ಅಂಕಿತ ಕುಂಡು ಇಂದಿಗೂ ಕೂಡ ಗಾಯನ ಲೋಕದಲ್ಲಿ ಅಲೆಎಬ್ಬಿಸುತ್ತಿರುವ ಯುವ ಪ್ರತಿಭೆ.. ಇದರಲ್ಲಿ ಒಂದು ತುಂಬಾ ಇಂಟರ್ಸ್ಟ್ಟಿಂಗ್ ಸಂಗತಿ ಏನಪ್ಪಾ ಅಂದ್ರೆ ಕನ್ನಡ ಬಾರಾದ ಬೆಂಗಾಲಿ ಬೆಡಗಿಯ ಹಾಡಿಗೆ ತಲೆದೂಗದವರೇ ಇಲ್ಲ. ತನ್ನ ಸಂಗೀತದಿಂದ ಮೋಡಿ ಮಾಡಿ ಎಲ್ಲರ ಮನಸ್ಸು ಗೆದಿಕುಂಡು ದ್ರು.. ಆದ್ರೆ ಇತ್ತೀಚೆಗೆ ಅವ್ರು ಶೇರ್ ಮಾಡ್ತಿರೋ ಫೋಟೋಗಳನ್ನ ನೋಡಿ ಎಲ್ಲರು ನಿಬ್ಬೆರಗಾಗಿದ್ದಾರೆ. ಕಾರಣ ಏನು ಅಂತೀರಾ ಮುಂದೆ ಓದಿ..
ಅಂಕಿತ ಕುಂಡು ಹುಟ್ಟಿದ್ದು ಮೇ 27,2002 ದೆಹಲಿಯಲ್ಲಿ. ಈಗ ಇವ್ರಿಗೆ 21ವರ್ಷ. ತಂದೆ ತಾಯಿ ಇಬ್ಬರು ಬೆಂಗಾಲಿಯವರು.ಆದರೂ ಅಂಕಿತಾ ಅವ್ರ ಕನ್ನಡ ಪ್ರೇಮ ಮೆಚ್ಚುವಂತದ್ದು..2015ರಲ್ಲಿ ಜಿ ಕನ್ನಡ ವಾಹಿನಿಯ ಸರಿಗಮಪ ಲಿಟಲ್ ಚಾಂಪ್ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟು ಕನ್ನಡದ ಹಾಡುಗಳನ್ನ ಬಹಳ ಸೊಗಸಾಗಿ ಹಾಡ್ತಾ ರನ್ನರ್ ಅಪ್ ಆಗ್ತಾರೆ…ಕನ್ನಡ ಸಿನಿಮಾಗಳಲ್ಲಿ ಹಾಡುವ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ, ಇಲ್ಲಿಂದ ಶುರುವಾಗುತ್ತೆ ಇವ್ರ ಅಭಿಮಾನಿ ಬಳಗ. 2017 ರಲ್ಲಿ ಪ್ರಸಾರವಾಗುತ್ತಿದ್ದ ಗಾಯನ ರಿಯಾಲಿಟಿ ಶೋನಲ್ಲಿ ರೈಸಿಂಗ್ ಸ್ಟಾರ್ ನಲ್ಲಿ ಭಾಗಿಯಾಗ್ತಾರೆ. ಮೊದಲು ಕನ್ನಡ ಬಾರದೆ ಇವ್ರು ಹಾಡುವ ಕನ್ನಡದ ಹಾಡಿಗೆ ಅಭಿಮಾನಿಗಳಾಗಿದ್ದ ಪ್ರೇಕ್ಷಕರು ನಂತರ ಅಂಕಿತಾ ಅವ್ರನ್ನ ಮನೆ ಮಗಳಂತೆ ಕಾಣ್ತಾರೆ… ಆದ್ರೆ ಇತ್ತೀಚಿಗೆ ಅಂಕಿತಾ ಹಂಚಿಕೊಳ್ಳುತ್ತಿರುವ ಕೆಲವೊಂದಿಷ್ಟು ಫೋಟೋಗಳು ಅಭಿಮಾನಿಗಳಿಗೆ ಹಿರಿಸು ಮುರಿಸು ಮಾಡ್ತಿವೆ.. ಇತ್ತೀಚಿಗೆ ತುಂಬಾ ಬೋಲ್ಡ್ ಆಗಿ ಫೋಟೋ ಶೂಟ್ ಮಾಡಿಸಿ ಓವರ್ ಮೇಕಪ್ ಮಾಡಿಕೊಂಡಂತೆ ಕೆಲವೊಂದು ಫೋಟೋಗಳನ್ನ ಹಂಚಿಕೊಂಡಿದ್ರು ಅದನ್ನ ನೋಡಿದ ಅಂಕಿತಾ ಕುಂಡು ಅಭಿಮಾನಿಗಳು ಸಿಟ್ಟಿಗೆದ್ರು ಬಹಳ ನಾಜುಕಾಗಿ ಕಮೆಂಟ್ ಗಳನ್ನ ಮಾಡಿದ್ದಾರೆ..
ನೀವಿರುವುದು ಗಾಯನ ಲೋಕದಲ್ಲಿ ನಿಮಗೆ ಬಣ್ಣದ ಅವಶ್ಯಕತೆ ಇಲ್ಲ, ನೀವು ಸಿಂಪಲ್ ಆಗಿ ನಿವಾಗಿರೋದೇ ನಮಗೆ ಇಷ್ಟ, ನಾವು ಇಷ್ಟ ಪಟ್ಟಿದ್ದು ನಿಮ್ಮ ಧ್ವನಿಯನ್ನ, ಮುಖಕ್ಕೆ ಬಣ್ಣ ಹಚ್ಚಿ ನಮ್ಮನ್ನ ಮೆಚ್ಚಿಸುವ ಆಡಂಭರ ಬೇಡ ನೀವು ನಿವಾಗಿರುವಿದೆ ನಮಗಿಷ್ಟ, ನಿಮ್ಮ ಮೇಲಿರುವ ಅಭಿಮಾನದಿಂದ ಹೇಳುತ್ತಿದ್ದೇವೆ ಎಂದು ಅಭಿಮಾನಿಗಳು ಕಮೆಂಟ್ಸ್ ಮಾಡ್ತಿದ್ದಾರೆ.. ಆದರೆ ಅಂಕಿತಾ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ, ಮುಂದಾದ್ರೂ ಅಂಕಿತಾ, ಅಂಕಿತಾ ಆಗಿಯೇ ಉಳಿತಾರಾ ಅಭಿಮಾನಿಗಳ ಆಸೆ ಈಡೇರಿಸುತ್ತಾರ ಕಾದು ನೋಡಬೇಕು..
ಇದನ್ನೂ ಓದಿ : ಮಲ್ಲು ಜಮಖಂಡಿಯ ಹೆಂಡತಿ ಯಾರು? ಎಷ್ಟು ಜನ ಮಕ್ಕಳು?