ಇತ್ತೀಚಿನ ಕೆಲ ವರ್ಷಗಳಿಂದ ಸರ್ಕಾರದ ಯೋಜನೆಗಳನ್ನು ಪಡೆಯುವುದರಿಂದ ಹಿಡಿದು ಡ್ರೈವಿಂಗ್ ಲೈಸೆನ್ಸ್ ಪಡೆಯುವವರೆಗೆ, ವ್ಯಕ್ತಿಯ ಗುರುತನ್ನು ಪರಿಶೀಲಿಸುವ ಪ್ರಕ್ರಿಯೆಯನ್ನು ಆಧಾರ್ ಕಾರ್ಡ್ ಸರಳಗೊಳಿಸುತ್ತದೆ. ಇದು ಆಧಾರ್ ಪ್ರಾಧಿಕಾರ ನೀಡಿದ ಅನನ್ಯ 12-ಅಂಕಿಯ ಆಧಾರ್ ಸಂಖ್ಯೆಯನ್ನು ಒಳಗೊಂಡಿದೆ. ಹೌದು ಆಧಾರ್ ಪ್ರಸ್ತುತ ಪ್ರಮುಖ ದಾಖಲೆಯಾಗಿದೆ. ದೇಶದಲ್ಲಿ ಎಲ್ಲ ಯೋಜನೆಗಳಿಗೆ ಆಧಾರ್ ಕಾರ್ಡ್ ಅನ್ನು ಬಳಸಲಾಗುತ್ತದೆ. ಪ್ರಮುಖವಾಗಿ ನಾವು ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ಪಡೆಯಬೇಕಾದರೆ ಆಧಾರ್ ಕಾರ್ಡ್ ಅತೀ ಮುಖ್ಯವಾಗಿದೆ. ಭಾರತದಲ್ಲಿ ಆಧಾರ್ ಕಾರ್ಡ್ ಎಲ್ಲ ಕಾರ್ಯಗಳಿಗೆ ಮುಖ್ಯವಾಗಿದೆ. ಇನ್ನು ಶಿಶುವಿನಿಂದ ಹಿಡಿದು ಹಿರಿಯ ನಾಗರಿಕರವರೆಗೂ ಎಲ್ಲರಿಗೂ ಆಧಾರ್ ಕಾರ್ಡ್ ಮುಖ್ಯವಾಗಿದೆ. ಆಧಾರ್ ಕಾರ್ಡ್ನಲ್ಲಿ ನಮ್ಮ ವೈಯಕ್ತಿಕ ದಾಖಲೆಗಳು ಇರುತ್ತದೆ. ಫಿಂಗರ್ಪ್ರಿಂಟ್ಸ್, ಐರಿಸ್ ಸ್ಕ್ಯಾನ್, ಫೋಟೋ ಸೇರಿದಂತೆ ಹಲವಾರು ವೈಯಕ್ತಿಕ ಮಾಹಿತಿಗಳು ಇರುತ್ತದೆ. ಪ್ರಸ್ತುತ ಕಾರ್ಡ್ ಅನ್ನು ರಕ್ಷಣೆ ಮಾಡುವುದು ಮುಖ್ಯವಾಗಿದೆ. ಯಾಕೆಂದರೆ ಕಾರ್ಡ್ನಲ್ಲಿನ ಬಯೋಮೆಟ್ರಿಕ್ ಡೇಟಾ ಇರುತ್ತದೆ.
ಆಧಾರ್ ಕಾರ್ಡ್ ಬೆರಳಚ್ಚುಗಳು, ಐರಿಸ್ ಮತ್ತು ಮುಖದ ಚಿತ್ರಗಳಂತಹ ಬಯೋಮೆಟ್ರಿಕ್ಗಳಂತಹ ಪ್ರಮುಖ ವೈಯಕ್ತಿಕ ಮಾಹಿತಿಯನ್ನು ಸಹ ಒಳಗೊಂಡಿದೆ. ಹೀಗಾಗಿ ಈಗ, ಹೆಚ್ಚುತ್ತಿರುವ ಗೌಪ್ಯತೆ ಮತ್ತು ಮಾಹಿತಿ ಸುರಕ್ಷತೆಯ ಕಾಳಜಿಯೊಂದಿಗೆ, ಆಧಾರ್ ಕಾರ್ಡ್ನಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು, ವಿಶೇಷವಾಗಿ ಬಯೋಮೆಟ್ರಿಕ್ ಮಾಹಿತಿಯನ್ನು ಸುರಕ್ಷಿತವಾಗಿ ಇರಿಸಲಾಗಿದ್ಯಾ ಇಲ್ವಾ ಅನ್ನೋದನ್ನ ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ. ಯಾಕಂದ್ರೆ ಈಗೀಗ ಸೈಬರ್ ಅಪರಾಧಿಗಳು ಮತ್ತು ವಂಚಕರು ಮೋಸದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಬಯೋಮೆಟ್ರಿಕ್ ವಿವರಗಳನ್ನು ದುರುಪಯೋಗಪಡಿಸಿಕೊಳ್ಳಬಹುದು. ಇದನ್ನು ತಪ್ಪಿಸಲು ಆಧಾರ್ ಪ್ರಾಧಿಕಾರವು ಉಪಯುಕ್ತ ಸೌಲಭ್ಯವನ್ನು ಒದಗಿಸುತ್ತದೆ. ಇದು ಬಯೋಮೆಟ್ರಿಕ್ ವಿವರಗಳನ್ನು ಸುರಕ್ಷಿತವಾಗಿ ಲಾಕ್ ಮಾಡುವ ಸೌಲಭ್ಯವಾಗಿದೆ. ಹಾಗಾದ್ರೆ ಬಯೋಮೆಟ್ರಿಕ್ ಅನ್ನ ಲಕ್ ಮತ್ತು ಅನ್ ಲಾಕ್ ಮಾಡೋದು ಹೇಗೆ ಏನ್ ಮಾಡಬೇಕು ನೋಡ್ತಾ ಹೋಗೋಣ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹೌದು ಹ್ಯಾಕರ್ಗಳು, ವಂಚಕರು ಬಯೋಮೆಟ್ರಿಕ್ ಡೇಟಾವನ್ನು ಕದಿಯುತ್ತಾರೆ. ಇದರಿಂದಾಗಿ ಭಾರತೀಯ ವಿಶಿಷ್ಠ ಗುರುತಿನ ಪ್ರಾಧಿಕಾರ ಸುರಕ್ಷಿತ ವಿಧಾನವನ್ನು ಆಯ್ಕೆ ಮಾಡಿದೆ. ಹೌದು ಆಧಾರ್ ಕಾರ್ಡ್ ಬಯೋಮೆಟ್ರಿಕ್ ಡೇಟಾವನ್ನು ಲಾಕ್ ಮಾಡುವುದು ಅನ್ಲಾಕ್ ಮಾಡುವ ಆಯ್ಕೆಯನ್ನ ನೀಡಿದ್ದು, ವಂಚನೆಯಿಂದ ತಪ್ಪಿಸಿಕೊಳಲು ಇದು ಉತ್ತಮ ಮಾರ್ಗ. ಇನ್ನು ಬಯೋಮೆಟ್ರಿಕ್ ಲಾಕಿಂಗ್ ಅಥವಾ ಅನ್ಲಾಕಿಂಗ್ ಎಂದರೆ ಆಧಾರ್ ಕಾರ್ಡ್ ಬಳಕೆದಾರರಿಗೆ ತಮ್ಮ ಬಯೋಮೆಟ್ರಿಕ್ ಡೇಟಾವನ್ನು ಲಾಕ್ ಮಾಡಲು ಹಾಗೂ ಅನ್ಲಾಕ್ ಮಾಡಲು ನೀಡುವ ಅವಕಾಶವಾಗಿದೆ. ಇದರಿಂದಾಗಿ ಆಧಾರ್ ಕಾರ್ಡ್ದಾರರ ಬಯೋಮೆಟ್ರಿಕ್ ಡೇಟಾಗೆ ಸುರಕ್ಷತೆ ಲಭ್ಯವಾಗಲಿದೆ.
ಹೌದು ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಬಯೋಮೆಟ್ರಿಕ್ ಮಾಹಿತಿಯನ್ನು ತಾತ್ಕಾಲಿಕವಾಗಿ ಲಾಕ್ ಮತ್ತು ಅನ್ಲಾಕ್ ಮಾಡಬಹುದು. ಈ ಸೌಲಭ್ಯದೊಂದಿಗೆ ಆಧಾರ್ ಪ್ರಾಧಿಕಾರವು ವೈಯಕ್ತಿಕ ಬಯೋಮೆಟ್ರಿಕ್ ವಿವರಗಳ ಗೌಪ್ಯತೆಯನ್ನು ಖಚಿತಪಡಿಸುತ್ತದೆ. ಇನ್ನು ಒಮ್ಮೆ ಬಯೋಮೆಟ್ರಿಕ್ ವಿವರಗಳನ್ನು ಲಾಕ್ ಮಾಡಿದರೆ, ಆಧಾರ್ ಕಾರ್ಡ್ ಹೊಂದಿರುವವರು ಗುರುತಿನ ಪರಿಶೀಲನೆಗಾಗಿ ಆಧಾರ್ ಬಯೋಮೆಟ್ರಿಕ್ ದಾಖಲೆಯನ್ನು ಬಳಸಲಾಗುವುದಿಲ್ಲ. ಬಯೋಮೆಟ್ರಿಕ್ಸ್ ಲಾಕ್ ಮಾಡಲಾದ ಆಧಾರ್ ಅನ್ನು ನೀವು ಗುರುತಿನ ಪರಿಶೀಲನೆಗಾಗಿ ಬಳಸಲು ಪ್ರಯತ್ನಿಸಿದರೆ, ನೀವು 330 ಮೆಸೆಜ್ಗಳನ್ನು ಪಡೆಯುತ್ತೀರಿ. ಆಗ ಬಯೋಮೆಟ್ರಿಕ್ ವಿವರಗಳನ್ನು ಲಾಕ್ ಮಾಡಲಾಗಿದೆ ಎಂದು ಇದು ಸೂಚಿಸುತ್ತದೆ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram
ಆಧಾರ್ ಕಾರ್ಡ್ ಬಯೋಮೆಟ್ರಿಕ್ ಅನ್ನು ಲಾಕ್ ಮಾಡುವುದು ಹೇಗೆ?
ಇನ್ನು ಆಧಾರ್ ಕಾರ್ಡ್ ಅನ್ನು ಹೊಂದಿರುವ ಯಾವುದೇ ವ್ಯಕ್ತಿಯಾದರೂ ಈ ಸೇವೆಯ ಪ್ರಯೋಜನವನ್ನು ಪಡೆಯಬಹುದು. ಈ ಫೀಚರ್ ಆಧಾರ್ ಕಾರ್ಡ್ದಾರರಿಗೆ ಬಯೋಮೆಟ್ರಿಕ್ ಡೇಟಾವನ್ನು ರಕ್ಷಣೆ ಮಾಡಲು ಅವಕಾಶ ನೀಡುತ್ತದೆ. ಬಯೋಮೆಟ್ರಿಕ್ ಡೇಟಾವನ್ನು ಲಾಕ್ ಮಾಡಿದ ಬಳಿಕ ಯಾವುದೇ ವ್ಯಕ್ತಿ ಕಾರ್ಡ್ ಮಾಹಿತಿ ಪಡೆಯಲು ನೋಡಿದರೆ, ಎರರ್ ಕೋಡ್ 330 ಬರಲಿದೆ. ಹಾಗಾದ್ರೆ ಆಧಾರ್ ಬಯೋಮೆಟ್ರಿಕ್ ವಿವರಗಳನ್ನು ಲಾಕ್ ಮಾಡುವುದು ಹೇಗೆ ಅಂತ ನೋಡೋದಾದ್ರೆ ಮೊದಲಿಗೆ ಆಧಾರ್ ಪ್ರಾಧಿಕಾರದ (UIDAI) ಅಧಿಕೃತ ವೆಬ್ಸೈಟ್ಗೆ ಹೋಗಿ https://uidai.gov.in/ ಮತ್ತು My Aadhaar ಕ್ಲಿಕ್ ಮಾಡಿ ಆಧಾರ್ ಸೇವೆಗಳನ್ನು ಆಯ್ಕೆಮಾಡಿ ಮತ್ತು ನಂತರ ನಿಮ್ಮ ಬಯೋಮೆಟ್ರಿಕ್ಸ್ ಅನ್ನು ಸುರಕ್ಷಿತಗೊಳಿಸಿ ಕ್ಲಿಕ್ ಮಾಡಿ. ಆಮೇಲೆ ಲಾಕ್/ಅನ್ಲಾಕ್ ಬಯೋಮೆಟ್ರಿಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ 12-ಅಂಕಿಯ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ಸೂಕ್ತ ಜಾಗದಲ್ಲಿ ಸಲ್ಲಿಸಿ. ನಂತರ ಒದಗಿಸಿದ ಜಾಗದಲ್ಲಿ ಆಧಾರ್ನೊಂದಿಗೆ ನೋಂದಾಯಿಸಲಾದ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ OTP ಅನ್ನು ಟೈಪ್ ಮಾಡಿ. ನಂತರ ಸ್ರ್ಕೀನ್ ಮೇಲೆ ಲಾಕ್ / ಅನ್ಲಾಕ್ ಬಯೋಮೆಟ್ರಿಕ್ಸ್ ಬಟನ್ ಮೇಲೆ ಕ್ಲಿಕ್ ಮಾಡಿ.
ಇಷ್ಟಾದ್ರೆ ನಿಮ್ಮ ಬಯೋಮೆಟ್ರಿಕ್ ಡೇಟಾ ಲಕ್ ಆಗುತ್ತೆ. ಇನ್ನು ಅನ್ಲಾಕ್ ಮಾಡುವುದು ಹೇಗೆ ಅಂದ್ರೆ ಯುಐಡಿಎಐನ ಅಧಿಕೃತ ವೆಬ್ಸೈಟ್ uidai.gov.in ಗೆ ಭೇಟಿ ನೀಡಿ, My Aadhaar ಮೇಲೆ ಕ್ಲಿಕ್ ಮಾಡಿ ಅಲ್ಲಿ ಕಾಣುವ Unlock Biometrics ಅನ್ನು ಕ್ಲಿಕ್ ಮಾಡಿ, ಬಾಕ್ಸ್ನಲ್ಲಿ ಚೆಕ್ ಮಾಡಿ, ‘Unlock Biometrics’ ಆಯ್ಕೆ ಮಾಡಿ, ನಿಮ್ಮ ಆಧಾರ್ ಸಂಖ್ಯೆಯನ್ನು ಉಲ್ಲೇಖಿಸಿ, ಕ್ಯಾಪ್ಚಾ ಕೋಡ್ ಅನ್ನು ಉಲ್ಲೇಖಿಸಿ, Get OTP’ ಆಯ್ಕೆ ಮಾಡಿ, ಅದನ್ನು ನಮೂದಿಸಿದ ನಂತರ ಅನ್ಲಾಕ್ ಬಯೋಮೆಟ್ರಿಕ್ಸ್ ಮೇಲೆ ಕ್ಲಿಕ್ ಮಾಡಿ Confirm ಒತ್ತಿದರೆ ಅನ್ಲಾಕ್ ಆಗಲಿದೆ. ಆದರೆ ನಿಮ್ಮ ಮೊಬೈಲ್ ಸಂಖ್ಯೆ ಆಧಾರ್ ಕಾರ್ಡ್ನಲ್ಲಿ ರಿಜಿಸ್ಟಾರ್ ಆಗಿರುವುದು ಮುಖ್ಯವಾಗಿದೆ. ಆಧಾರ್ ಕಾರ್ಡ್ನಲ್ಲಿ ಮೊಬೈಲ್ ಸಂಖ್ಯೆ ರಿಜಿಸ್ಟಾರ್ ಆಗಿಲ್ಲವಾದರೆ ರಿಜಿಸ್ಟಾರ್ ಮಾಡಿಕೊಳ್ಳಿ, ಅಥವಾ ಆಧಾರ್ ಅಪ್ಡೇಟ್ ಮಾಡಿಕೊಳ್ಳಿ. ಇಷ್ಟಾದ್ರೆ ಹ್ಯಾಕರ್ಸ್ ಹಾಗೂ ವಂಚಕರಿಂದ ಸುಲಭವಾಗಿ ನಿಮ್ಮ ಹಣ ಕಳೆದುಕೊಳ್ಳೋದ್ರಿಂದ ತಪ್ಪಿಸಿಕೊಳ್ಳಬಹುದು.
क्या आप जानते हैं कि आपकी बायोमेट्रिक पहचान leak हो जाने पर आप वित्तीय साइबर अपराध के शिकार हो सकते है?
यदि आप ऑनलाइन वित्तीय धोखाधड़ी के शिकार हैं तो तुरंत 1930 पर कॉल करें और https://t.co/cr6WZMOi4c पर किसी भी #cybercrime की रिपोर्ट दर्ज करें।#CyberSafeIndia #BiometricLock pic.twitter.com/w0CxgiIoMg
— Cyber Dost (@Cyberdost) December 2, 2023
ಇದನ್ನೂ ಓದಿ: ಹೊಸ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯಲ್ಲಿ ₹20,000 ಸಾವಿರ ರೂಪಾಯಿ ಇಳಿಕೆ.