ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಒಟ್ಟು 13 ಸಾವಿರ ಚಾಲಕ, ಚಾಲಕ ಕಮ್ ನಿರ್ವಾಹಕರ ಹುದ್ದೆಗಳ ಭರ್ತಿಗೆ ಸರ್ಕಾರದಿಂದ ಅನುಮೋದನೆ ಲಭ್ಯವಾಗಿದ್ದು, ಈ ಕುರಿತು ರಾಜ್ಯ ಸರ್ಕಾರವು ಅನುಮೋದನೆ ನೀಡಿದ್ದು, ಆರ್ಥಿಕ ಇಲಾಖೆ ಅನುಮತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಅಂತ ಸಾರಿಗೆ ಸಚಿವರು ಮಾಹಿತಿ ನೀಡಿದ್ದಾರೆ. ಹೊಸ ನೇಮಕಾತಿ ಮಾಡಿಕೊಳ್ಳಲು ಕ್ರಮಕೈಗೊಳ್ಳಲಾಗಿದ್ದು, ಇದರ ಜೊತೆಗೆ 5000 ಹೊಸ ಬಸ್ಸುಗಳ ಖರೀದಿಗೆ ಮುಖ್ಯ ಮಂತ್ರಿಗಳು 500 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿರುವ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.
ಹೌದು ಕೆಎಸ್ಆರ್ಟಿಸಿ(KSRTC) ಹಾಗೂ ಬಿಎಂಟಿಸಿ(BMTC) ಸೇರಿದಂತೆ ಎಲ್ಲ ಸಾರಿಗೆ ಸಂಸ್ಥೆಗಳು ಸೇರಿ ಒಟ್ಟು 13,000 ಡ್ರೈವರ್, ಕಂಡಕ್ಟರ್ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡುವ ಪ್ರಕ್ರಿಯೆ ನಡೆಯಲಿದೆ. ಹುದ್ದೆಗಳಿಗೆ ವಿದ್ಯಾರ್ಹತೆಯಿದ್ದು, ಚಾಲಕ ಹುದ್ದೆಗೆ ಎಸ್ಎಸ್ಎಲ್ಸಿ(SSLC) ಪಾಸಾದವರು ಮತ್ತು ಚಾಲಕ ಕಮ್ ನಿರ್ವಾಹಕ ಹುದ್ದೆಗಳಿಗೆ ಪಿಯುಸಿ(PUC) ಪಾಸಾದವರು ಅರ್ಜಿ ಸಲ್ಲಿಸಲು ಅವಕಾಶ ದೊರೆಯಲಿದೆ. ಭಾರಿ ವಾಹನ ಚಾಲನ ಪರವಾನಗಿ ಹೊಂದಿರುವವರು ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಸಿದವರಿಗೆ ಬಸ್ ಚಾಲನೆ ಕುರಿತು ಪರೀಕ್ಷೆ ನಡೆಯಲಿದ್ದು, ಮೆರಿಟ್ ಆಧಾರದಲ್ಲಿ ಸ್ಕಿಲ್ ಟೆಸ್ಟ್ಗೆ ಶಾರ್ಟ್ ಲಿಸ್ಟ್ ಮಾಡಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಅಂತಲೂ ತಿಳಿಸಲಾಗಿದೆ.
ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ಹೊರಬಂತು ಮತ್ತೊಂದು ಗುಡ್ ನ್ಯೂಸ್; 75ಲಕ್ಷ ಮನೆಗಳಿಗೆ ಉಚಿತ ಎಲ್ ಪಿಜಿ ಗ್ಯಾಸ್!
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ನೇಮಕಾತಿಗೆ ಶೀಘ್ರವೇ ಚಾಲನೇ ಸಿಗಲಿದೆ ಎಂದ ಸಚಿವ ರಾಮಲಿಂಗರೆಡ್ಡಿ
ಹೌದು ಈಗಾಗಲೇ ರಾಜ್ಯದ ಸಾರಿಗೆ ಇಲಾಖೆಯಲ್ಲಿ ಸಾಕಷ್ಟು ಸಿಬ್ಬಂದಿ ಕೊರತೆಯಿದೆ. ಹೀಗಾಗಿ, ಶೀಘ್ರವೇ ಸಾರಿಗೆ ಇಲಾಖೆಯ ಕೆಎಸ್ಆರ್ಟಿಸಿ ನಿಗಮಗಳಿಗೆ 13 ಸಾವಿರ ಸಿಬ್ಬಂದಿ ನೇಮಕ ಮಾಡಲಾಗುವುದು ಅಂತ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾರಿಗೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಕೂಡಲೇ ಸಿಬ್ಬಂದಿ ನೇಮಕಾತಿಯಾಗುತ್ತದೆ. ಒಟ್ಟು 13 ಸಾವಿರ ಸಿಬ್ಬಂದಿ ನೇಮಕ ಮಾಡ್ತೀವಿ. ಖಾಸಗಿ ಬಸ್ಸುಗಳು ಹೆಚ್ಚು ದರ ತೆಗೆದುಕೊಳ್ಳುತ್ತಿರುವ ವಿಚಾರವಾಗಿ ನನ್ನ ಗಮನಕ್ಕೆ ಬಂದಿದೆ, ಈಗಾಗಲೇ ಎಚ್ಚರಿಕೆ ಕೊಟ್ಟಿದ್ದಾರೆ. ಆ ರೀತಿ ಹೆಚ್ಚಿನ ದರ ತೆಗೆದುಕೊಳ್ತಿದ್ರೇ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ. ಗಣೇಶ ಹಬ್ಬ, ದಸರಾ ಹಬ್ಬಕ್ಕೆ ಸರ್ಕಾರಿ ಸಾರಿಗೆ ನಿಗಮಗಳಿಂದಲೂ ಸಹ ಹೆಚ್ಚು ಬಸ್ಸುಗಳನ್ನ ಸಂಚಾರ ಮಾಡಿಸ್ತೀವಿ ಅಂತ ಹೇಳಿರುವ ಸಚಿವರು, ಆಸಕ್ತಿ ಇರೋರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ ಅಂತಲೇ ಹೇಳಬಹುದು.
ಇನ್ನು ಸರ್ಕಾರದ ಶಕ್ತಿ ಯೋಜನೆಯಿಂದಾಗಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಬಸ್ ಕೊರತೆ ಹೆಚ್ಚಾಗಿದ್ದು, ಈಗಾಗಲೇ ತಿಂಗಳಲ್ಲಿಯೇ 18ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಹೀಗಾಗಿ ಕೆಲವೆಡೆ ಬಸ್ ಗಳ ಸಮಸ್ಯೆ ಉಂಟಾಗಿದೆ ಹೀಗಾಗಿ ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ 13000 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭ ಮಾಡಲಿದ್ದೇವೆ ಅಂತ ಸಾರಿಗೆ ಸಚಿವರು ಮಾಧ್ಯಮದವರೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆಯ 2ನೇ ಕಂತಿನ ಹಣ ರಿಲೀಸ್; ಮೊದಲನೇ ಕಂತಿನ ಹಣವೇ ಬಂದಿಲ್ಲ ಅನ್ನೋರು ಏನ್ ಮಾಡಬೇಕು?
ಇದನ್ನೂ ಓದಿ: ಬ್ರೇಕ್ ಅಪ್ ಮಾಡಿಕೊಂಡ ವರ್ಷ ವರುಣ್; ಸೋಶಿಯಲ್ ಮೀಡಿಯಾ ಸ್ಟಾರ್ ನಡುವೆ ಆಗಿದ್ದೇನು ಗೊತ್ತಾ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram