ಗೃಹಲಕ್ಷ್ಮಿ ಯೋಜನೆ(Gruhalakshmi Yojana) ಸರ್ಕಾರ ಜಾರಿಗೆ ತಂದ ಬಳಿಕ ಲಕ್ಷಾಂತರ ಜನರ ಖಾತೆಗೆ 2,000 ಜಮಾ ಆಗಿದೆ. ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಕೋಟ್ಯಾಂತರ ಅರ್ಜಿ ಸಲ್ಲಿಕೆ ಆಗಿತ್ತು. ಅದರಲ್ಲಿ ಸುಮಾರು 70% ನಷ್ಟು ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗಿದೆ. ಆದರೆ ಸುಮಾರು 30% ಮಹಿಳೆಯರ ಖಾತೆಗೆ ಇನ್ನೂ ಮೊದಲ ಕಂತಿನ ಹಣ ವರ್ಗಾವಣೆ ಆಗಿಲ್ಲ. ಇದಕ್ಕೆ ಸರ್ಕಾರ ಈಗಾಗ್ಲೇ ಸ್ಪಷ್ಟನೆಯನ್ನು ಸಹ ನೀಡಿದೆ. ಹಳೆಯ ರೇಷನ್ ಕಾರ್ಡ್ ಮತ್ತು ತಿದ್ದುಪಡಿಗೆ ಸಂಬಂಧಿಸಿದಂತೆ ಸರ್ಕಾರದ ಮಹತ್ವದ ಆದೇಶ ಹೊರಡಿಸಿತ್ತು. ಕೆಲವರಿಗೆ ಮೊದಲ ಕಂತಿನ ಹಣ ಜಮಾ ಆಗಿಲ್ಲ.
ಹೌದು ಹಲವು ಗೃಹಿಣಿಯರ ಖಾತೆಗೆ ಮೊದಲ ಕಂತಿನ ಹಣ ಜಮಾ ಆಗಿಲ್ಲ, ಇದಕ್ಕೆ ರೇಷನ್ ಕಾರ್ಡ್(Ration Card), ಬ್ಯಾಂಕ್ ಖಾತೆ(Bank Account), ಆಧಾರ್ ಕಾರ್ಡ್(aadhar Card) ನಲ್ಲಿ ಇರುವ ಲೋಪ ದೋಷಗಳು ಮುಖ್ಯ ಕಾರಣ. ಇದರ ಜೊತೆಗೆ ಸರ್ವರ್ ಸಮಸ್ಯೆಯಿಂದಾಗಿ ಕೂಡ ಗೃಹಿಣಿಯರ ಖಾತೆಗೆ ಹಣ ವರ್ಗಾವಣೆ ಆಗಿಲ್ಲ. ಇನ್ನು ಸರ್ಕಾರವೇನೋ 2ನೇ ಕಂತಿನ ಹಣದ ಜೊತೆಗೆ ಮೊದಲ ಕಂತಿನ ಹಣವು ಸಿಗುತ್ತದೆ ಎಂದು ಹೇಳಿದೆ ಆದರೆ ಇದು ಕೇವಲ ಭರವಸೆ ಆಗಿಯೇ ಉಳಿದುಕೊಳ್ಳುವ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ
ಹೌದು ಸರ್ಕಾರ ಏನೋ ಹಣ ಬಿಡುಗಡೆ ಮಾಡಿದೆ ಅಂತ ಹೇಳ್ತಾಇದೆ ಆದ್ರೆ ಮೊದಲ ಕಂತಿನ ಹಣ ಪಡೆದವರ ಖಾತೆಗೆ ಇನ್ನು 2ನೇ ಕಂತಿನ ಹಣ ಬಂದಿಲ್ಲ. ಇದರ ಮಧ್ಯೆ ಒಂದು ಕಂತಿನ ಹಣವು ಪಡೆಯದವರು ಕೂಡ ಇದ್ದಾರೆ. ಇನ್ನು ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಮೊದಲ ಕಂತಿನ ಹಣ ಪ್ರತಿಯೊಬ್ಬ ಫಲಾನುಭವಿಗಳ ಖಾತೆಗೆ ಜಮಾ ಮಾಡುವುದಾಗಿ ಸರ್ಕಾರ ತಿಳಿಸಿತ್ತು ಆದರೆ ಇದು ಸಾಧ್ಯವಾಗಿಲ್ಲ. ಇನ್ನು ಎರಡನೇ ಕಂತಿನ ಹಣವನ್ನು ಅಕ್ಟೋಬರ್ ಎರಡನೇ ವಾರದಲ್ಲಿ ಫಲಾನುಭವಿಗಳಿಗೆ ತಲುಪಿಸಲು ನಿರ್ಧರಿಸಲಾಗಿದೆ ಎಂದು ಸಚಿವೆ, ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದರು. ಈಗ ಎರಡನೇ ಕಂತಿನ ಹಣ, ಮೊದಲ ಕಂತಿನ ಹಣ ಜಮಾ ಆಗಿರುವ ಮಹಿಳೆಯರಿಗೆ ಮಾತ್ರ ಸಂದಾಯವಾಗುತ್ತದೆಯೋ ಅಥವಾ ಎಲ್ಲರಿಗೂ ಸಿಗುತ್ತದೆಯೋ ಎನ್ನುವುದರ ಬಗ್ಗೆ ಇನ್ನೂ ಗೊಂದಲ ಇದೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಸರ್ಕಾರದಿಂದ ಹೊಸ ಅಪಡೇಟ್… ಹಾಗಿದ್ರೆ ಆಗಿರೋದೇನು?
ಮೊದಲನೇ ಕಂತಿನ(First Installment) ಹಣ ಬಂದಿದ್ದರೂ, ಅಂಥವರ ರೇಷನ್ ಕಾರ್ಡ್ ರದ್ದುಪಡಿ ಆಗಿದ್ದರೆ ಎರಡನೇ ಕಂತಿನ ಹಣ ಬರುವುದಿಲ್ಲ. ಅದೇ ರೀತಿ ಯಾವೆಲ್ಲ ಮಹಿಳೆಯರ ಖಾತೆಯಲ್ಲಿ ಇನ್ನೂ ಸಮಸ್ಯೆ ಇದೆಯೋ ಅಂತವರ ಖಾತೆಗೂ ಹಣ ಸಂದಾಯವಾಗುವುದಿಲ್ಲ. ಹಾಗಾಗಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರೆ ಮಾತ್ರ ಮುಗಿಯಲಿಲ್ಲ ತಮ್ಮ ಖಾತೆಯಲ್ಲಿ ಏನಾದರೂ ಸಮಸ್ಯೆ ಇದೆಯೇ ಎಂಬುದನ್ನು ಕೂಡ ಪರೀಕ್ಷಿಸಿಕೊಳ್ಳಬೇಕು.
ಇನ್ನು ಇದರ ಜೊತೆಗೆ ಬಹುಮುಖ್ಯವಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಮಹಿಳೆಯರ ಖಾತೆಗೆ ಹಣ ಬರಬೇಕು ಅಂದ್ರೆ ಅವರ ಹೆಸರಿನಲ್ಲಿಯೇ ರೇಷನ್ ಕಾರ್ಡ್ ಇರಬೇಕಾಗಿರುವುದು ಕಡ್ಡಾಯ. ಹಾಗಾಗಿ ಪುರುಷರ ಹೆಸರಿನಲ್ಲಿ ಇರುವ ರೇಷನ್ ಕಾರ್ಡ್ ಅನ್ನು ಅವರ ಪತ್ನಿಯರ ಹೆಸರಿಗೆ ವರ್ಗಾಯಿಸಿಕೊಳ್ಳಲು ಈಗ ಸರ್ಕಾರ ಮತ್ತೆ ಅವಕಾಶ ನೀಡಿದ್ದು, ಅಕ್ಟೋಬರ್ 13ರವರೆಗೆ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಅಂದ್ರೆ ಇಂದು ಅವಕಾಶ ಕೊನೆಯಗುತ್ತ್ರ್. ಇನ್ನು ನೀವು ಈ ಬಾರಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಂಡರೆ ಮುಂದಿನ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗಬಹುದು.
ಇದರ ಜೊತೆಗೆ ಸರ್ಕಾರ ಈಗಾಗಲೇ ಕೋಟ್ಯಂತರ ರೂಪಾಯಿ ಹಣವನ್ನು ಆರ್ಬಿಐಗೆ(RBI) ಜಮಾಾವಳಿ ಮಾಡಿದ್ದು ತಾಂತ್ರಿಕ ದೋಷಗಳು ಕೆಲವೊಂದು ಸಮಸ್ಯೆಗಳಿಂದಾಗಿ ಹಣವನ್ನ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲು ಸಾಧ್ಯವಾಗಲಿಲ್ಲ ಅನ್ನುವಂತಹ ಮಾತುಗಳು ಕೂಡ ಕೇಳಿ ಬರ್ತಾ ಇದೆ. ಇನ್ನೂ ಒಂದಷ್ಟು ಜನ ಒಂದು ಕಂತಿನ ಹಣವನ್ನು ಕೊಟ್ಟು ಅದರಲ್ಲೇ ಮುಗಿಸುವಂತೆ ಕಾಣ್ತಾ ಇದೆ ಗ್ರಹಲಕ್ಷ್ಮಿ ಯೋಜನೆ ಇಲ್ಲಿಗೆ ಸ್ಟಾಪ್ ಆಗುತ್ತೆ ಇದು ವರ್ಕೌಟ್ ಆಗಲ್ಲ ಅಂತ ಹೇಳ್ತಾ ಇದ್ದಾರೆ. ಆದರೆ ಸರ್ಕಾರ ಸಾಕಷ್ಟು ಪ್ರಯತ್ನಗಳನ್ನ ನಡೆಸುತ್ತಿದ್ದು ಸಮಸ್ಯೆನ ಯಾವ ರೀತಿ ಬಗೆಹರಿಸಿ ಫಲಾನುಭವಿಗಳ ಖಾತೆಗೆ ಹಣವನ್ನು ಸಂದಾಯ ಮಾಡುತ್ತೋ ಕಾದು ನೋಡಬೇಕಿದೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ ಸ್ಕೀಮ್ ಗಳಲ್ಲಿ ಅತಿ ಹೆಚ್ಚು ಲಾಭ ಸಿಗುವ ಯೋಜನೆಗಳು ಯಾವುವು?
ಇದನ್ನೂ ಓದಿ: ಒಂದಾದ್ರು ವಿರಾಟ್ ಕೊಹ್ಲಿ – ನವೀನ್; ಇಬ್ಬರು ರಾಜಿ ಮಾಡಿಕೊಂಡಿದ್ದರ ಬಗ್ಗೆ ಗಂಭೀರ್ ಹೇಳಿದ್ದೇನು ಗೊತ್ತಾ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram