Bank Holidays: ಒಂದೊಂದೇ ಹಬ್ಬ ಹರಿದಿನಗಳ ಸಾಲು ಶುರುವಾಯಿತು, ಈ ಸಮಯದಲ್ಲಿ ಬ್ಯಾಂಕ್ ಗಳು ಮುಚ್ಚಲ್ಪಡುತ್ತವೆ. 9 ದಿನಗಳ ಕಾಲ ನವರಾತ್ರಿ ಇರುವುದರಿಂದ ಈ ತಿಂಗಳಿನಲ್ಲಿ ಬ್ಯಾಂಕ್ ರಜೆಯು ಹೆಚ್ಚಾಗಿರುತ್ತದೆ. ಆದ್ದರಿಂದ ಬ್ಯಾಂಕುಗಳಿಗೆ ಹೋಗುವವರು ರಜೆಯನ್ನು ಪರಿಶೀಲಿಸಿಕೊಂಡು ಹೋಗಿ. ಹಬ್ಬ ಹರಿದಿನಗಳಲ್ಲಿ ಹಣಕಾಸಿಲ್ಲದೆ ಹಬ್ಬವನ್ನು ಮಾಡಲು ಸಾಧ್ಯವಿಲ್ಲ. ನವರಾತ್ರಿ ಅಂತಹ ಹಬ್ಬಗಳಲ್ಲಿ ಸಾಲಾಗಿ ರಜೆ ಇರುವುದರಿಂದ ಬ್ಯಾಂಕುಗಳ ವ್ಯವಹಾರಕ್ಕೆ ಸ್ವಲ್ಪ ತೊಂದರೆಯನ್ನು ಉಂಟುಮಾಡುತ್ತದೆ. ಆದ್ದರಿಂದ ಪ್ರತಿವರ್ಷವೂ ಕೂಡ ನವರಾತ್ರಿ ಶುರುವಾಗುವ ಮೊದಲೇ ಬ್ಯಾಂಕುಗಳಿಗೆ ಹೋಗಿ ಹಣಕಾಸಿನ ವ್ಯವಹಾರವನ್ನು ಮುಗಿಸಿಕೊಂಡು ಬರಬೇಕು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹೇಳಿರುವ ಪ್ರಕಾರ ಅಕ್ಟೋಬರ್ ನ ತಿಂಗಳಲ್ಲಿ ಬಹಳ ಬ್ಯಾಂಕ್ ಹಾಲಿಡೇಸ್ಗಳು(Holidays) ಇರುತ್ತವೆ.
ಏಕೆಂದರೆ ಅಕ್ಟೋಬರ್ 2 ಗಾಂಧಿ ಜಯಂತಿ, ಸರ್ದಾರ್ ವಲ್ಲಭಾಯಿ ಪಟೇಲ್ ಜನ್ಮದಿನ ಮತ್ತು 9 ದಿನಗಳ ಕಾಲ ನೆರವೇರುವ ದುರ್ಗಾ ಪೂಜೆ ಹಾಗೂ ಲಕ್ಷ್ಮಿ ಪೂಜೆ ಈ ರೀತಿಯ ಕಾರ್ಯಕ್ರಮಗಳಿಂದ ಬ್ಯಾಂಕುಗಳು ಬಂದ್ ಆಗಿರುತ್ತವೆ. ಆದ್ದರಿಂದ ಹಣಕಾಸಿನ ವ್ಯವಸ್ಥೆಯನ್ನು ಅಕ್ಟೋಬರ್ ಒಳಗಡೆ ಮಾಡಿಟ್ಟುಕೊಳ್ಳುವುದು ಉತ್ತಮ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಇದನ್ನೂ ಓದಿ: ಜಿಯೋ ಲ್ಯಾಪ್ಟಾಪ್ ಕೇವಲ 15000 ಕ್ಕೆ ಲಭ್ಯವಿದೆ, ಖರೀದಿಸುವವರು ಪೂರ್ತಿ ಮಾಹಿತಿಯನ್ನ ತಿಳಿದುಕೊಳ್ಳಿ.
ಹಾಗಾದರೆ ಅಕ್ಟೋಬರ್ ನ ಯಾವ ಯಾವ ದಿನಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ?
ಇನ್ನು ದುರ್ಗಾ ಪೂಜೆಯ ಕಾರಣದಿಂದಾಗಿ ಅಕ್ಟೋಬರ್ 21 ರಂದು ಬ್ಯಾಂಕ್ ಗಳು ಬಂದ್ ಆಗಿರುತ್ತೆ. ತ್ರಿಪುರ ಮತ್ತು ಆಸ್ಸಾಂ ಬ್ಯಾಂಕ್ ಗಳು ಅಕ್ಟೋಬರ್ 21 ರಿಂದ ಅಕ್ಟೋಬರ್ 24ರ ವರೆಗೆ ಬಂದ್ ಇರುತ್ತವೆ. ಅಕ್ಟೋಬರ್ 2ರಂದು ಬ್ಯಾಂಕ್ ಗಳು ಬಂದ್ ಆಗಿರುತ್ತೆ. ಇನ್ನೂ ಅಕ್ಟೋಬರ್ 22 ಭಾನುವಾರ ಬಂದಿರುವುದರಿಂದ ಆ ದಿನವೂ ಕೂಡ ಬ್ಯಾಂಕುಗಳು ತಮ್ಮ ಕಾರ್ಯವನ್ನು ನಿರ್ವಹಿಸುವುದಿಲ್ಲ. ಇನ್ನು ಅಕ್ಟೋಬರ್ 24ರಂದು ದುರ್ಗಾ ಪೂಜೆ ನಿಮಿತ್ತ ಬ್ಯಾಂಕುಗಳು ಬಂದ್. ಅಕ್ಟೋಬರ್ 23ರಂದು ದಸರಾ ಮತ್ತು ವಿಜಯ ದಶಮಿ ನಿಮಿತ್ತ ಬ್ಯಾಂಕ್ ಗಳು ಕ್ಲೋಸ್. ಇನ್ನು ಕೆಲ ಬ್ಯಾಂಕುಗಳು ಅಕ್ಟೋಬರ್ 25 ರಿಂದ 27 ರವರೆಗೆ ಬಂದ್ ಆಗಿರುತ್ತವೆ. ಇನ್ನು ಅಕ್ಟೋಬರ್ 28 ಶನಿವಾರವಿರುವುದರಿಂದ ಆ ದಿನ ಲಕ್ಷ್ಮಿ ಪೂಜೆಯ ನಿಮಿತ್ತ ಬ್ಯಾಂಕ್ ಗಳು ಬಂದ್ ಆಗಿರುತ್ತವೆ. ಈ ರೀತಿಯಾಗಿ ಸುಮಾರು ಅಕ್ಟೋಬರ್ ತಿಂಗಳಿನಲ್ಲಿ ಬ್ಯಾಂಕ್ ಹಾಲಿಡೇಸ್ ಗಳು ನಿರಂತರವಾಗಿ ಇರುತ್ತವೆ.
ಅಷ್ಟೇ ಅಲ್ಲದೆ ಹೊರ ರಾಜ್ಯಗಳಲ್ಲೂ ಕೂಡ ಸುಮಾರಾಗಿ ಅಕ್ಟೋಬರ್ ತಿಂಗಳಲ್ಲಿ ಬ್ಯಾಂಕ್ ಗಳು ಮುಚ್ಚಲ್ಪಡುತ್ತವೆ. ಕರ್ನಾಟಕ ಆಗಿರಬಹುದು ಒಡಿಸ್ಸಾ ಆಗಿರಬಹುದು ಉತ್ತರ ಪ್ರದೇಶ ಆಗಿರಬಹುದು ಮೇಘಾಲಯ ಆಗಿರಬಹುದು ಬಿಹಾರ ಆಗಿರಬಹುದು ಮತ್ತು ಬಂಗಾಳ ರಾಜ್ಯಗಳಲ್ಲಿ ಅಕ್ಟೋಬರ್ 30ರವರೆಗೂ ಬ್ಯಾಂಕ್ ಗಳು ಮುಚ್ಚಲ್ಪಡುತ್ತವೆ.
ಈಗ ಆಗಿನ ಕಾಲದ ತರಹ ಅಲ್ಲ ಬ್ಯಾಂಕ್ ಗಳು ಮುಚ್ಚಲ್ಪಟ್ಟಿದ್ದರು ಸಹಿತ ಕೆಲವೊಂದು ಬ್ಯಾಂಕಿನ ಕೆಲಸಗಳನ್ನು ನೀವು ಆನ್ಲೈನ್ ಮೂಲಕ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲದೆ ಹಣವನ್ನು ತೆಗೆಯಬೇಕಾದರೆ ಎಟಿಎಂ ಗಳು (ATM) 24 ತಾಸು ಕೂಡ ಓಪನ್ ಆಗಿರುತ್ತದೆ. ಅದನ್ನು ಉಪಯೋಗಿಸಿಕೊಂಡು ನಿಮ್ಮ ಸಣ್ಣಪುಟ್ಟ ಹಣಕಾಸಿನ ವ್ಯವಹಾರವನ್ನು ಮಾಡಿಕೊಳ್ಳಬಹುದು. ಈ ಎಟಿಎಂಗಳು ತುರ್ತು ಪರಿಸ್ಥಿತಿಗೆ ಸಹಾಯವಾಗುತ್ತವೆ.
ಇನ್ನು ನೀವು ಬೇರೆಯವರಿಗೆ ಹಣವನ್ನ ಟ್ರಾನ್ಸ್ಫರ್ (Transfer) ಮಾಡುವುದಾದರೆ ಮೊಬೈಲ್ ಆಫ್(App) ಮೂಲಕ ಅಥವಾ ನೆಟ್ ಬ್ಯಾಂಕಿಂಗ್(Net Banking) ಮೂಲಕ ಬೇರೆಯವರಿಗೆ ಹಣವನ್ನು ಟ್ರಾನ್ಸ್ಫರ್ ಮಾಡಬಹುದು. ಈಗಿನ ಟೆಕ್ನಾಲಜಿ ಯುಗದಲ್ಲಿ ನಿಮಗೆ ಯಾವುದಕ್ಕೂ ಕೂಡ ಹಣಕಾಸಿಗೆ ತೊಂದರೆಯಾಗುವುದಿಲ್ಲ. ಆನ್ಲೈನ್ ಮಾಧ್ಯಮದ ಮುಖಾಂತರ ಅಥವಾ ಎಟಿಎಂ ಮುಖಾಂತರ ನೀವು ನಿಮ್ಮ ಹಣಕಾಸನ್ನ ಆಪರೇಟ ಮಾಡಬಹುದಾಗಿದೆ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram
ಇದನ್ನೂ ಓದಿ: ನೀಟಾಗಿ ಡವ್ ಮಾಡ್ತವ್ನೆ ನಂಬಬೇಡ್ರೋ; ಡ್ರೋನ್ ಪ್ರತಾಪ್ ನ ಎಜುಕೇಟಿವ್ ಪ್ರಾಡ್ ಎಂದ ನವರಸ ನಾಯಕ