ಹೌದು ಸ್ನೇಹಿತರೆ, ಮೊದಲ ಹೆಂಡತಿ ಬದುಕಿರುವಾಗಲೇ ಎರಡನೇ ಮದುವೆಯಾದರೆ, ಆ ಎರಡನೇ ಹೆಂಡತಿಗೆ ಗಂಡನ ಪಿಂಚಣಿಯಲ್ಲಿ ಯಾವುದೇ ಅಧಿಕಾರವಿರುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ಯಾವುದೇ ಕಾರಣಕ್ಕೂ ಎರಡನೇ ಹೆಂಡತಿಗೆ ಗಂಡನ ಕುಟುಂಬದ ಪಿಂಚಣಿಯಲ್ಲಿ ಕಿಂಚಿತ್ತು ಸಹ ಅಧಿಕಾರವಿರುವುದಿಲ್ಲ ಅದೇನಿದ್ದರೂ ಸಹ ಮೊದಲನೇ ಹೆಂಡತಿಗೆ ಮಾತ್ರ ದೊರೆಯುತ್ತದೆ ಎಂದು ಹೈ ಕೋರ್ಟ್ ಕಟ್ಟುನಿಟ್ಟಾಗಿ ತೀರ್ಪನ್ನು ನೀಡಿದೆ.
ಹೌದು ಇತ್ತೀಚಿಗೆ ಅಕ್ರಮ ಸಂಬಂಧಗಳು ಹೆಚ್ಚಾಗುತ್ತಿವೆ ಹಾಗೆ ಮೊದಲನೇ ಹೆಂಡತಿ ಬದುಕಿರುವಾಗಲೇ ಎರಡನೇ ಮದುವೆಯಾಗುವುದು ಕೂಡ ಹೆಚ್ಚಾಗಿ ಕಂಡುಬರುತ್ತದೆ ಇದರಿಂದ ಮೊದಲನೆಯ ಹೆಂಡತಿಗೆ ಅನ್ಯಾಯ ಆಗಬಾರದು ಎನ್ನುವ ಕಾರಣಕ್ಕೆ ಕರ್ನಾಟಕ ಹೈಕೋರ್ಟ್ ಇದೊಂದು ಉತ್ತಮ ತೀರ್ಪನ್ನು ನೀಡಿದೆ. ಮೊದಲನೇ ಹೆಂಡತಿ ಇದ್ದಾಗಲೇ ಎರಡನೇ ಮದುವೆಯಾದರೆ ಆ ಮೊದಲನೆ ಹೆಂಡತಿಯ ಜೀವನಕ್ಕೆ ಆಸರೆ ಇಲ್ಲದಂತಾಗುತ್ತದೆ. ಮೊದಲನೇ ಹೆಂಡತಿಗೆ ಆರ್ಥಿಕವಾಗಿ ಬೆಂಬಲ ಸಿಗಬೇಕು ಎಲ್ಲ ರೀತಿಯಿಂದಲೂ ಮೊದಲನೇ ಹೆಂಡತಿಗೆ ಆಗುವ ಅನ್ಯಾಯವನ್ನು ತಡೆಗಟ್ಟಲು ಕರ್ನಾಟಕ ಹೈಕೋರ್ಟ್ ಈ ಮಹತ್ವದ ತೀರ್ಪನ್ನು ನೀಡಿದೆ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram
ಪ್ರಕರಣದ ವಿಶ್ಲೇಷಣೆ:
ಈ ಸಮಯದಲ್ಲಿ ಸರ್ಕಾರಿ ನೌಕರರೊಬ್ಬರ ಎರಡನೆಯ ಪತ್ನಿಯು ಹೈ ಕೋರ್ಟ್ ಗೆ ಮೇಲ್ ಮನವಿಯನ್ನು ಸಲ್ಲಿಸಿದರು. ಇದರ ಬಗ್ಗೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ ವರಲೇ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರ ಸಮ್ಮುಖದಲ್ಲಿ ಹೈಕೋರ್ಟ್ ಈ ತೀರ್ಪನ್ನು ನೀಡಿದೆ. ಸರ್ಕಾರಿ ನೌಕರರು ಒಬ್ಬರು ಸಹ ಮೊದಲ ಪತ್ನಿ ಬದುಕಿರುವಾಗಲೇ ಎರಡನೆಯ ವಿವಾಹವನ್ನು ಆಗಿದ್ದರು. ಆದರೆ ಅವರ ಪಿಂಚಣಿ ಮಾತ್ರ ಮೊದಲನೇ ಹೆಂಡತಿಗೆ ಹೋಗುತ್ತಿತ್ತು ಇದರಿಂದ ಬೇಸತ್ತ ಎರಡನೇ ಪತ್ನಿ ಕೋರ್ಟ್ ಗೆ ಮನವಿ ಮಾಡುವುದರ ಮೂಲಕ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಕೋರ್ಟ್, ಇದು ಮೊದಲನೆಯ ಹೆಂಡತಿಯ ಆದ್ಯತೆ ಆದ್ದರಿಂದ ಎರಡನೇ ಪತ್ನಿಗೆ ಯಾವುದೇ ಕಾರಣಕ್ಕೂ ಪಿಂಚಣಿ ಸಲ್ಲುವುದಿಲ್ಲ ಎಂದು ಈ ಆದೇಶವನ್ನು ಹೊರಡಿಸಿದೆ.
ಮೊದಲನೇ ಪತ್ನಿ ಬದುಕಿರುವಾಗಲೇ ಎರಡನೇ ಮದುವೆ ಆಗುವುದು ದೊಡ್ಡ ಅಪರಾಧ ಅದರಲ್ಲೂ ಸಹಿತ ಅವರ ಪಿಂಚಣಿಯು ಸಹ ಎರಡನೇ ಪತ್ನಿಗೆ ಯಾವುದೇ ಕಾರಣಕ್ಕೂ ಸಲ್ಲುವುದಿಲ್ಲ ಮೊದಲನೇ ಪತ್ನಿದ್ದಾಗ ಎರಡನೇ ಮದುವೆ ಆದರೆ ಅದು ಮದುವೆನೇ ಅಲ್ಲ ಕಾನೂನಿನ ಪ್ರಕಾರ ಅದೊಂದು ದೊಡ್ಡ ಮಹಾಪರಾಧ. 1955 act ಪ್ರಕಾರ ದ್ವಿಪತ್ನಿತ್ವ ಎನ್ನುವುದು ದೊಡ್ಡ ಅಪರಾಧಕ್ಕೆ ಕಾರಣವಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಸಹ ಎರಡನೇ ಹೆಂಡತಿಗೆ ಪಿಂಚಣಿಯನ್ನು ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಖಡಕ್ ಕಂಡಿತವಾಗಿ ಹೇಳಿದೆ.
ವಿವಾಹ ಕಾಯ್ದೆ ಸೆಕ್ಷನ್ 17 ಪ್ರಕಾರ ದ್ವಿಪತ್ನಿತ್ವ ಎನ್ನುವುದು ದೊಡ್ಡ ಅಪರಾಧವಾಗಿದೆ ನಮ್ಮ ಹಿಂದೂ ಧರ್ಮದಲ್ಲಿ ಒಬ್ಬರಿಗೆ ಒಂದೇ ಪತ್ನಿ ಇರಬೇಕು ನಾವು ಸಂಪ್ರದಾಯಸ್ಥರು ಏಕಪತ್ನಿತ್ವವನ್ನು ಪಾಲಿಸುತ್ತಿವೆ ಆದರೆ ಇತ್ತೀಚಿಗೆ ಹೆಂಡತಿ ಇರುವಾಗಲೇ ಮತ್ತೊಂದು ಹೆಂಡತಿಯನ್ನು ಕರೆದುಕೊಂಡು ಬರುವುದು ಹೆಚ್ಚಾಗುತ್ತಿದೆ. ಇದರಿಂದ ಮೊದಲನೇ ಹೆಂಡತಿಗೆ ಅನ್ಯಾಯವಾಗುತ್ತಿದೆ ಇದನ್ನು ತಪ್ಪಿಸಲು ಹೈಕೋರ್ಟ್ ನಿರ್ಧಾರವನ್ನು ತೆಗೆದುಕೊಂಡಿದೆ. ಮೊದಲನೇ ಹೆಂಡತಿಗೆ ಯಾವುದೇ ಕಾರಣಕ್ಕೂ ಕೂಡ ಅನ್ಯಾಯವಾಗಬಾರದು ಎಂಬುದು ಹೈಕೋರ್ಟು ವಾದ. ಹಾಗಾಗಿ ಅರ್ಜಿದಾರರಿಗೆ ಯಾವುದೇ ರೀತಿಯ ಕಾನೂನು ಬೆಂಬಲ ಸಿಗುವುದಿಲ್ಲ ಈ ಮದುವೆಗೆ ಸಿಂಧುತ್ವವಿಲ್ಲ ಎಂಬ ಮಾತನ್ನು ಹೈಕೋರ್ಟ್ ಹೇಳಿದೆ.
ಇದನ್ನೂ ಓದಿ: DL ಮತ್ತು RC ಗೆ ಹೊಸ ರೂಲ್ಸ್ ಜಾರಿ, ಗಟ್ಟಿಯಾದ ನಿರ್ಧಾರವನ್ನು ತೆಗೆದುಕೊಂಡ ಸಾರಿಗೆ ಸಂಸ್ಥೆ.
ಇದನ್ನೂ ಓದಿ: ಕೇವಲ 10000 ಡೌನ್ ಪೇಮೆಂಟ್ ನೊಂದಿಗೆ ಹೀರೋ ಎಲೆಕ್ಟ್ರಿಕ್ AE 75 ಫ್ಯಾಮಿಲಿ ಸ್ಕೂಟರ್ ಅನ್ನು ಖರೀದಿಸಿ.