ಶಕ್ತಿ ಯೋಜನೆ ಶುರುವಾಗಿ ಆಗಲೇ ಮೂರು ತಿಂಗಳು ಕಳೆದು ಹೋಗಿದೆ. ಮಹಿಳೆಯರಿಗಾಗಿ ಉಚಿತ ಬಸ್ ಪ್ರಯಾಣದ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟ ಸರ್ಕಾರಕ್ಕೆ ಮಹಿಳೆಯರಿಂದ ಮೆಚ್ಚುಗೆ ಸಿಕ್ಕಿದೆ. ಉಚಿತ ಬಸ್ ಪ್ರಯಾಣದ ಹಿನ್ನೆಲೆಯಲ್ಲಿ ಮಹಿಳೆಯರ ಓಡಾಟ ಹೆಚ್ಚಾದ ಹಿನ್ನೆಲೆಯಲ್ಲಿ ಬಸ್ಸುಗಳ ಕೊರತೆ ಎದ್ದು ಕಾಣಿಸುತ್ತಿದೆ. ಇದನ್ನರಿತ ಸರಕಾರ ಹೊಸ ಬಸ್ಸುಗಳ ಖರೀದಿಗಾಗಿ ನಿರ್ಧರಿಸಿದೆ. ಉಚಿತ ಬಸ್ ಪ್ರಯಾಣಕ್ಕೆ ಸಿಕ್ಕಿರುವ ಮೆಚ್ಚುಗೆಯ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಸುಮಾರು 5600 ಬಸ್ಸುಗಳನ್ನು ಖರೀದಿ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ಬಸ್ ಖರೀದಿಗೆ ಅಂತಾನೆ ಸುಮಾರು ಐದು ನೂರು ಕೋಟಿಗಳವರೆಗೆ ಮೀಸಲಿಟ್ಟ ಸರ್ಕಾರ, ಶೀಘ್ರವೇ ಕ್ರಮವನ್ನು ಕೈಗೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯನವರು ಸ್ಪಷ್ಟೀಕರಿಸಿದ್ದಾರೆ.
ಉಚಿತ ಬಸ್ ಪ್ರಯಾಣದ ಹಿನ್ನೆಲೆಯಲ್ಲಿ ಸುಮಾರು 15% ನಷ್ಟು ಪ್ರಯಾಣದಲ್ಲಿ ಏರಿಕೆಯಾಗಿದ್ದು, ಬಸ್ ಗಳ ಸಂಖ್ಯೆ ಕಮ್ಮಿಯಾಗುತ್ತಿದೆ. ಆದ್ದರಿಂದ ಇನ್ನೂ ಹೆಚ್ಚಿನ ಬಸ್ ಗಳನ್ನು ಖರೀದಿಸಲು ರಾಜ್ಯ ಸರ್ಕಾರವು ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ಪ್ರಯಾಣಿಕರಿಗೆ ಉತ್ತಮ ಸೇವೆಯನ್ನು ಒದಗಿಸಿಕೊಡುವುದು ಸರ್ಕಾರದ ಹಿಂದಿನ ಉದ್ದೇಶವಾಗಿದೆ. ಹಾಗೂ ವಾಹನಗಳತ್ತ ಪಾಸನೆಯಿಂದ 83 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿರುವುದಾಗಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮಹಿಳೆಯರ ಪ್ರಯಾಣ ಹೆಚ್ಚಾದ ಹಿನ್ನೆಲೆಯಲ್ಲಿ ಪುರುಷರಿಗೆ ಬಸ್ ನಲ್ಲಿ ಜಾಗವೇ ಇಲ್ಲದಂತಾಗಿದೆ ಆದ್ದರಿಂದ ಸರ್ಕಾರ 50% ಪುರುಷರಿಗೆ ಅಂತ ನಿಯೋಜಿಸಿದೆ. ಆದರೂ ಕೂಡ ಬಸ್ ಗಳ ಶಾರ್ಟೇಜ್ ಕಾಣಿಸುತ್ತಿದ್ದು, ಹೊಸ ಐದು ಸಾವಿರಕ್ಕಿಂತಲೂ ಹೆಚ್ಚು ಬಸ್ಸುಗಳನ್ನು ಖರೀದಿಸುವ ನಿರ್ಧಾರವನ್ನು ಮಾಡಿದೆ. ಸಾರಿಗೆ ಇಲಾಖೆಯ ಜೊತೆ ಪ್ರಗತಿ ಪರಿಶೀಲನ ಸಭೆಯನ್ನು ನಡೆಸಿದ ಸಿದ್ದರಾಮಯ್ಯನವರು ಹೊಸ ಬಸ್ಸುಗಳ ಖರೀದಿಗೆ ಮುಂದಾಗಿದ್ದಾರೆ. ಶಕ್ತಿ ಯೋಜನೆ ಘೋಷಿಸಿದ ನಂತರ ಪುರುಷರಿಗೆ ಬಸ್ಸಿನಲ್ಲಿ ಜಾಗವೇ ಇಲ್ಲದಂತಾಗಿದೆ. ಈ ಉಚಿತ ಪ್ರಯಾಣದಿಂದ ಪುರುಷರಿಗೆ ಅನಾನುಕೂಲತೆ ಉಂಟಾಗಿದೆ ಅಂತಾನೆ ಹೇಳಬಹುದು. ಕೆಲವು ಮಹಿಳೆಯರು ಅನಾವಶ್ಯಕವಾಗಿ ಬಸ್ಸಿನ ಸಂಚಾರವನ್ನು ಮಾಡುತ್ತಿದ್ದಾರೆ. ಉಚಿತ ಬಸ್ ಪ್ರಯಾಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಕೆಲಸಕ್ಕೆ ತೆರಳುವ ಪುರುಷರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ವಾಹನಗಳ ತನಿಖೆಗಳಿಂದ 83 ಕೋಟಿಗಳ ಆದಾಯವಾಗಿದೆ. ಹೊಸ ಬಸ್ಸುಗಳನ್ನು ಖರೀದಿಸಿದಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಕೆಲಸಕ್ಕೆ ತೆರಳುವ ಪುರುಷರಿಗೆ ಸಹಾಯವಾಗುವುದೆಂಬ ನಂಬಿಕೆ ಇದೆ. ರಾಮಲಿಂಗಾರೆಡ್ಡಿಯ ಪ್ರಕಾರ ಶಕ್ತಿ ಯೋಜನೆಯ ನೂರಕ್ಕೆ ನೂರರಷ್ಟು ಜಯಭೇರಿ ಬಾರಿಸುತ್ತಿದೆ ಎಂದು ಹೇಳಿದ್ದಾರೆ. ಆದರೆ ಈ ಶಕ್ತಿ ಯೋಜನೆಯಿಂದ ಹಲವಾರು ತೊಡಕುಗಳು ಉಂಟಾಗಿದ್ದು ಬಸ್ಸುಗಳ ಕೊರತೆಯೂ ಕೂಡ ಕಾಣಿಸುತ್ತಿದೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಏನು ಪ್ರಯೋಜನ?
ಈ ಶಕ್ತಿ ಯೋಜನೆಯ ಅಡಿಯಲ್ಲಿ ಮಹಿಳೆಯರು ಎಲ್ಲಿ ಬೇಕಾದರೂ ಪ್ರಯಾಣಿಸಬಹುದಾಗಿದೆ. ತಮ್ಮ ಇಚ್ಛೆಯಂತೆ ಹೊಸ ಪ್ರದೇಶಗಳನ್ನು ವೀಕ್ಷಿಸಬಹುದಾಗಿದೆ. ಇಷ್ಟು ದಿನ ಮಹಿಳೆಯರು ಹೊರಗಡೆ ಹೋಗುವಾಗ ಗಂಡಂದಿರ ಅವಲಂಬನೆಯನ್ನು ಮಾಡಬೇಕಿತ್ತು, ಆದರೆ ಈಗ ಮಹಿಳೆಯರು ಸ್ವಾವಲಂಬಿಯಾಗಿ ಎಲ್ಲೆಡೆ ತಿರುಗುವಂತಾಗಿದೆ. ಇದು ಮಹಿಳೆಯರ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಪ್ರಮುಖವಾಗಿದೆ.
ಆದರೆ ಸರ್ಕಾರವು ಕೆಲವೊಂದು ರೂಲ್ಸ್ ಅನ್ನ ಜಾರಿಗೊಳಿಸಿದೆ. ಸರಕಾರಿ ಬಸ್ಗಳಲ್ಲಿ ಮಾತ್ರ ಮಹಿಳೆಯರು ಸಂಚರಿಸಬಹುದಾಗಿದೆ. ಯಾವುದೇ ರೀತಿಯ ಐಷಾರಾಮಿ ಬಸ್ಸುಗಳಲ್ಲಿ ಸಂಚರಿಸುವಂತಿಲ್ಲ. ಬಸ್ ನಲ್ಲಿ ಪ್ರಯಾಣಿಸುವಾಗ ನಿಮ್ಮ ಗುರುತಿನ ಚೀಟಿಯನ್ನು ಇಟ್ಟುಕೊಳ್ಳುವುದು ಕಡ್ಡಾಯವಾಗಿದೆ. ಹಾಗೂ ನಿಮ್ಮ ಆಧಾರ್ ಕಾರ್ಡ್ ಜೆರಾಕ್ಸ್ ಕಾಪಿಯನ್ನು ಕೂಡ ಇಟ್ಟುಕೊಳ್ಳಬೇಕು.
ಇದನ್ನೂ ಓದಿ: ನವರಾತ್ರಿಯಲ್ಲಿ ಈ ತಪ್ಪುಗಳನ್ನು ಮಾಡಿದರೆ ಕಷ್ಟ ಬೆನ್ನಟ್ಟಿ ಬರುವುದು ಗ್ಯಾರಂಟಿ. ಎಂದಿಗೂ ಕೂಡ ಈ ತಪ್ಪುಗಳನ್ನ ಮಾಡಬೇಡಿ.
ಇದನ್ನೂ ಓದಿ: ನಿಮಗಿನ್ನು ಅನ್ನ ಭಾಗ್ಯ ಯೋಜನೆಯ ಹಣ ಬಂದಿಲ್ವಾ? ಇದೊಂದು ಕೆಲಸವನ್ನು ತಪ್ಪದೆ ಮಾಡಿ ಹಣ ಬಂದೇ ಬರುತ್ತೆ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram