Post office Schemes: ನಮ್ಮಲ್ಲಿ ಕೆಲವರಿಗೆ ಗೊತ್ತಿಲ್ಲ, ಪೋಸ್ಟ್ ಆಫೀಸ್ನಲ್ಲಿ ಯಾವ ಯಾವ ರೀತಿಯ ಯೋಜನೆಗಳು ಸೌಲಭ್ಯಗಳು ಇದೆ ಅಂತ ಮಾಹಿತಿ ಗೊತ್ತಿಲ್ಲ. ಜನ ಸ್ಟಾಕ್ ಮಾರ್ಕೆಟ್ (stock market) ಹಿಂದೆ ಮುಗಿ ಬೀಳುತ್ತಿದ್ದಾರೆ. ಆದರೆ ಅದೆಷ್ಟು ಹೈ ರಿಸ್ಕ್ ಅನ್ನ ಹೊಂದಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಕೂಡ ಜನ ಅದರ ಹಿಂದೆ ಹೋಗುವುದನ್ನು ಬಿಟ್ಟಿಲ್ಲ. ನಮ್ಮ ಹತ್ತಿರ ಇರುವ ಅಂಚೆ ಕಚೇರಿಗಳಲ್ಲೂ ಕೂಡ ಒಳ್ಳೊಳ್ಳೆ ಯೋಜನೆಗಳು ಜಾರಿಗೆ ಬರುತ್ತಿವೆ. ಏನಿದೆ ಹೇಗೆ ಉಪಯೋಗಿಸಿಕೊಳ್ಳುವುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೊಡುತ್ತೇವೆ ಪೂರ್ತಿ ಲೇಖನವಲ್ಲ ಸರಿಯಾಗಿ ಓದಿ ಅರ್ಥ ಮಾಡಿಕೊಳ್ಳಿ.
ಸ್ಟಾಕ್ ಮಾರ್ಕೆಟ್ ಯಾವಾಗಲೂ ಏರಿಳಿತವನ್ನು ಕಾಣುತ್ತದೆ. ಪೋಸ್ಟ್ ಆಫೀಸ್ನ (post office)ಕೆಲವು ಯೋಜನೆಗಳನ್ನ ನೀವು ಗಮನಿಸಿದರೆ ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡುವುದನ್ನು ಬಿಡುತ್ತೀರಾ. ಅಷ್ಟು ಒಳ್ಳೆ ಯೋಜನೆಗಳು ಈಗ ನಮ್ಮ ಅಂಚೆ ಕಚೇರಿಯಲ್ಲಿ ಲಭ್ಯವಿದೆ. ಸಣ್ಣ ಮೊತ್ತದಿಂದ ಹೂಡಿಕೆ ಮಾಡಿ ಕಡಿಮೆ ಅವಧಿಯಲ್ಲಿ ದೊಡ್ಡ ಮೊತ್ತವನ್ನು ಪಡೆಯುವ ಹಲವಾರು ಯೋಜನೆಗಳು ಜಾರಿಯಲ್ಲಿವೆ.
ಮೊದಲನೆಯದಾಗಿ ಆರ್ಡಿ (RD) ಅಂತ ನೀವು ಕೇಳಿರುತ್ತೀರಿ. ಸಾಮಾನ್ಯ ಜನರಿಗೆ ಈ ಆರ್ ಡಿ ಯ ಬಗ್ಗೆ ಗೊತ್ತೇ ಇದೆ. ಇದು ಮಾರುಕಟ್ಟೆಯನ್ನು ಅವಲಂಬಿಸಿಲ್ಲ ಆದ್ದರಿಂದ ಇದು ಅತ್ಯಂತ ಸೇಫ್ ಅಂತ ಹೇಳಬಹುದು. ಇದರಲ್ಲಿ ಇಂಟರೆಸ್ಟ್ ರೇಟ್(interest rate) ಕೂಡ ಚೆನ್ನಾಗಿರುತ್ತೆ. ಹೀಗಾಗಿ ಯಾರಾದ್ರೂ ಕೂಡ ಈ ಯೋಜನೆಯಲ್ಲಿ ಪಾಲ್ಗೊಳ್ಳಬಹುದು. ಜನರು ಧೈರ್ಯದಿಂದ ಹಣವನ್ನ ಈ ಯೋಜನೆಯಲ್ಲಿ ಪಾವತಿಸಬಹುದು. ನೀವು ಸ್ಥಿರವಾದ ಆದಾಯವನ್ನು ಗಳಿಸಲು ಸಹಾಯವಾಗುತ್ತದೆ. ಇದರಲ್ಲಿ ನೀವು 5.8% ಬಡ್ಡಿಯನ್ನು ಪಡೆದುಕೊಳ್ಳಬಹುದು. ಯಾವುದೇ ಅಪಾಯವಿಲ್ಲದೆ ನೀವು ನಿಸ್ಸಂದೇಹವಾಗಿ ಹೀಗೆ ಇದರಲ್ಲಿ ಹೂಡಿಕೆಯನ್ನು ಮಾಡಬಹುದು.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
Time Deposite:
ಇದಕ್ಕೆ ಸಮಯದ ಠೇವಣಿ ಖಾತೆ ಎಂತಲೂ ಕರೆಯಲಾಗುತ್ತದೆ. ನೀವು ಕನಿಷ್ಠ ಒಂದು ಅಥವಾ ಎರಡು ಮತ್ತು ಮೂರು ವರ್ಷ ಹೀಗೆ ನೀವು ಇದರಲ್ಲಿ 5.5% ಬಡ್ಡಿಯನ್ನ ತೆಗೆದುಕೊಳ್ಳುವುದರ ಜೊತೆಗೆ ಹೂಡಿಕೆಯನ್ನು ಮಾಡಬಹುದಾಗಿದೆ. ಇನ್ನು ಹೆಚ್ಚಿನ ಬಡ್ಡಿಯನ್ನು ನೀವು ಪಡೆಯಬೇಕು ಎಂದು ಬಯಸುವುದಾದರೆ ಐದು ವರ್ಷದ ಸಲುವಾಗಿ ನೀವು ಹಣವನ್ನ ಇಡಬೇಕಾಗುತ್ತದೆ. ಹೀಗಿದ್ದರೆ ನಿಮಗೆ 6.7% ಬಡ್ಡಿ ದರವನ್ನು ಕೊಡುತ್ತದೆ. ಇನ್ನೂ ಒಂದು ಪ್ರಮುಖವಾದ ಅಂಶ ಅಂತಂದ್ರೆ ಈ ಯೋಜನೆಯಲ್ಲಿ ನೀವು ಹಣವನ್ನು ಇಟ್ಟಿದ್ದರೆ ನಿಮಗೆ ಮಧ್ಯದಲ್ಲಿ ಹಣವನ್ನು ತೆಗೆಯಲು ಸಾಧ್ಯವಾಗುವುದಿಲ್ಲ ಅವಧಿಯ ನಂತರವೇ ನಿಮಗೆ ಬಡ್ಡಿಯ ಸಮೇತ ಹಣವು ಸಿಗುತ್ತದೆ. ಇದರಲ್ಲಿ ಕನಿಷ್ಠ ಒಂದು ವರ್ಷ ಎರಡು ವರ್ಷ ಅಥವಾ ಮೂರು ವರ್ಷ ಹಣವನ್ನು ಇಡಲೇಬೇಕು ಮಧ್ಯದಲ್ಲಿ ಹಣವನ್ನು ತೆಗೆಯಲು ಸಾಧ್ಯವಿಲ್ಲ.
