PM Vishwakarma Yojana: ಪಿ.ಎಂ ವಿಶ್ವಕರ್ಮ ಯೋಜನೆ ಮಾಹಿತಿ ಮತ್ತು ಅರ್ಜಿ ಸಲ್ಲಿಕೆಯ ಸಂಪೂರ್ಣ ವಿಧಾನ

PM Vishwakarma Yojana

PM Vishwakarma Yojana: ನಮ್ಮ ದೇಶದಲ್ಲಿ ಇರುವ ಕುಶಲಕರ್ಮಿಗಳನ್ನ ಬೆಂಬಲಿಸಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಪಿಎಂ ವಿಶ್ವಕರ್ಮ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ 15 2023 ರಂದು ಜನತೆಗೆ ಪರಿಚಯ ಮಾಡಿದರು. ನಂತರ ಸೆಪ್ಟೆಂಬರ್ 17ರಂದು ಈ ಯೋಜನೆಯನ್ನ ಜಾರಿಗೊಳಿಸಲಾಯಿತು. ಈ ಯೋಜನೆಯ ಅಡಿಯಲ್ಲಿ ಕುಶಲಕರ್ಮಿಗಳು ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಬಹುದಾಗಿದೆ. ಇದು ಸ್ಥಳೀಯ ಕುಶಲಿಕರ್ಮಿಗಳಿಗಾಗಿ ನಿರ್ಮಿಸಲಾದ ಯೋಜನೆಯಾಗಿದೆ. ಈ ಯೋಜನೆಯ ಅಡಿಯಲ್ಲಿ 30 ಲಕ್ಷ ಕುಶಲ ಕಾರ್ಮಿಕ ಕುಟುಂಬಗಳು ಸುಮಾರು 15 ಸಾವಿರ ಕೋಟಿ ರೂಪಾಯಿಗಳ ಸಾಲಗಳನ್ನ ಪಡೆಯುವ ನಿರೀಕ್ಷೆ ಇದೆ. ಈ ಯೋಜನೆಯು ಸಾಮಾನ್ಯ ಕುಶಲಕರ್ಮಿಗಳು ಮತ್ತು ಸಣ್ಣ ವ್ಯಾಪಾರವನ್ನು ಆರಂಭಿಸುವವರಿಗೆ ಬೆಂಬಲವನ್ನ ನೀಡುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಯೋಜನೆಯನ್ನು ಆರಂಭಿಸಿದರು. ಈ ಯೋಜನೆಯು ನಮ್ಮ ಸಾಂಪ್ರದಾಯಿಕ ಕುಶಲ ಕಾರ್ಮಿಗಳನ್ನ ಆರ್ಥಿಕವಾಗಿ ಬಲಪಡಿಸುವಲ್ಲಿ ನೆರವು ನೀಡುತ್ತದೆ. ಈ ಯೋಜನೆಯ ಅಡಿಯಲ್ಲಿ ಅಕ್ಕಸಾಲಿಗರು, ಕಮ್ಮಾರರು, ಕೇಶವಿನ್ಯಾಸಕರು, ಬಟ್ಟೆ ಒಗೆಯುವವರು, ಮೇಸ್ತ್ರಿಗಳು ಮತ್ತು ಮಾರಾಟಗಾರರು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ.

WhatsApp Group Join Now
Telegram Group Join Now

ನಮ್ಮ ದೇಶದಲ್ಲಿ ಹಲವಾರು ಆರ್ಥಿಕವಾಗಿ ಕಷ್ಟಪಡುವ ಮತ್ತು ಉತ್ತಮ ಜೀವನ ಶೈಲಿಯನ್ನು ಹೊಂದಿರದ ಕುಶಲ ಕಾರ್ಮಿಕರನ್ನು ಬೆಂಬಲಿಸುವುದು ಈ ಯೋಜನೆಯ ಉದ್ದೇಶವಾಗಿದೆ. ನಮ್ಮ ದೇಶದಲ್ಲಿರುವ ಎಷ್ಟೋ ಅದ್ಭುತ ಕುಶಲ ಕಾರ್ಮಿಕರಗಳು ಅವಕಾಶ ಇಲ್ಲದೆ ಆರ್ಥಿಕವಾಗಿ ಬೆಂಬಲ ಇಲ್ಲದೆ ಸುಮ್ಮನೆ ಕುಳಿತಿದ್ದಾರೆ. ಅಂತಹವರಿಗೆ ಬದುಕನ್ನು ಕಟ್ಟಿಕೊಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯಿಂದ ನಮ್ಮ ದೇಶದ ಆರ್ಥಿಕತೆಯೂ ಕೂಡ ಸುಧಾರಿಸುತ್ತದೆ.ವಿಶ್ವಕರ್ಮ ಯೋಜನೆಯು ಆನ್ಲೈನ್ ನೊಂದಣಿಯನ್ನ ಒದಗಿಸುತ್ತಿದೆ. ನೊಂದಾಯಿಸುವವರು ಆನ್ಲೈನ್ ಮೂಲಕ ನೊಂದಾಯಿಸಿಕೊಂಡು ಅದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಪಿಎಂ ವಿಶ್ವಕರ್ಮ ಯೋಜನೆಗೆ(PM Vishwakarma Yojana) ಅರ್ಜಿಯನ್ನು ಸಲ್ಲಿಸುವ ಬಗ್ಗೆ

ಅರ್ಜಿಯನ್ನು ಸಲ್ಲಿಸುವವರು ಈ ಹಂತಗಳನ್ನು ಅನುಸರಿಸಬೇಕಾಗಿ ವಿನಂತಿ

ಮೊದಲು ನೀವು ಮಾಡಬೇಕಾಗಿರುವುದು ಇಷ್ಟೇ,

  • ವಿಶ್ವಕರ್ಮ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. https://pmvishwakarma.gov.in/
  • ನಿಮ್ಮ ಖಾತೆಯನ್ನು ಕ್ರಿಯೇಟ್ ಮಾಡಿ.
  • ನಿಮ್ಮ ವೈಯಕ್ತಿಕ ವಿವರಗಳನ್ನು ಇಲ್ಲಿ ನಮೂದಿಸಬೇಕು.
  • ನಿಮಗೆ ಬೇಕಾದ ಕೋರ್ಸ್ ನ್ನ ಆಯ್ಕೆ ಮಾಡಿ.
  • ನಿಮ್ಮ ಗುರುತಿನ ಚೀಟಿ ಮತ್ತು ಶೈಕ್ಷಣಿಕ ಮಾನದಂಡಗಳನ್ನು ನೀವು ಇಲ್ಲಿ ಅಪ್ಲೋಡ್ ಮಾಡಬೇಕಾಗುತ್ತದೆ.
  • ನಿಮ್ಮ ಅರ್ಜಿಯನ್ನು ಪರಿಶೀಲಿಸಿದ ನಂತರ ಓಕೆ ಅನ್ನು ಒತ್ತಿರಿ.

ವಿಶ್ವಕರ್ಮ ಯೋಜನೆಯ ಉದ್ದೇಶ

ನಮ್ಮ ದೇಶದಲ್ಲಿರುವಂತಹ ಕಲಾವಿದರು ಮತ್ತು ಕುಶಲಕರ್ಮಿಗಳನ್ನ ಮುಂದೆ ತರುವುದು ಇವರ ಉದ್ದೇಶವಾಗಿದೆ ಹಾಗೂ ಇವರಿಗೆ ಬದುಕನ್ನ ಕಟ್ಟಿಕೊಳ್ಳುವುದು ಬೇಕಾದ ಎಲ್ಲಾ ಅನುಕೂಲಗಳನ್ನು ಒದಗಿಸುವುದು ಈ ವಿಶ್ವಕರ್ಮ ಯೋಜನೆಯ ಉದ್ದೇಶ ಅಂತಾನೆ ಹೇಳಬಹುದು. ಇನ್ನು ಆರ್ಥಿಕವಾಗಿ ಇವರಿಗೆ ಉದ್ಯಮಕ್ಕೆ ಸಂಬಂಧಿಸಿದಂತೆ ಅವರ ಕೌಶಲ್ಯಗಳನ್ನು ಮುಂದುವರೆಸಿಕೊಂಡು ಹೋಗಲು ಅವರಿಗೆ ಬೇಕಾದಂತಹ ಆರ್ಥಿಕ ನೆರವನ್ನು ನೀಡುವುದು. ಮತ್ತು ಉತ್ಪನ್ನದ ಗುಣಮಟ್ಟವನ್ನು ಸುಧಾರಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಮತ್ತು ಸರಕು ಮತ್ತು ಮಾರಾಟವನ್ನು ಉತ್ತೇಜಿಸಲಾಗುತ್ತದೆ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram

ವಿಶ್ವಕರ್ಮ ಯೋಜನೆಯ ಅರ್ಹತೆಗಳು 

ಅರ್ಜಿಯನ್ನು ನೊಂದಾಯಿಸಲು 18 ವರ್ಷ ತುಂಬಿರಬೇಕು. ಯೋಜನೆ ಅಡಿಯಲ್ಲಿ ಸಾಲವನ್ನು ಪಡೆಯುವಂತವರು ಇತರ ಯಾವುದೇ ಸರಕಾರಿ ಸಾಲವನ್ನು ಹೊಂದಿರುವಂತಿಲ್ಲ. ಒಂದು ಕುಟುಂಬದಲ್ಲಿ ಗಂಡ ಹೆಂಡತಿ ಮತ್ತು ಅವಿವಾಹಿತ ಮಕ್ಕಳು ಈ ಅನುಕೂಲಗಳನ್ನು ಪಡೆಯಬಹುದಾಗಿದೆ.

ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಬರುವಂತಹ ವ್ಯಾಪಾರಗಳು 

ಮರದ ಆಧಾರಿತ ಕೆಲಸಗಳು, ಕಬ್ಬಿನ ಮತ್ತು ಕಲ್ಲು ಆಧಾರಿತ ಕೆಲಸಗಳು, ಚಿನ್ನ ಬೆಳ್ಳಿ ಆಧಾರಿತ ಹಾಗೂ ಮಣ್ಣಿನ ಆಧಾರಿತ ಕೆಲಸಗಳು ಹಾಗೂ ಚರ್ಮದ ಆಧಾರಿತ ಕೆಲಸಗಳು ಮತ್ತು ಗೊಂಬೆ ತಯಾರಕರು ಕ್ಷೌರಿಕರು, ಟೈಲರ್ಗಳು, ಮೀನುಗಾರರು ಇವರೆಲ್ಲ ವಿಶ್ವಕರ್ಮ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ.

ವಿಶ್ವಕರ್ಮ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲೆಗಳು 

  • ಆಧಾರ ಕಾರ್ಡ್ ಬೇಕು.
  • ನೀವು ನಿಮ್ಮ ಗುರುತಿನ ಚೀಟಿಯನ್ನು ಒಳಗೊಂಡಿರಬೇಕು.
  • ಪಾನ್ ಕಾರ್ಡ್.
  • ನೀವು ಯಾವ ಮನೆಯಲ್ಲಿ ವಾಸಿಸುತ್ತಿರೋ ಆ ಮನೆಯ ಪ್ರಮಾಣ ಪತ್ರ.
  • ದೂರವಾಣಿ ಸಂಖ್ಯೆ.
  • ಬ್ಯಾಂಕ್ ಖಾತೆಯ ವಿವರಗಳು.
  • ಆದಾಯ ಪ್ರಮಾಣ ಪತ್ರ.
  • ಜಾತಿ ಪ್ರಮಾಣ ಪತ್ರ.

ವಿಶ್ವಕರ್ಮ ಯೋಜನೆಯ ಉಪಯೋಗಗಳು

ಕುಶಲ ಕಾರ್ಮಿಕರು ಇದರಿಂದ ಒಳ್ಳೆಯ ಆದಾಯವನ್ನು ಗಳಿಸಬಹುದು. ಹಾಗೂ ನಮ್ಮ ಕರಕುಶಲತೆಯ ಸಂಪ್ರದಾಯವನ್ನು ಬೆಳೆಸಿದ ಹಾಗೆ ಆಗುತ್ತದೆ. ಇದು ನಮ್ಮ ದೇಶದ ಒಂದು ಸಂಸ್ಕೃತಿ ಇದನ್ನು ನಾವು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮ ಕರ್ತವ್ಯ. ಭಾರತ ದೇಶದ ಕರಕುಶಲ ವಸ್ತುಗಳು ಜಾಗತಿಕ ಮಟ್ಟದಲ್ಲಿ ಹೆಚ್ಚು ಸ್ಪರ್ಧಾತ್ಮಕತೆಯನ್ನು ಗಳಿಸಬಹುದಾಗಿದೆ.

ಅರ್ಜಿ ಸಲ್ಲಿಸುವವರು ಇವಿಷ್ಟು ದಾಖಲಾತಿಗಳನ್ನ ಒದಗಿಸಬೇಕಾಗುತ್ತದೆ. ಸ್ನೇಹಿತರೆ, ಕೇಂದ್ರ ಸರ್ಕಾರವು ನಮ್ಮ ಸಂಪ್ರದಾಯಾತ್ಮಕತೆಯಾದ ಕೌಶಲ್ಯಗಳನ್ನು ಮುಂದುವರೆಸಲು ಹಾಗೂ ಕುಶಲ ಕಾರ್ಮಿಕರಿಗೆ ಬೆಂಬಲವನ್ನ ನೀಡುವ ಸಲುವಾಗಿ ಈ ಯೋಜನೆಯನ್ನು ರೂಪಿಸಿದೆ. ಇದರ ಸಂಪೂರ್ಣ ಉಪಯೋಗದೊಂದಿಗೆ ನೀವು ನಿಮ್ಮ ಜೀವನವನ್ನು ಕಟ್ಟಿಕೊಳ್ಳಬಹುದಾಗಿದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ಇದನ್ನೂ ಓದಿ: ಪೋಸ್ಟ್ ಆಫೀಸ್ ನ ಈ ಸ್ಕೀಮ್ ನಲ್ಲಿ ಹಣವನ್ನು ಹೂಡಿಕೆ ಮಾಡಿ. ಐದು ವರ್ಷದ ಒಳಗೆ ನೀವು ಮೂರು ಪಟ್ಟು ಹಣವನ್ನು ಗಳಿಸಬಹುದು.

ಇದನ್ನೂ ಓದಿ: ಹೇಗಿದೆ ಇಂದಿನ ಚಿನ್ನ, ಬೆಳ್ಳಿಯ ದರ? ಒಮ್ಮೆ ಬೆಲೆ ಪರಿಶೀಲಿಸಿ