ಮೋದಿ ಸರ್ಕಾರ ಬಂದ ನಂತರ ನಮ್ಮ ದೇಶದಲ್ಲಿ ಹಲವಾರು ಭ್ರಷ್ಟಾಚಾರಗಳು ಮತ್ತು ತೆರಿಗೆ ವಂಚನೆಗಳು ಕಡಿಮೆಯಾಗುತ್ತಿವೆ. ಇದನ್ನೆಲ್ಲಾ ನಿಲ್ಲಿಸಲು ಮೋದಿಜಿಯವರು ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ತೆರಿಗೆಯಿಂದ ತಪ್ಪಿಸಿಕೊಳ್ಳದೆ ಇರುವಂತೆ ಎಲ್ಲರಿಗೂ ಕೂಡ ಕಟ್ಟುನಿಟ್ಟಾದ ಕಡಿವಾಣವನ್ನು ಹಾಕಲಾಗಿದೆ. ಇದರ ಸಲುವಾಗಿ ಜನರಿಗೆ ಅನುಕೂಲವಾಗುವಂತೆ ಮೋದಿ ಸರ್ಕಾರವು ಒಂದು ಯೋಜನೆಯನ್ನು ಕೂಡ ನಿರ್ಮಾಣ ಮಾಡಿದೆ. ಅದು ಯಾವುದೆಂದರೆ ಮೇರಾ ಬಿಲ್ ಮೇರಾ ಅಧಿಕಾರ್(Mere Bill Mere Adhikar Scheme).
ಈ ಯೋಜನೆಯ ಅಡಿಯಲ್ಲಿ ಒಂದು ಆಪ್(app) ಕೂಡ ಬಿಡುಗಡೆಯಾಗಿದೆ. ಇದನ್ನು ಉಪಯೋಗಿಸಿಕೊಂಡು ನಮ್ಮ ಜನತೆ ಕೋಟ್ಯಂತರ ರೂಪಾಯಿಗಳನ್ನು ಪಡೆಯಬಹುದಾಗಿದೆ. ಈ ಯೋಜನೆಯ ಅಡಿಯಲ್ಲಿ ಬಿಡುಗಡೆಯಾದ ಈ ಆಪ್ ನ ಮೂಲಕ ಜಿಎಸ್ಟಿ ಬಿಲ್ (GST)ಗಳನ್ನು ಕೂಡ ನೀವು ಪಾವತಿಸಬಹುದಾಗಿದೆ. ಅಂದರೆ ಸುಮಾರು ಹತ್ತು ಲಕ್ಷ ರೂಪಾಯಿಯಿಂದ ಹಿಡಿದು ಒಂದು ಕೋಟಿ ರೂಪಾಯಿಗಳವರೆಗೂ ನೀವು ಈ ಆಪ್ ನ ಮೂಲಕ ಪಡೆಯಬಹುದಾಗಿದೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಹಾಗಾದರೆ ಈ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳುವುದು ಹೇಗೆ?
ನೀವು ಅಂಗಡಿಯಲ್ಲಿ ಏನನ್ನಾದರೂ ತೆಗೆದುಕೊಂಡಾಗ ಅದರ GST ಬಿಲ್ ಅನ್ನು ಕೂಡ ತೆಗೆದುಕೊಳ್ಳಬೇಕು. ನಂತರ ಮೇರಾ ಬಿಲ್ ಮೇರಾ ಅಧಿಕಾರ್ ಎನ್ನುವ ಆಪ್ ನ ಮೂಲಕ ನೀವು ತೆಗೆದುಕೊಂಡ ಬಿಲ್ ಗಳನ್ನು ಅಪ್ಲೋಡ್(upload) ಮಾಡಬೇಕು. ಈ ರೀತಿ ಮಾಡುವುದರಿಂದ ನಿಮಗೆ ಸರ್ಕಾರದಿಂದ ವಿಶೇಷವಾದಂತಹ ಬಹುಮಾನ ಸಿಗುತ್ತದೆ. ಸುಮಾರು ಹತ್ತು ಲಕ್ಷ ರೂಪಾಯಿಂದ ಒಂದು ಕೋಟಿಯವರೆಗೂ ಕೂಡ ನೀವು ಈ ಆಪ್ ನ ಮೂಲಕ ಬಹುಮಾನವನ್ನು ಪಡೆಯಬಹುದು.
ಸರಕಾರವು ಈ ಬಹುಮಾನದ ಕೊಡುಗೆಗೆಂದೇ ಸುಮಾರು 30 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಜನಗಳಿಗೆ ಅನುಕೂಲವಾಗುವಂತೆ ಈ ಯೋಜನೆಯನ್ನು ಮೋದಿ ಸರ್ಕಾರವು ಸೆಪ್ಟೆಂಬರ್ 1 ರಂದು ಪ್ರಾರಂಭಿಸಿದೆ. ಹರಿಯಾಣ ದಮನ್ ಗುಜರಾತ್ ಪಾಂಡಿಚೇರಿ ಮತ್ತು ಅಸ್ಸಾಂ ನಂತಹ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಅಪ್ಲೋಡ್ ಮಾಡಿದ ಬಿಲ್ ಗಳಿಗೆ ಲಕ್ಕಿ ಡ್ರಾ ಮೂಲಕ ಬಹುಮಾನವನ್ನು ಕೊಡಲಾಗುತ್ತದೆ. ಈ ಯೋಜನೆಯಿಂದ ಜನಗಳಿಗೆ ಕೂಡ ಅನುಕೂಲ, ಸರಕಾರಕ್ಕೂ ಕೂಡ ಅನುಕೂಲ ಇಬ್ಬರೂ ಕೂಡ ಲಾಭವನ್ನು ಪಡೆಯಬಹುದು.
ಈ ಹಿಂದೆ ಕಂಡು ಬಂದಂತೆ ಬಹಳಷ್ಟು ಜನ ತೆರಿಗೆಯಿಂದ ತಪ್ಪಿಸಿಕೊಳ್ಳುತ್ತಿದ್ದರು ಯೋಜನೆಯ ಉದ್ದೇಶವೆಂದರೆ ಜನರನ್ನು ತೆರಿಗೆ ತುಂಬಲು ಪ್ರೋತ್ಸಾಹಿಸುವುದು. ಬಹುಮಾನಗಳನ್ನು ಪಡೆಯುವ ನೆಪದಲ್ಲಾದರೂ ಜನರು ತೆರಿಗೆಗಳನ್ನು ಪಾವತಿ ಮಾಡುತ್ತಾರೆ. ನಮ್ಮ ದೇಶ ನಡೆಯುತ್ತಿರುವುದು ನಾವು ತುಂಬುವ ತೆರಿಗೆಗಳಿಂದಲೇ ಎಂಬುದನ್ನು ನೆನಪಿಡೋಣ. ದೇಶದ ಸೌಲಭ್ಯಗಳನ್ನು ಉನ್ನತಿಗೊಳಿಸಲು ತೆರಿಗೆ ಪಾವತಿಸುವುದು ಅವಶ್ಯಕವಾಗಿದೆ. ದೇಶದ ಪ್ರಜೆ ಎಂದ ಮೇಲೆ ತೆರಿಗೆಯನ್ನು ತುಂಬಲೇಬೇಕು ಇದು ನಮ್ಮ ಜವಾಬ್ದಾರಿ ಕೂಡ. ತೆರಿಗೆಯನ್ನು ತುಂಬದ ಜನರಿಂದ ಬೇಸತ್ತ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಹಾಗೆ ಜನಗಳಿಗೂ ಕೂಡ ಇದರಿಂದ ಉಪಯೋಗವಾಗುತ್ತಿದೆ. ಸ್ನೇಹಿತರೆ ನಾವು ಹೇಳುವುದು ಇಷ್ಟೇ, ನಮ್ಮ ದೇಶದ ಪ್ರಜೆಯಾಗಿ ನಾವು ನಮ್ಮ ಜವಾಬ್ದಾರಿಯನ್ನು ನಿರ್ವಹಿಸೋಣ, ತೆರಿಗೆಯನ್ನು ಸರಿಯಾದ ಸಮಯಕ್ಕೆ ಪಾವತಿಸಿ ದೇಶವನ್ನು ಉನ್ನತಿಯತ್ತ ಸಾಗಿಸೋಣ.
ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಬಂಪರ್ ಆಫರ್; ಒಂದು ಎಲೆಕ್ಟ್ರಿಕಲ್ ಸ್ಕೂಟರ್ ಕೊಂಡ್ರೆ ಮತ್ತೊಂದು ಫ್ರೀ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram