ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷಿ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಸರ್ಕಾರ ಚಾಲನೆ ನೀಡಿ, ಆ ಮೂಲಕ ಮಹಿಳಾ ಸಬಲೀಕರಣಕ್ಕೆ ಮೊದಲ ಆದ್ಯತೆಯನ್ನು ನೀಡಿತ್ತು. ಗೃಹಲಕ್ಷ್ಮಿ ಯೋಜನೆಯ ಮೂಲಕ ರಾಜ್ಯದ ಮಹಿಳೆಯರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸುವ ಉದ್ದೇಶವನ್ನು ಹೊಂದಿದ್ದ ಸರ್ಕಾರ ಶುರುವಿನಲ್ಲೇ ಎಡವಿತ್ತು, ಹೌದು ಒಂದಷ್ಟು ಮಹಿಳೆಯರು ಹಣವನ್ನ ಪಡೆದು ಸಂತಸ ವ್ಯಕ್ತಪಡಿಸಿದ್ರೆ, ಮತ್ತೊಂದಷ್ಟು ಮಹಿಳೆಯರು ಯೋಜನೆಯ ಲಾಭ ನಮಗೆ ಸಿಕ್ಕಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ರು. ಹೌದು ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮೀ ಯೋಜನೆ ಕೂಡ ಒಂದಾಗಿದ್ದು, ಈಗಾಗಲೇ ಕೆಲವು ಮಹಿಳೆಯರ ಖಾತೆಗೆ ಹಣ ಜಮಾ ಆಗಿದ್ದು, ಇನ್ನೂ ಕೆಲವರ ಅಕೌಂಟ್ಗೆ ಜಮೆ ಆಗಿಲ್ಲ. ಈ ಹಿನ್ನಲೆ ರಾಜ್ಯಾದ್ಯಂತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದರು.
ಗೃಹಲಕ್ಷ್ಮಿ ಯೋಜನೆಯಡಿ ಯಜಮಾನಿಯರಿಗೆ 2,000 ರೂ. ನೀಡಲಾಗುತ್ತಿದ್ದು, ಕೆಲವೊಂದಷ್ಟು ಮಹಿಳೆಯರು ಖಾತೆಗೆ ಹಣ ಜಮೆ ಆಗಿಲ್ಲ ಅಂತ ಸರ್ಕಾರದ ವಿರುದ್ಧ ಹರಿಹಾಯ್ದಿದ್ರು. ಏನು ಇದಕ್ಕೆ ಸಂಬಂಧಪಟ್ಟಂತೆ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಸಾಕಷ್ಟು ಸರ್ಕಸ್ಸನ್ನ ಮಾಡಿದ್ರು ಒಂದಷ್ಟು ಪ್ರಯತ್ನಗಳ ಹೊರತಾಗಿಯೂ ಕೂಡ ಇನ್ನು ಸಾಕಷ್ಟು ಜನರ ಖಾತೆಗಳಿಗೆ ಹಣ ವರ್ಗಾವಣೆ ಮಾಡಲು ಸಾಕಷ್ಟು ತೊಡಕುಗಳು ಎದುರಾಗಿದ್ವು. ಹೀಗಾಗಿ ಇದೆಲ್ಲವನ್ನು ನಿವಾರಣೆ ಮಾಡ್ಲಿಕ್ಕೆ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಕುಟುಂಬದ ಪುರುಷ ಸದಸ್ಯರ ಖಾತೆಗೂ ಕೂಡ ಗ್ರಹಲಕ್ಷ್ಮಿ ಯೋಚನೆಯ ಹಣವನ್ನು ವರ್ಗಾವಣೆ ಮಾಡಲು ಸರ್ಕಾರ ನಿರ್ಧಾರ ಮಾಡಿದ್ದಂತೆ ಹಾಗಾದ್ರೆ ಏನಿದು ಹೊಸ ಬದಲಾವಣೆ, ಯಾಕೆ ಪುರುಷರ ಖಾತೆಗೆ ಹಣವನ್ನ ಹಾಕ್ತಾರೆ ಎಲ್ಲವನ್ನು ಕಂಪ್ಲೀಟ್ ಆಗಿ ತಿಳಿಸಿಕೊಡ್ತೀನಿ ಬನ್ನಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram
ತಾಂತ್ರಿಕ ದೋಷಗಳಿದ್ದು ಹಣ ಬಂದಿಲ್ಲ ಅಂದ್ರೆ ತಲೆಕೆಡಿಸಿಕೊಳ್ಳುವಂತಿಲ್ಲ
ಹೌದು ಗೃಹ ಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ಪ್ರತಿ ತಿಂಗಳು 2000 ರೂ.ಹಣ ಜಮಾ ಮಾಡಲಾಗುತ್ತಿದೆ. ಆದರೆ ಕೆಲವರ ಖಾತೆಗೆ ಇನ್ನೂ ಕೂಡ ಜಮಾ ಆಗಿಲ್ಲ. ಕೆಲವು ತಾಂತ್ರಿಕ ದೋಷಗಳಿಂದ ಹಣ ನಿಮ್ಮ ಖಾತೆಗೆ ಜಮಾ ಆಗಿಲ್ಲ ಅಂದರೆ ನಿಮ್ಮ ಹಣವನ್ನು ನಿಮ್ಮ ಯಜಮಾನನ ಖಾತೆಗೆ ಬರುವಂತೆ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ. ಹಲವು ಮಹಿಳೆಯರ ಖಾತೆಯಲ್ಲಿ ಸಮಸ್ಯೆ ಇದೆ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ ಜೊತೆಗೆ ಲಿಂಕ್ ಆಗುತ್ತಿಲ್ಲ. ಸರ್ಕಾರದಿಂದ ಹಣ ಜಮಾ ಆಗಿದ್ದರು ಕೂಡ ಯಜಮಾನಿಯರ ಖಾತೆಗೆ ಮಾತ್ರ ಹಣ ಬಂದು ತಲುಪುತ್ತಿಲ್ಲ. ಆದ್ದರಿಂದ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಕುಟುಂಬದಲ್ಲಿ ಮತ್ತೊಬ್ಬ ಮಹಿಳೆ ಇದ್ದರೆ ಅವರ ಖಾತೆಗೆ ಹಣ ವರ್ಗಾವಣೆ ಆಗುತ್ತದೆ, ಇಲ್ಲದೆ ಇದ್ದಲ್ಲಿ ಆಗ ಮನೆಯ ಯಜಮಾನ ಅಥವಾ ಮನೆಯ ಹಿರಿಯ ಪುರುಷ ಸದಸ್ಯರ ಖಾತೆಗೆ ಹಣ ವರ್ಗಾವಣೆ ಆಗುತ್ತದೆ. ಆದರೆ ಬಹುಮುಖ್ಯವಾದ ವಿಚಾರ ಅಂದರೆ ಎರಡನೇ ಸದಸ್ಯರ ಬ್ಯಾಂಕ್ ಖಾತೆ ಅಪ್ಡೇಟ್ ಆಗಿರಬೇಕು ಆಧಾರ್ ಲಿಂಕ್ ಕೆವೈಸಿ ಎಲ್ಲಾ ಮುಗಿಸಿರಬೇಕು. ಆಗಲೇ ಈ ಪ್ರಕ್ರಿಯೆ ಸಾಧ್ಯವಾಗೋದು. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ನಿಮ್ಮ ತಾಲೂಕು ಅಧಿಕಾರಿಗಳು ಅಥವಾ ಅಂಗನವಾಡಿ ಶಿಕ್ಷಕಿಯರನ್ನು ಸಂಪರ್ಕಿಸಬಹುದು ಅಂತ ಸಂಬಂಧಪಟ್ಟ ಇಲಾಖೆ ತಿಳಿಸಿದೆ. ಹೌದು ಹಣೆ ಜಮವಣೆ ವಿಚಾರದಲ್ಲಿ ಆಗುತ್ತಿರುವ ತೊಡಕನ್ನ ನಿವಾರಿಸಲು ಇಲಾಖೆ ಮತ್ತೊಂದು ಹೆಜ್ಜೆ ಮುಂದಿಟ್ಟು ಹೊಸ ಪ್ರಯತ್ನ ಮಾಡುತ್ತಿದೆ.
ಅಲ್ದೇ ಗೃಹಲಕ್ಷ್ಮೀ ಯೋಜನೆಗೆ ಮನೆ ಯಜಮಾನಿಯರ ಬ್ಯಾಂಕ್ ಖಾತೆಯಲ್ಲಾದ ಹಲವು ತಾಂತ್ರಿಕ ದೋಷಗಳು ಹಾಗೂ ಕೆಲವು ತಾಂತ್ರಿಕ ತೊಂದರೆಗಳಿಂದ ಇನ್ನೂ ಕೆಲವು ಯಜಮಾನಿಯರ ಖಾತೆಗೆ ಹಣ ಬಂದಿಲ್ಲ. ಹಣ ಜಮೆಯಾಗದೇ ಇರುವವರ ಬಳಿ ಸರ್ಕಾರ ಹೋಗಿ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದ್ದು, ಇನ್ನೂ ಹಣ ಸಿಗದವರು ಗೃಹಲಕ್ಷ್ಮೀ ಅದಾಲತ್ ನಲ್ಲಿ ಭಾಗವಹಿಸಿ ಅಲ್ಲೂ ಕೂಡ ದೂರು ಕೊಡಬಹುದು. ಹೀಗಾಗಿ ಸರ್ಕಾರ ಶತಾಯಾಗತಾಯ ಏನೇ ಆಗಲಿ ಕೊಟ್ಟ ಭರವಸೆಯನ್ನ ಈಡೇರಿಸಬೇಕು ಯೋಜನೆಯ ಲಾಭವನ್ನ ಅರ್ಹ ಎಲ್ಲ ಫಲಾನುಭವಿಗಳು ಪಡೆದುಕೊಳ್ಳಬೇಕು ಅಂತ ಸಾಕಷ್ಟು ಪ್ರಯತ್ನ ಮಾಡ್ತಿದೆ.
ಆದ್ರೆ ಈ ಮಧ್ಯೆ ಇದರಲ್ಲಿ ಫಲಾನುಭವಿಗಳಿಗೂ ಕೆಲ್ಸಗಳಿದ್ದು, ಅದನ್ನ ಪೂರ್ಣವಾಗಿ ಮಾಡಿದರೆ ಮಾತ್ರ ಯೋಜನೆಯ ಲಾಭ ಪಡೆದುಕೊಳ್ಳಲು ಸಾಧ್ಯ ಹೀಗಾಗಿ ನೀವು ಯೋಜನೆಯ ಲಾಭ ಪಡೆದುಕೊಳ್ಳಬೇಕು, ಪ್ರತಿ ತಿಂಗಳು 2ಸಾವಿರ ಹಣ ನಿಮ್ಮ ಖಾತೆಗೆ ಬರುವಂತೆ ಆಗಬೇಕು ಅಂದ್ರೆ ಸರ್ಕಾರ ಕೊಟ್ಟಿರುವ ಎಲ್ಲ ನಿಯಮಗಳನ್ನ ಪಾಲಿಸಿ ಅಗತ್ಯ ದಾಖಲೆಗಳನ್ನ ಒದಗಿಸೋದು ಅತಿಮುಖ್ಯ ಅಂತಲೇ ಹೇಳಬಹುದು.
ಇದನ್ನೂ ಓದಿ: ಸರ್ಕಾರದ ಹೊಸ ಯೋಜನೆಗಳಲ್ಲಿ ಹೂಡಿಕೆ ಮಾಡುವುದರೊಂದಿಗೆ ಗೃಹಿಣಿಯರು ಲಕ್ಷವನ್ನು ಗಳಿಸುವ ಅವಕಾಶ
ಇದನ್ನೂ ಓದಿ: ಕೈಗೆಟುಕುವ ಬೆಲೆ, ದಕ್ಷತೆ ಮತ್ತು ಸ್ಮಾರ್ಟ್ ಫೀಚರ್ಗಳೊಂದಿಗೆ ಹೊಸ Hero HF Deluxe. ಖರೀದಿಗೆ ಕಾದು ನಿಂತ ಜನ