National Saving Certifcate:
ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ (NSC) ಎಂತಲೂ ಕರೆಯಲಾಗುತ್ತದೆ. ಈ ಯೋಜನೆಯು ಐದು ವರ್ಷದ ಯೋಜನೆಯಾಗಿದೆ. ಇದರಲ್ಲಿ 6.8% ಬಡ್ಡಿಯಲ್ಲಿ ನಿಮಗೆ ರಿಟರ್ನ್ಅನ್ನು ಪಡೆಯಬಹುದು. ಇದರಲ್ಲಿ ನೀವು ಎಷ್ಟು ಬೇಕಾದರೂ ಹಣವನ್ನ ಹೂಡಿಕೆ ಮಾಡಬಹುದು ನೀವು ನೂರು ರೂಪಾಯಿ ಇಂದಲೂ ಸಹ ಇದರಲ್ಲಿ ಹಣವನ್ನು ಹೂಡಿಕೆ ಮಾಡಬಹುದು. ಇಂತಿಷ್ಟು ಅಂತ ಲಿಮಿಟ್ ಇಲ್ಲ. ಆದರೆ ಹಣವನ್ನ ಮಧ್ಯದಲ್ಲಿ ತೆಗೆಯಲು ಸಾಧ್ಯವಿಲ್ಲ 5 ವರ್ಷ ಅವಧಿ ಮುಗಿದ ನಂತರವೇ ನಿಮಗೆ ಹಣ ರಿಟರ್ನ್ ಸಿಗುತ್ತದೆ. ಇದು ಕೂಲಿ ಕಾರ್ಮಿಕರಿಗೆ ಇನ್ನಿತರ ಯಾವುದೇ ಬಡ ಮಹಿಳೆಯರಿಗೆ ಸಹಾಯವಾಗುವಂತಹ ಒಂದು ಯೋಜನೆಯಾಗಿದೆ. ಏಕೆಂದರೆ ಇದಕ್ಕೆ ಯಾವುದೇ ತರಹದ ನಿರ್ದಿಷ್ಟವಾದ ಹಣವನ್ನು ಕಟ್ಟಬೇಕೆಂದಿಲ್ಲ. ನಿಮ್ಮ ಹತ್ತಿರ ಎಷ್ಟು ಸಾಧ್ಯವೋ ಅಷ್ಟು ಹಣವನ್ನು ಹೂಡಿಕೆ ಮಾಡಬಹುದು. ನೂರು ರೂಪಾಯಿ ಇಂದ ಹಿಡಿದು ಲಕ್ಷಗಳ ವರೆಗೂ ಇದರಲ್ಲಿ ಹೂಡಿಕೆಯನ್ನು ಮಾಡಬಹುದು. ಈ ರೀತಿಯಲ್ಲಿ ನಮ್ಮ ಅಂಚೆ ಕಚೇರಿಯು ಜನಗಳಿಗೆ ಉಪಯೋಗವಾಗುವಂತೆ ಒಳ್ಳೆಯ ಯೋಚನೆಗಳನ್ನು ಜಾರಿಗೆ ತಂದಿದೆ. ಜನರು ಇದನ್ನ ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಇದರಲ್ಲಿ ಯಾವುದೇ ಅಪಾಯವಿಲ್ಲ. ನೀವು ಹೂಡಿಕೆ ಮಾಡಿದ ಹಣ ಸೇಫ್ ಆಗಿ ಇರುವುದಲ್ಲದೇ, ಒಳ್ಳೆಯ ರಿಟರ್ನ್ ಕೂಡ ನೀವು ಪಡೆಯಬಹುದಾಗಿದೆ.
ಇದನ್ನೂ ಓದಿ: ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯವನ್ನು ಪಡೆಯಬೇಕಾ ಹಾಗಾದರೆ ಈ ಕೃಷಿಯನ್ನು ಆರಂಭಿಸಿ
ಇದನ್ನೂ ಓದಿ: ಅಕ್ಕಿ ಹಣ ನಿಮಗೆ ಬಂದಿಲ್ಲ ಅಂತಂದ್ರೆ ಹೀಗೆ ಮಾಡಿ. ಖಂಡಿತವಾಗಲೂ ನಿಮಗೆ ಹಣವನ್ನ ಪಡೆಯಲು ಸಹಾಯವಾಗುತ್ತೆ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram