ಸರ್ಕಾರಿ ಉದ್ಯೋಗ ಪಡೆಯಬೇಕು ಅಂದುಕೊಂಡವರಿಗೆ ಹಾಗೂ ಭದ್ರತ ಪಡೆಯಲ್ಲಿ ಪೊಲೀಸ್ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಬೇಕು ಅಂದುಕೊಂಡಿರುವವರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ ಬಂದಿದೆ. ಹೌದು ಸಿಬ್ಬಂದಿ ನೇಮಕಾತಿ ಆಯೋಗವು ಜಿಡಿ ಕಾನ್ಸ್‌ಟೇಬಲ್ ಪರೀಕ್ಷೆ 2024 ಗೆ ಸಂಬಂಧ ಪರಿಷ್ಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಪ್ರಸ್ತುತದ ನೋಟಿಫಿಕೇಶನ್ ಪ್ರಕಾರ 26146 ಜಿಡಿ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಮಾತ್ರ ಈ ಪರೀಕ್ಷೆ ಪ್ರಕ್ರಿಯೆ ನಡೆಸಲಿದೆ. ಹೌದು ಕೇಂದ್ರ ಸರ್ಕಾರ ಅಧೀನದ ವಿವಿಧ ಭದ್ರತಾ ಪಡೆಗಳಿಗೆ ಜೆನೆರಲ್ ಡ್ಯೂಟಿ ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ, ಸಿಬ್ಬಂದಿ ನೇಮಕಾತಿ ಆಯೋಗವು ಇದೀಗ ಪರಿಷ್ಕೃತ ಅಧಿಸೂಚನೆ ಬಿಡುಗಡೆ ಮಾಡಿದೆ.
ಇದರ ಪ್ರಕಾರ 26,146 ಜಿಡಿ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಮೊದಲಿನ ಅಧಿಸೂಚನೆಯಲ್ಲಿ 75,768 ಹುದ್ದೆಗಳಿಗೆ ಅಧಿಸೂಚಿಸಲಾಗಿತ್ತು. ಆದ್ರಿಗ ಎಸ್‌ಎಸ್‌ಸಿ ಕಾನ್ಸ್‌ಟೇಬಲ್ ಅಂದ್ರೆ ಜೆನೆರಲ್ ಡ್ಯೂಟಿ ಹುದ್ದೆಗಳನ್ನು ಸಿಎಪಿಎಫ್, ಎನ್‌ಐಎ, ಎಸ್‌ಎಸ್ಎಫ್ ಮತ್ತು ರೈಫಲ್‌ಮೆನ್, ಅಸ್ಸಾಂ ರೈಫಲ್ಸ್ ಗಳಲ್ಲಿ ಭರ್ತಿ ಮಾಡುತ್ತದೆ. ಹಾಗಾದ್ರೆ ಯಾವ್ಯಾವ ಪಡೆಗಳಲ್ಲಿ ಎಷ್ಟು ಹುದ್ದೆಗಳಿವೆ, ಅರ್ಜಿಗೆ ಪ್ರಮುಖ ದಿನಾಂಕಗಳು, ಹಾಗೂ ಅರ್ಜಿ ಸಲ್ಲಿಕೆ ಮತ್ತು ಆಯ್ಕೆಯಾದ ವಿಧಾನದ ಬಗ್ಗೆ ನೋಡೋಣ ಬನ್ನಿ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ನೇಮಕಾತಿ ವಿಧಾನ ಅರ್ಜಿ ಸಲ್ಲಿಸೋದು ಹೇಗೆ ಗೊತ್ತಾ?
ಹೌದು ಕೇವಲ ಎಸ್‌ಎಸ್‌ಎಲ್‌ಸಿ(SSLC) ಪಾಸಾಗಿದ್ರೆ ಸಾಕು ನೀವು ಕೂಡ ಈ ಉದ್ಯೋಗವನ್ನ ಪಡೆಯುವ ಪ್ರಯತ್ನ ಮಾಡಬಹುದು. ಇನ್ನು sslc ಪಾಸ್ ಆಗಿ ಕೇಂದ್ರ ಸರ್ಕಾರಿ ಉದ್ಯೋಗ ಪಡೆಯಬೇಕು ಎಂದುಕೊಂಡವರಿಗೆ ಇದೀಗ ಸುವರ್ಣಾವಕಾಶ ಅಂತಲೇ ಹೇಳಬಹುದು. ವಿವಿಧ ಭದ್ರತಾ ಪಡೆಗಳಲ್ಲಿ ಒಟ್ಟು 26,146 ಕಾನ್ಸ್‌ಟೇಬಲ್ ಪೋಸ್ಟ್‌ಗಳನ್ನು ಭರ್ತಿ ಮಾಡುತ್ತಿದ್ದು, ಅರ್ಜಿ ಆಹ್ವಾನಿಸಲಾಗಿದೆ. ಸಿಬ್ಬಂದಿ ನೇಮಕಾತಿ ಆಯೋಗವು ಒಟ್ಟು 26,146 ಜೆನೆರಲ್ ಡ್ಯೂಟಿ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಇನ್ನು ಯಾವ್ಯಾವ ಪಡೆಗಳಲ್ಲಿ ಎಷ್ಟೆಷ್ಟು ಹುದ್ದೆಗಳಿವೆ ಅನ್ನೋದನ್ನ ನೋಡೋದಾದ್ರೆ, ಅಂದ್ರೆ ಎಸ್‌ಎಸ್‌ಸಿ ಕಾನ್ಸ್‌ಟೇಬಲ್ ಹುದ್ದೆಗಳ ವಿವರವನ್ನ ನೋಡೋದಾದ್ರೆ,
- ಗಡಿ ಭದ್ರತಾ ಪಡೆ : 6174
- ಕೇಂದ್ರ ಮೀಸಲು ಪೊಲೀಸ್ ಪಡೆ : 3337
- ಕೇಂದ್ರ ಕೈಗಾರಿಕಾ ಭದ್ರತಾ ಪಡೆ : 11025
- ಸಶಸ್ತ್ರ ಸೀಮಾ ಬಲ್ : 635
- ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ : 3189
- ಅಸ್ಸಾಂ ರೈಫಲ್ಸ್ : 1490
- ಸೆಕ್ರೇಟರಿಯಟ್ ಸೆಕ್ಯೂರಿಟಿ ಫೋರ್ಸ್ : 296
ಒಟ್ಟು ಹುದ್ದೆಗಳ ಸಂಖ್ಯೆ : 26,146 ಸದ್ಯಕ್ಕೆ ಇಷ್ಟು ಪಡೆಗಳಲ್ಲಿ ಇಷ್ಟು ಉದ್ಯೋಗಗಳು ಖಾಲಿ ಇದ್ದು ಇವುಗಳನ್ನ ಭರ್ತಿ ಮಾಡಲು ಇದೀಗ ಅರ್ಜಿ ಅಹ್ವಾನ ಮಾಡಿದ್ದು ಹೇಗೆ ಸರ್ಜಿ ಸಲ್ಲಿಸೋದು ಕೊನೆಯ ದಿನಾಂಕ ಮತ್ತು ಆರಂಭಿಕ ದಿನ ಹಾಗೂ ಆಯ್ಕೆ ವಿಧಾನವನ್ನ ನೋಡೋಣ ಬನ್ನಿ.
- ಇನ್ನು ಹುದ್ದೆಗೆ ಅಪ್ಲಿಕೇಶನ್ ಸಲ್ಲಿಸಲು ಆರಂಭಿಕ ದಿನಾಂಕ : 24-11-2023 ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : 31-12-2023.
- ಮುಖ್ಯವಾಗಿ ಸಿಬಿಟಿ ಪರೀಕ್ಷೆ ದಿನಾಂಕ: ಫೆಬ್ರುವರಿ/ ಮಾರ್ಚ್ 2024 ಅಂತ ಹೇಳಲಾಗಿದೆ. ಆದ್ರೆ ದಿನಾಂಕ ನಿಗಧಿ ಆಗಿಲ್ಲ.
- ಅರ್ಜಿ ಸಲ್ಲಿಸಲು ಬೇಕಾದ ವಿವರಗಳು ಮತ್ತು ದಾಖಲೆಗಳು ಏನಪ್ಪಾ ಅಂದ್ರೆ ಹೆಸರು, ಇ-ಮೇಲ್ ವಿಳಾಸ, ಮೊಬೈಲ್ ನಂಬರ್, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಆಧಾರ್ ಕಾರ್ಡ್, ಹಾಗೂ ಇತರೆ ವೈಯಕ್ತಿಕ ಮಾಹಿತಿಗಳು ಸೇರಿದಂತೆ ಜಾತಿ ಪ್ರಮಾಣ ಪತ್ರ. ಮೀಸಲಾತಿ ಕೋರಿದಲ್ಲಿ ಸಂಬಂಧಿಸಿದ ಪ್ರಮಾಣ ಪತ್ರವನ್ನ ಸಲ್ಲಿಸಬೇಕಾಗುತ್ತೆ.
- ಮುಖ್ಯವಾಗಿ ಅರ್ಜಿ ಹಾಕಲು ಕನಿಷ್ಠ ವಯಸ್ಸು: 18 ವರ್ಷ, ಗರಿಷ್ಠ ವಯಸ್ಸು: 23 ವರ್ಷ ಜೊತೆಗೆ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
- ಅರ್ಜಿ ಶುಲ್ಕ ಸಾಮಾನ್ಯ ವರ್ಗದವರು / ಇತರೆ ಹಿಂದುಳಿದ ಕೆಟಗರಿ ಅಭ್ಯರ್ಥಿಗಳಿಗೆ ರೂ.100. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಅರ್ಜಿ ಶುಲ್ಕವನ್ನು ನೆಟ್‌ಬ್ಯಾಂಕಿಂಗ್, ಎಸ್‌ಬಿಐ ಚಲನ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮೂಲಕ ಪಾವತಿಸಬಹುದು.
- ನೇಮಕಾತಿ ವಿಧಾನ : ಕಂಪ್ಯೂಟರ್ ಆಧಾರಿತ ಪರೀಕ್ಷೆ : ಸಿಬಿಟಿ೦, ಪಿಎಸ್‌ಟಿ, ಪಿಇಟಿ, ದಾಖಲೆಗಳ ಪರಿಶೀಲನೆ, ಮೆಡಿಕಲ್ ಟೆಸ್ಟ್ ಆಯ್ಕೆ ಪ್ರಕ್ರಿಯೆಯಲ್ಲಿ ಇರುತ್ತವೆ. ಇನ್ನು ಹೆಚ್ಚಿನ ಮಾಹಿತಿಗಾಗಿ https://ssc.nic.in ಗೆ ಒಮ್ಮೆ ಭೇಟಿ ಕೊಡಿ.
ಇದನ್ನೂ ಓದಿ: ಜನನ ಮರಣ ಪ್ರಮಾಣ ಪತ್ರ ಮಾಡಿಸಲು ವಿಳಂಬ ಮಾಡುವಂತಿಲ್ಲ; ವಿಳಂಬ ಮಾಡೋರಿಗೆ ಶುಲ್ಕ ಹೆಚ್ಚಿಸಿದ ರಾಜ್ಯ ಸರ್ಕಾರ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram