ರಾಜ್ಯದ ಉದ್ದಗಲಕ್ಕೂ ಸಂಚರಿಸಿ ನೂರಾರು ಶಾಲೆಗಳಿಗೆ ಸುಣ್ಣ ಬಣ್ಣ ಬಳಿದಿರುವ ಅಕ್ಕ ಅನು ಮತ್ತವರ ತಂಡ. ಬೀದರ್ನಿಂದ ದಕ್ಷಿಣ ಕರ್ನಾಟಕದ ಹಲವು ಸರ್ಕಾರಿ ಶಾಲೆಗಳಿಗೆ ಬಣ್ಣ ಬಳಿದಿದ್ದಾರೆ. ಆದರೆ, ಇದೀಗ ಕನ್ನಡತಿ ಅಕ್ಕ ಅನು ಅನಾರೋಗ್ಯದಿಂದ ಆಸ್ಪತ್ರೆ ಪಾಲಾಗಿದ್ದಾರೆ. ಹೌದು ಸೋಷಿಯಲ್ ಮೀಡಿಯಾದಲ್ಲಿಯೂ ಅಪಾರ ಜನಮನ್ನಣೆ ಗಳಿಸಿರುವ ಅಕ್ಕ ಅನು, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಯಾವ ಸೆಲೆಬ್ರಿಟಿಗೂ ಕಡಿಮೆ ಇಲ್ಲ ಅಂತಾನೇ ಹೇಳಬಹುದು. ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಮಿಲಿಯನ್ಗಟ್ಟಲೇ ಫಾಲೋವರ್ಸ್ ಹೊಂದಿದ್ದಾರೆ. ಆದರೆ, ಇದೀಗ ಇದೇ ಅಕ್ಕ ಅನು, ತಮ್ಮ ಸಮಾಜ ಸೇವೆಯ ವಿಚಾರಕ್ಕೆ ಸಂಬಂಧಿಸಿದಂತೆ ಮುಂದಿನ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಅಂದರೆ, ಶಾಲೆಗೆ ಬಣ್ಣ ಬಳಿಯುವ ಕೆಲಸವನ್ನು ಈ ತಂಡ ತಾತ್ಕಾಲಿಕವಾಗಿ ನಿಲ್ಲಿಸಿದೆ. ಅದಕ್ಕೆ ಕಾರಣ ಅಕ್ಕ ಅನು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅಕ್ಕ ಅನು ಅವರ ಆರೋಗ್ಯ ಕೈಕೊಟ್ಟಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸಂಚಾರಕ್ಕೆ ಬ್ರೇಕ್ ಹಾಕಿದ್ದಾರೆ. ಈ ನಡುವೆ ಸಾಕಷ್ಟು ಫೋನ್ ಕಾಲ್ಗಳು ಇವರಿಗೆ ಬಂದಿವೆ. ಆದ್ರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಈ ನಿರ್ಧಾರ ಮಾಡಿರುವುದಾಗಿ ಎಲ್ಲರಿಗೂ ಫೋನ್ ಮೂಲಕ ಹೇಳಿಯೂ ಸುಸ್ತಾಗಿದ್ದಾರೆ. ಜತೆಗೆ ನಿಮ್ಮ ಶಾಲೆಗಳ ಕೆಲಸವನ್ನು ನೀವೇ ಗ್ರಾಮಸ್ಥರು ಸೇರಿ ಮಾಡಿಕೊಳ್ಳಿ ಎಂದೂ ಸಲಹೆ ನೀಡಿದ್ದಾರೆ. ಆದರೂ ಕೆಲವರ ಮಾತಿಗೆ ಬಹಳ ನೊಂದಿರುವ ಅಕ್ಕ ಅನು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದು, ತಮ್ಮ ನಿಲುವನ್ನ ಸ್ಪಷ್ಟಪಡಿಸಿದ್ದಾರೆ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram
ಅಕ್ಕ ಅನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಚಾರ ಏನು
ತಾವು ಆಸ್ಪತ್ರೆಯ ಬೆಡ್ ಮೇಲೆ ಕುಳಿತಿರುವ ಫೋಟೋ ಶೇರ್ ಮಾಡಿಕೊಂಡಿರುವ ಅಕ್ಕ ಅನು, ಕೆಲವೊಂದು ವಿಚಾರಗಳ ಕುರಿತು ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಹೌದು ನನಗೆ ಕೆಲವು ಆರೋಗ್ಯ ಸಮಸ್ಯೆಯಿಂದ ನಾವು ಕನ್ನಡ ಶಾಲೆ ಉಳಿಸಿ ಅಭಿಯಾನ ಹಾಗೂ ಸಾಮಾಜಿಕ ಕಾರ್ಯಗಳಿಂದ ದೂರ ಉಳಿಯಬೇಕಾಯಿತು. ಸುಮಾರು ಜನ ಶಿಕ್ಷಕರು, ಎಸ್ಡಿಎಂಸಿ ಅಧ್ಯಕ್ಷರು ಹಾಗೂ ವಿದ್ಯಾರ್ಥಿಗಳ ಜೊತೆಗೆ ಸಾಮಾಜಿಕ ಕಳಕಳಿ ಹೊಂದಿರುವವರು ನನಗೆ ಕರೆ ಮಾಡ್ತಾನೆ ಇದ್ದೀರಿ. ನಾನು ಎಲ್ಲರಿಗೂ ಕೆಲಸ ಬಿಟ್ಟಿದೀವಿ ಅನಾರೋಗ್ಯ ಅಂತ ಪ್ರತಿಯೊಬ್ಬರಿಗೂ ಹೇಳಲು ಕಷ್ಟವಾಗುತ್ತಿದೆ. ಆದ್ದರಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಇದೊಂದು ವಿಷಯವನ್ನು ಹೇಳಲೇ ಬೇಕಾಯಿತು. ಮುಂದೊಂದು ದಿನ ನಮ್ಮ ಆರೋಗ್ಯ ಹಾಗೂ ನಮ್ಮ ಜೀವನ ಉತ್ತಮ ಮಟ್ಟದಲ್ಲಿ ಸಾಗಿದ್ರೆ ಖಂಡಿತ ನಾವೂ ಹಾಗೂ ನಮ್ಮ ತಂಡ ಮುಂದಿನ ಕೆಲವು ವರ್ಷಗಳಲ್ಲಿ ಎಲ್ಲವೂ ಸರಿಹೊಂದಿದರೆ ನೋಡೋಣ. ಆಗಂತ ನಿಮ್ಮ ಊರಿನ ಶಾಲೆಗಳಿಗೆ ನಾವೇ ಬರ್ತೀವಿ ಅಂತ ಭಾವಿಸಬೇಡಿ. ಯಾಕೆಂದ್ರೆ ಈಗಾಗಲೇ ನಮ್ಮ ಲಿಸ್ಟ್ ನಲ್ಲಿ 75ಕ್ಕೂ ಹೆಚ್ಚು ಶಾಲೆಗಳು ಪೆಂಡಿಂಗ್ ನಲ್ಲಿ ಇವೆ. ದಯವಿಟ್ಟು ನಿಮ್ಮ ಊರಿನ ಸಮಸ್ಯೆಗಳಿಗೆ ಕೆಲಸಗಳಿಗೆ ನಾವೇ ಬಂದು ಕೆಲಸ ಮಾಡಬೇಕು ಅಂತ ಏನಿಲ್ಲ. ನಿಮ್ಮ ಊರಿನ ಶಾಲೆಗಳ ಕೆಲ್ಸಗಳನ್ನ ನೀವೇ ಮುಗಿಸಿಕೊಂಡ್ರೆ ತುಂಬಾನೇ ಒಳ್ಳೇದು.
ಮುಂದುವರೆದು ಮಾತನಾಡಿರೋ ಅಕ್ಕ ಅನು, ಸುಮಾರು ಜನ ನಾವು ಇಂದಲ್ಲ ನಾಳೆ ಬರ್ತಿವಿ ನಿಮ್ಮ ಊರಿಗೆ ಅಂತ ದಿನಗಳನ್ನ ಮುಂದೂಡುತ್ತಲೇ ಇದ್ದೀರಿ. ಆದ್ರೆ ನಮ್ಮ ಸಮಸ್ಯೆಗಳಿಂದ ನಾವು ಯಾರಿಗೂ ಸ್ಪಂದಿಸಲು ಆಗುತ್ತಿಲ್ಲ. ಕ್ಷಮಿಸಬೇಕು ನೀವೆಲ್ಲಾ. ತೊಂದರೆ ಆದ್ರೆ ಈ ನಂಬರ್ ಆಫ್ ಮಾಡಿ ಅಂತ ಕೆಲವರು ಹೇಳ್ತ ಇದಿರಿ. ಕೆಲವು ದಾಖಲಾತಿಗಳಿಗೆ ಇದೇ ನಂಬರ್ ಇರುವುದರಿಂದ ನಂಬರ್ ಚೇಂಜ್ ಮಾಡಲು ಆಗುತ್ತಿಲ್ಲ. ಕೆಲವು ಕಮಿಟ್ಮೆಂಟ್ ಹಾಗೂ ಮುಖ್ಯವಾದ ಆತ್ಮೀಯರ ಸಲುವಾಗಿ ಮೊಬೈಲ್ ನಂಬರ್ ನ ಚಾಲ್ತಿಯಲ್ಲಿ ಇಡಬೇಕಾಯಿತು. ನಿಮ್ಮಿಂದ ನಂಗೆ ಸಹಾಯವೇನೆಂದರೆ ನಿಮ್ಮ ಊರಿನ ಸಮಸ್ಯೆಗಳನ್ನ ನೀವೇ ಬಗೆಹರಿಸಿಕೊಂಡರೆ ತುಂಬಾ ಒಳ್ಳೇದು. ಯಾಕೆಂದ್ರೆ ನಾನು ಈ ಕಾರ್ಯವನ್ನ ಏನೋ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿ, ಹೆಸರು ಮಾಡಬೇಕು ಅನ್ನೋ ಉದ್ದೇಶವಿಲ್ಲ. ನನ್ನ ಜೀವನದಲ್ಲಿ ನಡೆದ ಒಂದಿಷ್ಟು ಘಟನೆಗಳಿಂದ ಪ್ರೇರಿತಳಾಗಿ ಒಂದು ಚಿಕ್ಕ ಬದಲಾವಣೆ ತರ್ಬೇಕು ಅಂದ್ರೆ ಶಿಕ್ಷಣ ಮುಖ್ಯ. ಅದೇ ರೀತಿ ಆರೋಗ್ಯವಾಗಿ ಜನಗಳು ಬದುಕೋಕೆ ವೈಯಕ್ತಿಕ ಸ್ವಚ್ಛತೆಯಿಂದ ಹಾಗೂ ಪರಿಸರ ಸ್ವಚ್ಛತೆಯ ಅವಶ್ಯಕತೆ ನನ್ನ ಭಾರತದಲ್ಲಿ ಬಹಳ ಅವಶ್ಯಕ ಇದೆ. ಒಂದೆರಡು ಜನಗಳಿಗೆ ಆದ್ರೂ ನಮ್ಮ ಕಾರ್ಯಗಳು ತಿಳಿಲಿ ಅಂತ ಒಂದಿಷ್ಟು ಅಭಿಯಾನಗಳನ್ನ ಕೈಗೊಂಡೆ ಅಷ್ಟೇ ಎಂದಿದ್ದಾರೆ ಅಕ್ಕ ಅನು. ಆದ್ರೆ ಮತ್ತೆ ಯಾವಾಗ ಅಭಿಯಾನ ಶುರು ಮಾಡ್ತಾರೆ ಅನ್ನೋದು ಮಾತ್ರ ಗೊತ್ತಿಲ್ಲ. ಹೀಗಾಗಿ ಸಾಕಷ್ಟು ಜನ ಬೇಸರ ಮಾಡಿಕೊಂಡಿದ್ದು ಉಂಟು.
View this post on Instagram
ಇದನ್ನೂ ಓದಿ: ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ 15 ದಿನಗಳಲ್ಲಿ ಹೊಸ ಪಡಿತರ ಚೀಟಿ