ಇನ್ನೇನು ಹಬ್ಬಗಳ ಸಾಲು ಶುರುವಾಗಿದೆ ಮನೆಯಲ್ಲಿ ಎಲ್ಲೆಲ್ಲಿಯೂ ಕೂಡ ಸಂಭ್ರಮವು ಕಳೆ ತರುತ್ತಿದೆ. ಹಬ್ಬಗಳು ಕೇವಲ ಸಂಪ್ರದಾಯ ಅಷ್ಟೇ ಅಲ್ಲದೆ ನಮ್ಮ ಮನಸ್ಸನ್ನು ಕೂಡ ರಿಫ್ರೆಶ್ ಮಾಡುತ್ತವೆ. ಈ ಹಬ್ಬಗಳ ಹಿನ್ನೆಲೆ ಮತ್ತೊಂದಿದೆ. ಹಬ್ಬಗಳನ್ನು ಆಚರಿಸುವುದರಿಂದ ನಾವು ಕೆಲವಷ್ಟು ಜನರಿಗೆ ಇದು ಉದ್ಯೋಗವನ್ನು ದೊರಕಿಸಿಕೊಡುತ್ತದೆ. ಇದೇ ಸಮಯದಲ್ಲಿ ಕೆಲವೊಂದು ವ್ಯಾಪಾರವನ್ನು ನಾವು ಆರಂಭಿಸಿದರೆ ದುಪಟ್ಟು ಲಾಭವನ್ನು ಪಡೆಯಬಹುದಾಗಿದೆ. ಸ್ವಲ್ಪ ಸಮಯದಲ್ಲೇ ಹೆಚ್ಚು ಹಣವನ್ನು ಗಳಿಕೆ ಮಾಡಬಹುದು ಹಾಗಾದರೆ ಆ ವ್ಯಾಪಾರವು(business) ಯಾವುದು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಸಿಕೊಡುತ್ತೇವೆ ಪೂರ್ತಿಯಾಗಿ ಲೇಖನವಲ್ಲ ಓದಿ ಮಾಹಿತಿಯನ್ನು ತಿಳಿದುಕೊಳ್ಳಿ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
God’s Statue shop:
ನಮ್ಮ ಹಿಂದೂ ಸಂಪ್ರದಾಯಗಳಲ್ಲಿ ಹಬ್ಬ ಹರಿದಿನ ಅಂದರೆ ದೇವರನ್ನು ಪೂಜಿಸುತ್ತಾರೆ. ಪೂಜೆ ಇಲ್ಲದೆ ಯಾವ ಹಬ್ಬವನ್ನು ಕೂಡ ನಾವು ಆಚರಿಸುವುದಿಲ್ಲ ಇದು ಎಲ್ಲರಿಗೂ ಗೊತ್ತೇ ಇರುವ ವಿಚಾರ ನಮ್ಮ ಪುರಾತನ ಕಾಲದಿಂದಲೂ ಕೂಡ ಇದೇ ರೀತಿಯಾಗಿ ನಡೆದುಕೊಂಡು ಬಂದಿದ್ದೇವೆ. ಹಾಗಾಗಿ ಈ ಸಮಯದಲ್ಲಿ ಬಹಳ ಜನರು ದೇವರ ಮೂರ್ತಿಯನ್ನು ಕೊಂಡುಕೊಳ್ಳುತ್ತಾರೆ ಇದರಿಂದ ದೇವರ ಮೂರ್ತಿಗಳ ಅಂಗಡಿಯನ್ನು ನೀವು ತೆರೆದಿದ್ದರೆ ಖಂಡಿತವಾಗಲೂ ಉತ್ತಮ ಲಾಭವನ್ನು ಗಳಿಸಬಹುದಾಗಿದೆ. ಹೆಚ್ಚು ಹೂಡಿಕೆ ಇಲ್ಲದೆ ಅದಕ್ಕೆ ಲಾಭ ಗಳಿಸುವ ಒಂದು ವ್ಯಾಪಾರ ಅಂತಂದ್ರೆ ವಿಗ್ರಹದ ಅಂಗಡಿಯನ್ನ ತೆರೆಯುವುದು.
Tea / Coffee Shop:
ಇದು ಎವರ್ ಗ್ರೀನ್ ಬ್ಯುಸಿನೆಸ್ (ever green business) ಅಂತ ಹೇಳಬಹುದು. ನಮಗೆ ದಿನ ಶುರು ಆಗೋದೇ ಚಹಾ ಕಾಫಿಯೊಂದಿಗೆ. ಬೆಳಿಗ್ಗೆ ಎದ್ದು ಜನಗಳು ಕುಡಿಯುವುದೇ ಟೀ ಕಾಫಿ. ಆಮೇಲೆ ಉಳಿದದ್ದೆಲ್ಲ, ಜನ ಬೀಡಿತ ಪ್ರದೇಶದಲ್ಲಿ ನೀವು ಚಹಾ ಕಾಫಿ ಅಂಗಡಿಗಳನ್ನು ತೆರೆದರೆ ನಿಮಗೆ ಯಾವಾಗಲೂ ಕೂಡ ನಷ್ಟ ಆಗುವುದಿಲ್ಲ. 365 ದಿನವೂ ಕೂಡ ನಿಮಗೆ ಉತ್ತಮ ವ್ಯಾಪಾರವಾಗುತ್ತದೆ. ನಮ್ಮ ದೇಶದಲ್ಲಿ ಅದೆಷ್ಟೋ ಜನರು ಇದನ್ನೇ ಜೀವನದ ಕಸುಬಾಗೆ ಮಾಡಿಕೊಂಡಿದ್ದಾರೆ ಇದರಿಂದಲೇ ಜೀವನವನ್ನು ನಡೆಸುತ್ತಿದ್ದಾರೆ ಹೆಂಡತಿ ಮಕ್ಕಳನ್ನು ಸಾಕುತ್ತಿದ್ದಾರೆ. ಇದರಿಂದಲೇ ಸೂರನ್ನು ಕೂಡ ನಿರ್ಮಿಸಿಕೊಂಡಿದ್ದಾರೆ. ಅಂತಹ ಉತ್ತಮ ಲಾಭಗಳನ್ನು ತಂದು ಕೊಡುವ ವ್ಯಾಪಾರ ಇದಾಗಿದೆ ಅಂತಾನೆ ಹೇಳಬಹುದು.
cloth shop:
ಬಟ್ಟೆ ಅಂಗಡಿಯೂ ಹಾಗೇನೆ ಯಾವಾಗಲೂ ಕೂಡ ನಷ್ಟವಾಗುವುದಿಲ್ಲ ಹಬ್ಬ ಹರಿದಿನಗಳು ಮದುವೆ ಮುಂಚಿಗಳು ವರ್ಷವಿಡಿ ನಡೆಯುತ್ತಲೇ ಇರುತ್ತವೆ. ಅದರಲ್ಲೂ ಹಬ್ಬ ಹರಿ ದಿನಗಳು ಬಂತೆಂದರೆ ನಮ್ಮ ದೇಶದ ಸಂಪ್ರದಾಯದಲ್ಲಿ ನಾವು ಹೊಸ ಬಟ್ಟೆಗಳನ್ನ ಕೊಂಡುಕೊಳ್ಳುತ್ತೇವೆ. ದೇವರ ಪೂಜೆ ಮಾಡುವಾಗ ಹೊಸ ಬಟ್ಟೆಯನ್ನುಟ್ಟು ಪೂಜೆಯನ್ನು ಮಾಡುತ್ತೇವೆ ಆದ್ದರಿಂದ ಹಬ್ಬ ಹರಿದಿನಗಳಲ್ಲಿ ಬಟ್ಟೆಯು ಹೆಚ್ಚು ರೀತಿಯಲ್ಲಿ ವ್ಯಾಪಾರವಾಗುತ್ತದೆ. ಇದರಿಂದ ಮಾಲೀಕರಿಗೆ ಉತ್ತಮ ಲಾಭವನ್ನು ತಂದುಕೊಡುತ್ತದೆ ಅಂತ ಹೇಳಬಹುದು.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram
sweet shop:
ಹಬ್ಬಗಳಲ್ಲಿ ನಾವು ಇನ್ನೊಬ್ಬರ ಮನೆಗೆ ಹೋಗುವಾಗ ಸಿಹಿಯನ್ನ ತೆಗೆದುಕೊಂಡು ಹೋಗುತ್ತೇವೆ ಹಬ್ಬಗಳಲ್ಲಿ ಒಬ್ಬರಿಗೊಬ್ಬರು ಸಿಹಿಯನ್ನ ಹಂಚುವುದು ನಮ್ಮ ಸಂಪ್ರದಾಯ. ಅದರಲ್ಲೂ ದೀಪಾವಳಿ ಬಂತೆಂದರೆ ಸಿಹಿ ಹಂಚುವುದು ಕಡ್ಡಾಯವಾಗಿದೆ. ಹಾಗಾಗಿ ಈ ಸಮಯದಲ್ಲಿ ಸಿಹಿತಿಂಡಿಯನ್ನ ಹೆಚ್ಚು ಖರೀದಿ ಮಾಡುವುದರಿಂದ ಇದರಿಂದಲೇ ಕೂಡ ಸಿಹಿ ತಿಂಡಿ ವ್ಯಾಪಾರಗಳಿಗೆ ಉತ್ತಮವಾದ ಆದಾಯ ಬರುತ್ತದೆ.
flower shop:
ಹಬ್ಬ ಹರಿದಿನಗಳು ಬಂತೆಂದರೆ ಹೂಗಳ ಮಾರಾಟ ಮಾರುಕಟ್ಟೆಯಲ್ಲಿ ಜೋರಾಗಿಯೇ ಇರುತ್ತದೆ. ದೇವಸ್ಥಾನಗಳಿಗೆ ಹೋಗುವಾಗ ಖಾಲಿ ಕೈನಲ್ಲಿ ಯಾರು ಕೂಡ ಹೋಗುವುದಿಲ್ಲ ಎಲ್ಲರೂ ದೇವರಿಗೆ ಹೂವುಗಳನ್ನ ಅರ್ಪಿಸುತ್ತಾರೆ. ಹಾಗೂ ಹೂವುಗಳಿಲ್ಲದೆ ಯಾವ ಪೂಜೆಯು ಕೂಡ ನಡೆಯುವುದಿಲ್ಲ ಪ್ರತಿಯೊಬ್ಬರು ಹೂಗಳನ್ನ ಖರೀದಿಸಿ ಪೂಜೆ ಮಾಡುತ್ತಾರೆ. ಹಾಗಾಗಿ ಈ ಸಮಯದಲ್ಲಿ ಹೂಗಳ ವ್ಯಾಪಾರ ಭರಾಟೆಯಲ್ಲಿ ನಡೆಯುತ್ತದೆ. ಇದರಿಂದ ವ್ಯಾಪಾರಿಗಳಿಗೆ ಲಾಭವೂ ಲಾಭ.
Sale of decorative items:
ಅಲಂಕಾರಿಕ ವಸ್ತುಗಳು ಎಂದರೆ ಸೌಂದರ್ಯವರ್ಧಕಗಳು ಆಗಿರಬಹುದು ಅಥವಾ ಗೃಹ ಅಲಂಕಾರದ ಯಾವುದೇ ವಸ್ತುಗಳು ಇರಬಹುದು ಇನ್ನೂ ಮಕ್ಕಳ ಆಟಿಕೆಗಳು ಇರಬಹುದು ಮೆಹೆಂದಿಗಳು ಇತರ ಎಲ್ಲ ವಸ್ತುಗಳನ್ನ ಒಳಗೊಂಡಿರುವ ಒಂದು ಅಂಗಡಿಯನ್ನ ನೀವು ತೆರೆದರೆ ಇದರಿಂದ ನೀವು ಹೆಚ್ಚು ಲಾಭವನ್ನ ಗಳಿಸಬಹುದು. ಈ ಎಲ್ಲಾ ವಸ್ತುಗಳು ಕೂಡ ನಮಗೆ ಹಬ್ಬ ಹರಿ ದಿನಗಳಲ್ಲಿ ಪ್ರಮುಖವಾಗಿ ಉಪಯೋಗವಾಗುವಂತಹವುಗಳು. ಇದರಿಂದ ವ್ಯಾಪಾರಿಗಳಿಗೆ ಉತ್ತಮವಾದ ಆದಾಯವಿದೆ.
ಸ್ನೇಹಿತರೆ ನೋಡಿದ್ರಲ್ಲ ನಿಮಗೆ ಉತ್ತಮೋತ್ತಮವಾದ ಕೆಲವು ವ್ಯಾಪಾರದಾಸರಗಳನ್ನ ನಾವು ಈ ಲೇಖನದಲ್ಲಿ ನೀಡಿದ್ದೇವೆ. ಇದನ್ನೆಲ್ಲಾ ನೀವು ಉಪಯೋಗಿಸಿಕೊಂಡು ಉತ್ತಮ ಲಾಭವನ್ನು ಕಂಡುಕೊಳ್ಳಬಹುದಾಗಿದೆ ಹಾಗೇನೆ ಜೀವನವನ್ನು ಕಟ್ಟಿಕೊಳ್ಳಬಹುದು. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.
ಇದನ್ನೂ ಓದಿ: ಪೋಸ್ಟ್ ಆಫೀಸ್ ಸ್ಕೀಮ್ ಗಳಲ್ಲಿ ಅತಿ ಹೆಚ್ಚು ಲಾಭ ಸಿಗುವ ಯೋಜನೆಗಳು ಯಾವುವು?