ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ನಿಧಾನವಾಗಿ ಒಂದೊಂದೆ ಯೋಜನೆಗಳನ್ನು ಪರಿಚಯಿಸುತ್ತಿದೆ. ಈಗಾಗಲೇ ರಾಜ್ಯದ ಜನರಿಗೆ ಉಚಿತ ಗ್ಯಾರಂಟಿ ಯೋಜನೆಗಳ ಲಾಭ ಸಿಗುತ್ತಿದೆ. ಈಗಾಗಲೇ ರಾಜ್ಯ ಸರ್ಕಾರವು ಚುನಾವಣಾ ಪೂರ್ವ ನೀಡಿದ ವಚನದಂತೆ ಐದರಲ್ಲಿ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಜೊತೆ ಇನ್ನು ಹಲವು ಯೋಜನೆಗಳನ್ನು ಜಾರಿಗೆ ತರಲು ಯೋಜನೆ ರೂಪಿಸುತ್ತಿದೆ. ರಾಜ್ಯದ ಜನರು ಅನಾರೋಗ್ಯಕ್ಕೊಳಗಾದಾಗ ಉಚಿತವಾಗಿ ಚಿಕಿತ್ಸೆ ಪಡೆಯುವ ಸಲುವಾಗಿ ಉಚಿತ ಆರೋಗ್ಯ ಯೋಜನೆಯನ್ನು ಘೋಷಿಸಿದೆ. ಇದೀಗ ಕಾಂಗ್ರೆಸ್ ಸರ್ಕಾರವು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿದ್ದ ಯೋಜನೆ ಹೆಸರು ಬದಲಿಸಿ ಅದಕ್ಕೆ ಮತ್ತೊಂದಿಷ್ಟು ಸೌಲತ್ತು ನೀಡಲು ಮುಂದಾಗಿದೆ.
ಹೌದು ಬಿಎಸ್ ಯಡಿಯೂರಪ್ಪ ಅವರು ಸಿಎಂ ಅಗಿದ್ದ ಅವಧಿಯಲ್ಲಿ ಆರಂಭಿಸಿದ್ದ ಸಪ್ತಪದಿ ವಿವಾಹ ಯೋಜನೆಯ ಹೆಸರನ್ನು ‘ಮಾಂಗಲ್ಯ ಭಾಗ್ಯ’ ಎಂದು ಬದಲಿಸಲಾಗಿದೆ. ಸರಳ ಸಾಮೂಹಿಕ ವಿವಾಹದ ಯೋಜನೆಯನ್ನು ರಾಜ್ಯದ ಎಲ್ಲಾ ದೇವಸ್ಥಾನಗಳಿಗೂ ವಿಸ್ತರಿಸಲಾಗಿದೆ. ಮಾಂಗಲ್ಯ ಭಾಗ್ಯ ಎಂಬ ಹೆಸರು ಸೂಕ್ತ ಎನಿಸಿದ್ದರಿಂದ ಅದನ್ನು ಇರಿಸಲಾಗಿದ. ಬೇರೆ ಯಾವುದೇ ಬದಲಾವಣೆ ಇಲ್ಲ ಎಂದು ಸಚಿವರು ತಿಳಿಸಿದ್ದು, ಸಾಮೂಹಿಕ ಮದುವೆಯ ದಿನಾಂಕಗಳನ್ನ ನಿಗಧಿ ಪಡಿಸಿದ್ದಾರೆ.
ವಿವಾಹಕ್ಕೆ ಸಿದ್ಧವಾಗಿರುವ ಜೋಡಿಗಳಿಗೆ ಸರಳವಾಗಿ ಮದುವೆ ಮಾಡಿಸಲು ಅನ್ನಭಾಗ್ಯದಂತೆ ಮಾಂಗಲ್ಯ ಭಾಗ್ಯ(Mangalya Bhagya) ಎಂಬ ಹೆಸರಿನಡಿ ಸಾಮೂಹಿಕ ವಿವಾಹಗಳನ್ನು ಮಾಡಲು ಮುಂದಾಗಿದೆ. ಮದುವೆಗೆ ದುಂದು ವೆಚ್ಚ ಮಾಡಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿರುವುದನ್ನು ತಪ್ಪಿಸಲು ಆರಂಭಿಸಿರುವ ಯೋಜನೆ ಇದಾಗಿದೆ. ಇನ್ನು ಇತ್ತೀಚೆಗೆ ನಡೆದ ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ಈ ಯೋಜನೆಗೆ ಮಾಂಗಲ್ಯ ಭಾಗ್ಯ ಎಂದು ಮರು ನಾಮಕರಣ ಮಾಡಲು ತೀರ್ಮಾನಿಸಲಾಗಿದೆ. ಹೌದು ಈ ಭಾಗ್ಯದಡಿ ವರನಿಗೆ ಅಂಗಿ, ಧೋತಿ ಹಾಗೂ 5000 ರೂಪಾಯಿ ನಗದು, ವಧುವಿಗೆ ಮಂಗಳಸೂತ್ರಕ್ಕಾಗಿ ಸೀರೆ, 1,000 ರೂಪಾಯಿ ನಗದು ಮತ್ತು 8 ಗ್ರಾಂ. ಚಿನ್ನ ಅಂದ್ರೆ ತಾಳಿ-ಗುಂಡುಗಳು ನೀಡಲಾಗುತ್ತದೆ.
ಇದರ ಒಟ್ಟು ವೆಚ್ಚವು 55 ಸಾವಿರ ರೂ. ಆಗಲಿದೆ. ಜತೆಗೆ ವಧು-ವರರ ಬಂಧುಗಳಿಗೆ ಊಟೋಪಚಾರದ ವ್ಯವಸ್ಥೆಯನ್ನು ದೇವಾಲಯ ಆಡಳಿತ ಮಂಡಳಿಗಳೇ ಮಾಡಲಿವೆ. ಈ ಹಿಂದೆ ಸಪ್ತಪದಿ ಯೋಜನೆಯಡಿ ಇದ್ದ ಈ ಎಲ್ಲಾ ಮಾರ್ಗಸೂಚಿಗಳನ್ನು ಮಾಂಗಲ್ಯ ಭಾಗ್ಯದಲ್ಲೂ ಅಳವಡಿಸಲಾಗಿದೆ. ಆದರೆ ಈ ಹಿಂದೆ ಆಯ್ದ 100 ದೇವಾಲಯಗಳಲ್ಲಿ ಮಾತ್ರ ಜಾರಿಗೆ ತಂದಿದ್ದ ಈ ಯೋಜನೆಯನ್ನು ಇದೀಗ ಎಲ್ಲಾಎ ಮತ್ತು ಬಿ ಗ್ರೇಡ್ ದೇವಾಲಯಗಳಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ. ಅಲ್ದೇ ಈ ಯೋಜನೆಯಡಿ ಕೈಗೊಳ್ಳುವ ಸಾಮೂಹಿಕ ವಿವಾಹಕ್ಕೆ ತಗಲುವ ವೆಚ್ಚವನ್ನು ದೇವಾಲಯದ ನಿಧಿಯಿಂದಲೇ ಭರಿಸಲಾಗುವುದು. ಒಂದು ವೇಳೆ ದೇವಾಲಯದಿಂದ ಸಾಧ್ಯವಾಗದಿದ್ದಾಗ ಮಾತ್ರ ವಿವಾಹವಾಗುವ ವಧು-ವರರಿಗೆ ನೀಡುವ ಪ್ರೋತ್ಸಾಹ ಧನದ ಆರ್ಥಿಕ ಸಹಾಯ ಧನವನ್ನು ಇಲಾಖೆಯ ಸಾಮಾನ್ಯ ಸಂಗ್ರಹಣಾ ನಿಧಿಯಿಂದ ಭರಿಸಲಾಗುತ್ತದೆ ಅಂತ ಸಚಿವರು ಸ್ಪಷ್ಟ ಪಡಿಸಿದ್ದಾರೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ನವೆಂಬರ್, ಡಿಸೆಂಬರ್ ಮತ್ತು ಜನವರಿಯಲ್ಲಿ ಮದುವೆ ಭಾಗ್ಯ
ಹೌದು ಬಿಜೆಪಿ ಸರ್ಕಾರವು ಸಪ್ತಪದಿ ಸರಳ ಸಾಮೂಹಿಕ ಯೋಜನೆ ಜಾರಿಗೆ ತಂದಿತ್ತು. ಸದ್ಯ ಕಾಂಗ್ರೆಸ್ ಸರ್ಕಾರವು ಈ ವಿವಾಹ ಯೋಜನೆಯಲ್ಲಿ ಮಹತ್ವಪೂರ್ಣ ಬದಲಾವಣೆ ಮಾಡಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಟ್ಟಿದ್ದ ಸಪ್ತಪದಿ ಸರಳ ಸಾಮೂಹಿಕ ಯೋಜನೆ ಬದಲಾಗಿ ಮಾಂಗಲ್ಯ ಭಾಗ್ಯ ಎಂದು ಮರುನಾಮಕರಣ ಮಾಡಲು ಮುಂದಾಗಿದೆ. ನವೆಂಬರ್ ನಿಂದ ಜನವರಿವರೆಗೆ ರಾಜ್ಯದ ಮುಜಾರಿಯಿ ಇಲಾಖೆಗೆ ಸೇರಿದ ದೇವಸ್ಥಾನದಲ್ಲಿ ನಿಗದಿತ ದಿನದಂದು ಸರಳ ಸಾಮೂಹಿಕ ವಿವಾಹ ನೆರವೇರಲಿದೆ. ಮುಜರಾಯಿ ಇಲಾಖೆಯ ಎ ಮತ್ತು ಬಿ ದೇವಸ್ಥಾನಗಳಲ್ಲಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮಾಂಗಲ್ಯ ಭಾಗ್ಯ ವಿವಾಹ ಸಮಾರಂಭ ನೆರವೇರಲಿದೆ.
ಹೌದು ನವೆಂಬರ್, ಡಿಸೆಂಬರ್ ಹಾಗೂ 2024 ರ ಜನವರಿಯಲ್ಲಿ ಸಾಮೂಹಿಕ ವಿವಾಹಗಳಿಗೆ ವಧು ವರರ ಹೆಸರನ್ನು ನೋಂದಾಯಿಸಲು ದೇವಾಲಯಗಳಿಗೆ ಸೂಚನೆ ನೀಡಲಾಗಿದೆ. ನವೆಂಬರ್ ತಿಂಗಳಿನಲ್ಲಿ 16,19 ಹಾಗೂ 29ರಂದು ಇನ್ನು ಡಿಸೆಂಬರ್ ನಲ್ಲಿ, 7 ಮತ್ತು 10 ಹಾಗೂ 29ರಂದು, 2024ರ ಜನವರಿ 28 ಹಾಗೂ 31 ರಂದು ದಿನಾಂಕ ನಿಗದಿಪಡಿಸಲಾಗಿದೆ. ಸರ್ಕಾರ ನಿಗದಿ ಪಡಿಸಿರುವ ದಿನಾಂಕದಂದು ಮದುವೆ ಆಗಲು ಇಚ್ಚಿಸುವವರು ಮುಜರಾಯಿ ದೇಗುಲಗಳಿಗೆ ತೆರಳಿ ಹೆಸರು ನೋಂದಾಯಿಸಬಹುದು ಅಂತ ಸಚಿವ ರಾಮಲಿಂಗ ರೆಡ್ಡಿ ಅಧಿಕೃತವಾಗಿ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಹೀಗಾಗಿ ಅಗತ್ಯ ಇದ್ದವರು, ಮದುವೆಯ ಬಗ್ಗೆ ಯಾವುದೇ ರೀತಿಯ ಕಲ್ಪನೆಗಳು ಇಲ್ಲ ದುಂದು ವೆಚ್ಚ ಮಾಡೋದು ಬೇಡ ಅನ್ನೋರು ಒಮ್ಮೆ ಮುಂಜಾರಾಯಿ ಇಲಾಖೆಯ ದೇವಸ್ಥಾನಗಳಿಗೆ ಭೇಟಿ ಹೆಚ್ಚಿನ ಮಾಹಿತಿಯನ್ನ ಪಡಿಯಬಹುದು.
ಇದನ್ನೂ ಓದಿ: ರೇಷನ್ ಕಾರ್ಡ್ ತಿದ್ದಿಪಡಿಗೆ ಈ ತಿಂಗಳು ಇಲ್ಲ ಅವಕಾಶ; ಎಪಿಎಲ್, ಬಿಪಿಎಲ್ ಕಾರ್ಡುದಾರರಿಗೆ ಬ್ಯಾಡ್ ನ್ಯೂಸ್
ಇದನ್ನೂ ಓದಿ: ಅಂಚೆ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ; 1899 ಹುದ್ದೆಗಳಿಗೆ 81000 ರೂಪಾಯಿಗಳವರೆಗೂ ಸಿಗಲಿದೆ ಸಂಬಳ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram