ಚಂದವನದ ಕನ್ವರ್ ಲಾಲ್, ಜಲೀಲಾ ದಿವಗಂತ ಅಂಬರೀಶ್ ಅವ್ರ ಪುತ್ರ ಅಭಿಷೇಕ್ ಗೆ ಇಂದು ಜನುಮದಿನದ ಸಂಭ್ರಮ. ಹೌದು ಕನ್ನಡ ಚಿತ್ರರಂಗದ ಹೆಸರಾಂತ ನಟ ರೆಬಲ್ ಸ್ಟಾರ್ ಅಂಬರೀಶ್ ಮತ್ತು ಸಂಸದೆ ಸುಮಲತಾ ಅಂಬರೀಶ್ ಅವರ ಪುತ್ರ, ನಟ ಅಭಿಷೇಕ್ ಅಂಬರೀಶ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಇನ್ನು 2019 ರಲ್ಲಿ ಬಿಡುಗಡೆಯಾದ ‘ಅಮರ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ ಅಭಿಷೇಕ್ ಸದ್ಯ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ದೇ ದುನಿಯಾ ಸೂರಿ ನಿರ್ದೇಶನದ ಸಿನಿಮಾ ಮೇಲೆ ಸಾಕಷ್ಟು ಹೋಪ್ ಇದದ್ದು, ಇದರಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಅಭಿಷೇಕ್ ಹುಟ್ಟುಹಬ್ಬದ ಹಿನ್ನೆಲೆ ಇಂದು ಬ್ಯಾಡ್ ಮ್ಯಾನರ್ಸ್ ಸಿನಿಮಾದ ಹಾಡು ಬಿಡುಗಡೆಯಾಗಿದೆ. ಅದರ ಜೊತೆಗೆ ಅಂಬರೀಶ್ ಅವರಂತೆಯೇ ಲಕ್ಷಾಂತರ ಅಭಿಮಾನಿ ಬಳಗ ಹೊಂದಿರುವ ಅಭಿಷೇಕ್ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಹೌದು ನಟ ಅಭಿಷೇಕ್ ಅಂಬರೀಶ್ ಈ ಮೊದಲೇ ತಾವು ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡುವುದಿಲ್ಲ ಅಂತ ಹೇಳಿದ್ದರು. ಹೀಗಾಗಿ ತಮ್ಮ ಅಭಿಮಾನಿಗಳ ಜೊತೆಗೆ ಸಿಂಪಲ್ ಆಗಿಯೇ ಬರ್ತ್‌ಡೇ ಸೆಲಬ್ರೆಟ್ ಮಾಡಿಕೊಂಡಿದ್ದಾರೆ. ರಾತ್ರಿಯಿಂದಲೇ ಅಭಿಷೇಕ್ ಮನೆಯ ಬಳಿ ಅಭಿಮಾನಿಗಳು ಜಮಾಯಿಸಿ, ಸಿಹಿ ಹಂಚಿ, ಪರಸ್ಪರ ಸಿಹಿ ತಿನ್ನಿಸಿ ಖುಷಿ ಪಟ್ರು. ಇದೆಲ್ಲಾದಕ್ಕಿಂತ ಸ್ಪೆಷಲ್ ಅಂದ್ರೆ ಕಳೆದ ಕೆಲ ತಿಂಗಳ ಹಿಂದೆಷ್ಟೇ ಪ್ರೀತಿಸಿದಾಕೆಯ ಕೈ ಹಿಡ್ಡಿರೋ ಅಭಿಷೇಕ್ ಗೆ ಮಡದಿ ಕಡೆಯಿಂದಲೂ ಸ್ಪೆಷಲ್ ವಿಶ್ ಸಿಕ್ಕಿದೆ.
ಇತ್ತೀಚಿಗಷ್ಟೇ ನಟ ಅಭಿಷೇಕ್ ಅಂಬರೀಷ್ ತಮ್ಮ ಹುಟ್ಟುಹಬ್ಬದ ವಿಚಾರವಾಗಿ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ರು. ಹೌದು ಕೆಲವೇ ದಿನಗಳಲ್ಲಿ ನನ್ನ ಹುಟ್ಟುಹಬ್ಬ ಇರುವುದರಿಂದ ಕೆಲವೊಂದು ವಿಷಯಗಳನ್ನು ತಿಳಿಸಲು ಇಚ್ಚಿಸುತ್ತೇನೆ. ಈ ವರ್ಷ ನಮ್ಮ ರಾಜ್ಯದಲ್ಲಿ ಬರಗಾಲ ಉಂಟಾಗಿರುವುದರಿಂದ ಹಾಗೂ ನಮ್ಮ ಕಾವೇರಿಗಾಗಿ ಹಲವಾರು ಜನರು ಹೋರಾಟ ಮಾಡುತ್ತಿರುವುದರಿಂದ ಈ ವರ್ಷ ನಾನು ನನ್ನ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳಲು ಇಚ್ಚಿಸಿದ್ದೇನೆ ಎಂದು ಹೇಳಿದ್ದರು.
ಅಲ್ದೇ ಎಲ್ಲಾ ರೆಬೆಲ್ ಅಭಿಮಾನಿಗಳು ನಿಮ್ಮ ಊರುಗಳಲ್ಲಿಯೇ, ನೀವು ಇರುವಲ್ಲಿಯೇ ನನಗೆ ಶುಭಹಾರೈಸಿ ಆಶೀರ್ವಾದಿಸಿ. ಅಭಿಮಾನಿಗಳು ಪ್ರೀತಿಯಿಂದ ಮನೆ ಹತ್ತಿರ ಬಂದರೂ ಬರಬೇಡಿ ಅನ್ನುವುದು ನಮ್ಮ ಸಂಪ್ರದಾಯವಲ್ಲ. ಆದರೆ ಬಂದವರು ಯಾವುದೇ ಹಾರ, ಕೇಕ್, ಪಟಾಕಿಗಳನ್ನು ಹಾಗೂ ಉಡುಗೊರೆಗಳನ್ನು ತರದೆ ಬಂದು ಶುಭ ಹಾರೈಸಿ” ಎಂದು ಅಭಿಷೇಕ್ ಅಂಬರೀಶ್ ಬರೆದುಕೊಂಡಿದ್ದರು. ಅದರಂತೆ ಅಭಿಮಾನಿಗಳು ಮನೆಯ ಬಳಿ ಹೋಗಿ ಸರಳವಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ. ಹೌದು ದಿವಂಗತ ನಟ ಅಂಬರೀಶ್ ಅವರ ಫೋಟೋಗೆ ಪೂಜೆ ಮಾಡಿ ಮನೆಯ ಬಳಿ ಬಂದ ಫ್ಯಾನ್ಸ್ ಜೊತೆಗೆ ಫೋಟೋಗಳನ್ನು ತೆಗೆಸಿಕೊಂಡು ಸಿಂಪಲ್ ಆಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ನಟ ಅಭಿಷೇಕ್.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಪತಿಗೆ ವಿಶೇಷ ಸಾಲುಗಳ ಮೂಲಕ ವಿಶ್ ಮಾಡಿದ ಅವಿವಾ
ಇನ್ನು ಈ ವರ್ಷ ಅವಿವಾ ಬಿದ್ದಪ್ಪ ಜೊತೆ ಮದುವೆಯಾದ ಮೊದಲ ವರ್ಷ. ಮೊದಲ ವರ್ಷ ಪತಿಗೆ ಬರ್ತ್ಡೇ ವಿಶಸ್ ಅನ್ನ ಬಹಳ ವಿಶೇಷವಾಗಿ ತಿಳಿಸಿದ್ದಾರೆ. ಹೌದು ಪತಿಯ ಬರ್ತಡೇ ಗೆಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅವಿವಾ ಹಾಗೂ ಅಭಿಷೇಕ್ ಅಂಬರೀಶ್ ಅವರು ಇಬ್ಬರೂ ಜೊತೆಯಲ್ಲಿ ತೆಗೆಸಿಕೊಂಡಂತ ಕೆಲವೊಂದು ಫೋಟೋಗಳನ್ನು ಶೇರ್ ಮಾಡಿಕೊಂಡಿರುವ ಅವಿವಾ ಬಿದ್ದಪ್ಪ ಬಹಳ ಪ್ರೀತಿಯಿಂದ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.
ನಾವಿಬ್ಬರೂ ಪರಿಚಿವಾಗಿ ಬರೋಬ್ಬರಿ 6 ವರ್ಷಗಳು ಕಳೆದಿದೆ. ಈ ಆರು ವರ್ಷಗಳಲ್ಲಿ ನಾನು ನಿನ್ನಿಂದ ಸಾಕಷ್ಟು ಕಲ್ತಿದ್ದೇನೆ. ನಿನ್ನ ಜೊತೆಗಿರುವ ಪ್ರತಿ ದಿನವೂ ಪ್ರತಿ ಕ್ಷಣವೂ ನನಗೆ ಬಹಳ ವಿಶೇಷ. ನಾನು ನಿನ್ನನ್ನ ತುಂಬಾ ಪ್ರೀತಿಸುತ್ತೇನೆ. ನೀನು ನನಗೆ ಎಂದಿಗೂ ಮೊದಲನೇಯವನು ಎರಡನೆಯವನಲ್ಲ, ಐ ಲವ್ ಯು ಸೋ ಮಚ್ ಅಂತ ಬರ್ದ್ಕೊಂಡಿದ್ದಾರೆ. ಪತ್ನಿ ಅವಿವಾ ಬಿದಪ್ಪ ಬಹಳ ವಿಶೇಷವಾಗಿ ಪತಿ ಅಭಿಷೇಕ್ ಅಂಬರೀಶ್ ಗೆ ವಿಶ್ ಮಾಡಿದ್ದು ಇದನ್ನು ನೋಡಿದ ಅಭಿಷೇಕ್ ಅಂಬರೀಶ್ ಕೂಡ ಪತ್ನಿಗೆ ಲವ್ ಯು ಟು ಅಂತ ಬರೆದುಕೊಂಡಿದ್ದಾರೆ. ಹೌದು ಅವಿವ ಬಿದ್ದಪ್ಪ ಅವರು ಲವ್ ಯು 3000 ಅಂತ ಬರ್ದ್ಕೊಂಡಿದ್ದಾರೆ. ಇದಕ್ಕೆ ಅಭಿಷೇಕ್ ಕೂಡ ಲವ್ ಯು 300000 ಮೈ ಬೇಬಿ ಅಂತ ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಇಬ್ಬರ ನಡುವಿನ ಪ್ರೀತಿ ಬಹಳ ಗಟ್ಟಿಯಾಗಿದ್ದು, ಯಾರು ಏನೇ ಹೇಳಿ ಯಾರು ಏನೇ ಅಂದ್ರು ಕೂಡ ನಾವಿಬ್ಬರೂ ಚೆನ್ನಾಗಿದ್ದೀವಿ. ನಾವಿಬ್ರೂ ಚೆನ್ನಾಗಿಯೇ ಇರ್ತೀವಿ ಅನ್ನೋದು ಅವಿವ ಅವ್ರ ಮಾತಿನಲ್ಲಿ ಎದ್ದು ಕಾಣ್ತಾ ಇತ್ತು. ಪತಿಗೆ ವಿಶೇಷವಾಗಿ ಶುಭ ಕೋರಿದ್ದು, ಅಭಿಷೇಕ್ ಅಂಬರೀಶ್ ಅವರ ಅಭಿಮಾನಿಗಳಂತೂ ಫುಲ್ ಖುಷಿಯಾಗಿದ್ದಾರೆ. ಅವರು ಕೂಡ ತರೆವರಿ ಕಮೆಂಟ್ ಮಾಡ್ತಾ ಇದ್ದು. ಹುಟ್ಟು ಹಬ್ಬದ ಶುಭಾಶಯಗಳು ತಿಳಿಸುತ್ತಾ ಇದ್ದಾರೆ.
View this post on Instagram
ಇದನ್ನೂ ಓದಿ: ಕಾಮಿಡಿ ಕಿಲಾಡಿ ಖ್ಯಾತಿಯ ನಯನ ಗರಂ; ಮಗು ಆಗಿದೆ ಅಂತ ಸುಳ್ಳು ಸುದ್ದಿ ಹಾಕಿದವರಿಗೆ ಕೊಟ್ರು ಟಾಂಗ್
ಇದನ್ನೂ ಓದಿ: ಧ್ರುವ ಸರ್ಜಾ ಮಗಳ ಮೊದಲ ವರ್ಷದ ಬರ್ತಡೇ ಸಂಭ್ರಮ; ಫೋಟೋ ಮತ್ತು ವಿಡಿಯೋ ಇಲ್ಲಿದೆ ನೋಡಿ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram