ಮಾಯಾ ನಗರಿ ಬೆಂಗಳೂರು ಹೆಸರಿಗೆ ಮಾತ್ರ ಮಾಯಾ ನಗರಿ ಅಲ್ಲ. ಬೆಂಗಳೂರು ಎಲ್ಲವನ್ನ ಕಲಿಸುತ್ತೆ, ಎಲ್ಲವನ್ನ ಮರೆಸಿ ಪ್ರತಿಯೊಂದನ್ನು ಪ್ರತಿಯೊಬ್ಬರನ್ನು ಬದಲಾಯಿಸಿಬಿಡುತ್ತೆ. ಅದರಲ್ಲೂ ಉದ್ಯಾನನಗರಿ, ಗಾರ್ಡನ್ಸಿಟಿ ಎಂದೆಲ್ಲಾ ಖ್ಯಾತಿ ಗಳಿಸಿರುವ ಬೆಂಗಳೂರು ನಗರಿ ಲಕ್ಷಾಂತರ ಜನರ ಪಾಲಿಗೆ ಬದುಕು ಕಟ್ಟಲು ಕೆಲಸ ನೀಡಿ ಸಹಾಯ ಮಾಡಿ ಪೊರೆದ ಹೆಮ್ಮೆಯ ನಗರಿ ಅಂತಲೇ ಹೇಳಬಹುದು. ಹಳ್ಳಿಯಲ್ಲಿರುವವರು, ಓದುತ್ತಿರುವ ಓದಿ, ಉದ್ಯೋಗದ ಹುಡುಕಾಟದಲ್ಲಿರುವ ಅನೇಕರ ಪಾಲಿಗೆ ಗಾರ್ಡನ್ ಸಿಟಿ ಅವ್ರ ಪಾಲಿನ ಕನಸಿನ ಸಿಟಿ ಅನಿಸಿಕೊಂಡಿದೆ. ಉದ್ಯೋಗ ಅರಸುವ ಸಲುವಾಗಿ ಅನೇಕರು ದೂರದ ಹಳ್ಳಿಗಳಿಂದ ಬೆಂಗಳೂರಿಗೆ ಬಂದು ಪಿಜಿಯಲ್ಲಿ ಉಳಿದು ಕೆಲಸಕ್ಕಾಗಿ ಅಲೆದಾಡುತ್ತಿರುತ್ತಾರೆ. ದುಡಿದು ತಿನ್ನುವ ಕನಸಿರುವ ಯಾರನ್ನೂ ಕೂಡ ಬೆಂಗಳೂರು ಬೇಡ ಎನ್ನುವುದಿಲ್ಲ, ಕೈ ಬೀಸಿ ಕರೆದು ಉದ್ಯೋಗ ನೀಡಿ ಹೊಸ ಕನಸಿಗೆ ರೆಕ್ಕೆ ಪುಕ್ಕ ಹುಟ್ಟಲು ನೆರವಾಗುತ್ತದೆ.
ಇಂತಹ ಕನಸಿನ ಬೆಂಗಳೂರಿಗೆ ದೂರದ ಹಳ್ಳಿಯಿಂದ ಬಂದು ಪಿಜಿಯಲ್ಲಿ ಉಳಿಯುವ ಹೆಣ್ಣು ಮಕ್ಕಳ ವಾಸ್ತವ ಚಿತ್ರಣ ಹೇಗಿರುತ್ತೆ? ಪಿಜಿಯಲ್ಲಿ ಆಹಾರ ಸರಿ ಇಲ್ಲದೆ, ಕನ್ನಡ ಮೀಡಿಯಂನಲ್ಲಿ ಓದಿದ ಕಾರಣಕ್ಕೆ ಇಂಗ್ಲೀಷ್ ಬಾರದೇ ಏನೆಲ್ಲಾ ಹೇಗೆಲ್ಲಾ ಗೋಳಾಡುತ್ತಾರೆ ಎಂಬುದನ್ನು ಹಾಡೊಂದು ತೆರೆದಿಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಹಾಡು ಸಖತ್ ವೈರಲ್ ಆಗಿದೆ. ಅಂದ ಹಾಗೆ ಈ ಹಾಡನ್ನು ಕ್ರಿಯೇಟ್ ಮಾಡಿದವರು ವಿಕಿಪಿಡಿಯಾ(Vicky Pedia) ಖ್ಯಾತಿಯ ವಿಕ್ಕಿ(Vicky) ಅನ್ನೋರು. ಸಾಕಷ್ಟು ಕಾಮಿಡಿ ವೀಡಿಯೋಗಳನ್ನು ಕ್ರಿಯೇಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿದ್ದು, ಅವುಗಳಲ್ಲಿ ಕೆಲವೊಂದು ಸಾಕಷ್ಟು ವೈರಲ್ ಕೂಡ ಆಗಿವೆ. ಅದರಲ್ಲಿ ನಾನು ನಂದಿನಿ ಸಿಕ್ಕಾಪಟ್ಟೆ ಫೇಮಸ್. ಹಾಗಾದ್ರೆ ಈ ವಿಕ್ಕಿಪಿಡಿಯ ವಿಕ್ಕಿ ಯಾರು ಇವ್ರ ಹಿನ್ನೆಲೆ ಏನು ನೋಡೋಣ ಬನ್ನಿ.
ಹೌದು ಸ್ನೇಹಿತರೆ ಸೋಶಿಯಲ್ ಮೀಡಿಯಾದಲ್ಲಿ ನಂಜುಂಡಸ್ವಾಮಿ, ಮುದ್ದುಕುಮಾರ ಅಂತ ಕರೆಸಿಕೊಳ್ಳುವ ಈ ವಿಕಿಪೀಡಿಯ(Vicky Pedia) ಯಾರು? ಇವರು ಸೋಶಿಯಲ್ ಮೀಡಿಯಾದಲ್ಲಿ ಎಂಟರ್ಟೈನ್ಮೆಂಟ್ ಗೋಸ್ಕರ ವಿಡಿಯೋ ಮಾಡೋರ ಹಿನ್ನೆಲೆ ಏನು? ಇವರು ಮಾಡಿರ್ತಕಂತ ಸಾಧನೆ ಏನು? ಎಲ್ಲವನ್ನು ನಾವಿವತ್ತು ತಿಳಿಸಿ ಕೊಡ್ತೀವಿ. ಹೌದು ಒಂದು ವಾರದಿಂದ ಸೋಶಿಯಲ್ ಮೀಡಿಯಾದಲ್ಲಿ ನಂದಿನಿ ಹಾಡು ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ. ಯಾಕಂದ್ರೆ ಈ ಹಾಡು ಮಿಡಲ್ ಕ್ಲಾಸ್ ಹೆಣ್ಣುಮಕ್ಕಳಿಗೆ ಸಖತ್ ಕನೆಕ್ಟ್ ಆಯಿತು. ಇನ್ನು ಸ್ನೇಹಿತರೆ ವಿಕಿಪೀಡಿಯ ಅನ್ನೋ ಹೆಸರಿನ ಮೂಲಕ ಕರ್ನಾಟಕದಲ್ಲಿ ಫೇಮಸ್ ಆಗಿರತಕ್ಕಂತ ಮುದ್ದು ಕುಮಾರ್ ಅವರ ಮೂಲ ಹೆಸರು ವಿಕಾಸ್ ಅಂತ, ಇವರು ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯಲ್ಲಿ.
ಇನ್ನು ಇವರ ಆರಂಭಿಕ ವಿದ್ಯಾಭ್ಯಾಸ ಜವಾಹರ್ ನವೋದಯ ವಿದ್ಯಾಲಯದಲ್ಲಿ ನಡೆಯುತ್ತೆ. ನಂತರ ಬೆಂಗಳೂರಿಗೆ ಬಂದವರು ಬೆಂಗಳೂರಿನ PESIT ಯುನಿವರ್ಸಿಟಿಯಲ್ಲಿ ಇವರು ಕಂಪ್ಯೂಟರ್ ವಿಭಾಗದಿಂದ ಪಧವಿ ಪಡೆದುಕೊಳ್ಳುತ್ತಾರೆ. ನಂತರ ಎಂಎಸಿ ಕಂಪನಿಯಲ್ಲಿ ಅವರು ಕೆಲಸವನ್ನು ಆರಂಭ ಮಾಡುತ್ತಾರೆ. ಅದಾದ ನಂತರ ದೆಹಲಿಗೆ ತೆರಳಿದ ಇವ್ರು ಅಶೋಕ ಯುನಿವರ್ಸಿಟಿಯಲ್ಲಿ ಲಿಬರಲ್ ಆರ್ಟ್ ಮೇಲೆ ಮಾಸ್ಟರ್ ಡಿಗ್ರಿ ಯನ್ನ ಪಡೆದುಕೊಳ್ಳುತ್ತಾರೆ. ಆರಂಭದಿಂದಲೂ ಕೂಡ ಕಲೆಯಲ್ಲಿ ಆಸಕ್ತಿಯನ್ನು ಹೊಂದಿದ್ದ ಇವರಿಗೆ ಓದುವಾಗ ಹಾಗೂ ಕೆಲಸ ಮಾಡುವಾಗ ರಂಗಭೂಮಿಯ ನಂಟು ಬೆಳೆಯುತ್ತೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ವಿಕಾಸ್ ಅವರಿಗೆ ವಿಕಿಪೀಡಿಯ ಅಂತ ಹೇಗೆ ಹೆಸರು ಬಂತು
ಹೀಗಾಗಿ ಆರಂಭದಲ್ಲಿ ಸ್ಟೇಜ್ ಶೋಗಳನ್ನ ಮಾಡ್ತಿದ್ದ ವಿಕಾಸ್ ನಂತರದ ದಿನಗಳಲ್ಲಿ ಒಂದೊಂದೇ ಮೆಟ್ಟಿಲುಗಳನ್ನ ಏರ್ತಾ ಬರ್ತಾರೆ. ನಂತರ ಇವರದ್ದೇ ಒಂದು ತಂಡವನ್ನು ವಿಕಾಸ್ ಕಟ್ಟಿಕೊಳ್ಳುತ್ತಾರೆ. ಅಲ್ಲಿಂದ ಸ್ಟ್ಯಾಂಡ್ ಅಪ್ ಕಾಮಿಡಿಯನ್ನ ಮಾಡಲು ಶುರು ಮಾಡ್ತಾರೆ. ಸ್ಕ್ರಿಪ್ಟೆಡ್ ಕಾಮಿಡಿಗಳನ್ನು ಮಾಡ್ತಾ ದೇಶದ ನಾನಾ ಭಾಗಗಳಲ್ಲಿ ಇವ್ರು ಸ್ಟೇಜ್ ಷೋ ಗಳನ್ನ ಕೊಡ್ತಾ ಬರ್ತಾರೆ. ನಂತರ ಸೋಶಿಯಲ್ ಮೀಡಿಯಾದಲ್ಲಿ ಯಾರು ಮಾಡದೆ ಇರತಕ್ಕಂತ ಒಂದಷ್ಟು ಕಂಟೆಂಟ್ ಗಳನ್ನು ನಾವು ಜನಕ್ಕೆ ಕೊಡಬೇಕು ಅಂತ ಡಿಸೈಡ್ ಮಾಡಿ ಸೋಶಿಯಲ್ ಮೀಡಿಯಾಗೆ ಲಗ್ಗೆ ಇಡ್ತಾರೆ. ಇನ್ನು ಆನ್ ಸ್ಪಾಟ್ ಕಾಮಿಡಿ ಮಾಡುವ ಕಲೆ ಇವರಿಗೆ ಕಾರ್ಯಗತವಾಗಿದೆ.
ಇನ್ನು ವಿಕಾಸ್ ಇದ್ದ ಹೆಸರು ವಿಕಿಪೀಡಿಯ ಆಗಿದ್ದು ಕೂಡ ಬಹಳ ಕುತೂಹಲಕಾರಿ. ಕಾಲೇಜಿನಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಸ್ನೇಹಿತೆಯೊಬ್ಬಳು ವಿಕಾಸ್ ಅವ್ರನ್ನ ವಿಕಿಪೀಡಿಯ ಅಂತ ಕರೀತಿದ್ರಂತೆ ಈಗ ಆ ವಿಕಿಪೀಡಿಯ ಅನ್ನೋ ಹೆಸರು ವಿಕಾಸ್ ಅವ್ರಿಗೆ ಸಖತ್ ಸೂಟ್ ಆಗ್ತಿದೆ. ಇನ್ನು ವಿಕಾಸವ್ರು ಕೆಲವೇ ವರ್ಷಗಳಲ್ಲಿ 350ಕ್ಕೂ ಅಧಿಕ ಸ್ಟೇಜ್ ಶೋ ಗಳನ್ನ ಕೊಡುವ ಮೂಲಕ ಇಡೀ ಭಾರತದದ್ಯಾಂತ ಸಾಕಷ್ಟು ಫೇಮಸ್ ಆದ್ರು ನಂತರ ಸೋಶಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಕ್ರಿಯರಾಗಿ ಜನರ ಮನಸ್ಸನ್ನು ಗೆಲುವಲ್ಲಿ ಯಶಸ್ವಿಯಾಗಿದ್ದಾರೆ. ಸಾಧನೆಯ ಹಾದಿಯಲ್ಲಿ ಇರತಕ್ಕಂತಹ ವಿಕಾಸ ಅವರಿಗೆ ಅವರ ಕುಟುಂಬದವರಾಗಿರಬಹುದು ಸ್ನೇಹಿತರೆ ಆಗಿರಬಹುದು ಬೆನ್ನೆಲುಬಾಗಿ ನಿಂತು ಅವ್ರಿಗೆ ಸಾಕಷ್ಟು ಸಾಥ್ ಕೊಟ್ಟಿರೋದೇ ಇವರ ಸಾಧನೆಗೆ ಕಾರಣ ಅಂತ ಸಾಕಷ್ಟು ಬಾರಿ ವಿಕಾಸ್ ಅವರೇ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಅವಳನ್ನ ಕಳೆದುಕೊಂಡು ನಾನು ಸತ್ತಿದ್ದೇನೆ! ಮಗಳನ್ನು ನೆನೆದು ಕಣ್ಣೀರಿಟ್ಟ ನಟ ವಿಜಯ್ ಆಂಟೋನಿ
ಇದನ್ನೂ ಓದಿ: 3 ವರ್ಷಗಳ ಬಳಿಕ ಮುಖಾಮುಖಿ ಆದ ಅಮ್ಮ-ಮಗ! ಮುಖ ಮುಚ್ಚಿದ್ದರೂ ಮಗನನ್ನು ಗುರುತು ಹಿಡಿದ ತಾಯಿ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram