ದೇಶದಲ್ಲಿ ಆಗಾಗ ಒಂದಷ್ಟು ಹೊಸ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಈ ಬಾರಿಯು ಹೊಸ ವರ್ಷಕ್ಕೆ ಹೊಸ ರೂಲ್ಸ್ ಮಾಡಲ್ಲಾಗಿದ್ದು, ಡಿಎಲ್ ಹಾಗೂ ಆರ್ಸಿ ಸ್ಮಾರ್ಟ್ ಕಾರ್ಡ್ನಲ್ಲಿ ಕ್ಯೂ ಆರ್ ಕೋಡ್ ಸೇರಿಸಿ ಚಿಪ್ ಸಹಿತ ಸ್ಮಾರ್ಟ್ ಕಾರ್ಡ್ಗೆ ಹೊಸ ರೂಪ ಕೊಡೋಕೆ ಆರ್ಟಿಒ ಹೊರಟಿದೆ. ವಾಹನಗಳಿಗೆ ಹೊಸದಾಗಿ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿಸಬೇಕು ಅಂತಾ ಹೇಳಿದ್ದ ಸರ್ಕಾರ, ಇದೀಗ ಮತ್ತೊಂದು ಹೊಸ ಕಾನೂನು ಜಾರಿಗೆ ತಂದಿದೆ. ಡಿಜಿಟಲ್ ತಂತ್ರಜ್ಞಾನವನ್ನ ಇನ್ನಷ್ಟು ಅಳವಡಿಕೆ ಮಾಡಿಕೊಳ್ಳೋಕೆ ಮುಂದಾಗಿರುವ ಸರ್ಕಾರ, ಡಿಎಲ್ ಹಾಗೂ ಆರ್ಸಿಗೆ ಹೊಸ ರೂಪ ಕೊಡೋಕೆ ಮುಂದಾಗಿದೆ. ಈಗಾಗಲೇ ನಿಮ್ಮ ಡಿಎಲ್ ಹಾಗೂ ಆರ್ಸಿ ಕಾರ್ಡ್ಗಳಲ್ಲಿ ಚಿಪ್ ಇದೆ.
ಇನ್ಮುಂದೆ ಹೊಸ ಡಿಎಲ್ಗಳಲ್ಲಿ ಕ್ಯೂಆರ್ ಕೋಡ್ ಕೂಡಾ ಇರಲಿದೆ. ಎಲ್ಲಾ ವಾಹನ ಚಾಲಕರ ಬಳಿಯಲ್ಲೂ ಡಿಎಲ್ ಸ್ಮಾರ್ಟ್ ಕಾರ್ಡ್ ಇದೆ. ವಾಹನ ಖರೀದಿಸಿದ ವೇಳೆಯಲ್ಲೇ ಆರ್ಸಿ ಸ್ಮಾರ್ಟ್ ಕಾರ್ಡ್ ಕೂಡಾ ಸಿಕ್ಕಿದೆ. ಹೀಗಿರುವಾಗ ಹೊಸ ಪದ್ದತಿ ಜಾರಿಗೆ ಬಂದ ಕೂಡಲೇ ಎಲ್ಲರೂ ಹೊಸದಾಗಿ ಮತ್ತೊಮ್ಮೆ ಕಾರ್ಡ್ ಮಾಡಿಸಬೇಕಾ? ಹಾಗಾದ್ರೆ, ಈ ಹೊಸ ಮಾದರಿ ಕಾರ್ಡ್ನಿಂದ ಏನು ಲಾಭ? ಹಳೇ ಕಾರ್ಡ್ ಬದಲಿಸಬೇಕಾ? ಹೊಸ ಮಾದರಿ ಸ್ಮಾರ್ಟ್ ಕಾರ್ಡ್ನಲ್ಲಿ ಏನೆಲ್ಲಾ ಮಾಹಿತಿ ಇರುತ್ತೆ? ಎಂದಿನಿಂದ ಈ ಕಾರ್ಡ್ಗಳು ಲಭ್ಯ? ಈ ಕುರಿತ ಸಮಗ್ರ ಮಾಹಿತಿ ಇಲ್ಲಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹೌದು ಶೀಘ್ರದಲ್ಲೇ ಈ ಯೋಜನೆ ಜಾರಿಗೆ ಬರಲಿದೆ. ಮುಂದಿನ ವರ್ಷ ಅಂದರೆ 2024ರ ಫೆಬ್ರವರಿ ನಂತರ ನೀಡುವ ಹೊಸ ಕಾರ್ಡ್ಗಳಲ್ಲಿ ಕ್ಯೂ ಆರ್ ಕೋಡ್ ಅಳವಡಿಕೆ ಮಾಡಲಾಗುತ್ತದೆ. ಸದ್ಯ ಬಳಕೆಯಲ್ಲಿ ಇರುವ ಕಾರ್ಡ್ಗಳನ್ನ ಬದಲಾವಣೆ ಮಾಡಬೇಕಿಲ್ಲ. ಆದರೆ, ಡಿಎಲ್ ರಿನ್ಯೂವಲ್ ಮಾಡುವ ವೇಳೆ ಹಾಗೂ ಫೆಬ್ರವರಿ ನಂತರ ಹೊಸ ವಾಹನ ಖರೀದಿ ಮಾಡುವ ವೇಳೆ ಕ್ಯೂ ಆರ್ ಕೋಡ್ ಇರುವ ಹೊಸ ರೀತಿಯ ಸ್ಮಾರ್ಟ್ ಕಾರ್ಡ್ ಸಿಗುತ್ತೆ. ಹೀಗಾಗಿ, ನಿಮ್ಮ ಹಳೆಯ ಡಿಎಲ್ ಹಾಗೂ ಆರ್ಸಿ ಕಾರ್ಡ್ ಬದಲಾವಣೆ ಮಾಡಿಕೊಳ್ಳಬೇಕಾಗುತ್ತೆ ಅನ್ನೋ ತಲೆ ಬಿಸಿ ಬೇಡ. ಹೌದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರೂ ಕೂಡಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಹೊಸದಾಗಿ ಡಿಎಲ್ ಹಾಗೂ ಆರ್ಸಿ ಪಡೆಯುವವರಿಗೆ ಮಾತ್ರ ಫೆಬ್ರವರಿ ನಂತರ ಹೊಸ ರೀತಿಯ ಸ್ಮಾರ್ಟ್ ಕಾರ್ಡ್ ಕೊಡ್ತೇವೆ ಎಂದಿದ್ದಾರೆ. ಇನ್ನು ಹಳೇ ಡಿಎಲ್ಗಳ ನವೀಕರಣ ಮಾಡುವ ವೇಳೆ ಹೊಸ ರೀತಿಯ ಸ್ಮಾರ್ಟ್ ಕಾರ್ಡ್ಗೆ ಬದಲಾವಣೆ ಮಾಡಿಕೊಡಲಾಗುತ್ತೆ ಅಂತಾನೂ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಸದ್ಯ ಚಿಪ್ ಅಳವಡಿಕೆ ಮಾಡಿರುವ ಸ್ಮಾರ್ಟ್ ಕಾರ್ಡ್ಗಳನ್ನ ಸಾರಿಗೆ ಇಲಾಖೆ ವಿತರಣೆ ಮಾಡ್ತಿದೆ. ಇದಕ್ಕಾಗಿ ಖಾಸಗಿ ಕಂಪನಿಯೊಂದಕ್ಕೆ ಗುತ್ತಿಗೆ ನೀಡಿತ್ತು. ಈ ಗುತ್ತಿಗೆ ಅವಧಿ 2024ರ ಫೆಬ್ರವರಿಗೆ ಅಂತ್ಯ ಆಗಲಿದೆ. ಆ ಬಳಿಕ ಹೊಸ ಗುತ್ತಿಗೆ ಶುರುವಾಗಲಿದ್ದು, ಹೊಸ ಸಂಸ್ಥೆ ನೀಡುವ ಸ್ಮಾರ್ಟ್ ಕಾರ್ಡ್ಗಳಲ್ಲಿ ಕ್ಯೂ ಆರ್ ಕೋಡ್ ಇರಲಿದೆ ಅಂತ ತಿಳಿಸಿದ್ದಾರೆ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram
ದೇಶಡೆಲ್ಲೆಡೆ ಒಂದೇ ಮಾದರಿಯ ಸ್ಮಾರ್ಟ್ ಕಾರ್ಡ್ ವಿತರಣೆ
ಬಹಳ ಮುಖ್ಯವಾಗಿ ಪೊಲೀಸರಿಗೆ ವಾಹನ ಸವಾರರ ದಾಖಲೆ ಪರಿಶೀಲನೆ ಮಾಡೋದು ಬಹಳ ಕಷ್ಟಕರವಾಗುತ್ತಿತ್ತು, ಆದ್ರೆ ಡಿಜಿಟಲಿಕಾರಣದಿಂದಾಗಿ ಕಾಲ ಕಾಲಕ್ಕೆ ಕೆಲವೊಂದು ಬದಲಾವಣೆಗಳು ಆಗ್ತಿದ್ದು, ಇದೀಗ ಹೊಸ ಪ್ಲಾನ್ ನಿಂದಾಗಿ ಪೊಲೀಸರು ಹಾಗೂ ಆರ್ಟಿಒ ಸಿಬ್ಬಂದಿ ತಪಾಸಣೆ ಮಾಡುವ ವೇಳೆ ಹೊಸ ಮಾದರಿಯ ಸ್ಮಾರ್ಟ್ ಕಾರ್ಡ್ನಲ್ಲಿ ಇರುವ ಕ್ಯು ಆರ್ ಕೋಡ್ ಅನ್ನು ತಮ್ಮ ಮೊಬೈಲ್ನಲ್ಲಿ ಸ್ಕ್ಯಾನ್ ಮಾಡಿದ ಕೂಡಲೇ ಅವರಿಗೆ ಬೇಕಾದ ಎಲ್ಲಾ ಮಾಹಿತಿ ಸಿಕ್ಕಿಬಿಡುತ್ತೆ. ಹೀಗಾಗಿ, ದೃಢೀಕರಣ ಸಾಕಷ್ಟು ಸುಲಭ ಆಗಲಿದೆ. ಜೊತೆಯಲ್ಲೇ ಈಗ ಕೊಡ್ತಿರುವ ಚಿಪ್ ಸಹಿತ ಸ್ಮಾರ್ಟ್ ಕಾರ್ಡ್ಗಳನ್ನ ಪಿವಿಸಿ ಬಳಸಿ ತಯಾರು ಮಾಡಲಾಗುತ್ತಿದೆ. ಈ ಕಾರ್ಡ್ಗಳು ವರ್ಷದಿಂದ ವರ್ಷಕ್ಕೆ ಮಾಸಿ ಹೋಗುತ್ತವೆ. ಅಕ್ಷರ ಅಳಿಸಿ ಹೋಗಬಹುದು, ಕಾರ್ಡ್ ಮುರಿಯಬಹುದು. ಆದರೆ, ಮುಂದಿನ ವರ್ಷದಿಂದ ಹೊಸದಾಗಿ ಕೊಡುವ ಕಾರ್ಡ್ಗಳನ್ನ ಪಾಲಿ ಕಾರ್ಬೊನೇಟ್ನಿಂದ ತಯಾರು ಮಾಡಲಾಗಿರುತ್ತೆ. ಈ ಕಾರ್ಡ್ಗಳು ಮುರಿಯೋದಿಲ್ಲ. ಜೊತೆಗೆ ಅಕ್ಷರಗಳೂ ಕೂಡಾ ಅಳಿಸಿ ಹೋಗೋದಿಲ್ಲ.
ಹೌದು ಡಿಎಲ್ನ ಮುಂಭಾಗದಲ್ಲಿ ಕಾರ್ಡ್ ಮಾಲೀಕರ ಹೆಸರು, ಫೋಟೋ, ಅಡ್ರೆಸ್, ಹುಟ್ಟಿದ ದಿನಾಂಕ, ರಕ್ತದ ಗುಂಪು ಸೇರಿದಂತೆ ಹಲವು ವಿವರಗಳು ಇರುತ್ತವೆ. ಡಿಎಲ್ನ ಹಿಂಭಾಗದಲ್ಲಿ ನಿಮ್ಮ ಮೊಬೈಲ್ ನಂಬರ್, ಯಾವೆಲ್ಲಾ ಮಾದರಿಯ ವಾಹನ ಚಲಾಯಿಸಲು ಅನುಮತಿ ಇದೆ ಅನ್ನೋ ವಿವರ ಇರುತ್ತೆ. ಡಿಎಲ್ನ ಹಿಂಭಾಗದಲ್ಲಿ ನಿಮ್ಮ ಮೊಬೈಲ್ ನಂಬರ್, ಯಾವೆಲ್ಲಾ ಮಾದರಿಯ ವಾಹನ ಚಲಾಯಿಸಲು ಅನುಮತಿ ಇದೆ ಅನ್ನೋ ವಿವರ ಇರುತ್ತೆ. ಇನ್ನು ಈ ಎಲ್ಲಾ ವಿಷಯಗಳೂ ಚಿಪ್ಗಳಲ್ಲಿ ಇರುವ ಜೊತೆಯಲ್ಲೇ ಕ್ಯೂ ಆರ್ ಕೋಡ್ನಲ್ಲೂ ಇರಲಿದೆ. ಅಷ್ಟೇ ಅಲ್ಲ, ತುರ್ತು ಸಂಪರ್ಕ ಸಂಖ್ಯೆ ಕೂಡಾ ಇರುತ್ತೆ. ಈಗಾಗಲೇ ವಿತರಣೆ ಮಾಡಲಾಗುತ್ತಿರುವ ಆರ್ಸಿ ಕಾರ್ಡ್ಗಳಲ್ಲಿ ಚಿಪ್ ಇದೆ. ಜೊತೆಯಲ್ಲೇ ವಾಹನದ ಸಮಗ್ರ ಮಾಹಿತಿ ಇದೆ. ಇದೇ ಮಾಹಿತಿಗಳೂ ಹೊಸ ಮಾದರಿಯ ಕಾರ್ಡ್ನಲ್ಲೂ ಇರುತ್ತದೆ. ಜೊತೆಯಲ್ಲೇ ಹೆಚ್ಚಿನ ಮಾಹಿತಿ ಸೇರ್ಪಡೆ ಮಾಡಲಾಗಿರುತ್ತೆ. ಕ್ಯೂ ಆರ್ ಕೋಡ್ ಕೂಡಾ ಇರುತ್ತೆ.
ಹೊಸ ಆರ್ಸಿ ಕಾರ್ಡ್ ಮುಂಭಾಗದಲ್ಲಿ ವಾಹನದ ನೋಂದಣಿ ಸಂಖ್ಯೆ, ನೋಂದಣಿ ಆದ ದಿನಾಂಕ, ಕಾರ್ಡ್ ಅಂತ್ಯ ಆಗುವ ದಿನಾಂಕ, ಚಾಸಿಸ್ ಸಂಖ್ಯೆ, ಎಂಜಿನ್ ಸಂಖ್ಯೆ ಜೊತೆಯಲ್ಲೇ ವಾಹನಗಳ ಟ್ರ್ಯಾಕಿಂಗ್ ಸಿಸ್ಟಂ ಕೂಡಾ ಅಳವಡಿಕೆ ಮಾಡಲಾಗಿರುತ್ತೆ. ಇನ್ನು ಆರ್ಸಿ ಕಾರ್ಡ್ನ ಹಿಂಭಾಗದಲ್ಲಿ ವಾಹನ ತಯಾರಕರ ಹೆಸರು, ವಾಹನದ ಮಾದರಿ, ಸೀಟುಗಳ ಸಾಮರ್ಥ್ಯ ಸೇರಿದಂತೆ ಹಲವು ಅಂಶಗಳನ್ನು ನಮೂದು ಮಾಡಲಾಗಿರುತ್ತದೆ. ಹೀಗಾಗಿ ಇದು ಬಹಳಷ್ಟು ಅನುಕೂಲಕರವಾಗಲಿದೆ ಅನ್ನೋದು ಆರ್ ಟಿ ಒ ಅಧಿಕಾರಿಗಳ ಭರವಸೆ.
ಇದನ್ನೂ ಓದಿ: ಶಿಕ್ಷಣ ಮತ್ತು ಆರೋಗ್ಯದ ಸಲುವಾಗಿ UPI ವಹಿವಾಟಿನ ಮಿತಿ ಇನ್ನು ಮುಂದೆ 5 ಲಕ್ಷಕ್ಕೆ ಏರಿಕೆಯಾಗಲಿದೆ