ಈ ವರ್ಷ ರೈತರಿಗೆ ರಾಜ್ಯದಲ್ಲಿ ಮುಂಗಾರು ಮಳೆ(Rain) ಕೈಕೊಟ್ಟಿದ್ದು, ಹಿಂಗಾರು ಮಳೆಯ ನಿರೀಕ್ಷಣೆಯಲ್ಲಿರುವ ರೈತರಿಗೆ, ಹವಾಮಾನ ಮುನ್ಸೂಚಕರು ಭಾರಿ ಮಳೆಯಾಗುವ ಭರವಸೆಯನ್ನ ಕೊಟ್ಟಿದ್ದಾರೆ. ಹೌದು, ಇನ್ನು ಒಂದು ದಿನದ ಒಳಗಾಗಿ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಮುನ್ಸೂಚಕರು ಮುನ್ಸೂಚನೆಯನ್ನು ನೀಡಿದ್ದಾರೆ. ನೈರುತ್ಯ ಮುಂಗಾರು ಕೈ ಕೊಟ್ಟ ಕಾರಣದಿಂದಾಗಿ, ಹಿಂಗಾರು ಮಳೆಯಾದರೂ ಕೈಹಿಡಿಯುವ ನೀರಿಕ್ಷೆಯಲ್ಲಿ ರೈತರು ಕೈಕಟ್ಟಿ ಕಾದು ಕೂತಿದ್ದಾರೆ. ದಕ್ಷಿಣ ಒಳನಾಡಿನಲ್ಲಿ ಸ್ವಲ್ಪ ಹೆಚ್ಚು ಆಗುವ ನಿರೀಕ್ಷೆ ಇದೆ, ಇನ್ನುಳಿದಂತೆ ಬೆಂಗಳೂರು ಗ್ರಾಮಾಂತರ ಪ್ರದೇಶ ಹಾಗೂ ಬೆಂಗಳೂರು ನಗರಗಳಲ್ಲಿ ಇನ್ನು ಚಿತ್ರದುರ್ಗದಲ್ಲಿ ಸಾಧಾರಣ ಮಳೆ ಆಗುವ ನಿರೀಕ್ಷೆ ಇದೆ. ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ, ಉತ್ತರ ಒಳನಾಡು ಅಂತಂದ್ರೆ ಬೆಳಗಾವಿ ಧಾರವಾಡ ಮತ್ತು ಹಾವೇರಿ ಜಿಲ್ಲೆಗಳು ಒಳಗೊಳ್ಳುತ್ತವೆ. ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಲಘು ಮಳೆ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇನ್ನು ದಕ್ಷಿಣ ಕನ್ನಡ ಉತ್ತರ ಕನ್ನಡ ಸೇರಿದಂತೆ ಉಡುಪಿಯಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದೆ ಮಲೆನಾಡಿನಲ್ಲಿ ಮಳೆಯ ಅಬ್ಬರ ಸುರಿಸುತ್ತದೆ ಎಂದು ಹವಾಮಾನ ಮುನ್ಸೂಚಕರು ಹೇಳಿದ್ದಾರೆ. ಈಗಾಗಲೇ ಮುಂಗಾರು ಮಳೆಯ ಕೊರತೆಯಿಂದಾಗಿ ರಾಜ್ಯದಲ್ಲಿ ಬರ ಪರಸ್ಥಿತಿ ಎದುರಾಗಿದೆ.
ಹಿಂಗಾರು ಮಳೆ ಉತ್ತಮ ಬೆಳೆಯ ನಿರೀಕ್ಷೆ
ಹಿಂಗಾರು ಮಳೆಯೂ ಸೆಪ್ಟೆಂಬರ್ ಕೊನೆಯ ವಾರದಿಂದ ಹಿಡಿದು ಡಿಸೆಂಬರ್ ವರೆಗೂ ಇರುತ್ತದೆ. ಮುಂಗಾರು ಮಳೆ ಕೈ ಕೊಟ್ಟ ಈ ಪರಿಸ್ಥಿತಿಯಲ್ಲಿ ರೈತರು ಕಂಗಾಲಾಗಿ ಹಿಂಗಾರು ಮಳೆಯ ನಿರೀಕ್ಷಣೆಯಲ್ಲಿ ಇದ್ದಾರೆ. ಸುಮಾರು 50 ವರ್ಷಗಳ ಅವಧಿಯಲ್ಲಿ ಬಹುತೇಕ ಬಾರಿ ಹಿಂಗಾರಿನ ಮಳೆ ಕೈಹಿಡಿದಿದ್ದು ರೈತರಿಗೆ ಆಶಾದಾಯಕವಾಗಿ ಪರಿಣಮಿಸಿದೆ. ಹಿಂಗಾರಿನ ಸಮಯದಲ್ಲಿ ರೈತರಿಗೆ ಉತ್ತಮ ಬೆಳೆಯನ್ನ ತಂದುಕೊಟ್ಟಿದೆ.
ಹವಾಮಾನ ಮುನ್ಸೂಚಕರ ಪ್ರಕಾರ ಈ ವರ್ಷ ಹಿಂಗಾರಿನ ಮಳೆಯೂ ರೈತರಿಗೆ ನಿರಾಶೆಯಿಂದ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಅಕ್ಟೋಬರ್ ದಲ್ಲಿ ಸುಮಾರು 10 ರಿಂದ 15 ದಿನಗಳ ಕಾಲ ರಾಜ್ಯದಲ್ಲಿ ಭರ್ಜರಿ ಮಳೆ ಆಗಲಿದೆ ಎಂದು ವರದಿಗಳು ತಿಳಿಸಿವೆ. ಕರಾವಳಿಯಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿದೆ. ಮಲೆನಾಡಿನ ಪ್ರದೇಶಗಳಾದ ದಕ್ಷಿಣ ಕನ್ನಡ ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದ್ದು, ಇನ್ನು ಉತ್ತರ ಕರ್ನಾಟಕದ ಭಾಗವಾದ ಬೀದರ್ ಹಾಗೂ ಕಲ್ಬುರ್ಗಿಯಲ್ಲಿಯೂ ಕೂಡ ವರುಣನ ಪಾದಾರ್ಪಣೆ ಯಾಗಲಿದೆ. ಈ ಮೇಲೆ ಸೂಚಿಸಿದಂತಹ ಜಿಲ್ಲೆಗಳಲ್ಲಿ ಮುಂದಿನ 15 ದಿನಗಳಲ್ಲಿ ಅತ್ಯಧಿಕ ಮಳೆ ಆಗಲಿದೆ. ಮಲೆನಾಡಿನಲ್ಲಿ ಶಿವಮೊಗ್ಗ ಚಿಕ್ಕಮಂಗಳೂರು ಹಾಸನದಲ್ಲೂ ಕೂಡ ಸ್ವಲ್ಪ ಮಟ್ಟಿಗೆ ಮಳೆಯಾಗಲಿದೆ ವಿಜಯಪುರ, ಯಾದಗಿರಿ, ರಾಯಚೂರು ,ಬಾಗಲಕೋಟೆ ಮೈಸೂರಿನಲ್ಲಿ ಸ್ವಲ್ಪ ಪ್ರಮಾಣದ ಮಳೆಯಾಗುವ ನಿರೀಕ್ಷೆ ಇದೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಮುಂಗಾರು ಕೈಕೊಟ್ಟರೂ ಕೈಹಿಡಿಯುವ ಹಿಂಗಾರು
ಕಳೆದ 50 ವರ್ಷಗಳ ಲೆಕ್ಕಾಚಾರವನ್ನು ತೆಗೆದು ನೋಡಿದರೆ, ಇತಿಹಾಸದಲ್ಲೇ ಎರಡನೇ ಬಾರಿಗೆ ಇಷ್ಟು ಮಳೆಯ ಕೊರತೆ ಉಂಟಾಗಿದೆ. ಇನ್ನು 2002ರಲ್ಲಿ ರಾಜ್ಯದಲ್ಲಿ 28% ರಷ್ಟು ಮಳೆಯ ಕೊರತೆಯಾಗಿತ್ತು. ಈ ವರ್ಷ ಸುಮಾರು ಶೇಕಡ 25ರಷ್ಟು ಮಳೆಯ ಕೊರತೆ ಆಗಿದೆ. ಯಾವಾಗಲೂ ಕೂಡ ಮುಂಗಾರು ಮಳೆ ಕೈ ಕೊಟ್ಟರೂ ಕೂಡ ಹಿಂಗಾರು ಮಳೆ ಕೈಹಿಡಿದಿತ್ತು.
ಮಳೆ ಕೊರತೆಯಿಂದ ಆಗುವ ಸಮಸ್ಯೆ ಒಂದೆರಡು ಅಲ್ಲ, ಒಂದು ಕಡೆ ಕಾವೇರಿಯ ಪ್ರತಿಭಟನೆ ಸದ್ದು ಮಾಡುತ್ತಿದ್ದು ಇನ್ನೊಂದು ಕಡೆ ಮಳೆಯ ಅಭಾವದಿಂದ ರೈತರು ಕಂಗೆಟ್ಟು ಕೂತಿದ್ದಾರೆ. ಹಿಂಗಾರು ಮಳೆ ನಿರೀಕ್ಷೆಯಲ್ಲಿರುವ ರೈತರಿಗೆ, ಸಾಕಷ್ಟು ಆತಂಕಗಳು ಕಾದಿವೆ. ಮುಂಗಾರನ್ನು ನಂಬಿಕೊಂಡು ಬೀಜ ಬಿತ್ತನೆ ಮಾಡಿದ ರೈತರಿಗೆ ಬೆಳೆಗಳೆಲ್ಲ ಹಾಳಾಗುತ್ತಿದೆ. ಈಗಾಗಲೇ ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ ಈಗಾಗಲೇ ಅಂತರ್ಜಲದ ಮಟ್ಟ ಕುಸಿದಿದ್ದು, ವಾತಾವರಣದಲ್ಲೂ ಕೂಡ ವೈಪರಿತ್ಯಗಳು ಕಾಣಬರುತ್ತಿವೆ. ಒಂದು ವೇಳೆ ಹಿಂಗಾರು ಮಳೆ ಕೈಕೊಟ್ಟರೆ, ರಾಜ್ಯದಲ್ಲಿ ಬರದ ಪರಿಸ್ಥಿತಿಯನ್ನ ಎದುರಿಸಬೇಕಾಗಿ ಬರಬಹುದು.
ಇದನ್ನೂ ಓದಿ: Jio 5G Unlimited Data ಪಡೆಯುವುದು ಹೇಗೆ? ಒಳ್ಳೆ ಆಫರ್ ಈಗಾಲೇ ಬಳಸಿಕೊಳ್ಳಿ
ಇದನ್ನೂ ಓದಿ: ವಿಕೇಂಡ್ ನಲ್ಲಿ ತರಕಾರಿಗಳ ಬೆಲೆ ಎಷ್ಟಾಗಿದೆ ಗೊತ್ತಾ? ಟೊಮೆಟೊ, ಈರುಳ್ಳಿ, ಹಸಿರು ಮೆಣಸಿನಕಾಯಿ ದರ ಎಷ್ಟಿದೆ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram