ದೇಶದಲ್ಲಿ ಮಹಿಳೆಯರು ಮಾತ್ರ ಸೀಮಿತವಲ್ಲ, ವಿದ್ಯಾರ್ಥಿಗಳಿಗೂ ಕೂಡ ಬೆಂಬಲ ನೀಡಬೇಕು. ದೇಶದ ಸ್ವತ್ತು ಎಲ್ಲರಿಗೂ ಕೂಡ ಹಂಚಿಕೆಯಾಗಬೇಕು ಎಂದು ನಿರ್ಧರಿಸಿದ ಸರ್ಕಾರ ವಿದ್ಯಾರ್ಥಿಗಳಿಗೂ ಕೂಡ ಲ್ಯಾಪ್ಟಾಪ್(Laptop) ಹಂಚುವ ನಿರ್ಧಾರವನ್ನು ಮಾಡಿದೆ. ಮಹಿಳೆಯರಿಗಷ್ಟೇ ಅಲ್ಲ ವಿದ್ಯಾರ್ಥಿಗಳಿಗೂ ಕೂಡ ಬೆಂಬಲ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಬಡ ವಿದ್ಯಾರ್ಥಿಗಳಿಗೆ ಸಹಾಯವಾಗುವಂತೆ ಲ್ಯಾಪ್ಟಾಪ್ ವಿತರಣೆಯ ನಿರ್ಧಾರವನ್ನು ನಮ್ಮ ರಾಜ್ಯ ಸರ್ಕಾರ ಕೈಗೊಂಡಿದೆ.
ಲ್ಯಾಪ್ಟಾಪ್ ವಿತರಣೆಗೆ ಸರಕಾರದ ಉದ್ದೇಶ: ಡಿಜಿಟಲ್ ಶಿಕ್ಷಣ ವ್ಯವಸ್ಥೆಯನ್ನು ಬೆಂಬಲಿಸುವ ನಿಟ್ಟಿನಲ್ಲಿ ಸರ್ಕಾರವು ಈ ವ್ಯವಸ್ಥೆಯನ್ನ ಕೈಗೊಂಡಿದೆ. ಕೆಲವು ವಿದ್ಯಾರ್ಥಿಗಳು ಉತ್ತಮ ಬುದ್ಧಿಮತ್ತೆಯನ್ನ ಹೊಂದಿದ್ದು ಆರ್ಥಿಕವಾಗಿ ಬಹಳ ಹಿಂದುಳಿದಿರುತ್ತಾರೆ. ಅಂತಹ ವಿದ್ಯಾರ್ಥಿಗಳನ್ನು ಮೇಲಕ್ಕೆ ಎತ್ತುವುದು ಸರ್ಕಾರದ ಈ ಲ್ಯಾಪ್ಟಾಪ್(Laptop) ಹಿಂದಿನ ಉದ್ದೇಶವಾಗಿದೆ. ಶಿಕ್ಷಣ ವ್ಯವಸ್ಥೆಯನ್ನ ಸುಧಾರಿಸುವುದು ಮತ್ತು ಬಡ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಲ್ಲುವ ನಿಟ್ಟಿನಲ್ಲಿ ಸರ್ಕಾರವು ಈ ಲ್ಯಾಪ್ಟಾಪ್ ವಿತರಣೆಯ ಉದ್ದೇಶವನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ಬಡತನದ ರೇಖೆ ಗಳಿಗಿಂತ ಕೆಳಗೆ ಇರುವ ವಿದ್ಯಾರ್ಥಿಗಳು ಇದಕ್ಕೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ. ಇಂತಹ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣದ ವ್ಯವಸ್ಥೆ ಅನ್ನೋದು ಸ್ವಲ್ಪ ಕ್ಲಿಷ್ಟ ಗತಿಯಲ್ಲಿ ಸಾಗುತ್ತಿದೆ. ಆದ್ದರಿಂದ ಇಂತಹ ವಿದ್ಯಾರ್ಥಿಗಳನ್ನು ಮೇಲಕೆತ್ತುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಬಡ ವಿದ್ಯಾರ್ಥಿಗಳಿಗೆ ಜೀವನವನ್ನು ಕಟ್ಟಿಕೊಡುವುದು ಸರ್ಕಾರದ ಉದ್ದೇಶವಾಗಿದೆ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು: ವಿದ್ಯಾರ್ಥಿಯು ಕರ್ನಾಟಕದ ನಿವಾಸಿ ಆಗಿರಬೇಕು. ಸರಕಾರಿ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ನಡೆಸುತ್ತಿರಬೇಕು. ಯಾವುದೇ ವರ್ಗದವರು ಕೂಡ ಲ್ಯಾಪ್ಟಾಪ್ ಅನ್ನು ಉಚಿತವಾಗಿ ಪಡೆಯಬಹುದು ಆದರೆ ವಿದ್ಯಾರ್ಥಿಗಳು ಬಡತನ ರೇಖೆಗಿಂತ ಕೆಳಗಡೆ ಇರಬೇಕು. ಎಸ್ಸಿ ಎಸ್ಟಿ ಹಾಗೂ ಹಿಂದುಳಿದ ವರ್ಗಗಳಿಗೂ ಕೂಡ ಆದ್ಯತೆಯನ್ನು ನೀಡಲಾಗಿದೆ.
ಸ್ನಾತಕೋತ್ತರ ಪದವೀಧರರು, ಇಂಜಿನಿಯರ್ಗಳು, ಡಿಪ್ಲೋಮಾ ಪದವೀಧರರು, ಪ್ರಥಮ ದರ್ಜೆ ಕಾಲೇಜಿನಲ್ಲಿ ಓದುತ್ತಿರುವವರು, ವೈದ್ಯಕೀಯ ತರಗತಿಯಲ್ಲಿ ಓದುತ್ತಿರುವವರು, ಇಂಥವರು ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವ ದಾಖಲಾತಿಗಳು
ಗುರುತಿನ ಚೀಟಿ, ಆಧಾರ್ ಕಾರ್ಡ್,10 ಮತ್ತು 12ನೆಯ ತರಗತಿಯ ಅಂಕಪಟ್ಟಿ ಬ್ಯಾಂಕ್ ಖಾತೆಯ ವಿವರಗಳು, ಕರ್ನಾಟಕದಲ್ಲಿ ವಾಸಿಸುತ್ತೀರಾ ಅಂತ ತೋರಿಸಿಕೊಳ್ಳಲು ಇದರದೊಂದು ಪ್ರಮಾಣ ಪತ್ರವೂ ಬೇಕಾಗುತ್ತದೆ, ಒಮ್ಮೆ ನೀವು ಎಸ್ ಸಿ, ಎಸ್ ಟಿ ಅಥವಾ ಹಿಂದುಳಿದ ವರ್ಗದವರು ಆಗಿದ್ದರೆ ಜಾತಿ ಪ್ರಮಾಣ ಪತ್ರವನ್ನು ಇಟ್ಟುಕೊಳ್ಳಬೇಕು.
ಶಾಲಾ ಕಾಲೇಜು ಶಿಕ್ಷಣ ಇಲಾಖೆಯ ವೆಬ್ಸೈಟ್ ಗಳಿಗೆ ಹೋಗಿ ಅಲ್ಲಿ ಲ್ಯಾಪ್ಟಾಪ್ ಅನ್ನೋ ಆಯ್ಕೆಯನ್ನ ಒತ್ತಬೇಕು ಅಲ್ಲಿ ನೀವು ಎಲ್ಲ ರೀತಿಯ ಅರ್ಜಿ ನಮೂನೆಯನ್ನು ದಾಖಲಿಸಬೇಕು. ಅಲ್ಲಿ ಸಿಗುವಂತಹ ಅರ್ಜಿಯನ್ನ ಡೌನ್ಲೋಡ್ ಮಾಡಿಕೊಂಡು ಎಲ್ಲ ದಾಖಲಾತಿಗಳನ್ನ ಅಪ್ಲೋಡ್ ಮಾಡಬೇಕು. ನಂತರ ಅರ್ಜಿಯನ್ನು ಕರ್ನಾಟಕ ಶಿಕ್ಷಣ ಮಂಡಳಿಗೆ ಕಳುಹಿಸಬೇಕು. ನಿಮ್ಮ ದಾಖಲಾತಿ ಗಳೆಲ್ಲವೂ ಸರಿಯಾಗಿದ್ದರೆ ನೀವು ಉಚಿತ ಲ್ಯಾಪ್ಟಾಪ್ ಅನ್ನು ಪಡೆಯಲು ಯಶಸ್ವಿಯಾಗುತ್ತೀರಿ.
ಬಡ ವಿದ್ಯಾರ್ಥಿಗಳನ್ನು ಬೆಂಬಲಿಸುವುದಷ್ಟೇ ಅಲ್ಲದೆ ಡಿಜಿಟಲ್ ಶಿಕ್ಷಣಕ್ಕೆ ಒತ್ತು ಕೊಡುವಂತಹ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇಂದಿನ ಮಕ್ಕಳೆ ನಾಳಿನ ಪ್ರಜೆಗಳು ಎನ್ನುವಂತೆ ಇಂದಿನ ವಿದ್ಯಾರ್ಥಿಗಳು ನಮ್ಮ ದೇಶದ ಆಸ್ತಿ ಅಂತಾನೇ ಹೇಳಬಹುದು. ನಮ್ಮಲ್ಲಿ ಹಲವಾರು ಪ್ರತಿಭೆಗಳಿವೆ ಹಲವಾರು ಬುದ್ಧಿವಂತ ವಿದ್ಯಾರ್ಥಿಗಳಿದ್ದಾರೆ, ಆದರೆ ಹಿಂದುಳಿದ ಆರ್ಥಿಕತೆಯಿಂದ ವಿದ್ಯಾರ್ಥಿಗಳು ಕೂಡ ಹಿಂದೆ ಉಳಿದುಕೊಳ್ಳುವ ಪರಿಸ್ಥಿತಿ ಇದೆ. ಇದನ್ನೆಲ್ಲಾ ಅರಿತ ರಾಜ್ಯ ಸರ್ಕಾರವು ವಿದ್ಯಾರ್ಥಿಗಳಿಗೆ ಬೆಂಬಲವಾಗಿ ನಿಂತು ಅವರನ್ನ ಉತ್ತೇಜಿಸಿ ಜೀವನವನ್ನು ಕಟ್ಟಿಕೊಡುವ ಒಂದು ಪ್ರಯತ್ನವನ್ನು ಮಾಡುತ್ತಿದೆ.
ಇದನ್ನೂ ಓದಿ: ನಿಮಗಿನ್ನು ಅನ್ನ ಭಾಗ್ಯ ಯೋಜನೆಯ ಹಣ ಬಂದಿಲ್ವಾ? ಇದೊಂದು ಕೆಲಸವನ್ನು ತಪ್ಪದೆ ಮಾಡಿ ಹಣ ಬಂದೇ ಬರುತ್ತೆ.
ಇದನ್ನೂ ಓದಿ: ಶಕ್ತಿ ಯೋಜನೆ ಮಹಿಳೆಯರಿಗಾಗಿ ಉಚಿತ ಬಸ್ ಪ್ರಯಾಣ, ಮತ್ತೊಮ್ಮೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram