುದು ಅಂತ ಹೇಳಲಾಗಿದೆ.
ಇದನ್ನೂ ಓದಿ: ಮಗನಿಗೆ ನನ್ನ ನೋವು ಗೊತ್ತಾಗಬಾರದು; ಅವ್ನು ಮನೆಗೆ ಬಂದು ಅಮ್ಮ ಅಂದಾಗ ಸಹಿಸಿಕೊಳ್ಳೋಕಾಗಿಲ್ಲ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram