ಸ್ನೇಹಿತರೆ ಆಟ ಯಾವತ್ತಿದ್ರೂ ಮೈದಾನಕ್ಕೆ ಮಾತ್ರ ಸೀಮಿತವಾಗಬೇಕು, ಅಲ್ಲಿನ ಸರಿ ತಪ್ಪುಗಳನ್ನ ಅಲ್ಲಿಯೇ ಬಿಟ್ಟು ಹೊರಬರಬೇಕು ಇಲ್ಲವಾದಲ್ಲಿ ಇಲ್ಲದ ತಲೆನೋವು ಮನಸ್ತಾಪಗಳು ಶುರುವಾಗಿತ್ತೇ. ಸದ್ಯ ಇದೀಗ ಇಬ್ಬರು ಕ್ರಿಕೆಟರ್ ನಡುವಿನ ಮುನಿಸು ಮುರಿದಿದ್ದು ಇಬ್ಬರು ಒಂದಾಗಿದ್ದಾರೆ. ಹೌದು 2023ರ ಮೇ 1 ರಂದು ಲಖನೌದಲ್ಲಿ ನಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಮತ್ತು ನವೀನ್ ಉಲ್ ಹಕ್ ವಾಗ್ವಾದ ನಡೆಸಿದ್ದರು. ಈ ಪಂದ್ಯದಲ್ಲಿ ಆರ್ಸಿಬಿ 18 ರನ್ಗಳ ಜಯ ಸಾಧಿಸಿತ್ತು. ಪಂದ್ಯದ ನಂತರ ವಿರಾಟ್ ಕೊಹ್ಲಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್(Gautam Gambhir) ಮುಂದೆಯೇ ವಾಗ್ವಾದ ನಡೆದಿತ್ತು. ಆ ಬಳಿಕ ಗಂಭೀರ್ ಎಲ್ಲೇ ಕಾಣಿಸಿಕೊಂಡರು ಕೊಹ್ಲಿ ಅಭಿಮಾನಿಗಳ ಕೊಹ್ಲಿ, ಕೊಹ್ಲಿ ಎಂದು ಕೂಗುವ ಮೂಲಕ ಗಂಭೀರ್ ಅವರನ್ನು ಕೆಣಕುತ್ತಿದ್ದಾರೆ.
ನವೀನ್ ಉಲ್ ಹಕ್ ಅವರಿಗೂ ಇದೇ ಅನುಭವ ಆಗಿತ್ತು. ಈಗ ಕೊಹ್ಲಿಯು ರಾಜಿ ಮಾಡಿಕೊಂಡಿರುವುದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಹೌದು ಐಪಿಎಲ್ ನಲ್ಲಿ ಶುರುವಾಗಿದ್ದೇ ಆಗಿದ್ದು ಭಾರತ ತಂಡದ ವಿರಾಟ್ ಕೊಹ್ಲಿ ಮತ್ತು ಆಫ್ಘಾನಿಸ್ತಾನದ ವೇಗಿ ನವೀನ್ ಉಲ್ ಹಕ್ ಜಗಳ ಕೊನೆಗೂ ವಿಶ್ವಕಪ್ ಪಂದ್ಯಾವಳಿಯಲ್ಲಿ ಅಂತ್ಯವಾಗಿದ್ದು ಇಬ್ಬರೂ ಆಟಗಾರರೂ ಪರಸ್ಪರ ಹಸ್ತಲಾಘವ ಮಾಡಿಕೊಂಡು ನಗು ಚೆಲ್ಲಿ ಮುನಿಸು ಮರೆತಿದ್ದಾರೆ.
ಹೌದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಅಫ್ಗಾನಿಸ್ತಾನದ ನಡುವಿನ ಪಂದ್ಯದಲ್ಲಿ ಇಬ್ಬರು ಆಟಗಾರರು ಹಸ್ತಲಾಘವ ಮಾಡಿ, ತಬ್ಬಿಕೊಂಡು ದ್ವೇಷವನ್ನು ಮರೆತರು. ಪಂದ್ಯದ ಬಳಿಕ ಇಬ್ಬರೂ ಆಟಗಾರರು ಸ್ನೇಹದಿಂದ ವರ್ತಿಸುವುದು ಕಂಡುಬಂತು. ಬ್ಯಾಟಿಂಗ್ ಮಾಡುತ್ತಿದ್ದ ಕೊಹ್ಲಿ ಬಳಿ ಬಂದ ನವೀನ್ ಉಲ್ ಹಕ್ ನಗುವಿನಿಂದಲೇ ಕೊಹ್ಲಿಯಲ್ಲಿ ಅಪ್ಪಿ ನಗುತ್ತಲೇ ಮಾತನಾಡಿಸಿದರು. ಈ ವೇಳೆ ಕೊಹ್ಲಿ ಕೂಡ ನಗುತ್ತಲೇ ಉತ್ತರಿಸಿದ್ದು ಮಾತ್ರವಲ್ಲದೇ ನವೀನ್ ರನ್ನು ಅಪ್ಪಿ ಪರಸ್ಪರ ಥಮ್ಸಪ್ ತೋರಿಸಿದರು. ಆ ಮೂಲಕ ಇಬ್ಬರ ಜಗಳ ಅಂತ್ಯವಾಗಿರುವುದನ್ನು ಜಗತ್ತಿಗೇ ತೋರಿಸಿದರು.
ಇನ್ನು ಇದಕ್ಕೂ ಮೊದಲು ಕೊಹ್ಲಿ ಮತ್ತು ಟೀಂ ಇಂಡಿಯಾ ಅಭಿಮಾನಿಗಳು ನವೀನ್ ಉಲ್ ಹಕ್ ಎಲ್ಲಿಗೆ ಹೋದರೆ ಅಲ್ಲಿ.. ಭಾರತದ ಯಾವುದೇ ಮೈದಾನದಲ್ಲಿ ಆಡಿದರು ಕೊಹ್ಲಿ ಕೊಹ್ಲಿ ಎಂದು ಕೂಗಿ ಅವರನ್ನು ಗೇಲಿ ಮಾಡುತ್ತಿದ್ದರು. ಈ ಪಂದ್ಯದಲ್ಲೂ ಕೂಡ ನವೀನ್ ಉಲ್ ಹಕ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡಲು ಬಂದಾಗ ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರು ‘ಕೊಹ್ಲಿ, ಕೊಹ್ಲಿ’ ಎಂದು ಕೂಗುತ್ತಿದ್ದರು. ಆದರೆ ಇದೇ ಪಂದ್ಯದಲ್ಲಿ ಇಬ್ಬರೂ ಆಟಗಾರರು ಪರಸ್ಪರ ಒಂದಾಗುವ ಮೂಲಕ ತಮ್ಮ ನಡುವೆ ಯಾವುದೇ ಮುನಿಸಿಲ್ಲ ಎಂದು ತೋರಿಸಿದ್ದಾರೆ. ಈ ಬಗ್ಗೆ ಗಂಭೀರ್ ಅವ್ರು ಕೂಡ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಕುಸ್ತಿ ಆಟದ ಒಳಗೆ ಹೊರಗಲ್ಲ ಅಂತ ತೋರಿಸಿದ ಕಿಂಗ್ ಕೊಹ್ಲಿ
ಎಲ್ಲರಿಗೂ ಗೊತ್ತಿರುವಂತೆ ವಿರಾಟ್ ಕೊಹ್ಲಿ ಇರುವುದೇ ಹಾಗೆ. ಮೈದಾನದಲ್ಲಿ ಪ್ರತಿಸ್ಪರ್ಧಿ ಆಟಗಾರರೊಂದಿಗೆ ಕದನಕ್ಕಿಳಿಯುವ, ಸ್ಲೆಡ್ಜಿಂಗ್ ಮಾಡಿದರೆ ಅಲ್ಲಿಯೇ ತಿರುಗೇಟು ಕೊಡುವ, ಆಸ್ಟ್ರೇಲಿಯಾದಂತಹ ಆಸ್ಟ್ರೇಲಿಯಾ ಆಟಗಾರರನ್ನೇ ಸ್ಲೆಡ್ಜಿಂಗ್ ಮೂಲಕ ಭಯ ಹುಟ್ಟಿಸಿರೋ ಕೊಹ್ಲಿ, ಮೈದಾನದ ಹೊರಗೆ ಯಾವುದೇ ದ್ವೇಷ ಇಟ್ಟುಕೊಳ್ಳುವುದಿಲ್ಲ. ಮೈದಾನದಲ್ಲಿ ವಾಗ್ವಾದ ನಡೆದರೂ ಬಳಿಕ ಅದನ್ನು ಸಾಧಿಸುವುದಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ವಿರಾಟ್ ಕೊಹ್ಲಿ ಅವರು ಭಾರತ-ಆಫ್ಘನ್ ಪಂದ್ಯದ ವೇಳೆ ನವೀನ್ ಉಲ್ ಹಕ್ ಅವರ ಜತೆ ರಾಜಿ ಮಾಡಿಕೊಳ್ಳುವ ಮೂಲಕ ಎಲ್ಲರ ಮನಗೆದ್ದಿದ್ದಾರೆ. ಹಾಗೆಯೇ, ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ಅವರು ಐಪಿಎಲ್ನಲ್ಲಿ ಜಗಳ ಆಡುವಾಗ ಮಧ್ಯಪ್ರವೇಶಿಸಿದ್ದ ಗೌತಮ್ ಗಂಭೀರ್(Gautam Gambhir) ಈಗ ರಾಜಿ ಕುರಿತು ಪ್ರತಿಕ್ರಿಯಿಸಿದ್ದಾರೆ.
ನೀವು ಮೈದಾನದಲ್ಲಿ ಜಗಳ ಆಡುತ್ತೀರಿಯೇ ಹೊರತು ಮೈದಾನದ ಹೊರಗೆ ಅಲ್ಲ. ಪ್ರತಿಯೊಬ್ಬ ಆಟಗಾರನೂ ತನ್ನ ತಂಡದ ಪರ ಹೋರಾಡುತ್ತಾನೆ. ಆತ್ಮಗೌರವ ಹಾಗೂ ಗೆಲುವಿಗಾಗಿ ಜಗಳಕ್ಕಿಳಿಯುತ್ತಾನೆ. ನೀವು ಯಾವ ದೇಶದವರೇ ಆಗಿರಿ, ಎಷ್ಟೇ ದೊಡ್ಡ ಆಟಗಾರನಾಗಿರಿ, ಗೆಲುವಿಗಾಗಿ ಮಾಡುವ ಹೋರಾಟ ದೊಡ್ಡದು. ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ಅವರು ಮತ್ತೆ ಒಂದಾಗಿದ್ದು ಖುಷಿ ತಂದಿದೆ. ಆದರೆ, ಜನರು ಸಾಮಾಜಿಕ ಜಾಲತಾಣಗಳಲ್ಲಿ, ಮೈದಾನದಲ್ಲಿ ಯಾವುದೇ ಆಟಗಾರನಿಗೆ ಟ್ರೋಲ್ ಮಾಡಬಾರದು’ ಎಂದು ಗೌತಮ್ ಗಂಭೀರ್ ಅವರು ಕಾಮೆಂಟರಿ ಮಾಡುವಾಗ ಹೇಳಿದ್ದಾರೆ.
Virat & Navin ul HaQ 🤝 #INDvsAFG pic.twitter.com/xC6AXGfd4R
— HARDIK THACKER (@iamHardik42) October 11, 2023
ಇದನ್ನೂ ಓದಿ: ನಿಮ್ಮ ಸ್ವಂತ ಮನೆ ನನಸಾಗಬೇಕಾ? ಹಬ್ಬಕ್ಕೂ ಮುನ್ನ ಕೇಂದ್ರ ಸರ್ಕಾರದದಿಂದ ಗುಡ್ ನ್ಯೂಸ್
ಇದನ್ನೂ ಓದಿ: ಪೋಸ್ಟ್ ಆಫೀಸ್ ಸ್ಕೀಮ್ ಗಳಲ್ಲಿ ಅತಿ ಹೆಚ್ಚು ಲಾಭ ಸಿಗುವ ಯೋಜನೆಗಳು ಯಾವುವು?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram