ಬರುವ ಹೊಸ ವರ್ಷಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ ಮುಂಬರುವ ವರ್ಷ ಅದೃಷ್ಟವನ್ನು ತಂದುಕೊಡಬಹುದು, ಏನಾಗಲಿದೆ, ಬರುವ ಹೊಸ ವರ್ಷದಲ್ಲಿ ನಮ್ಮ ಅದೃಷ್ಟ ಹೇಗಿರಬಹುದು ಎಂಬ ಕುತೂಹಲ ಪ್ರತಿಯೊಬ್ಬರಲ್ಲೂ ಕೂಡ ಕಾಣುತ್ತಿದೆ. ಅಂದಹಾಗೆ ಮುಂಬರುವ 2024ನೇ ವರ್ಷ ಯಾವ ರಾಶಿಗೆ ಅದೃಷ್ಟವನ್ನು ತಂದುಕೊಡಲಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.
ಕೇವಲ ಇನ್ನೂ ಎರಡು ತಿಂಗಳಲ್ಲಿ ನಾವು 2023 ರನ್ನ ಮುಗಿಸಿ 2024ಕ್ಕೆ ಕಾಲಿಡುತ್ತಿದ್ದೇವೆ. ಈ ವರ್ಷವೂ ಕಷ್ಟ ಸುಖದಲ್ಲಿ ತೇಲಾಡಿದ್ದು ಸಾಕು ಮುಂಬರುವ ವರ್ಷವಾದರೂ ನಮಗೆ ಸುಖವನ್ನ ಸಮೃದ್ಧಿಯನ್ನು ತಂದುಕೊಡಬಹುದು ಎಂಬ ಆಶಯ ಎಲ್ಲರಲ್ಲೂ ಇರುತ್ತದೆ. ಮುಂಬರುವ ವರ್ಷಗಳಲ್ಲಿ ನಮ್ಮ ಅದೃಷ್ಟ ಹೇಗಿರಬಹುದು ನಾವು ಯಾವ ಕಾರ್ಯವನ್ನು ಮಾಡಬಹುದು ಎಂಬುದರ ಬಗ್ಗೆ ಗ್ರಹಗತಿಯ ವಿಶ್ಲೇಷಣೆಯನ್ನು ಕೂಡ ತಿಳಿದುಕೊಳ್ಳುತ್ತಿದ್ದಾರೆ. ಯಾವ ಕಾರ್ಯವನ್ನು ಮಾಡಬಹುದು ಯಾವ ಕೆಲಸವನ್ನು ಶುರು ಮಾಡಬಹುದು ಎಂಬ ಯೋಚನೆಯಲ್ಲಿ ಜನರು ಕಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ನಿಮಗೆ ಯಾವ ಯಾವ ರಾಶಿಗಳು ಅದೃಷ್ಟ ಕಾಣುತ್ತಿವೆ ಯಾವ ಕೆಲಸವನ್ನು ನೀವು ಮಾಡಿಕೊಳ್ಳಬಹುದು. ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ.
ಅದೃಷ್ಟ ಮತ್ತು ದುರಾದೃಷ್ಟ ಅನ್ನೋದು ಗ್ರಹಗಳ ಚಲನೆಯ ಮೇಲೆ ಅವಲಂಬಿತವಾಗಿದೆ ಗ್ರಹಗತಿಗಳು ಹೇಗೆ ಚಲಿಸುತ್ತವೆ ಯಾವ ಯಾವ ರಾಶಿಗಳಲ್ಲಿ ಕುಳಿತಿವೆ ಹಾಗೂ ಯಾವ ಮನೆಯನ್ನು ನೋಡುತ್ತಿವೆ ಎಂಬುದರ ಆಧಾರದ ಮೇಲೆ ಅದೃಷ್ಟ ಮತ್ತು ದುರಾದೃಷ್ಟಗಳನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಹಾಗಾದರೆ ಆ ಅದೃಷ್ಟ ರಾಶಿಗಳು ಯಾವುವು ಎಂಬುದರ ಬಗ್ಗೆ ತಿಳಿದುಕೊಳ್ಳೋಣ
ಮೊದಲನೆಯದಾಗಿ ಮೇಷ ರಾಶಿ, ಮೇಷ ರಾಶಿಯವರಿಗೆ 2024ರ ವರ್ಷ ಬಹಳ ಅದೃಷ್ಟವನ್ನು ತರಲಿದೆ. ಇವರು ಬಹಳ ಧೈರ್ಯವಂತರು ಮತ್ತು ಪರಾಕ್ರಮ ಶಾಲಿಗಳು ಆಗಿರುವುದರಿಂದ ಎಲ್ಲ ಕೆಲಸವನ್ನು ಧೈರ್ಯದಿಂದ ಮಾಡುತ್ತಾರೆ ಯಾವ ಕೆಲಸಕ್ಕೂ ಹಿಂಜರಿಯುವುದಿಲ್ಲ ಇವರು ಮುಂಬರುವ ವರ್ಷದಲ್ಲಿ ಅಂದರೆ 2024ನೇ ಇಸ್ವಿಯಲ್ಲಿ ಇವರ ಅದೃಷ್ಟ ಖುಲಾಯಿಸುತ್ತದೆ. ಯಾವುದಾದರೂ ಹೊಸ ರೀತಿಯ ಯೋಚನೆ ಹಾಗೂ ಹೊಸ ಉದ್ಯೋಗವನ್ನು ಪ್ರಾರಂಭಿಸಲು ಇದು ಬಹಳ ಒಳ್ಳೆಯ ಸಮಯ ಅಂತ ಹೇಳಬಹುದು ಹಾಗೆ ಒಂದು ಪ್ರಮುಖವಾದ ಅಂಶ ಏನೆಂದರೆ ನೀವು ಈ ಸಮಯದಲ್ಲಿ ಹೂಡಿಕೆಯನ್ನು ಮಾಡಬಹುದು ಹೂಡಿಕೆಯನ್ನು ಮಾಡಲು ಇದು ಅತ್ಯಂತ ಒಳ್ಳೆಯ ಸಮಯ. ಈ ಸಮಯದಲ್ಲಿ ನೀವು ಹೂಡಿಕೆಯನ್ನು ಮಾಡಿದ್ದೆ ಆದಲ್ಲಿ ನಿಮಗೆ ಜೀವನಪೂರ್ತಿ ಕುಳಿತು ತಿನ್ನುವಷ್ಟು ಲಾಭ ಉಂಟಾಗುತ್ತದೆ. ಆರ್ಥಿಕತೆಯಲ್ಲಿ ಉನ್ನತ ಮಟ್ಟಕ್ಕೆ ಏರುತ್ತೀರಿ ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿಯನ್ನು ವಹಿಸಿ ನಿಮಗೆ ಎಲ್ಲ ರೀತಿಯಿಂದಲೂ ಈ ವರ್ಷ ಬಹಳ ಅದೃಷ್ಟವನ್ನು ತಂದು ಕೊಡಲಿದೆ.
ಇನ್ನು ಎರಡನೆಯದಾಗಿ ವೃಷಭ ರಾಶಿ, ವೃಷಭ ರಾಶಿಯವರೆಂತೂ ಈ ವರ್ಷದಲ್ಲಿ ಅಪಾರ ಆರ್ಥಿಕ ಧನ ಲಾಭವನ್ನು ಪಡೆಯುತ್ತಾರೆ. ಇವರಿಗೆ ಹಠತ್ತಾಗಿ ಹಣವು ಕೈ ಸೇರುತ್ತದೆ ಯಾವುದಾದರೂ ಅವಕಾಶಗಳು ಇವರನ್ನು ಹುಡುಕಿಕೊಂಡು ಬರುತ್ತವೆ. ಸ್ಥಿರವಾದ ಕೆಲಸ ಸಿಗುತ್ತದೆ ಈ ಸಮಯದಲ್ಲಿ ಇರುವ ಆನಂದವನ್ನು ಅನುಭವಿಸಿ ನಿಮ್ಮ ಕೆಲಸದ ಜೊತೆಗೆ ಖುಷಿಯನ್ನು ಸಹ ಅನುಭವಿಸಿ ಯಾಕೆಂದರೆ ಕಳೆದ ಸಮಯ ಮತ್ತೆ ಬರುವುದಿಲ್ಲ ವೃಷಭ ರಾಶಿಯವರು ಹಣವನ್ನು ಹೆಚ್ಚು ಖರ್ಚು ಮಾಡುತ್ತಾರೆ ಆದ್ದರಿಂದ ಈ ಸಮಯದಲ್ಲಿ ಬಂದ ಹಣವನ್ನು ಹೂಡಿಕೆಯಲ್ಲಿ ಉಪಯೋಗಿಸಿ ಇದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಲಾಭವನ್ನು ಪಡೆಯುವ ಸಾಧ್ಯತೆ ಹೆಚ್ಚಾಗುತ್ತದೆ.
ಇನ್ನು ಕರ್ಕಾಟಕ ರಾಶಿಯವರಿಗಂತೂ 2024ರ ವರ್ಷ ಕೌಟುಂಬಿಕ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ತರಲಿದೆ. ಗಂಡ ಹೆಂಡತಿಯ ಅನುಬಂಧ ಇನ್ನಷ್ಟು ಗಟ್ಟಿಯಾಗಲಿದೆ ಕರ್ಕಾಟಕ ರಾಶಿಯವರು ತಮ್ಮ ಸಂಗಾತಿಯನ್ನು ಇನ್ನಷ್ಟು ಪ್ರೀತಿಸುತ್ತಾರೆ ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ ಇವರ ಕೌಟುಂಬಿಕ ಜೀವನವಂತೂ ಸೂಪರ್ ಆಗಿ ನಡೆಯುತ್ತದೆ ಈ ವರ್ಷದಲ್ಲಿ ಹಿಂದೆಂದೂ ಕಾಣದ ನೆಮ್ಮದಿಯನ್ನು ಪಡೆಯುತ್ತೀರಿ.
ಸಿಂಹ ರಾಶಿಯವರು ಸೃಜನಶೀಲರು ಹಾಗೂ ಸಾಹಸಮಯಿಗಳು. ಈ ವರ್ಷ ಇವರಿಗೆ ಉತ್ತಮ ಅವಕಾಶಗಳನ್ನು ತಂದುಕೊಡುತ್ತದೆ. ಇವರು ತುಂಬಾ ಪ್ರತಿಭಾನ್ವಿತರು ಇವರ ಪ್ರತಿಭೆಗೆ ತಕ್ಕಂತೆ ಉತ್ತಮವಾದ ಅವಕಾಶಗಳು ಬರಲಾರಂಬಿಸುತ್ತವೆ ಇವರ ಪ್ರತಿಭೆಗಳನ್ನು ಜಗತ್ತಿಗೆ ತೋರಿಸುವುದಕ್ಕೆ ಇದು ಒಂದು ಒಳ್ಳೆಯ ಸಮಯ ಅಂತ ಹೇಳಬಹುದು.
ಇನ್ನು ತುಲಾ ರಾಶಿಯವರಿಗೆ ಇದು ತುಂಬಾ ಅದೃಷ್ಟದ ಸಮಯ. ಈ ಸಮಯದಲ್ಲಿ ತುಲಾ ರಾಶಿಯವರು ತಮ್ಮ ಗುರಿಯೆಡೆಗೆ ಗಮನವನ್ನು ಹರಿಸಬೇಕು ಹೊಸ ಉದ್ಯೋಗ ಸಿಗುವ ಸಾಧ್ಯತೆ ಇದೆ ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಇದಾಗಿದೆ ಹೊಸ ಉದ್ಯೋಗಗಳನ್ನು ಹುಡುಕುತ್ತಿರುವವರಿಗೆ ಹಾಗೂ ಉದ್ಯೋಗದಲ್ಲಿರುವವರಿಗೆ ಬಡ್ತಿ ದೊರೆಯುತ್ತದೆ ಮುಂದೆ ಬರಬೇಕು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಅನ್ನೋರಿಗೆ ಇದು ಶುಭ ಸಮಯ ಅಂತ ಹೇಳಬಹುದು.
ವೃಶ್ಚಿಕ ರಾಶಿ ಹಾಗೂ ಮೀನ ರಾಶಿ
ಇನ್ನು ಕೊನೆಯದಾಗಿ ವೃಶ್ಚಿಕ ರಾಶಿ ಹಾಗೂ ಮೀನ ರಾಶಿಯವರಿಗೆ 2024ರ ವರ್ಷ ಬಹಳ ಅದೃಷ್ಟವನ್ನು ತಂದುಕೊಡುತ್ತದೆ ಸ್ವಲ್ಪ ಆಧ್ಯಾತ್ಮಿಕದ ಕಡೆಗೆ ನಿಮ್ಮ ಮನಸ್ಸು ಹೋಗುತ್ತದೆ. ಈ ಸಮಯದಲ್ಲಿ ಮೀನ ರಾಶಿಯವರು ಹೆಚ್ಚು ದೇವರನ್ನು ನಂಬುತ್ತಾರೆ. ಇನ್ನು ವೃಶ್ಚಿಕ ರಾಶಿಯವರಿಗೆ ಈ ಸಮಯ ಯಶಸ್ಸಿನೆಡೆಗೆ ಕರೆದುಕೊಂಡು ಹೋಗುತ್ತದೆ ನಿಮ್ಮ ಕಾರ್ಯಕ್ಷೇತ್ರಗಳಲ್ಲಿ ಬೆಳವಣಿಗೆಯನ್ನು ಕಾಣುತ್ತೀರಿ ಈ ಸಮಯದಲ್ಲಿ ನಿಮಗೆ ಅಭಿವೃದ್ಧಿ ಕಂಡುಬರುತ್ತದೆ ಯಾವ ಕೆಲಸವನ್ನು ಮಾಡುತ್ತಿದ್ದೀರಿ ಅದರಲ್ಲಿ ಏಳಿಗೆಯನ್ನು ಕಾಣುತ್ತೀರಿ. ಒಟ್ಟಿನಲ್ಲಿ ಮುಂಬರುವ 2024ರ ವರ್ಷ ಈ ರಾಶಿಯವರಿಗೆ ಬಹಳ ಅದೃಷ್ಟವನ್ನು ತಂದುಕೊಡುತ್ತದೆ.
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಇಲ್ಲಿದೆ 5 ಬೆಸ್ಟ್ ಲ್ಯಾಪ್ ಟಾಪ್ ಗಳು; ಉತ್ತಮ ಬ್ಯಾಟರಿ ಬ್ಯಾಕಪ್ ನೊಂದಿಗೆ..
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram