ಜೀವನದಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿ ಆಸೆ ಕನಸು ಇರುತ್ತೆ ಆದ್ರೆ ಅದರಲ್ಲಿ ಬಹುತೇಕರಿಗೆ ತಮ್ಮದೇ ಆದ ಸ್ವಂತ ಆಸ್ತಿ ಮನೆ ಜಮೀನು ಹೊಂದಿರಬೇಕು ಎನ್ನುವ ಕನಸು ಇದ್ದೆ ಇರುತ್ತೆ. ಆದರೆ ಅದನ್ನು ಈಡೇರಿಸಿಕೊಳ್ಳುವುದಕ್ಕೆ ಬೇಕಾಗಿರುವ ಏಕೈಕ ಔಷಧ ಅಂದರೆ ಹಣ. ಹಿರಿಯರೇ ಹೇಳಿರುವ ಆಗೇ ಕಾಸಿದ್ರೆ ಕೈಲಾಸ ಎನ್ನುವಂತೆ ಹಣ ಇಲ್ಲದೆ ಯಾವುದು ಸಾಧ್ಯ ಆಗುವುದಿಲ್ಲ. ಹಾಗಾಗಿ ಸ್ವಂತ ಜಮೀನಿನ ಕನಸು ಹಲವರಿಗೆ ಕನಸಾಗಿ ಉಳಿದುಬಿಡುತ್ತದೆ. ಆದ್ರೆ ಇನ್ನು ಮುಂದೆ ಇದಕ್ಕಾಗಿ ಚಿಂತೆ ಮಾಡುವ ಅಗತ್ಯವಿಲ್ಲ. ಸ್ವಂತ ಜಮೀನು ಇಟ್ಟುಕೊಳ್ಳಬೇಕು ಎಂದು ಬಯಸುವವರಿಗೆ ಸರ್ಕಾರ ಸಹಾಯಧನ ನೀಡಲು ಮುಂದಾಗಿದೆ. ಹೌದು ಎಷ್ಟೋ ಜನ ತಮ್ಮದೇ ಆದ ಸ್ವಂತ ಭೂಮಿ ಹೊಂದಿರಬೇಕು ಎಂದು ಕನಸು ಕಾಣುತ್ತಾರೆ. ಆದರೆ ಹಣವಿಲ್ಲದೆ ಕನಸು ನನಸಾಗೋದು ತುಂಬಾ ಕಷ್ಟವಾದದ್ದು. ಆದರೆ ಇನ್ನು ಮುಂದೆ ಆ ಬಗ್ಗೆ ಚಿಂತಿಸುವ, ಕೊರಗುವ ಅಗತ್ಯವಿಲ್ಲ.
ಭೂಮಿರಹಿತರಿಗೆ ಸರ್ಕಾರ ಭೂಮಿ ಖರೀದಿಗೆ ಸಾಲ ನೀಡಲು ಮುಂದಾಗಿದೆ. ಜೊತೆಗೆ ಸಬ್ಸಿಡಿ ಕೂಡ ನೀಡಲಿದೆ. ಅದರಲ್ಲೂ ಮುಖ್ಯವಾಗಿ ಭೂ ಒಡೆತನ ಯೋಜನೆ ಅಡಿಯಲ್ಲಿ ಭೂ ರಹಿತ ಮಹಿಳಾ ಕೃಷಿಕರು ಯಾರಿದ್ದಾರೋ ಅವ್ರಿಗೆ ಈ ಯೋಜನೆಯ ಲಾಭ ಸಿಗಲಿದ್ದು, ಮಹಿಳೆಯರನ್ನ ಮತ್ತಷ್ಟು ಆರ್ಥಿಕವಾಗಿ ಬಲವರ್ಧಸಲು ಸರ್ಕಾರ ಮತ್ತೊಂದು ಹೊಸ ಯೋಜನೆ ಅನುಷ್ಠಾನಗೋಳಿಸಿದೆ ಅಂತಲೇ ಹೇಳಬಹುದು. ಇನ್ನು ಸರ್ಕಾರ ಜಾರಿಗೆ ತಂದಿರುವ ಈ ಹೊಸ ಯೋಜನೆ ಯಾವುದು, ಈ ಯೋಜನೆಗೆ ಯಾರೆಲ್ಲಾ ಅರ್ಹರು, ಅರ್ಜಿ ಸಲ್ಲಿಸೋದು ಹೇಗೆ, ಎನ್ನುವ ಪ್ರಶ್ನೆಗಳಿಗೆ ಉತ್ತರ ಪ್ರತಿಯೊಂದನ್ನು ನೋಡ್ತಾ ಹೋಗೋಣ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram
ಜಮೀನು ಖರೀದಿ ಮಾಡಲು ಮಹಿಳೆಯರಿಗೆ ಸಿಗಲಿದೆ ಸಬ್ಸಿಡಿ
ಹೌದು ಸರ್ಕಾರ ಮಹಿಳೆಯರ ಆರ್ಥಿಕವಾಗಿ ಬಲವರ್ಧಣೆಗಾಗಿ ಭೂ ಒಡೆತನ ಯೋಜನೆಯನ್ನ ಜಾರಿಗೆ ತಂದಿದೆ. ಈ ಯೋಜನೆ ಅಡಿಯಲ್ಲಿ ಭೂ ರಹಿತ ಮಹಿಳಾ ಕೃಷಿಕರು ತಾವು ವಾಸಿಸುವ ಸ್ಥಳದಿಂದ 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ 2 ಎಕರೆ ಖುಷ್ಕ ಅಥವಾ ಒಂದು ಎಕರೆ ತರಿ ಜಮೀನು ಖರೀದಿಸಲು ಸರ್ಕಾರ ಸಹಾಯಧನ ನೀಡುತ್ತದೆ. ಈ ಸಹಾಯಧನದ ಮೊತ್ತ 25 ಲಕ್ಷ ಹಾಗೂ 20 ಲಕ್ಷ ರೂಪಾಯಿ. ಇದರಲ್ಲಿ 50% ನಷ್ಟು ಫಲಾನುಭವಿಗಳು ಪಾವತಿಸಿದರೆ ಇನ್ನು 50% ನಷ್ಟು ಸರ್ಕಾರ ಸಬ್ಸಿಡಿ ನೀಡುತ್ತದೆ. ಯೋಜನೆಯ ಅಡಿಯಲ್ಲಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ 25 ಲಕ್ಷ ರೂಪಾಯಿಗಳ ಸಾಲ ಹಾಗೂ ಇನ್ನುಳಿದ ಜಿಲ್ಲೆಗಳಿಗೆ 20 ಲಕ್ಷ ರೂಪಾಯಿಗಳ ಸಾಲವನ್ನು ಸರ್ಕಾರ ಮಂಜೂರು ಮಾಡಲಿದೆ. ಹಾಗಿದ್ರೆ ಭೂ ಒಡೆತನ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಅಂತ ನೋಡೋದಾದ್ರೆ ಈ ಯೋಜನೆಗೆ ನೀವು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದ್ದು, ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಇನ್ನು ಅರ್ಜಿ ಹಾಕುವುದಕ್ಕೂ ಮೊದಲು ನಿಯಮಗಳನ್ನು ತಿಳಿದುಕೊಂಡು ನಂತರ ಅರ್ಜಿ ಫಾರಂ ಭರ್ತಿ ಮಾಡಿ ಸರಿಯಾದ ದಾಖಲೆಗಳನ್ನು ನೀಡಬೇಕಾಗುತ್ತದೆ.
- ಆಧಾರ್ ಕಾರ್ಡ್.
- ಆದಾಯ ಪ್ರಮಾಣ ಪತ್ರ ಮತ್ತು ಜಾತಿ ಪ್ರಮಾಣ ಪತ್ರ.
- ಅರ್ಜಿದಾರರ ಫೋಟೋ.
- ಕೃಷಿ ಕಾರ್ಮಿಕರ ದೃಢೀಕರಣ ಪತ್ರ.
ಇಷ್ಟು ಮೂಲಭೂತ ದಾಖಲೆಗಳಾಗಿದ್ದು ಇವುಗಳನ್ನ ಅರ್ಜಿ ಜೊತೆ ಲಾಗಟ್ಟಿಸಿ ಅರ್ಜಿ ಸಲ್ಲಿಸಬೇಕು. ಇನ್ನು ನೀವು ಅರ್ಹರಾಗಿದ್ದರೆ ತಕ್ಷಣವೇ ಸಾಲ ಮಂಜೂರಾಗುತ್ತದೆ. ಒಂದು ವೇಳೆ ಅನರ್ಹರು ಎಂದು ಕಂಡುಬಂದರೆ ಸಾಲ ಮಂಜೂರಾತಿಯ ಯಾವುದೇ ಹಂತದಲ್ಲಿ ಸಾಲವನ್ನು ಸ್ಥಗಿತಗೊಳಿಸಬಹುದು. ಹಾಗಾಗಿ ನಿಮಗೆ ಯೋಜನೆಯ ಲಾಭ ಪಡೆಯಲು ಅರ್ಹತೆ ಇದ್ರೆ ಮಾತ್ರ ಸಾಲಕ್ಕೆ ಅರ್ಜಿ ಸಲ್ಲಿಸೋದು ಉತ್ತಮ.
ಇನ್ನು ಬಹಳ ಮುಖ್ಯವಾಗಿ ಭೂ ಒಡೆತನ ಯೋಜನೆಯ ಸಾಲ ಸೌಲಭ್ಯವನ್ನು ಪಡೆದುಕೊಳ್ಳಲು ನಿಗಮದ ಅಡಿಯಲ್ಲಿ ಬರುವ ಕೆಲವೊಂದಿಷ್ಟು ಸಮುದಾಯಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ದೇ ಇದರ ಜೊತೆಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರಿಗೂ ಕೂಡ 2023-24ನೇ ಸಾಲಿನಲ್ಲಿ ಭೂ ಒಡೆತನ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಹೌದು ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ, ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿಜಾಂಬವ ಅಭಿವೃದ್ಧಿ ನಿಗಮ, ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಾಗೂ ಪರಿಶಿಷ್ಟ ಜಾತಿ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ಸಮುದಾಯದವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ಭೂ ಒಡೆತನ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 15, 2023. ಕೇವಲ 3 ದಿನಗಳು ಮಾತ್ರ ಅವಕಾಶವಿದ್ದು ಅರ್ಹರು ತಕ್ಷಣವೇ ಅರ್ಜಿ ಸಲ್ಲಿಸಿ ಸರ್ಕಾರದ ಸಹಾಯಧನ ಪಡೆದು ಸ್ವಂತ ಜಮೀನು ಖರೀದಿಸಬಹುದಾಗಿದೆ.
ಇದನ್ನೂ ಓದಿ: ಗ್ರಾಮ ಪಂಚಾಯಿತಿಗಳಲ್ಲಿ ನೇಮಕಾತಿಗೆ ಅರ್ಜಿ ಅಹ್ವಾನ; ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ನೇಮಕಾತಿ ಆರಂಭ.
ಇದನ್ನೂ ಓದಿ: ರೈತರಿಗೆ ಈ ವಾರವೇ ‘ಡಿಬಿಟಿ’ ಮೂಲಕ ಮೊದಲ ಕಂತಿನ ಬರ ಪರಿಹಾರದ ಹಣ ಜಮೆ