ಸ್ನೇಹಿತರೆ ಕಳೆದ ಎರಡು ಮೂರು ವರ್ಷಗಳಿಂದ ಹೊಸ ಹೊಸ ಪ್ರತಿಭೆಗಳ ಹೊಸ ಅಲೆನೆ ಆರಂಭವಾಗಿದೆ ಅಂತಾನೇ ಹೇಳಬಹುದು. ನಿಜಕ್ಕೂ ಇದು ಪ್ರತಿಭಾವಂತರಿಗೆ ಸುವರ್ಣ ಯುಗ ಅಂತಾನೇ ಹೇಳಬಹುದು. ಈ ನೀಟಿನಲ್ಲಿ ಸಾಮಾಜಿಕ ಜಾಲತಾಣಗಳು ಹಿಂದೆ ಎಂದಿಗೂ ಯಾರು ಮಾಡಿದಂತ ಕ್ರಾಂತಿ ಉಂಟುಮಾಡಿದೆ. ಇನ್ನೂ ಅದರಲ್ಲಿ ಮಲ್ಲು ಜಮಖಂಡಿ ಅವರು ಕೂಡ ಯೂಟ್ಯೂಬ್ ನಲ್ಲಿ ಹೊಸ ಸಂಚಲನ ಎಬ್ಬಿಸಿದ ಉತ್ತರ ಕನ್ನಡದ ಕಲಾವಿದ ಇವರಿಗೆ ಇದೀಗ ಕರ್ನಾಟಕದ ಪ್ರತೀ ಊರಿನಲ್ಲೂ ಕೂಡ ಅಭಿಮಾನಿಗಳು ಇದ್ದಾರೆ.
ತಮ್ಮ ಯೂಟ್ಯೂಬ್ ಚಾನಲ್ ನಲ್ಲಿ ಕಾಮಿಡಿ ವಿಡಿಯೋಗಳನ್ನು ಮಾಡುತ್ತಾ ಜೊತೆಗೆ ಒಂದು ಒಳ್ಳೆಯ ಸಂದೇಶ ನೀಡುವ ಮಲ್ಲು ಅವರು ತುಂಬಾ ಪ್ರತಿಭಾವಂತರು ಅವರೇ Script ಬರೆದು ನಂತರ ತಮ್ಮ ಸ್ನೇಹಿತರು ಹಾಗೂ ಕಲಾವಿದರ ಜೊತೆ ನಟನೆ ಮಾಡಿ ನಂತರ ಅದನ್ನು ಮಲ್ಲು ಅವರೇ ಎಡಿಟ್ ಮಾಡುತ್ತಿದ್ದಾರು. ಒಂದು ವಿಡಿಯೋ ಮಾಡಲು ಇಷ್ಟು ಕಷ್ಟ ಪಡುತ್ತಿದ್ದ ಮಲ್ಲು ಅವರಿಗೆ ಜನ ತುಂಬಾ ಸಪೋರ್ಟ್ ಮಾಡುತ್ತಿದ್ದಾರೆ ಇನ್ನೂ ಶಾರ್ಟ್ ಸಿನಿಮಾ ಮಾಡುತ್ತಿದ್ದ ಮಲ್ಲು ಜಮಖಂಡಿಯವರು ಇದೀಗ ಸಿನಿಮಾವನ್ನು ಮಾಡುತ್ತಿದ್ದಾರೆ ನನ್ನಾಕಿ ಎಂಬ ಸಿನಿಮಾ ಮಾಡಿರುವ ಮಲ್ಲು ಅದರ ಟೈಟಲ್ ಕೂಡ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು ತುಂಬಾ ಒಳ್ಳೆಯ ರೆಸ್ಪಾನ್ಸ್ ಕೂಡ ಬರುತ್ತಿದೆ ಈ ಸಿನಿಮಾಕ್ಕೆ ಸಂಬಂಧಿಸಿದಂತೆ ಖಾಸಗಿ ಚಾನೆಲ್ ನಲ್ಲಿ ಇಂಟರ್ವ್ಯೂನಲ್ಲಿ ತಮ್ಮ ಕುಟುಂಬದ ಬಗ್ಗೆ ಹಂಚಿಕೊಂಡಿದ್ದಾರೆ ಪತ್ನಿ ಮತ್ತು ಮಕ್ಕಳ ಬಗ್ಗೆ ಮೊದಲ ಬಾರಿಗೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ..
ನನ್ನಾಕಿ ಸಿನಿಮಾ ಟ್ರೈಲರ್ ನೋಡಿ : https://youtu.be/RTYQ_EJanEE
ಮಲ್ಲು ಜಮಖಂಡಿಯ ಪತ್ನಿ ಹಾಗೂ ಮಕ್ಕಳು ಯಾರು?
ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿರುವ ಮಲ್ಲು ಅವರು ನಟನೆಗೆ ಬರುವ ಮುನ್ನವೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರಂತೆ. ತಮ್ಮ ಪತ್ನಿ ಬಗ್ಗೆ ಮಾತನಾಡಿರುವ ಮಲ್ಲು ಅವರು ಅಂತ ಹೆಂಡತಿ ಸಿಗಬೇಕೆಂದರೆ ಪುಣ್ಯ ಮಾಡಿದ್ದೇನೆ ಹಾಗೂ ಅಂತ ತಂದೆ ತಾಯಿ ಮತ್ತು ಮಕ್ಕಳು ಸಿಗುವುದಕ್ಕೂ ಕೂಡ ಪುಣ್ಯ ಮಾಡಿದ್ದೇನೆ. ಸಾಧನೆ ಮಾಡುವಾಗ ಸಪೋರ್ಟ್ ಮಾಡದೇ ಇದ್ದರೂ ಪರವಾಗಿಲ್ಲ ಆದರೆ ಅಡ್ಡ ಮಾತ್ರ ಯಾರು ಬರಬಾರದು ಎಂದು ಮಲ್ಲು ಅವರು ಸಂದರ್ಶನದಲ್ಲಿ ಹೇಳಿದ್ದಾರು. 2014 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಮಲ್ಲು ಅವರಿಗೆ ಎರಡು ಮಕ್ಕಳು ಪತ್ನಿಯ ಹೆಸರು ಅನಿತಾ ಮಕ್ಕಳ ಹೆಸರು ಶಿವು & ಸಾತ್ವಿಕ್ ಒಬ್ಬ ಮಗನಿಗೆ ನಾಲ್ಕುವರೆ ವರ್ಷ ಇನ್ನೊಬ್ಬ ಮಗನಿಗೆ 6 ವರ್ಷ. ಮಲ್ಲು ಜಮಖಂಡಿ ಅವರ ಮೊದಲ ಸಿನಿಮಾಕ್ಕೆ ನೀವು ಕೂಡ ಶುಭಕೋರಿ.
ಇದನ್ನೂ ಓದಿ : ವಿಚಿತ್ರವಾಗಿ ಮೇಕಪ್ ಮಾಡಿಕೊಳ್ಳಬೇಡಿ,ನೀವು ನಿವಾಗಿಯೇ ಇರಿ ಅಂಕಿತಾ ಕುಂಡುಗೆ ಅಭಿಮಾನಿಗಳ ಮನವಿ