ಪ್ರೀತಿ ಮಾಯೆ ಹುಷಾರು ಬಂಡಲ್ ಮಾರೋ ಬಜಾರು ಅಂತಾರೆ ಅದು ನಿಜಕ್ಕೂ ಕೆಲವೊಬ್ಬರ ಜೀವನದಲ್ಲಿ ಅಕ್ಷರಷಾ ಸತ್ಯ ಅನ್ಸುತ್ತೆ. ಸುಂದರ ಕುಟುಂಬ ಪತ್ನಿಯನ್ನ ಇಷ್ಟಗಳಿಗೆ ಇಲ್ಲ ಎನ್ನದ ಪತಿ ಪತ್ನಿಯ ಇಷ್ಟದಂತೆ ನರ್ಸಿಂಗ್ ಸೇರಿಸಿ ಚೆನ್ನಾಗಿ ಓದಿಸುತ್ತಿದ್ದ, ಆದ್ರೆ ಮಡದಿ ಮಾಡಿದ್ದು ಮಾತ್ರ ಅಂತಿಥಾ ಕೆಲಸ ಅಲ್ಲ. ತನ್ನ ಆಸೆಯನ್ನ ಪತಿ ನೆರವೇರಿಸುತ್ತಿದ್ದಾನೆ, ಅದಕ್ಕೆ ಎಷ್ಟು ತ್ಯಾಗ ಮಾಡಿದ್ದಾನೆ, ಇಷ್ಟೆಲ್ಲ ಹೊಂದುಕೊಂಡು ವಿದ್ಯಾಭ್ಯಾಸಕ್ಕೆ ಬೇಕಾಗಿರೋದು ಖರ್ಚು ನೋಡಿಕೊಳ್ಳುತ್ತಿದ್ದಾನೆ ಅನ್ನೋ ಸಣ್ಣ ಕೃತಜ್ಞತೆ ಭಾವವು ಇಲ್ಲದೆ, ಅಂತ ಪತಿಗೆ ಮೋಸ ಮಾಡಿ ಬೇರೊಬ್ಬನ ಹಿಂದೆ ಮಡದಿ ಓಡಿ ಹೋಗಿದ್ದು ನಿಜಕ್ಕೂ ಆ ಪತಿಯ ಪರಿಸ್ಥಿತಿ ಮತ್ಯಾರಿಗೂ ಬೇಡ ಅನ್ನಬಹುದು. ಓದುವ ಆಸೆ ಇದ್ದ ಪತ್ನಿಯ ಕನಸಿಗೆ ನಾನ್ಯಾಕೆ ಅದಕ್ಕೆ ಅಡ್ಡಿ ಬರಲಿ, ಆಕೆಯೂ ಓದಿ ಕೆಲಸ ಮಾಡಿ ಹೆಸರುಗಳಿಸಲ್ಲಿ ಎನ್ನುವ ನಿಸ್ವಾರ್ಥ ಪ್ರೀತಿ ಪತಿಯದ್ದು. ಹಾಗಾಗಿ ಸಾಲ ಮಾಡಿ ಪತ್ನಿಗೆ ನರ್ಸಿಂಗ್ ವಿದ್ಯಾಭ್ಯಾಸ ಮಾಡಿಸಿದ್ದ. ಆದ್ರೆ ಸಣ್ಣ ಕೃತಜ್ಞತೆಯು ಇಲ್ಲದೆ ಇದೀಗ ಪತ್ನಿ ಪ್ರಿಯಕರನೊಂದಿಗೆ ಓಡಿ ಹೋಗಿ ಮದುವೆಯಾಗಿದ್ದಾಳೆ.
ಮೊನ್ನೇಯಷ್ಟೇ ಉತ್ತರ ಪ್ರದೇಶದ ಜ್ಯೋತಿ ಮೌರ್ಯ ಕೇಸ್ ಎಲ್ಲರಿಗೂ ಗೊತ್ತಿದೆ. ಕಷ್ಟ ಪಟ್ಟು ಓದಿಸಿದ ಪತಿಯ ವಿರುದ್ಧವೇ ವರದಕ್ಷಿಣೆ ಕಿರುಕುಳ ಆರೋಪವನ್ನ ಒರಿಸಿ ಪತ್ನಿಯೇ ಪತಿಯ ವಿರುದ್ಧ ಕೇಸ್ ದಾಖಲು ಮಾಡಿದ್ಲು. ಇವತ್ತು ನಾವು ಹೇಳ್ತಿರುವ ಸ್ಟೋರಿ ಕೂಡ ಹೆಚ್ಚು ಕಡಿಮೆ ಅದೇ ಪ್ರಕರಣಕ್ಕೆ ಸ್ವಲ್ಪ ಹೋಲುತ್ತದೆ. ಸದ್ಯ ಮದುವೆಯಾಗಿ ಮಡದಿಯ ಓದಿಗೆ ಅಡ್ಡಿ ಬರಬಾರದು ಅಂತ ಓದಿಸುತ್ತಿದ್ದ ಪತಿಗೆ ಕೈ ಕೊಟ್ಟು ಪತ್ನಿ ಓಡಿ ಹೋಗಿರೋ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ.
ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆಯ ಹಣ ಇನ್ನು ಬಂದಿಲ್ವಾ? ಚಿಂತೆ ಬಿಡಿ; ಫಲಾನುಭವಿಗಳಿಗಿದೆ ಮತ್ತೊಂದು ಗುಡ್ ನ್ಯೂಸ್!
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಏನಿದು ಘಟನೆ?
ಹೌದು 2020ರಲ್ಲಿ ಮದುವೆಯಾದ ಟಿಂಕು ಕುಮಾರ್ ಯಾದವ್ ಮತ್ತು ಪ್ರಿಯಾ ಕುಮಾರಿ ಚೆನ್ನಾಗಿಯೇ ಇದ್ರು. ಆದ್ರೆ ಪತ್ನಿಗೆ ಓದುವ ಆಸೆ ಇರೋದು ತಿಳಿದ ಪತಿ ನಾನ್ಯಾಕೆ ಅದಕ್ಕೆ ಅಡ್ಡಿ ಬರಲಿ, ಆಕೆಯೂ ಓದಿ ಕೆಲಸ ಮಾಡಿ ಹೆಸರುಗಳಿಸಲಿ ಎನ್ನುವ ನಿಸ್ವಾರ್ಥ ಪ್ರೀತಿಯಿಂದ ಸಾಲ ಮಾಡಿ ಪತ್ನಿಗೆ ನರ್ಸಿಂಗ್ ವಿದ್ಯಾಭ್ಯಾಸ ಮಾಡಿಸಿದ್ದ. ಆದ್ರೆ ಇದೀಗ ಪತ್ನಿ ಪ್ರಿಯಕರನೊಂದಿಗೆ ಓಡಿ ಹೋಗಿ ಮದುವೆಯಾಗಿದ್ದಾಳೆ. ಕೂಲಿ ಮಾಡಿ ಸಾಲ ಮಾಡಿ ನರ್ಸಿಂಗ್ ಕಾಲೇಜಿಗೆ ಕಳುಹಿಸಿ ಓದಿಸಿದರೂ ಆಕೆ ತನಗೆ ಮೋಸ ಮಾಡಿ ಓಡಿ ಹೋಗಿದ್ದಾಳೆ ಎಂದು ಭಾರವಾದ ಮನಸ್ಸಿನಿಂದ ಪತಿ ಬಹಳ ನೋವಿನಲ್ಲಿದ್ದಾನೆ.
ಇನ್ನು ನವೆಂಬರ್ 2020ರಲ್ಲಿ ಟಿಂಕು ಕುಮಾರ್ ಯಾದವ್ ಅವರು ಪ್ರಿಯಾ ಕುಮಾರಿ ಅವರನ್ನು ಸಾಂಪ್ರದಾಯಿಕವಾಗಿ ವಿವಾಹವಾದರು. ಟಿಂಕು ಕೂಲಿ ಕೆಲಸ ಮಾಡುತ್ತಿದ್ದು, ಪತ್ನಿಯ ಆಸೆಯಂತೆ ಆಕೆಯನ್ನು ಶಕುಂತಲಾ ನರ್ಸಿಂಗ್ ಕಾಲೇಜಿಗೆ ಸೇರಿಸಿದ್ದ. ಇದರಲ್ಲಿ ಪತಿ 2.5 ಲಕ್ಷ ಸಾಲ ಪಡೆದು ಹಾಸ್ಟೆಲ್ ಶುಲ್ಕದ ಜತೆ ವಸತಿ, ಊಟದ ವ್ಯವಸ್ಥೆ ಮಾಡಿದ್ದಾನೆ. ಇನ್ನು ಗೊಡ್ಡಾ ಅಂತಿಮ ವರ್ಷದ ನರ್ಸಿಂಗ್ ಓದುತ್ತಿದ್ದರು. ಅಂತಿಮ ಪರೀಕ್ಷೆಯು ಕೆಲವೇ ದಿನಗಳಲ್ಲಿ ನಡೆಯೋದ್ರಲ್ಲಿತ್ತು ಆದ್ರೆ ಅಷ್ಟೋತ್ತಿಗೆ ಈ ರೀತಿಯಾಗಿದೆ. ಇನ್ನು ಈ ಘಟನೆ ಕುರಿತು ಪತಿ ಟಿಂಕು ಕುಮಾರ್ ಯಾದವ್ ಮಾತನಾಡಿ, ಸೆ.19ರಂದು ಪತ್ನಿಗೆ ಮನೆಗೆ ಹೋಗುವ ನೆಪದಲ್ಲಿ ಕಾಲೇಜು ಬಿಟ್ಟಿದ್ದರೂ ಮನೆಗೆ ಬಂದಿರಲಿಲ್ಲ. ನಂತರ ತಾನು ಗೊಡ್ಡಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಬಗ್ಗೆ ತನಿಖೆ ನಡೆಸಿದಾಗ ವಿವಾಹಿತ ಮಹಿಳೆ ಬುಧೋನಾ ಗೊಡ್ಡಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಯುವಕ ದಿಲ್ಖುಷ್ ರಾವತ್ ಜತೆ ಓಡಿ ಹೋಗಿದ್ದಾರೆ ಎನ್ನುವುದು ತಿಳಿದುಬಂದಿದೆ. ಅಲ್ದೇ ದೆಹಲಿಗೆ ಹೋಗಿ ಯಾವುದೋ ದೇವಸ್ಥಾನದಲ್ಲಿ ಮದುವೆಯಾಗಿದ್ದೇನೆ ಎಂದು ಫೋಟೊಗಳನ್ನು ಕಳುಹಿಸಿದ್ದಾಳೆ ಅಂತ ಟಿಂಕು ಹೇಳಿಕೊಂಡಿದ್ದಾನೆ. ಇನ್ನು ಕೂಲಿ ಮಾಡಿ ಸಾಲ ಮಾಡಿ ನರ್ಸಿಂಗ್ ಕಾಲೇಜಿಗೆ ಕಳುಹಿಸಿ ಓದಿಸಿದರೂ ಆಕೆ ತನಗೆ ಮೋಸ ಮಾಡಿ ಓಡಿ ಹೋಗಿದ್ದಾಳೆ ಎಂದು ಭಾರವಾದ ಮನಸ್ಸಿನಿಂದ ನೋವು ಹಂಚಿಕೊಂಡಿದ್ದು, ನಂಬಿ ಹಣ ಕೊಟ್ಟು ಓದಿಸಿದ್ದಕ್ಕೆ ಇತ್ತ ಕಡೆ ವಿದ್ಯಾಭ್ಯಾಸವೂ ಪೂರ್ಣವಾಗಿಲ್ಲ, ಕೆಲ್ಸವು ಸಿಕ್ಕಿಲ್ಲ, ಹಣವು ವ್ಯರ್ಥ ಯಾರಿಗೂ ನೆಮ್ಮದಿ ಇಲ್ಲದಂತಾಗಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ನೀನು ತಮಿಳಿನವನು ಗೆಟ್ ಔಟ್ ಅಂದ್ರು; ನನ್ನ ಸಿನಿಮಾ ಬಗ್ಗೆ ನಂಗೆ ಮಾತನಾಡಲು ಬಿಡಲಿಲ್ಲ ಅಂತ ಕಣ್ಣೀರಿಟ್ಟ ನಟ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram